• Home
  • »
  • News
  • »
  • trend
  • »
  • Viral Video: ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಫ್ರೀ ಶವರ್, ಒಡೆದ ನಲ್ಲಿಯ ವಿಡಿಯೋ ಫುಲ್ ವೈರಲ್

Viral Video: ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಫ್ರೀ ಶವರ್, ಒಡೆದ ನಲ್ಲಿಯ ವಿಡಿಯೋ ಫುಲ್ ವೈರಲ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Railway Station Gives Shower to Passenger: ರೈಲ್ವೆ ಪ್ಲಾಟ್ಫಾರ್ಮ್ ನಿಂದ ಬಂದಿರುವ ಈ ಉಲ್ಲಾಸಭರಿತ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಈಗ ವೈರಲ್ ಆಗುತ್ತಿದೆ. ಈ ಸಣ್ಣ ಕ್ಲಿಪ್ ಅನ್ನು ಅಭಿ ಎಂಬ ಟ್ವಿಟರ್ ಬಳಕೆದಾರರು ಬುಧವಾರ ಹಂಚಿಕೊಂಡಿದ್ದಾರೆ.

  • Share this:

ಸಾಮಾನ್ಯವಾಗಿ ನಾವು ಈ ಬಸ್ ನಿಲ್ದಾಣಗಳ (Bus Stand) ಅಥವಾ ರೈಲ್ವೆ ನಿಲ್ದಾಣಗಳ (Railway Station) ಶೌಚಾಲಯಗಳಿಗೆ (Toilet) ಹೋದರೆ, ಅಲ್ಲಿ ನಾವು ಈ ಒಡೆದ ನಲ್ಲಿಗಳು, ಹನಿ ಹನಿಯಾಗಿ ನೀರು ಸೋರುತ್ತಿರುವ ನಲ್ಲಿಗಳನ್ನು ನೋಡುತ್ತೇವೆ. ಕೆಲವೊಂದು ನಲ್ಲಿಯನ್ನು ಸುಮ್ಮನೆ ಆನ್ ಮಾಡಿದರೆ ಸಾಕು ಆ ಕ್ಯಾಪ್ ನಮ್ಮ ಕೈಗೆ ಬಂದು ಬಿಟ್ಟು, ನೀರು ಮೈ ಮೇಲೆ ಬಂದು ಬಿದ್ದು ಬಟ್ಟೆಯಲ್ಲಾ ಒದ್ದೆ ಆಗಿಬಿಟ್ಟಿರುತ್ತದೆ. ಹೀಗೆ ಅನೇಕ ರೀತಿಯ ಘಟನೆಗಳು ನಮ್ಮ ನಿಮ್ಮೆಲ್ಲರ ಜೊತೆಯಲ್ಲಿ ಒಮ್ಮೆಯಾದರೂ ನಡೆದಿರುತ್ತದೆ ಅಂತ ಹೇಳಬಹುದು. ಅದರಲ್ಲೂ ಈ ಬಸ್ ನಿಲ್ದಾಣಗಳಲ್ಲಿ ಶೌಚಾಲಯ ಒಳಗಡೆ ಇದ್ದು ನಲ್ಲಿಗಳು ಸಹ ಒಳಗೆ ಇರುತ್ತವೆ. ಆದರೆ ಈ ರೈಲ್ವೆ ನಿಲ್ದಾಣಗಳಲ್ಲಿ ನಲ್ಲಿಗಳು ಹೊರಗೆ ಎಂದರೆ ಪ್ಲಾಟ್ಫಾರ್ಮ್ ಗಳ ಮೇಲೆಯೇ ಇರಿಸಿರುತ್ತಾರೆ. ಪ್ಲಾಟ್ಫಾರ್ಮ್ (Platform) ಮೇಲೆ ರೈಲಿಗಾಗಿ ಕಾಯುತ್ತಾ ನಿಲ್ಲುವ ಪ್ರಯಾಣಿಕರಿಗೆ ಕೈ ತೊಳೆದುಕೊಳ್ಳಲು, ಮುಖ ತೊಳೆದುಕೊಳ್ಳಲು ಅನುಕೂಲವಾಗಲೆಂದು ಈ ರೀತಿಯಾಗಿ ಪ್ಲಾಟ್ಫಾರ್ಮ್ ಗಳ ಮೇಲೆಯೇ ಇವುಗಳನ್ನು ಇರಿಸಿರುತ್ತಾರೆ ಅಂತ ಹೇಳಬಹುದು.


ಈ ರೀತಿಯ ಅವ್ಯವಸ್ಥೆಯ ಅನೇಕ ಸುದ್ದಿಗಳನ್ನು ನಾವು ದಿನನಿತ್ಯ ಸುದ್ದಿ ವಾಹಿನಿಗಳಲ್ಲಿ ನೋಡಿರುತ್ತೇವೆ ಮತ್ತು ಕೇಳಿರುತ್ತೇವೆ. ಆದರೆ ಇಲ್ಲೊಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ನೋಡಿ. ಅದು ನೋಡಲು ಕೆಲವರಿಗೆ ಕಿರಿಕಿರಿ ಅಂತ ಅನ್ನಿಸಿದರೆ, ಇನ್ನೂ ಕೆಲವರಿಗೆ ಅದು ನಗು ಸಹ ತರಿಸಬಹುದು. ಅಂತದ್ದೇನಿದೆ ಈ ವೀಡಿಯೋದಲ್ಲಿ ಅಂತೀರಾ? ನೀವೇ ನೋಡಿ.


ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ ಮೇಲಿರುವ ಒಡೆದ ನಲ್ಲಿ ಈಗ ಫ್ರೀ ಶವರ್!


ಈ ವೀಡಿಯೋದಲ್ಲಿ ರೈಲ್ವೆ ನಿಲ್ದಾಣದ ಮೇಲಿರುವ ಒಡೆದ ನಲ್ಲಿ ಪ್ಲಾಟ್ಫಾರ್ಮ್ ಮೇಲೆ ನಡೆದಾಡುತ್ತಿರುವವರಿಗೆ ಮತ್ತು ಅಲ್ಲಿಯೇ ಟ್ರ್ಯಾಕ್ ಮೇಲೆ ಬರುತ್ತಿರುವ ಲೋಕಲ್ ರೈಲಿನಲ್ಲಿರುವ ಪ್ರಯಾಣಿಕರಿಗೆ ಒಂದು ರೀತಿಯ "ಉಚಿತ ಶವರ್" ನೀಡುತ್ತಿರುವುದನ್ನು ನಾವು ನೋಡಬಹುದು.


ರೈಲ್ವೆ ಪ್ಲಾಟ್ಫಾರ್ಮ್ ನಿಂದ ಬಂದಿರುವ ಈ ಉಲ್ಲಾಸಭರಿತ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಈಗ ವೈರಲ್ ಆಗುತ್ತಿದೆ. ಈ ಸಣ್ಣ ಕ್ಲಿಪ್ ಅನ್ನು ಅಭಿ ಎಂಬ ಟ್ವಿಟರ್ ಬಳಕೆದಾರರು ಬುಧವಾರ ಹಂಚಿಕೊಂಡಿದ್ದಾರೆ. ಒಡೆದ ನಲ್ಲಿಯ ನೀರು ನೇರವಾಗಿ ಹರಿದು ಹೋಗುತ್ತಿರುವುದನ್ನು ನಾವು ಇಲ್ಲಿ ನೋಡಬಹುದು. ನೀರು ಬರುತ್ತಿದೆ ಅಂತ ಎಷ್ಟೋ ಪ್ರಯಾಣಿಕರಿಗೆ ಗೊತ್ತೇ ಆಗದೆ ತಕ್ಷಣವೇ ಆ ನೀರಿನಿಂದ ತಪ್ಪಿಸಿಕೊಳ್ಳಲು ಏನೆಲ್ಲಾ ಸರ್ಕಸ್ ಮಾಡುತ್ತಿದ್ದಾರೆ ನೋಡಿ.


ವೀಡಿಯೋ 1.1 ಮಿಲಿಯನ್ ವೀಕ್ಷಣೆ ಗಳಿಸಿದೆ..


"ನಿಮ್ಮ ಸೇವೆಯಲ್ಲಿ ಭಾರತೀಯ ರೈಲ್ವೆ" ಎಂಬ ಶೀರ್ಷಿಕೆಯುಳ್ಳ ವೀಡಿಯೋ ಪೋಸ್ಟ್ ಸುಮಾರು 1.1 ಮಿಲಿಯನ್ ವೀಕ್ಷಣೆಗಳು ಮತ್ತು 26,000 ಕ್ಕೂ ಹೆಚ್ಚು ಲೈಕ್ ಗಳನ್ನು ಸಹ ಗಳಿಸಿದೆ ಎಂದು ಹೇಳಬಹುದು.


ಇದನ್ನೂ ಓದಿ: ಮಾರುಕಟ್ಟೆಗೆ ಲಗ್ಗೆಯಿಟ್ಟ ವಿಶ್ವದ ಅತ್ಯಂತ ವೇಗದ ಶೂ, ಬೆಲೆ ಮಾತ್ರ ಹುಬ್ಬೇರಿಸುವಂತಿದೆ!


30 ಸೆಕೆಂಡುಗಳ ದೃಶ್ಯಾವಳಿಯಲ್ಲಿ, ಒಡೆದ ನಲ್ಲಿಯಿಂದ ನೀರು ಫಿರಂಗಿಯಂತೆ ಪೂರ್ಣ ಬಲದಲ್ಲಿ ಹೊರ ಬರುತ್ತಿರುವುದನ್ನು ಕಾಣಬಹುದು. ಕೆಲವೇ ಕ್ಷಣಗಳ ನಂತರ, ಕ್ಯಾಮೆರಾ ಒಂದು ಒಳಬರುವ ರೈಲಿನ ಕಡೆಗೆ ತಿರುಗುತ್ತಿದ್ದಂತೆ, ಹಾದು ಹೋಗುತ್ತಿರುವ ಸ್ಥಳೀಯ ರೈಲಿನ ಬಾಗಿಲ ಬಳಿ ನಿಂತಿದ್ದ ಪ್ರಯಾಣಿಕರು ನೀರು ನೋಡಿ ಬೆಚ್ಚಿಬಿದ್ದು, ಒದ್ದೆಯಾಗುವುದನ್ನು ತಪ್ಪಿಸಿಕೊಳ್ಳಲು ಹಾಗೆಯೇ ಬಾಗಿಲ ಹಿಂದೆ ಪಕ್ಕಕ್ಕೆ ಅಂಟಿಕೊಂಡು ನಿಲ್ಲುತ್ತಿರುವುದು ಕಂಡು ಬಂದಿತು.ಕ್ಲಿಪ್ ನೋಡಿ ಅನೇಕ ನೆಟ್ಟಿಗರು ನಕ್ಕಿದ್ದೆ ನಕ್ಕಿದ್ದು..


ಈ ಕ್ಲಿಪ್ ಹಲವಾರು ಇಂಟರ್ನೆಟ್ ಬಳಕೆದಾರರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು, ರೈಲಿನಲ್ಲಿದ್ದ ಪ್ರಯಾಣಿಕರು ಮುರಿದ ನಲ್ಲಿಯ ಆ ಕೋಪದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರೈಲಿನಲ್ಲಿ ಬರೆದಿರುವ ಇಆರ್ (ಪೂರ್ವ ರೈಲ್ವೆ) ಅನ್ನು ನೋಡಿದರೆ, ಇದು ಪಶ್ಚಿಮ ಬಂಗಾಳದ ಯಾವುದೊ ಒಂದು ನಿಲ್ದಾಣವಾಗಿರಬಹುದು ಅಂತ ಅರ್ಥವಾಗುತ್ತದೆ.


ಇದನ್ನೂ ಓದಿ: ಈ ಮುದ್ದು ನಾಯಿ ಮರಿಗಳ ಕ್ಯೂಟ್ ವಿಡಿಯೋ ನೋಡಿ! ನಿಮ್ಮ ದಿನದ ಚಿಂತೆಯೆಲ್ಲ ಮಾಯ ಆಗತ್ತೆ


ಇಂಟರ್ನೆಟ್ ಬಳಕೆದಾರರು ಭಾರತೀಯ ರೈಲ್ವೆ ಒದಗಿಸುವ "ವಿಶೇಷ ಸೇವೆ" ಅಂತ ಬರೆದು ವ್ಯಂಗ್ಯವಾಗಿ ಶ್ಲಾಘಿಸಿದ್ದಾರೆ. ಒಬ್ಬ ಬಳಕೆದಾರರು ತಮಾಷೆಯಾಗಿ "ಅನೇಕರು ಬೆಳಿಗ್ಗೆ ಸ್ನಾನ ಮಾಡಿಲ್ಲ ಎಂದು ರೈಲ್ವೆಗೆ ಸಹ ತಿಳಿದಿದೆ. ಆದ್ದರಿಂದ ಸಹಾಯ ಮಾಡುತ್ತಿದೆ" ಎಂದು ಹೇಳಿದರು. ಇನ್ನೊಬ್ಬರು ಇದನ್ನು "ಅದು ಆಟೋ ಕ್ಲೀನಿಂಗ್ ಸಿಸ್ಟಮ್" ಎಂದು ಬರೆದಿದ್ದಾರೆ.

Published by:Sandhya M
First published: