ಮಧ್ಯಪ್ರದೇಶದ ಇಬ್ಬರು ಸಹೋದರರು ಸೇರಿ 50 ವಿವಿಧ ಜಾತಿಯ ಮಾವಿನ ಹಣ್ಣಿಗಳನ್ನು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.ಇದರಲ್ಲಿ ಆಮ್‍ಪುರಿಯು ಸೇರಿದ್ದು, ಇದು ಅತಿ ಹೆಚ್ಚು ತೂಕವಿರುವ ಹಣ್ಣು ಎಂದು ಪರಿಗಣಿಸಲಾಗಿದೆ ಮತ್ತು ಇನ್ನು ಸೆನ್ಸೆಷನ್ ಎಂಬ ಮಾವಿನ ಹಣ್ಣಿಗೆ ಅಮೆರಿಕದ ಫ್ಲೋರಿಡಾದಲ್ಲಿ ಹೆಚ್ಚು ಬೇಡಿಕೆ ಇದೆ.ರಾಮೇಶ್ವರ್ ಮತ್ತು ಜಗದೀಶ್ ಎಂಬ ಸಹೋದರರ ಭೂಮಿಯಲ್ಲಿ ಸುಮಾರು 1000 ಮಾವಿನ ಹಣ್ಣಿನ ಮರಗಳಿದ್ದು, ಇದನ್ನು ಇವರು ತಮ್ಮ ತಂದೆಯ ಕಾಲದಿಂದಲೂ ಮುಂದುವರೆಸಿಕೊಂಡು ಬಂದಿದ್ದಾರೆ.ತಮ್ಮ ತೋಟದಲ್ಲಿರುವ ಮಾವಿನಮರದಲ್ಲಿನ ಹಣ್ಣುಗಳು ವಿವಿಧ ಆಕಾರಗಳನ್ನು ಹೊಂದಿರುವ ಬಗ್ಗೆ ಹೆಮ್ಮೆ ಪಡುವ ಇವರು, ಇದು ಒಳ್ಳೆಯ ರುಚಿ ಹೊಂದಿದೆ ಎನ್ನುತ್ತಾರೆ.
ಆಮ್‍ಪುರಿಯು ಅತಿ ಹೆಚ್ಚು ತೂಗುವ ಹಣ್ಣಾಗಿದ್ದು, ಇದನ್ನು ಅಫ್ಘಾನಿಸ್ತಾನದಿಂದ ತಂದು ಹಾಕಲಾಗಿದೆ. ಒಂದು ಹಣ್ಣು ಸುಮಾರು 5 ಕೆಜಿ ತೂಕವನ್ನು ಹೊಂದಿರುತ್ತದೆ. ಇನ್ನು ಇಲ್ಲಿ ಸೆನ್ಸೆಷನ್ ಎಂಬ ಎರಡನೇ ತಳಿಯ ಮಾವಿನ ಹಣ್ಣು ಇದ್ದು, ಇದನ್ನು ಮೊದಲಿಗೆ 1921ರಲ್ಲಿ ಫ್ಲೋರೀಡಾದಿಂದ ತಂದು ನೆಡಲಾಯಿತು. ಇದು ವಿಶಿಷ್ಟ ರೀತಿಯಾದ ಹಣ್ಣಾಗಿದ್ದು, ರಾಷ್ಟ್ರದಲ್ಲಿ ಎಲ್ಲಿಯೂ ಕಂಡು ಬರುವುದಿಲ್ಲ.
ಎಎನ್‍ಐಗೆ ನೀಡಿದ ಸಂದರ್ಶನದ ವೇಳೆ ಮಾತನಾಡಿದ ರಾಮೇಶ್ವರ್ ಅವರು, ವಿವಿಧ ರಾಜ್ಯಗಳಲ್ಲಿ ನಮಗೆ ಗ್ರಾಹಕರಿದ್ದಾರೆ. ಅವರು ನೇರವಾಗಿ ನಮ್ಮನ್ನು ಸಂಪರ್ಕಿಸುತ್ತಾರೆ. ಕೆಲವು ಗ್ರಾಹಕರು ದುಬೈನಲ್ಲೂ ಇದ್ದಾರೆ. ಅವರೆಲ್ಲರಿಗೂ ನಾವು ಯಾವುದೇ ರಾಸಾಯನಿಕ ಬಳಸದೇ ನೈಸರ್ಗಿಕದತ್ತವಾಗಿ ಬೆಳೆಯುತ್ತಾರೆ ಎಂಬುದು ತಿಳಿದಿದೆ. ಹಾಗಾಗಿ ನಾವು ಬೆಳೆಯುವ ಹಣ್ಣುಗಳಿಗೆ ಬೇಡಿಕೆ ಇದೆ ಎನ್ನುತ್ತಾರೆ.
ಭಾರತದ ಮಾರುಕಟ್ಟೆಯ ಪ್ರಕಾರ ಸೆನ್ಸೇಷನ್ ಮಾವಿನಹಣ್ಣು 1 ಕೆಜಿಗೆ 1000 ರೂ. ಇದೆ. ನಾನು ಭಾರತ ಮತ್ತು ವಿದೇಶಗಳಿಗೆಲ್ಲಾ ಪ್ರಯಾಣಿಸಿ ವಿವಿಧ ತಳಿಯ ಮಾವಿನಹಣ್ಣಿನ ಸಸ್ಯಗಳನ್ನು ಸಂಗ್ರಹಿಸಿ ಬೆಳೆಸಲು ಪ್ರಾರಂಭಿಸಿದೆ.
ಈ ತೋಟದಲ್ಲಿರುವ ಇತರ ಮಾವಿನಹಣ್ಣುಗಳು ಪಶ್ಚಿಮ ಬಂಗಾಳದ ಮಾಲ್ಡಾ ಮತ್ತು ಹಿಮಸಾಗರ್, ಗುಜರಾತ್‍ನ ಕೇಸರ್, ಉತ್ತರ ಪ್ರದೇಶದ ಲಂಗ್ಡಾ, ಮತ್ತು ಬಿಹಾರ ಮತ್ತು ಹಿಮಾಚಲ ಪ್ರದೇಶದ ಚೌನ್ಸಾ ಸೇರಿದಂತೆ ರಾಷ್ಟ್ರದ ಇತರ ಪ್ರದೇಶಗಳಿಂದ ತಂದಿರುವಂತಹವು ಎಂದು ಆ ತೋಟ ನಿರ್ಮಿಸಲು ಪಟ್ಟಿರುವ ಶ್ರಮದ ಬಗ್ಗೆ ವಿವರಿಸುತ್ತಾರೆ.
Rameshwar & Jagdish from Madhya Pradesh's Rajpura village have both Indian & International variety of mangoes in their orchard, including mangoes from countries like Mexico, Afghanistan. "Mangoes from outside India are different in taste appearance & sold at Rs 1000/kg,"they said pic.twitter.com/JXGvsKjveq
— ANI (@ANI) July 3, 2021
ಮಾವಿನಹಣ್ಣನ್ನು ಹೆಚ್ಚಿನದಾಗಿ ಭಾರತೀಯರ ನೆಚ್ಚಿನ ಹಣ್ಣುಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಆದರೆ ಈ ಹಣ್ಣನ್ನು ಭಾರತೀಯರ ಹೊರತಾಗಿ ವಿದೇಶಿಗರು ಸಹ ಇಷ್ಟಪಡುತ್ತಾರೆ. ಭಾರತವು ಪ್ರಮುಖ ಮಾವಿನ ರಫ್ತು ರಾಷ್ಟ್ರವಾಗಿದ್ದು, ಬೇಸಿಗೆಯ ಹಣ್ಣಾಗಿರುವುದರಿಂದ 1,500 ಕ್ಕೂ ಹೆಚ್ಚು ಬಗೆಯ ರುಚಿಕರವಾದ ಹಣ್ಣುಗಳನ್ನು ಉತ್ಪಾದಿಸುತ್ತದೆ. ವಾಣಿಜ್ಯ ಕಾರ್ಯಾಚರಣೆಗಾಗಿ ಸುಮಾರು 1,000 ವಿಧಗಳನ್ನು ಬೆಳೆಸಲಾಗುತ್ತದೆ.
ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಪ್ರಕಾರ, ಆಂಧ್ರಪ್ರದೇಶ, ಬಿಹಾರ, ಗುಜರಾತ್, ಹರಿಯಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ, ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಮಾವಿನ ಹಣ್ಣಿನ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ