ಈ ಟಿ ಶರ್ಟ್‌ ಧರಿಸಿದರೆ ಸಾಕು ಚಾಕುವಿನಿಂದ ಚುಚ್ಚಿಸಿಕೊಂಡರೂ ನಿಮಗೇನೂ ಆಗಲ್ಲ..!

ಈ ಹಿಂದೆ ಕಂಪನಿಯು ಬೇರೆ ಬೇರೆ ರೀತಿಯ ಆ್ಯಂಟಿ-ಬುಲೆಟ್ ಹಾಗೂ ಆ್ಯಂಟಿ-ವೆಪನ್ ರಕ್ಷಾಕವಚಗಳನ್ನು ತಯಾರಿಸಿದೆ. ಇದೀಗ ಜನಸಾಮಾನ್ಯರನ್ನು ಚಾಕು ದಾಳಿಯಿಂದ ಸಂರಕ್ಷಿಸಲು ಈ ವಿಶೇಷ ಟಿ-ಶರ್ಟ್ ತಯಾರಿಸಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನಗಳು (Technologies) ಹೊಸ ಹೊಸ ನಾವೀನ್ಯತೆಗಳನ್ನು ಪಡೆದುಕೊಂಡು ಮುಂದುವರಿಯುತ್ತಿವೆ. ಅದೆಷ್ಟೋ ಹೊಸ ಹೊಸ ಅನ್ವೇಷಣೆಗಳನ್ನು(Discoveries ), ಪ್ರಯೋಗಗಳನ್ನು ವಿಜ್ಞಾನಿಗಳು ತಂತ್ರಜ್ಞಾನಿಗಳು ನಡೆಸುತ್ತಿದ್ದಾರೆ. ಈಗ ಇಂತಹುದ್ದೇ ಒಂದು ವಿನೂತನ ಸಾಹಸಕ್ಕೆ ಬ್ರಿಟಿಷ್ ಆರ್ಮರ್ ಕಂಪನಿ (British Armor Company) ಕೈಹಾಕಿದ್ದು ಅನನ್ಯವಾದ ಟಿ-ಶರ್ಟ್ (T-shirt) ಒಂದನ್ನು ಅಭಿವೃದ್ಧಿಪಡಿಸಿದೆ. ಈ ಟಿ-ಶರ್ಟ್‌ನ ವಿಶಿಷ್ಟತೆ ಏನೆಂದರೆ ಹರಿತವಾದ ಚಾಕುವಿನ ದಾಳಿಯಿಂದ (Knife attacks)ಇದು ನಿಮ್ಮನ್ನು ಒಂದಿನಿತೂ ಹಾನಿಯಾಗದಂತೆ (Protective) ಸಂರಕ್ಷಿಸುತ್ತದೆ. ದೇಹ ಸಂರಕ್ಷಿಸುವ ರಕ್ಷಾಕವಚಗಳ ನಿರ್ಮಾಣಕ್ಕೆ ಹೆಸರುವಾಸಿಯಾಗಿರುವ PPSS ಗ್ರೂಪ್ ಎಂಬುದು ಟಿ-ಶರ್ಟ್ ಅಭಿವೃದ್ಧಿಪಡಿಸಿರುವ ಸಂಸ್ಥೆಯಾಗಿದೆ.

ಹತ್ತಿಗಿಂತಲೂ ಸುದೃಢ ವಸ್ತು:
ಹತ್ತಿಗಿಂತಲೂ ಹೆಚ್ಚು ಸುದೃಢವಾಗಿರುವ ಆಕ್ಸಿಲಮ್ ಎಂಬ ವಿಶಿಷ್ಟ ಕಾರ್ಬನ್ ಫೈಬರ್ ಸಂಯೋಜಿತ ವಸ್ತುವಿನಿಂದ ಟಿ-ಶರ್ಟ್ ತಯಾರಿಸಲಾಗಿದೆ. ಇದನ್ನು ಇತ್ತೀಚಿನವರೆಗೂ ಮಾರುಕಟ್ಟೆಯಲ್ಲಿ ಬಳಸಲಾಗಿಲ್ಲ. ಈ ಟಿ-ಶರ್ಟ್ ಅನ್ನು ಇತರ ಬಟ್ಟೆಗಳಂತೆಯೇ ಮೆಶೀನ್‌ಗಳಲ್ಲಿ ಕೂಡ ತೊಳೆಯಬಹುದಾಗಿದ್ದು ಬೆವರು ವಾಸನೆಯಿಂದ ನೀವು ರಕ್ಷಣೆ ಪಡೆಯಬಹುದು. ಈ ಟಿ-ಶರ್ಟ್ ಅತ್ಯಂತ ಹಗುರವಾಗಿದ್ದು ಆಘಾತ-ನಿರೋಧಕವಾಗಿದೆ ಇದು ಎಷ್ಟು ಶಕ್ತಿಶಾಲಿಯಾಗಿದೆ ಎಂದರೆ ಲೋಹದ ಮೊನಚಾದ ಆಯುಧಗಳನ್ನು ಕೂಡ ಮೊಂಡಾಗಿಸುತ್ತದೆ ಮತ್ತು ನಿಷ್ಪ್ರಯೋಜಕವಾಗಿಸುತ್ತದೆ.

ವಿಡಿಯೋ ನೋಡಿ:ಹರಿತ ಆಯುಧಗಳಿಂದ ಸಂರಕ್ಷಣೆ:
ಸಾಮಾನ್ಯವಾಗಿ ರಕ್ಷಾಕವಚ ಅಥವಾ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಸಂಸ್ಥೆಗಳು ಸಾಮಾನ್ಯ ನಾಗರಿಕರಿಗಾಗಿ ಸುರಕ್ಷಾ ಜಾಕೆಟ್‌ಗಳನ್ನು ತಯಾರಿಸುವುದಿಲ್ಲ. ಆದರೂ ಈ ವಿಶೇಷ ಟಿ-ಶರ್ಟ್ ನಿಮ್ಮನ್ನು ಯಾವುದೇ ಹರಿತವಾದ ಚಾಕು ಅಥವಾ ಕತ್ತಿಗಳ ಪ್ರಹಾರದಿಂದ ಸಂರಕ್ಷಿಸುತ್ತದೆ. ಕಂಪನಿಯು ಈ ಸಂಬಂಧಿತವಾಗಿ ಫೇಸ್‌ಬುಕ್‌ನಲ್ಲಿ ವಿಡಿಯೋ ಹಂಚಿಕೊಂಡಿದೆ. ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ಇದೇ ವಿಶೇಷ ಟಿ-ಶರ್ಟ್ ಧರಿಸಿದ್ದು ಹರಿತವಾದ ಚಾಕುವಿನಿಂದ ಟಿ-ಶರ್ಟ್ ಮೇಲೆ ದಾಳಿ ಮಾಡಿಕೊಳ್ಳುತ್ತಿರುವುದು ಕಾಣಬಹುದು. ದಾಳಿಯ ನಂತರ ಟಿ-ಶರ್ಟ್ ಅನ್ನು ಬಿಚ್ಚಲಾಗುತ್ತದೆ. ಆದರೆ ಆ ವ್ಯಕ್ತಿಯ ಮೈಮೇಲೆ ಒಂದು ಚೂರು ಗಾಯವಾಗಿರುವುದಿಲ್ಲ. ಈ ಟಿ-ಶರ್ಟ್ ಎಷ್ಟು ದಪ್ಪನಾಗಿದೆ ಎಂದರೆ ಹರಿತವಾದ ಆಯುಧ ದೇಹದ ಒಳಭಾಗಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ.

ಇದನ್ನೂ ಓದಿ: Men Shirts Collections: ಪ್ರತಿಯೊಬ್ಬ ಯುವಕನ ಬಳಿಯೂ ಈ 5 ರೀತಿಯ ಶರ್ಟ್​​ಗಳು ಇರಲೇಬೇಕು.. Take Look

ವಿಶೇಷ ಟಿ-ಶರ್ಟ್ ನಿರ್ಮಾಣ ಮಾಡಿರುವ ಸಂಸ್ಥೆ:
ರಕ್ಷಾಕವಚಗಳನ್ನು ನಿರ್ಮಿಸುವ PPSS ಗ್ರೂಪ್ ಮಾರುಕಟ್ಟೆಯಲ್ಲಿ ಖ್ಯಾತಿ ಪಡೆದುಕೊಂಡಿರುವ ಸಂಸ್ಥೆಯಾಗಿದೆ. ಜನಸಾಮಾನ್ಯರಿಗಾಗಿ ಬ್ರಿಟಿಷ್ ಆರ್ಮರ್ ಕಂಪನಿ PPSS ಗ್ರೂಪ್ ಈ ಟಿ-ಶರ್ಟ್ ಅನ್ನು ವಿನ್ಯಾಸಗೊಳಿಸಿದೆ. ಈ ಹಿಂದೆ ಕಂಪನಿಯು ಬೇರೆ ಬೇರೆ ರೀತಿಯ ಆ್ಯಂಟಿ-ಬುಲೆಟ್ ಹಾಗೂ ಆ್ಯಂಟಿ-ವೆಪನ್ ರಕ್ಷಾಕವಚಗಳನ್ನು ತಯಾರಿಸಿದೆ. ಇದೀಗ ಜನಸಾಮಾನ್ಯರನ್ನು ಚಾಕು ದಾಳಿಯಿಂದ ಸಂರಕ್ಷಿಸಲು ಈ ವಿಶೇಷ ಟಿ-ಶರ್ಟ್ ತಯಾರಿಸಿದೆ.

ಇದನ್ನೂ ಓದಿ: How to Shop for Men’s Clothes: ಯುವಕರು ಶರ್ಟ್ ಖರೀದಿ ವೇಳೆ ಗಮನಿಸಬೇಕಾದ ಅಂಶಗಳು ಇಲ್ಲಿವೆ ನೋಡಿ

ಟಿ-ಶರ್ಟ್ ಬೆಲೆ 16,000 ರೂಗಳಿಂದ ಆರಂಭಗೊಂಡು 19,000 ರೂಗಳ ಶ್ರೇಣಿಯಲ್ಲಿದೆ. ಅರೆ ತೋಳಿನ ವಿ-ನೆಕ್ ಹೊಂದಿರುವ ಟಿ-ಶರ್ಟ್ ಬೆಲೆ 16,000 ರೂಗಳಾಗಿದ್ದು ಪೂರ್ಣ ತೋಳಿನ ಟಿ-ಶರ್ಟ್ 19,000 ರೂ. ಗಳಲ್ಲಿ ಲಭ್ಯವಿದೆ. ಮುಂದಿನ ದಿನಗಳಲ್ಲಿ ಪ್ರಪಂಚದಾದ್ಯಂತವಿರುವ ವಿವಿಧ ಆರ್ಮರ್ ಕಂಪನಿಗಳು ಸುಧಾರಿತ ಶೀಲ್ಡ್‌ಗಳನ್ನು ತಯಾರಿಸುತ್ತಿವೆ. ಈ ವಿಶೇಷ ಉಡುಪು ಜನಸಾಮಾನ್ಯರು ಹಾಗೂ ಕಾನೂನು ಸಂರಕ್ಷಿಸುವ ಅಧಿಕಾರಿಗಳನ್ನು ಪ್ರಖರ ಆಯುಧಗಳ ದಾಳಿಯಿಂದ ಸಂರಕ್ಷಿಸಲಿದೆ ಎಂಬುದಾಗಿ ಕಂಪನಿ ಉಲ್ಲೇಖಿಸಿದ್ದು, ಸಂರಕ್ಷಕನಂತೆ ಕಾರ್ಯನಿರ್ವಹಿಸಲಿದೆ ಎಂಬುದಾಗಿ ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ. ಒಟ್ಟಿನಲ್ಲಿ ಈ ಟಿಶರ್ಟ್‌ ಧರಿಸುವುದರಿಂದ ಅನೇಕ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಬಹುದಾಗಿದೆ.
Published by:vanithasanjevani vanithasanjevani
First published: