ಸಾಮಾನ್ಯವಾಗಿ ನಾವು ಬಾಲ್ಯದಲ್ಲಿ (Childhood) ಅಕ್ಕಂದಿರ, ಅಣ್ಣಂದಿರ ಮುದ್ದಿನ ತಮ್ಮ ಅಥವಾ ತಂಗಿಯಾಗಿ (Brother And Sister) ಬೆಳೆದಿದ್ದರೆ, ನಮಗೆ ಅವರಿಂದ ಸಿಕ್ಕ ಆ ಜೋಪಾನವಾಗಿರುವ ಮತ್ತು ಸುರಕ್ಷತೆಯ ಭಾವನೆ ತುಂಬಾನೇ ಅನುಭವಕ್ಕೆ ಬಂದಿರುತ್ತದೆ. ಎಂದರೆ ಇದರರ್ಥ ಚಿಕ್ಕವರಾಗಿದ್ದಾಗ ನಾವು ಮನೆಯಲ್ಲಿ ಚಿಕ್ಕ ಮಗು ಆಗಿದ್ದರೆ, ಮನೆಯಲ್ಲಿರುವ ಎಲ್ಲಾ ಸದಸ್ಯರಿಗೆ ನಾವು ತುಂಬಾನೇ ಪ್ರೀತಿ (Love) ಪಾತ್ರರಾಗಿರುತ್ತೇವೆ ಮತ್ತು ನಮ್ಮನ್ನು ಅಷ್ಟೇ ಪ್ರೀತಿ, ಸಲುಗೆಯಿಂದ ಬೆಳೆಸಿರುತ್ತಾರೆ. ದೊಡ್ಡ ಮಕ್ಕಳಿಗಿಂತಲೂ ಚಿಕ್ಕ ಮಕ್ಕಳ ಮೇಲೆ ಕುಟುಂಬಕ್ಕೆ ಸ್ವಲ್ಪ ಪ್ರೀತಿ ಜಾಸ್ತಿಯೇ ಇರುತ್ತದೆ. ಚಿಕ್ಕ ಮಕ್ಕಳು (Childrens) ಯಾವಾಗಲೂ ಒಂದು ಸುರಕ್ಷತೆಯ ಭಾವನೆಯಲ್ಲಿ ಮತ್ತು ಪ್ರೀತಿಯ ಭಾವನೆಗಳಲ್ಲಿ ಬೆಳೆದು ದೊಡ್ಡವರಾಗುತ್ತಾರೆ.
ನಾವು ಸಾಮಾಜಿಕ ಮಾಧ್ಯಮಗಳಲ್ಲಿಯೂ ಸಹ ಹೀಗೆ ತಂಗಿ ಮತ್ತು ತಮ್ಮನನ್ನು ಮುದ್ದು ಮಾಡುತ್ತಿರುವ ಮತ್ತು ಆರೈಕೆ ಮಾಡುತ್ತಿರುವ ಅಕ್ಕ ಮತ್ತು ಅಣ್ಣನ ಅನೇಕ ವಿಡಿಯೋಗಳನ್ನು ನೋಡಿರುತ್ತೇವೆ ಮತ್ತು ಅವುಗಳನ್ನು ತುಂಬಾನೇ ಮೆಚ್ಚಿಕೊಂಡಿರುತ್ತೇವೆ ಕೂಡ.
ಇದರ ಬಗ್ಗೆ ಈಗೇಕೆ ಮಾತು ಅಂತೀರಾ? ಇಲ್ಲೊಂದು ಇಂತಹದೇ ಒಂದು ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದನ್ನೂ ಓದಿ: ತನ್ನ ಮುಂದೆ ಪೋಸ್ ಕೊಟ್ಟ ಹುಡುಗಿಯನ್ನು ಎತ್ತಿ ಬಿಸಾಡಿದ ಆನೆ! ಶಾಕಿಂಗ್ ವಿಡಿಯೋ ಇಲ್ಲಿದೆ ನೋಡಿ
ಅಣ್ಣ ತಂಗಿಯ ಈ ಮುದ್ದಾದ ವಿಡಿಯೋ ಒಮ್ಮೆ ನೋಡಿ
ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಅಣ್ಣ-ತಂಗಿಯ ನಡುವಿನ ಪ್ರೀತಿ ಮತ್ತು ಆರೈಕೆಯನ್ನು ತೋರಿಸುವ ವಿಡಿಯೋ ವೈರಲ್ ಆಗಿದೆ. ಈ ಹೃದಯಸ್ಪರ್ಶಿ ವಿಡಿಯೋದಲ್ಲಿ ಸಹೋದರ ಮತ್ತು ಸಹೋದರಿಯ ನಡುವಿನ ಪರಿಶುದ್ದವಾದ ಪವಿತ್ರವಾದ ಬಂಧವನ್ನು ನಾವು ನೋಡಬಹುದು.
ದೊಡ್ಡಣ್ಣನೊಬ್ಬ ತನ್ನ ಪುಟ್ಟ ತಂಗಿಯನ್ನು ಮಳೆಯಿಂದ ರಕ್ಷಿಸುವ ಸಲುವಾಗಿ ತನ್ನ ಅಂಗಿಯಲ್ಲಿ ಆಕೆಯನ್ನು ಮುಚ್ಚಿಕೊಂಡು ಕಾರಿನ ಕಡೆಗೆ ಓಡಿ ಬಂದು, ಕಾರಿನಲ್ಲಿ ಆಕೆಯನ್ನು ಮೊದಲು ಕೂರಿಸಿ, ನಂತರ ತಾನೂ ಕೂತು ಆಕೆಯ ಕೂದಲನ್ನು ಸರಿ ಮಾಡುವುದನ್ನು ನಾವು ನೋಡಬಹುದು.
He is wonderful brother, she is so lucky. pic.twitter.com/XEy9RLfLsU
— CCTV IDIOTS (@cctvidiots) April 28, 2023
ಸ್ವಲ್ಪ ಗಮನವಿಟ್ಟು ನೋಡಿದರೆ ಅವನು ತನ್ನ ಅಂಗಿಯಲ್ಲಿ ಏನೋ ಒಂದನ್ನು ಮುಚ್ಚಿಕೊಂಡು ಬರುತ್ತಿರುವುದು ಕಾಣಿಸುತ್ತದೆ. ಅವನು ತನ್ನ ಪುಟ್ಟ ತಂಗಿಯನ್ನು ತನ್ನ ಟಿ-ಶರ್ಟ್ ಒಳಗೆ ಅಡಗಿಸಿಟ್ಟುಕೊಂಡು ಮಳೆಯಿಂದ ಅವಳನ್ನು ರಕ್ಷಿಸಿದನು. ನಂತರ ಅವರಿಬ್ಬರು ಬಂದು ಅವರ ಕಾರಿನೊಳಗೆ ಕುಳಿತಾಗ ಅವನು ಅವಳ ಕೂದಲನ್ನು ಸರಿಪಡಿಸಿದನು ಮತ್ತು ಅವಳು ಸಹ ತನ್ನ ಅಣ್ಣನನ್ನು ನೋಡಿ ಮುದ್ದಾಗಿ ನಕ್ಕಳು.
ವಿಡಿಯೋ ನೋಡಿ ಏನ್ ಹೇಳಿದ್ರು ನೋಡಿ ನೆಟ್ಟಿಗರು?
ಈ ಮುದ್ದಾದ ವಿಡಿಯೋಗೆ "ಅವನು ತುಂಬಾನೇ ಒಳ್ಳೆಯ ಸಹೋದರ, ಅವಳು ಸಹ ತುಂಬಾ ಅದೃಷ್ಟ ಮಾಡಿದ್ದಾಳೆ" ಎಂದು ಪೋಸ್ಟ್ ಗೆ ಸುಂದರವಾಗಿ ಶೀರ್ಷಿಕೆಯೊಂದನ್ನು ಬರೆಯಲಾಗಿದೆ. ಈ ಮುದ್ದಾದ ವೀಡಿಯೋವನ್ನು ಆನ್ಲೈನ್ ನಲ್ಲಿ ಹಂಚಿಕೊಂಡ ನಂತರ ಅದು 16.5 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಸೋಷಿಯಲ್ ಮೀಡಿಯಾ ಬಳಕೆದಾರರು ಇವರಿಬ್ಬರ ನಡುವಿನ ಮಧುರ ಬಂಧದ ಬಗ್ಗೆ ಹರ್ಷಿಸದೆ ಇರಲು ಸಾಧ್ಯವಾಗಲಿಲ್ಲ.
"ಅವನು ನನ್ನ ಮಗನಂತೆಯೇ ಒಳ್ಳೆಯ ಸಹೋದರ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು "ಒಂದು ದಿನ ನಾನು ಸಹ ಹೀಗೆ ಮಕ್ಕಳನ್ನು ಪ್ರೀತಿಯಿಂದ ಬೆಳೆಸಲು ಆಶಿಸುತ್ತೇನೆ" ಎಂದು ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ