ಸಾಮಾನ್ಯವಾಗಿ ನಾವು ಹೊಸ ಕಾರನ್ನು (New Car) ಖರೀದಿಸಿದರೆ, ಅದಕ್ಕೆ ಸರಿಯಾದ ಒಂದು ಫ್ಯಾನ್ಸಿ ಸಂಖ್ಯೆಯನ್ನು (Fancy Number) ಸಹ ಹುಡುಕುತ್ತೇವೆ. ಎಂದರೆ ನಾವು ಆ ಕಾರಿಗೆ ನೋಂದಣಿ ಸಂಖ್ಯೆ ಬರುವ ಮುಂಚೆಯೇ ಆರ್ಟಿಒ ಗಳಿಗೆ (RTO) ಹೋಗಿ ಅಲ್ಲಿ ಹಣವನ್ನು ನೀಡಿ ನಮಗೆ ಬೇಕಾದ ಫ್ಯಾನ್ಸಿ ಸಂಖ್ಯೆಯನ್ನು ನಮ್ಮ ಕಾರಿಗೆ ಹಾಕಿಸಿಕೊಳ್ಳುತ್ತೇವೆ. ಹೀಗೆ ಅನೇಕ ಕಾರುಗಳು ರಸ್ತೆಯ ಮೇಲೆ ಓಡಾಡುತ್ತಿರುವಾಗ ಆ ಕಾರಿನ ಸಂಖ್ಯೆಗಳು ನಮ್ಮನ್ನು ತುಂಬಾನೇ ಆಶ್ಚರ್ಯ ಪಡುವಂತೆ ಮಾಡುತ್ತವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಬಹುತೇಕ ಶ್ರೀಮಂತರು ಸಂಖ್ಯಾಶಾಸ್ತ್ರದ ಆಧಾರದ ಮೇಲೆ ತಮ್ಮ ಕಾರಿಗೆ ಫ್ಯಾನ್ಸಿ ಸಂಖ್ಯೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಅಂತ ಹೇಳಬಹುದು. ಈ ಫ್ಯಾನ್ಸಿ ಸಂಖ್ಯೆಗಳು ಸಾಮಾನ್ಯವಾಗಿ ಆರ್ಟಿಒ ಗಳಿಗೆ ಉತ್ತಮ ಆದಾಯದ ಮೂಲವಾಗಿದೆ, ಏಕೆಂದರೆ ಅವರು ಅವುಗಳನ್ನು ಹರಾಜಿಗೆ ಇಡುತ್ತಾರೆ ಮತ್ತು ಹೆಚ್ಚಿನ ಬಿಡ್ ಮಾಡಿದವರು ಆ ಫ್ಯಾನ್ಸಿ ಸಂಖ್ಯೆಗಳನ್ನು ಖರೀದಿಸುತ್ತಾರೆ ಮತ್ತು ನಂತರದಲ್ಲಿ ಅವುಗಳನ್ನು ತಮ್ಮ ಕಾರಿಗೆ ಹಾಕಿಸಿಕೊಳ್ಳುತ್ತಾರೆ ಅಂತ ಹೇಳಬಹುದು.
“ಎಫ್ 1” ಎಂಬ ನೋಂದಣಿ ಸಂಖ್ಯೆಗೆ 132 ಕೋಟಿ ಕೊಟ್ರಂತೆ..
ಹೊಸ ಕಾರಿಗೆ ಅಂತ ದುಡ್ಡು ಖರ್ಚು ಮಾಡುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಕೇವಲ ನೋಂದಣಿ ಸಂಖ್ಯೆಗಳಿಗಾಗಿಯೇ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುವ ಜನರು ಭಾರತದಲ್ಲಿದ್ದಾರೆ ಅಂತ ಹೇಳಬಹುದು.
ಇದರ ಬಗ್ಗೆ ಕ್ರೇಜ್ ಹೊಂದಿರುವವರು ನಾವು ಮಾತ್ರ ಅಲ್ಲ. ಯುನೈಟೆಡ್ ಕಿಂಗ್ಡಮ್ ನ ವ್ಯಕ್ತಿಯೊಬ್ಬರು "ಎಫ್ 1" ಎಂದು ಹೇಳುವ ನೋಂದಣಿ ಸಂಖ್ಯೆಗಾಗಿ ಭಾರಿ ಮೊತ್ತವನ್ನು ಖರ್ಚು ಮಾಡಿದ್ದಾರೆ. ಈ ಸಂಖ್ಯೆಗಾಗಿ ಅವರು ಸುಮಾರು 132 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ.
ಯುನೈಟೆಡ್ ಕಿಂಗ್ಡಮ್ ನಲ್ಲಿ ಈ ಎಫ್ 1 ನೋಂದಣಿ ಸಂಖ್ಯೆ ಯಾವಾಗಲೂ ಕಾರು ಮಾಲೀಕರಲ್ಲಿ ಜನಪ್ರಿಯವಾಗಿದೆ. ಇದು ಅತ್ಯಂತ ಜನಪ್ರಿಯ ಸಂಖ್ಯೆಯಾಗಿರುವುದರಿಂದ, ಇದನ್ನು ಮಾಲೀಕರಿಗೆ ಸೀಮಿತ ಅವಧಿಗೆ ಮಾತ್ರ ನೀಡಲಾಗುತ್ತದೆ. ಬುಗಾಟಿ ವೆಯ್ರಾನ್, ಮರ್ಸಿಡಿಸ್-ಮೆಕ್ಲಾರೆನ್ ಎಸ್ಎಲ್ಆರ್ ಮುಂತಾದ ಅನೇಕ ಹೈ-ಎಂಡ್ ಪರ್ಫಾರ್ಮನ್ಸ್ ಕಾರುಗಳಲ್ಲಿ ಈ ನೋಂದಣಿಯನ್ನು ಗುರುತಿಸಲಾಗಿದೆ.
ಇದನ್ನೂ ಓದಿ: ಈ ರೈಲಿನಲ್ಲಿ ಟಿಕೆಟ್ ಇಲ್ಲದೆ ಫ್ರೀಯಾಗಿ ಜರ್ನಿ ಮಾಡಬಹುದು! ಸಟ್ಲೆಜ್ ನದಿಯನ್ನೂ ನೋಡಬಹುದು!
ಎಫ್ 1 ನಂಬರ್ ಪ್ಲೇಟ್ ಫಾರ್ಮುಲಾ 1 ರೇಸಿಂಗ್ ಅನ್ನು ಸೂಚಿಸುತ್ತದೆ..
ಈಗಾಗಲೇ ಅನೇಕರು ಊಹಿಸಿದಂತೆ ಎಫ್ 1 ನಂಬರ್ ಪ್ಲೇಟ್ ಫಾರ್ಮುಲಾ 1 ರೇಸಿಂಗ್ ಅನ್ನು ಸೂಚಿಸುತ್ತದೆ. ಇದು ವಿಶ್ವದಾದ್ಯಂತ ಅತ್ಯಂತ ಪ್ರಸಿದ್ಧ ಮೋಟಾರ್ ಸ್ಪೋರ್ಟ್ಸ್ ಈವೆಂಟ್ ಗಳಲ್ಲಿ ಒಂದಾಗಿದೆ.
ಇದು ಜನಪ್ರಿಯವಾಗಲು ಮತ್ತೊಂದು ಕಾರಣವೆಂದರೆ ಯುಕೆ ಸರ್ಕಾರವು ಎಫ್ 1 ಹೊರತುಪಡಿಸಿ ಈ ನೋಂದಣಿ ಫಲಕದಲ್ಲಿ ಯಾವುದೇ ಅಂಕಿಗಳು ಅಥವಾ ವರ್ಣಮಾಲೆಗಳನ್ನು ನೀಡುವುದಿಲ್ಲ. ಇದು ವಿಶ್ವದ ವಾಹನದ ಅತಿ ಕಡಿಮೆ ಅಕ್ಷರಗಳಿರುವ ನೋಂದಣಿ ಸಂಖ್ಯೆಗಳಲ್ಲಿ ಒಂದಾಗಿದೆ. ಎಫ್ 1 ನೋಂದಣಿ ನಂಬರ್ ಪ್ಲೇಟ್ ಆರಂಭದಲ್ಲಿ 1904 ರಿಂದ ಎಸೆಕ್ಸ್ ಸಿಟಿ ಕೌನ್ಸಿಲ್ ಒಡೆತನದಲ್ಲಿತ್ತು. ಈ ನೋಂದಣಿಯು 2008 ರಲ್ಲಿ ಮೊದಲ ಬಾರಿಗೆ ಹರಾಜಿಗೆ ಬಂದಿತು.
ಈ ನಂಬರ್ ಪ್ರಸ್ತುತ ಯುಕೆ ಮೂಲದ ಕಾಹ್ನ್ ಡಿಸೈನ್ಸ್ ಮಾಲೀಕ ಅಫ್ಜಲ್ ಖಾನ್ ಒಡೆತನದಲ್ಲಿದೆ. ಅವರು ತಮ್ಮ ಬುಗಾಟಿ ವೆಯ್ರಾನ್ ಗಾಗಿ ಈ ಸಂಖ್ಯೆಯನ್ನು ಖರೀದಿಸಿದರು ಮತ್ತು ಆ ಸಂಖ್ಯೆಗೆ ಸುಮಾರು 132 ಕೋಟಿ ರೂಪಾಯಿ ಹಣ ನೀಡಿದರು. ಇದು ವಾಸ್ತವವಾಗಿ ಬುಗಾಟಿ ವೆಯ್ರಾನ್ ಕಾರಿಗಿಂತ ಹೆಚ್ಚು ದುಬಾರಿಯಾಗಿದೆ ಅಂತ ಹೇಳಬಹುದು.
ಈ ಸಂಖ್ಯೆ 2008 ರಲ್ಲಿ ಹರಾಜಿಗೆ ಬಂದಾಗ, 4 ಕೋಟಿಗೆ ಮಾರಾಟ ಮಾಡಲಾಗಿತ್ತು..
ಈ ಸಂಖ್ಯೆ 2008 ರಲ್ಲಿ ಹರಾಜಿಗೆ ಬಂದಾಗ, ಅದನ್ನು 4 ಕೋಟಿ ರೂಪಾಯಿಗೆ ಮಾರಾಟ ಮಾಡಲಾಯಿತು. ನಿಧಾನವಾಗಿ ಜನರು ಸಂಖ್ಯೆಯ ಜನಪ್ರಿಯತೆಯನ್ನು ಅರಿತುಕೊಳ್ಳಲು ಪ್ರಾರಂಭಿಸಿದರು ಮತ್ತು ಅವರದನ್ನು ಪಡೆಯಬೇಕು ಎಂಬ ಬಯಕೆ ಸಹ ಹೆಚ್ಚಾಯಿತು.
ಪ್ರಸ್ತುತ ಎಫ್ 1 ಸಂಖ್ಯೆಯು ವಿಶ್ವದ ಅತ್ಯಂತ ದುಬಾರಿ ನೋಂದಣಿ ಸಂಖ್ಯೆಗಳಲ್ಲಿ ಒಂದಾಗಿದೆ. ಇದು ಯುಕೆಯಲ್ಲಿ ಮಾತ್ರ ವರದಿಯಾದ ವಿಷಯವಲ್ಲ. ಫಾರ್ಚೂನರ್ ಮಾಲೀಕರು ತಮ್ಮ ಎಸ್ಯುವಿಯ ಫ್ಯಾನ್ಸಿ ನಂಬರ್ ಗಾಗಿ ಸುಮಾರು 30 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ ಇದೇ ರೀತಿಯ ಪ್ರವೃತ್ತಿಗಳನ್ನು ನಾವು ಭಾರತದಲ್ಲಿಯೂ ನೋಡಿದ್ದೇವೆ.
ಅಬುಧಾಬಿಯಲ್ಲಿ ಭಾರತದ ಉದ್ಯಮಿಯೊಬ್ಬರು ಡಿ 5 ಎಂಬ ನೋಂದಣಿ ಸಂಖ್ಯೆಯನ್ನು 67 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ. ಅಬುಧಾಬಿ ಮೂಲದ ಮತ್ತೊಬ್ಬ ಉದ್ಯಮಿ 66 ಕೋಟಿ ಕೊಟ್ಟು ನೋಂದಣಿ ಸಂಖ್ಯೆ 1 ಅನ್ನು ಖರೀದಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ