ಮನೆ ಅಂತ ಹೇಳಿದ ಮೇಲೆ ಅಪ್ಪ-ಅಮ್ಮ, ಅಣ್ಣ - ತಂಗಿ, ಅಕ್ಕ - ತಮ್ಮ ಹೀಗೆ ಅನೇಕ ಸಂಬಂಧಗಳು ಇದ್ದೇ ಇರುತ್ತವೆ. ಅದರಲ್ಲಿ ಒಡ ಹುಟ್ಟಿದವರಂತೂ ತುಂಬಾ ಕಿತ್ತಾಡುತ್ತಾರೆ ಎಂಬುದು ಮೊದಲಿನಿಂದಲೂ ನಡೆದುಕೊಂಡು ಬಂದ ವಾಡಿಕೆ ಆಗಿದೆ. ಅಣ್ಣ ತಂಗಿ, ಅಕ್ಕ ತಂಗಿ ಕಿತ್ತಾಡುತ್ತಾ ಇರುವಾಗ ಪೋಷಕರು ಆದಷ್ಟು ತಡೆಯಲು ಹೋಗುತ್ತಾರೆ. ಆಗೋದಿಲ್ಲ ಅಂತ ಅನಿಸಿದ ಕೂಡಲೇ ಬಿಟ್ಟುಬಿಡುತ್ತಾರೆ. ಹಾಗೆಯೇ ತುಂಬಾ ಕೇರ್ ಮಾಡುವ ಸಿಬ್ಲಿಂಗ್ಸ್ ಕೂಡ ಇರ್ತಾರೆ. ಅದ್ರಲ್ಲೂ ಅಣ್ಣ ತಂಗಿ ಅಂದ್ರೆ ಅದರ ಬಾಂಧವ್ಯನೇ ಬೇರೆ. ಅದೆಷ್ಟೋ ಜನರಿಗೆ ಅಯ್ಯೋ ನನಗೆ ಅಣ್ಣ ಇರಬೇಕಿತ್ತು, ತಂಗಿ (Sister) ಇರಬೇಕಿತ್ತು ಅಂತ ಕೊರಗು ಇರುತ್ತದೆ. ಯಾಕೆಂದ್ರೆ ಈ ಸಂಬಂಧವೇ ಒಂಥರಾ ಅದ್ಭುತ. ವಾಸ್ತವವಾಗಿ ರಕ್ಷಾ ಬಂಧನ (Raksha Bandhan) ಅಂದ್ರೆ ನಮ್ಮನ್ನು ಯಾರು ರಕ್ಷಣೆ ಮಾಡುತ್ತಾರೆಯೋ ಅವರಿಗೆ ನಾವು ರಕ್ಷೆಯನ್ನು ಕಟ್ಟಬೇಕು ಅಂತ ಅರ್ಥ. ಆದರೆ, ಮುಖ್ಯವಾಗಿ ಈಗ ರಕ್ಷಾ ಬಂಧನ ಅಂದ್ರೆ ಅಣ್ಣ ತಂಗಿಯರಿಗೆ ಸೀಮಿತ ಎಂಬಂತಾಗಿದೆ ಅಂದರೂ ತಪ್ಪಾಗಲಾರದು.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಣ್ಣ ತಂಗಿಯರ ವಿಡಿಯೋ ಸಖತ್ ವೈರಲ್ ಆಗಿದೆ. ಈ ರೀತಿಯಾಗಿ ಅಣ್ಣ ತಂಗಿಯನ್ನು ಕೇರ್ ಮಾಡುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗೋದು ಹೊಸತೇನಲ್ಲ. ಅಣ್ಣ ಪುಟ್ಟ ತಂಗಿಯನ್ನು ಲಾಲಿ ಹಾಡಿ ಮಲಗಿಸುವುದು, ಅಥವಾ ತಂಗಿ ಅಣ್ಣನ ಜೊತೆ ಕೋಪ ಮಾಡಿಕೊಂಡು ಮತ್ತೆ ಬೇಗನೆ ಸರಿ ಆಗುವುದು, ಈ ರೀತಿಯ ಅನೇಕ ವಿಡಿಯೋಗಳು ವೈರಲ್ ಆಗ್ತಾ ಇರುತ್ತವೆ. ಇದೀಗ ಅಣ್ಣ ತನ್ನ ತಂಗಿಯನ್ನು ಸೈಕಲ್ನಲ್ಲಿ ಜೋಪಾನವಾಗಿ ಕರೆದುಕೊಂಡು ಹೋಗುವಂತ ವಿಡಿಯೋ ವೈರಲ್ ಆಗ್ತಾ ಇದೆ.
ಏನಿದೆ ವಿಡಿಯೋದಲ್ಲಿ?
ಆಕೆ ಪುಟ್ಟ ತಂಗಿ, ಈತ 13 ಆಸುಪಾಸಿನ ಹುಡುಗ. ಸೈಕಲ್ ಹಿಂದಿನ ಸೀಟಿನಲ್ಲಿ ತನ್ನ ತಂಗಿಯನ್ನು ಕೂರಿಸಿರುತ್ತಾನೆ. ಆ ಪುಟ್ಟ ಹುಡುಗಿಗೆ ಎಲ್ಲಿ ಬ್ಯಾಲೆನ್ಸ್ ತಪ್ಪಿ ಬೀಳಯತ್ತಾಳೋ ಎಂಬ ಭಯದಿಂದ, ತಂಗಿಯ ಕಾಲುಗಳನ್ನು ಸೈಕಲ್ನ ಮುಂಬಾಗದ ಕಬ್ಬಿಣದ ರಾಡುಗಳಿಗೆ ಕಟ್ಟುತ್ತಾನೆ.
ಇದನ್ನೂ ಓದಿ: ಡೇಟಿಂಗ್ ಮಾಡೋದನ್ನು ಕಲಿಸಲು ಸರ್ಕಾರವೇ ಕೋರ್ಸ್ ಆರಂಭಿಸಿದೆ!
ಅದು ಹಗ್ಗದಿಂದ ಅಲ್ಲ. ಅದ್ರಲ್ಲಿ ಕಟ್ಟಿದ್ರೆ ಎಲ್ಲಿ ನೋವಾಗುತ್ತೋ ಎಂಬುದಾಗಿ ಒಂದು ಟವೆಲ್ನಿಂದ ಕಟ್ಟುತ್ತಾನೆ. ಜೊತಗೆ ಹಿಂದೆ ವಾಲಿ ಬೀಳಬಾರದು ಎಂಬ ಕಾರಣದಿಂದಾಗಿ ಹಿಂದೆಯೂ ಕೂಡ ಬಲವಾದ ಮೂಟೆಯನ್ನು ಇಟ್ಟಿರುತ್ತಾನೆ. ಒಟ್ಟಿನಲ್ಲಿ ತಂಗಿ ಸೈಕಲ್ನಲ್ಲಿ ಕೂತ್ರೂ ಕೂಡ, ಕಾರಿನಲ್ಲಿ ಕೂತ ಫೀಲ್ ಕೊಡುತ್ತಿದ್ದಾನೆ ಅಣ್ಣ. ಇಷ್ಟೆಲ್ಲಾ ಜೋಪಾನ ಮಾಡಿ ತನ್ನ ತಂಗಿಯನ್ನು ಎಷ್ಟು ಮುದ್ದಾಗಿ, ಜಾಗೃತಿಯಿಂದ ಸೈಕಲ್ನಲ್ಲಿ ಕರೆದುಕೊಂಡು ಹೋಗುತ್ತಾನೆ ಎಂಬುದು ನೀವೇ ಕಾಣಬಹುದಾಗಿದೆ.
ಸಾರ್ವಜನಿಕರು ಇದನ್ನು ಗಮನಿಸಿ ತಕ್ಷಣವೇ ಮೊಬೈಲ್ನಲ್ಲಿ ವಿಡಿಯೋ ಮಾಡಿ 'Brother's Love' ಅಂತ ಅಡಿಬರಹವನ್ನು ನೀಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನೀವು ಈ ವಿಡಿಯೋವನ್ನು ನೋಡಿದರೆ ಭಾವುಕರಾಗ್ತೀರ! ಹಾಗೆಯೇ ಇದೆ.
Brother's Love pic.twitter.com/rATH1A83my
— Urdu Novels (@urdunovels) January 2, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ