• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • Viral Video: ಕೇಕ್ ಇಲ್ಲದಿದ್ದರೇನು, ರೊಟ್ಟಿ ಕೊಟ್ಟು ಪುಟ್ಟ ತಮ್ಮನ ಬರ್ತ್ ಡೇ ಮಾಡಿದ ಅಣ್ಣ! ಕ್ಯೂಟ್ ವಿಡಿಯೋ ನೀವೂ ನೋಡಿ

Viral Video: ಕೇಕ್ ಇಲ್ಲದಿದ್ದರೇನು, ರೊಟ್ಟಿ ಕೊಟ್ಟು ಪುಟ್ಟ ತಮ್ಮನ ಬರ್ತ್ ಡೇ ಮಾಡಿದ ಅಣ್ಣ! ಕ್ಯೂಟ್ ವಿಡಿಯೋ ನೀವೂ ನೋಡಿ

ರೊಟ್ಟಿಯಲ್ಲಿ ಕೇಕ್ ಮಾಡಿ ತಮ್ಮನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಅಣ್ಣ

ರೊಟ್ಟಿಯಲ್ಲಿ ಕೇಕ್ ಮಾಡಿ ತಮ್ಮನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಅಣ್ಣ

ಖುಷಿಗೆ ಕಾರಣಗಳು ಬೇಕಿಲ್ಲ, ದುಬಾರಿ ವಸ್ತುಗಳೂ ಬೇಕಿಲ್ಲ! ಇದನ್ನು ಈ ಪುಟ್ಟ ಅಣ್ಣ-ತಮ್ಮ ಸಾಬೀತು ಮಾಡಿದ್ದಾರೆ. ಪುಟ್ಟ ತಮ್ಮನ ಬರ್ತ್ ಡೇ ಆಚರಿಸೋಕೆ ಪುಟ್ಟ ಅಣ್ಣ ಮುಂದಾಗಿದ್ದಾನೆ. ಆದರೆ ಬಡತನದ ಮನೆಯಲ್ಲಿ ಕೇಕ್ ತರೋದು ಎಲ್ಲಿಂದ? ಆದರೆ ಆ ಅಣ್ಣ ಕೇಕ್ ಬದಲಿಗೆ ಮನೆಯಲ್ಲಿದ್ದ ರೊಟ್ಟಿ ಮೇಲೆಯೇ ಕ್ಯಾಂಡಲ್ ಇಟ್ಟ ತಮ್ಮನಿಗೆ ವಿಶ್ ಮಾಡಿದ್ದಾನೆ! ಈ ಮುದ್ದು ಮಕ್ಕಳ ಮುದ್ದಾದ ವಿಡಿಯೋ ನೀವೂ ನೋಡಿ...

ಮುಂದೆ ಓದಿ ...
 • Share this:

  ಸಾಮಾಜಿಕ ಜಾಲತಾಣದಲ್ಲಿ ಎಲ್ಲ ರೀತಿಯ ವಿಡಿಯೋ ಗಳು ಹರಿದಾಡುತ್ತವೆ. ಅದು ಮದುವೆಯೇ ಇರಲಿ, ಫನ್ನಿ ವಿಡಿಯೋ, ರಾಜಕೀಯ, ಸಮಾಜದಲ್ಲಿ ಬಡವರ ಪರದಾಟ ಎಲ್ಲವೂ ಇನ್ಸ್ಟಾಗ್ರಾಮ್ ನಲ್ಲಿ ಕಾಣ ಸಿಗುತ್ತವೆ. ಹೀಗೆ ವಿಡಿಯೋ ಒಂದು ಇನ್ಸ್ಟಾದಲ್ಲಿ ಹರಿದಾಡುತ್ತಿದೆ. ಪುಟ್ಟ ಅಣ್ಣನೊಬ್ಬ (Child) ತನ್ನ ತಮ್ಮನ ಹುಟ್ಟುಹಬ್ಬಕ್ಕೆ (Birthday) ಕೇಕ್ (Cake) ಇಲ್ಲವೆಂದು ರೊಟ್ಟಿಯಲ್ಲಿ ಕ್ಯಾಂಡಲ್ ಹಚ್ಚಿ ಹ್ಯಾಪಿ ಬರ್ತ್ ಡೇ ಮಾಡಿದ್ದಾನೆ. ಈ ವಿಡಿಯೋ (Video) ಇದೀಗ ಸಾಕಷ್ಟು ವೈರಲ್ (Viral) ಆಗಿದೆ.


  ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ವಿಡಿಯೊ ವೈರಲ್


  ಇದು ಸಾಕಷ್ಟು ಜನರ ಮನಸ್ಸು ತಟ್ಟಿದೆ. ಮಗುವಿನ ಬಗ್ಗೆ ತುಂಬಾ ಜನರು ಕನಿಕರ ತೋರಿದ್ದಾರೆ. ಇಂದಿನ ದಿನಗಳಲ್ಲಿ ಯಾವುದೇ ವಿಷಯವಿದ್ದರೂ ಅದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಒಳಪಡುತ್ತದೆ. ಅದು ಎಮೋಷನಲ್ ವಿಚಾರವಿರಲಿ, ರಾಜಕೀಯವೇ ಇರಲಿ, ಸಾಮಾಜಿಕ ಸ್ಥಿತಿಯೇ ಇರಲಿ. ಜನರು ಇದಕ್ಕೆ ಸಾಕಷ್ಟು ಸ್ಪಂದನೆ ನೀಡುತ್ತಾರೆ.


  ತಮ್ಮನ ಜನ್ಮದಿನಕ್ಕೆ ಅಣ್ಣನು ವಿಷ್ ಮಾಡಿರುವ ವಿಡಿಯೋ


  ಅದರಲ್ಲಿ ಮಗುವೊಂದು ಬರ್ತ್ ಡೇ ವಿಶ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.  ಇಂತಹ ವಿಡಿಯೋ ಇದೀಗ ಜನರ ಮನಸ್ಸು ತಟ್ಟಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿರುವ ಈ ವಿಡಿಯೋದಲ್ಲಿ ತಮ್ಮನ ಜನ್ಮದಿನಕ್ಕೆ ಅಣ್ಣನು ವಿಷ್ ಮಾಡಿದ್ದಾನೆ. ದುಬಾರಿ ಕೇಕ್ ತರಿಸಿ, ಅದ್ಧೂರಿಯಾಗಿ ಬರ್ತ ಡೇ ಆಚರಿಸುವವರ ಮಧ್ಯೆ ಈ ವಿಡಿಯೋ ಮನಸ್ಸು ಕರಗಿಸುತ್ತದೆ.
  ರೊಟ್ಟಿಯ ಮೇಲೆ ಕ್ಯಾಂಡಲ್ ಹಚ್ಚಿ ಬರ್ತ ಡೆ ವಿಶ್ ಮಾಡಿದ ಸಹೋದರ


  ದುಬಾರಿ ಕೇಕ್‌ ಆರ್ಡರ್ ಮಾಡಿ , ಸಾವಿರಾರು ರೂಪಾಯಿ ಖರ್ಚು ಮಾಡಿ ಬರ್ತ ಡೇ ಆಚರಿಸುತ್ತಾರೆ. ಆದರೆ ಇಲ್ಲಿ ತಮ್ಮನ ಬರ್ತ ಡೇ ಗೆ ಅಣ್ಣನು ರೊಟ್ಟಿಯಲ್ಲಿ ಕ್ಯಾಂಡಲ್ ಹಚ್ಚಿ ಆಚರಿಸಿದ್ದಾನೆ. ವಿಡಿಯೋ ನೋಡಿ ತುಂಬಾ ಜನರು ಭಾವುಕರಾಗಿ ಕಮೆಂಟ್ ಮಾಡಿದ್ದಾರೆ. ವಿಡಿಯೋದಲ್ಲಿ ಇಬ್ಬರು ಮಕ್ಕಳಿದ್ದಾರೆ. ಒಬ್ಬನು ಕೈಯಲ್ಲಿ ರೊಟ್ಟಿ ಹಿಡಿದು ಅದರಲ್ಲಿ ಕ್ಯಾಂಡಲ್ ಹಚ್ಚಿ ತಮ್ಮನಿಗೆ ಬರ್ತ್ ಡೇ ವಿಶ್ ಮಾಡಿದದ್ದಾನೆ.


  ಇಬ್ಬರ ಪ್ರೀತಿಯ ವಿಡಿಯೋವನ್ನು 6 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಲೈಕ್ ಮಾಡಿದ್ದಾರೆ. ಕೇಕ್ ಅನ್ನು ಹಾಳು ಮಾಡುವವರು ಈ ವೀಡಿಯೊ ನೋಡಬೇಕು ಎಂದು ಕಮೆಂಟ್ ಮಾಡಿದ್ದಾರೆ. ಹೃದಯ ವಿದ್ರಾವಕ ವಿಡಿಯೋ ಎಂದಿರುವ ಕಾಮೆಂಟ್‌ಗಳು ಹೃದಯಸ್ಪರ್ಶಿಯಾಗಿವೆ.

  View this post on Instagram


  A post shared by Himal Raule (@photo_gram143)

  ವಿಡಿಯೋದಲ್ಲಿ ಏನಿದೆ?


  ವಿಡಿಯೋದಲ್ಲಿ ಇಬ್ಬರು ಮಕ್ಕಳು ಕಾಣಿಸಿಕೊಂಡಿದ್ದಾರೆ. ಮಗುವಿನ ಕೈಯಲ್ಲಿ ರೊಟ್ಟಿ ಇದೆ. ರೊಟ್ಟಿಯನ್ನು ಕೇಕ್ ಆಕಾರದಲ್ಲಿ ಮಾಡಲಾಗಿದೆ. ನಂತರ ಅದರ ಮೇಲೆ ಮೇಲೆ ಎರಡು ಮೇಣದ ಬತ್ತಿಗಳನ್ನು ಹಚ್ಚಿ ಇಟ್ಟಿದ್ದಾನೆ. ರೊಟ್ಟಿಯ ಮಧ್ಯದಲ್ಲಿ ದ್ರವದಂತಹ ಪದಾರ್ಥ ಇರುವುದನ್ನು ನೀವು ನೋಡಬಹುದು.


  ರೊಟ್ಟಿಯಲ್ಲಿ ಕೇಕ್ ಮಾಡಿ ತಮ್ಮನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಅಣ್ಣ


  ಮಗುವು ಸಹೋದರನಿಗೆ ನಿನಗೆ ಹುಟ್ಟು ಹಬ್ಬದ ಶುಭಾಶಯಗಳು ಸಹೋದರ ಎಂದು ಹೇಳುತ್ತಾನೆ. ಇಬ್ಬರ ನಡುವೆ ತುಂಬಾ ಪ್ರೀತಿ ಇದೆ. ವೀಡಿಯೋ ನೋಡಿದ್ರೆ ಸಹೋದರರು ಇಬ್ಬರು ಬರ್ತ್ ಡೇ ಆಚರಣೆ ಮಾಡ್ತಿದ್ದಾರೆ ಅಂತ ನೋಡಬಹುದು.


  ಇದನ್ನೂ ಓದಿ: ಅವಳಿ ಮಕ್ಕಳಿಗೆ ಜನ್ಮ ನೀಡಿದ 6 ತಿಂಗಳಲ್ಲೇ ಮತ್ತೆ ಗರ್ಭಿಣಿ, 'ಮೊಮೊ ಟ್ವಿನ್ಸ್' ಹೆತ್ತ ತಾಯಿ!


  ವಿಡಯೋದ  ಭಾವನಾತ್ಮಕ ಈ ದೃಶ್ಯ ಮನಸ್ಸು ಕರಗಿಸುತ್ತದೆ. ಈ ವಿಡಿಯೋ ಇದೀಗ ಸಾಕಷ್ಟು ಜನರ ಮನಸ್ಸು ತಟ್ಟಿದೆ. ತುಂಬಾ ಜನರು ವಿಡಿಯೊ ಗೆ ಲೈಕ್ ಮತ್ತು ಕಾಮೆಂಟ್ ಮಾಡಿದ್ದಾರೆ.

  Published by:renukadariyannavar
  First published: