Husband for Rent: ಗಂಡ ಬಾಡಿಗೆಗೆ ಬೇಕಾ? ಹಾಗಿದ್ರೆ ಜಸ್ಟ್ 3365 ರೂಪಾಯಿ ಕೊಡಿ!

ಈ ಮಹಿಳೆ ತನ್ನ ಗಂಡನನ್ನು ಬಾಡಿಗೆಗೆ (Rent) ಕೊಡುತ್ತಾರಂತೆ. ಬಾಡಿಗೆ ಬೆಲೆ ಬರೀ 3,365 ರೂಪಾಯಿ ಮಾತ್ರ. ಅರೇ ಇದೇನಪ್ಪಾ ಗಂಡನ ಬಾಡಿಗೆಗೆ ಕೊಡುವುದು? ಯಾರಪ್ಪ ಆ ಮಹಿಳೆ? ಹೋಗ್ಲಿ ಈಕೆಯ ಗಂಡನನ್ನು ಬಾಡಿಗೆಗೆ ಪಡೆಯುವವರಾದರೂ ಯಾರು ಅಂತ ಯೋಚಿಸ್ತಾ ಇದ್ದೀರಾ? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಓದಿ…

ರೆಂಟ್ ಮೈ ಹ್ಯಾಂಡಿ ಹಸ್ಬಂಡ್ ವೆಬ್‌ಸೈಟ್ ಸ್ಥಾಪಕಿ

ರೆಂಟ್ ಮೈ ಹ್ಯಾಂಡಿ ಹಸ್ಬಂಡ್ ವೆಬ್‌ಸೈಟ್ ಸ್ಥಾಪಕಿ

  • Share this:
ಬ್ರಿಟನ್: ನೀವು ಹಲವು ಕನ್ನಡ ಸಿನಿಮಾಗಳಲ್ಲಿ (Kannada Cinema) ನೋಡಿರುತ್ತೀರಿ. ಅತೀ ಹಣದ (Money) ಆಸೆಗೆ ಬಿದ್ದ ಕಥಾ ನಾಯಕಿ (Heroine), ತನ್ನ ಗಂಡನನ್ನು (Husband) ಶ್ರೀಮಂತೆಗೆ ಮದುವೆ (Marriage) ಮಾಡಿಸುವುದು, ಅಥವಾ ಶ್ರೀಮಂತ ಹುಡುಗಿಗೆ (Rich Girl) ಗಂಡನಾಗಿ ನಟಿಸುವಂತೆ ಒತ್ತಾಯ ಮಾಡುವುದು ಈ ರೀತಿಯ ಕಥೆಗಳಿರುವ ಸಿನಿಮಾಗಳು ಪ್ರೇಕ್ಷಕರ ಮನ ಗೆದ್ದು, ಬಾಕ್ಸ್ ಆಫೀಸ್‌ನಲ್ಲಿ (Box Office) ಹಿಟ್ (Hit) ಕೂಡ ಆಗಿದೆ. ಇದೀಗ ಇದೇ ರೀತಿಯ ಕಾನ್ಸೆಪ್ಟ್‌ (Concept) ಅನ್ನು ಬ್ರಿಟನ್‌ನ ಮಹಿಳೆಯೊಬ್ಬರು (Britanie Women) ಕಾರ್ಯರೂಪಕ್ಕೆ ತಂದಿದ್ದಾರೆ. ಆಕೆ ತಮ್ಮ ಗಂಡನನ್ನು ಬಾಡಿಗೆಗೆ (Rent) ಕೊಡುತ್ತಾರಂತೆ. ಬಾಡಿಗೆ ಬೆಲೆ ಬರೀ 3,365 ರೂಪಾಯಿ ಮಾತ್ರ. ಅರೇ ಇದೇನಪ್ಪಾ ಗಂಡನ ಬಾಡಿಗೆಗೆ ಕೊಡುವುದು? ಯಾರಪ್ಪ ಆ ಮಹಿಳೆ? ಹೋಗ್ಲಿ ಈಕೆಯ ಗಂಡನನ್ನು ಬಾಡಿಗೆಗೆ ಪಡೆಯುವವರಾದರೂ ಯಾರು ಅಂತ ಯೋಚಿಸ್ತಾ ಇದ್ದೀರಾ? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಓದಿ…

ಗಂಡ ಬಾಡಿಗೆಗೆ ಸಿಗುತ್ತಾನೆ, ಬೆಲೆ 3,365 ರೂಪಾಯಿ

ಹೌದು, ಬ್ರಿಟನ್‌ನಲ್ಲಿ ಮಹಿಳೆಯೊಬ್ಬರು ಇಂಥದ್ದೊಂದು ಜಾಹೀರಾತು ನೀಡಿದ್ದಾರೆ. ಅವರ ಈ ವಿಶೇಷ, ವಿಚಿತ್ರ ಮತ್ತು ವಿಶಿಷ್ಟ ಜಾಹೀರಾತು ಈಗ ಫುಲ್ ವೈರಲ್ ಆಗಿದೆ. ಬ್ರಿಟನ್‌ನ ಲಾರಾ ಯಂಗ್ ಎಂಬ ಮಹಿಳೆ ಇಂಥದ್ದೊಂದು ಜಾಹೀರಾತು ನೀಡಿ, ಇದೀಗ ಎಲ್ಲರ ಗಮನ ಸೆಳೆದಿದ್ದಾರೆ. ಅಂದಹಾಗೆ ಇವರನ್ನು ಬಾಡಿಗೆಗೆ ಪಡೆದರೆ ಅವರು 3365 ರೂಪಾಯಿಗಳನ್ನು ಪಾವತಿಸಬೇಕು ಅಷ್ಟೇ…

'ರೆಂಟ್ ಮೈ ಹ್ಯಾಂಡಿ ಹಸ್ಬೆಂಡ್' ವೆಬ್‌ಸೈಟ್ ಮೂಲಕ ಜಾಹೀರಾತು

ಲಾರಾ ಯಂಗ್ ರೆಂಟ್ ಮೈ ಹ್ಯಾಂಡಿ ಹಸ್ಬೆಂಡ್ ಎಂಬ ವೆಬ್‌ಸೈಟ್ ಪ್ರಾರ್ಂಭಿಸಿ, ಅದರ ಮೂಲಕ ಇಂಥದ್ದೊಂದು ಜಾಹೀರಾತು ನೀಡಿದ್ದಾರೆ.

ಇದನ್ನೂ ಓದಿ: OMG: ಈ ನಾಯಿಗೆ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಕೆಲಸ, ಭರ್ಜರಿ ಸಂಬಳ! ಹ್ಯಾಪಿನೆಸ್ ಆಫೀಸರ್ ಅಂತೆ ಈ ಡಾಗ್

ಗಂಡನ ಪ್ರತಿಭೆಗೆ ವೇದಿಕೆ ಕಲ್ಪಿಸಿದ ಹೆಂಡತಿ

ಲಾರಾ ಅವರ ಪತಿ, ಜೇಮ್ಸ್ ಹಲವು ಉದ್ಯೋಗಗಳಲ್ಲಿ ಮಾಸ್ಟರ್ ಆಗಿದ್ದಾರೆ. ಕಸ್ಟಮ್ ಹಾಸಿಗೆಗಳನ್ನು ನಿರ್ಮಿಸುವ ಮೂಲಕ ಜೇಮ್ಸ್ ಅವರು, ಬಕಿಂಗ್ ಹ್ಯಾಮ್ ಅರಮನೆಯಂತೆ ತಮ್ಮ ಮನೆಯನ್ನು ಮಾರ್ಪಡಿಸಿದ್ದಾರೆ. ಅವರು ಮೊದಲಿನಿಂದಲೂ ಡೈನಿಂಗ್ ಟೇಬಲ್, ಚಿತ್ರಕಲೆ, ತೋಟಕ್ಕೆ ನೀರು ಹಾಕುವುದು, ಮನೆಗೆ ಪೇಂಟ್ ಮಾಡುವುದು, ಅಲಂಕಾರ, ಚಪ್ಪರ ಹಾಕುವುದು ಮತ್ತು ಕಾರ್ಪೆಟ್ ಹಾಕುವುದರಲ್ಲಿಯೂ ನಿಪುಣರು. ಹೀಗಾಗಿ ತನ್ನ ಗಂಡನ ಕೌಶಲ್ಯಗಳನ್ನು ತಾನು ಹೇಗೆ ಹೆಚ್ಚು ಬಳಸಿಕೊಂಡು, ಹಣ ಮಾಡಬಹುದು ಅಂತ ಯೋಚಿಸಿದರು. ಆಗ ಹುಟ್ಟಿಕೊಂಡಿದ್ದೇ ರೆಂಟ್ ಮೈ ಹ್ಯಾಂಡಿ ಹಸ್ಬೆಂಡ್ ಎಂಬ ವೆಬ್‌ಸೈಟ್.

ನಿಮ್ಮ ಕೆಲಸ ಮಾಡಿಕೊಡುತ್ತಾರೆ ಅವರ ಗಂಡ

ಅಂದಹಾಗೆ ಈ ವೆಬ್‌ಸೈಟ್‌ನಲ್ಲಿ ಯಾವ ಕೆಲಸಕ್ಕೆ ಬುಕ್ ಮಾಡಿದ್ದಾರೆ ಆ ಕೆಲಸವನ್ನು ಲಾರಿ ಅವರ ಪತಿ ಜೇಮ್ಸ್ ಮಾಡಿಕೊಡುತ್ತಾರಂತೆ. ಗ್ರಾಹಕರ ಮನೆಗೆ ಹೋಗಿ ಹಲವು ಕೌಶಲ್ಯ ತೋರಿಸುತ್ತಾರಂತೆ. ಇದಕ್ಕಾಗಿ ಲಾರಾ ಅವರು 3365 ರೂಪಾಯಿ ಶುಲ್ಕ ವಿಧಿಸುತ್ತಾರೆ.

ಶುಲ್ಕದಲ್ಲಿ ರಿಯಾಯಿತಿಯೂ ಇದೆ

ಲಾರಾ ಎಲ್ಲರಿಗೂ 3365 ರೂಪಾಯಿ ಶುಲ್ಕ ವಿಧಿಸುವುದಿಲ್ಲ. ಬದಲಾಗಿ ಕೆಲವು ಸಮಯದಲ್ಲಿ ಇದರಲ್ಲಿ ರಿಯಾಯಿತಿಯೂ ಕೊಡುತ್ತಾರಂತೆ. ನಾವು ಅಂಗವಿಕಲರಿಗೆ, ಆರೈಕೆದಾರರಿಗೆ, ಯುನಿವರ್ಸಲ್ ಕ್ರೆಡಿಟ್‌ನಲ್ಲಿರುವ ಜನರಿಗೆ ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ರಿಯಾಯಿತಿಗಳನ್ನು ನೀಡುತ್ತೇವೆ ಅಂತ ಲಾರಾ ಹೇಳುತ್ತಾರೆ.

ಇದನ್ನೂ ಓದಿ: Viral News: ಏಳೇಳು ಜನ್ಮಕ್ಕೂ ಇಂತ ಹೆಂಡ್ತಿಯರು ಬೇಡಪ್ಪಾ! ಮರಕ್ಕೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದ ನೊಂದ ಪತಿಯರು

ಕೆಲಸ ಇಲ್ಲದ ಪತಿಗೆ ಈಗ ಕೈ ತುಂಬಾ ಉದ್ಯೋಗ

ಲಾರಾ ಅವರ ಪತಿ  ಜೇಮ್ಸ್, ಗೋದಾಮಿನ ರಾತ್ರಿ ಪಾಳಿಯ ಕೆಲಸಗಾರನಾಗಿದ್ದ. ಆದರೆ ಎರಡು ವರ್ಷಗಳ ಹಿಂದೆ ಲಾರಾ ಅವರ ಮೂರು ಮಕ್ಕಳೊಂದಿಗೆ ಸಹಾಯ ಮಾಡಲು ತನ್ನ ಕೆಲಸವನ್ನು ತ್ಯಜಿಸಬೇಕಾಯಿತು. ಇದೀಗ ಈ ಹೊಸ ಕೆಲಸದಿಂದ ಜೇಮ್ಸ್‌ಗೆ ಕೈ ತುಂಬಾ ಕೆಲಸಗಳು ಸಿಗುತ್ತಿವೆಯಂತೆ.
Published by:Annappa Achari
First published: