Baby for sale: ಆನ್​ಲೈನ್​ನಲ್ಲಿ ಸೋಫಾ ಮಾರಲು ಹೋಗಿ ಮಗುವನ್ನೇ ಮಾರಾಟಿಕ್ಕಿದೆ ಎಂದು ಹಾಕಿಬಿಟ್ಟ ತಾಯಿ! ಆಮೇಲೇನಾಯ್ತು? ಮುಂದೆ ಓದಿ...

Viral Story: ಪ್ರಾರಂಭದಲ್ಲಿ ಲೂಸಿ ಜನರು ಸೋಫಾದ ಬಗ್ಗೆ ತಪ್ಪಾಗಿ ಮೆಸೇಜ್​ ಮಾಡುತ್ತಿದ್ದಾರಲ್ಲ ಅಂದುಕೊಂಡಳು. ನಂತರ ಫೋಟೋವನ್ನು ಗಮನಿಸಿದಾಗ ತನ್ನ ಮಗುವಿನ ಫೋಟೋವನ್ನು ಹಂಚಿಕೊಂಡಿರುವುದನ್ನು ನೋಡುತ್ತಾಳೆ.

ಮಗು ಆಸ್ಕರ್

ಮಗು ಆಸ್ಕರ್

  • Share this:
    ಹಳೆಯ ವಸ್ತುಗಳನ್ನು ಕುಳಿತಲ್ಲಿಂದಲೇ ಮಾರಾಟ ಮಾಡುವ ಅನೇಕ ಆ್ಯಪ್​ಗಳಿವೆ. ಅದರಂತೆ ಮಹಿಳೆಯೊಬ್ಬಳು ಫೇಸ್​ಬುಕ್ (Facebook)​ ಮೂಲಕ ಮನೆಯಲ್ಲಿದ್ದ ಹಳೆಯ ಸೋಫಾವನ್ನು (Sofa) ಮಾರಾಟ ಮಾಡಲು ಮುಂದಾಗುತ್ತಾಳೆ. ಸೋಫಾ ಮಾರಾಟ ಮಾಡುವ ಮುನ್ನ ಸೋಫಾದ ಫೋಟೋವನ್ನು ಜಾಹೀರಾತು ನೀಡಬೇಕಾಗುತ್ತದೆ. ಆದರೆ ಜಾಹೀರಾತಿನಲ್ಲಿ ಸೋಫಾದ ಫೋಟೋ ಹಂಚಿಕೊಳ್ಳುವ ಬದಲು ತನ್ನ ಮಗುವಿನ ಫೋಟೋ ಹಂಚಿಕೊಂಡಿದ್ದಾಳೆ. ಮುಂದೇನಾಯ್ತು ಗೊತ್ತಾ? ಈ ಸ್ಟೋರಿ ಓದಿ.

    OLX ​ ಮುಂತಾದ ಆ್ಯಪ್​ಗಳನ್ನು ಸ್ಮಾರ್ಟ್​ಫೋನ್​ನಲ್ಲಿ ಇನ್​ಸ್ಟಾಲ್​​ ಮಾಡುವ ಮೂಲಕ ಮನೆಯಲ್ಲಿದ್ದ ಹಳೆಯ ವಸ್ತುಗಳನ್ನು ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೆ ಮಾರಾಟ ಮಾಡಬಹುದಾದ ಅವಕಾಶವಿದೆ. ಅದರಲ್ಲೂ ಈವಾಗಂತೂ ಸಾಕಷ್ಟು ಆನ್​ಲೈನ್​ ವೇದಿಕೆಗಳಿದ್ದು, ಅದರ ಮೂಲಕ ಯಾವುದೇ ವಸ್ತುಗಳನ್ನು ಮಾರಾಟ ಮಾಡಬಹುದು ಮತ್ತು ಕೊಂಡುಕೊಳ್ಳಬಹುದಾಗಿದೆ.

    ಅದರಂತೆ ಇಂಗ್ಲೆಂಡ್​ ಮೂಲದ ಲೂಸಿ ಬ್ಯಾಟಲ್​ ಎಂಬ ಮಹಿಳೆ ಫೇಸ್​ಬುಕ್​ ಮೂಲಕ ಮನೆಯಲ್ಲಿದ್ದ ಸೋಫಾ ಮಾರಲು ಮುಂದಾಗುತ್ತಾಳೆ. ಆದರೆ ಸೇಲ್​ ಮಾಡುವ ಮುನ್ನ ಸೋಫಾದ ಫೋಟೋ ಹಂಚಲು ಹೋಗಿ ತನ್ನ ಏಳು ತಿಂಗಳ ಮಗುವಿನ ಫೋಟೋ ಹಂಚುವ ಮೂಲಕ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಳು.

    ಅಚ್ಚರಿಯ ವಿಚಾರವೆಂದರೆ, ಸೋಫಾದ ಬದಲಿಗೆ ಮಗುವಿನ ಫೋಟೋ ಹಂವಚಿಕೊಂಡ ಆಕೆ ‘‘ನಾನು ಇದನ್ನು ಮಾರಲು ಬಯಸುತ್ತೇನೆ’’ ಎಂದು ಬರೆದಿದ್ದಳು. ಮೂರು ಫೋಟೋಗಳನ್ನು ಆಕೆ ಅಪ್ಲೋಡ್​ ಮಾಡಿದ್ದು, ಅದರಲ್ಲಿ 7 ತಿಂಗಳ ಮಗ ಆಸ್ಕರ್​ ಫೋಟೋವನ್ನು ಹಂಚಿಕೊಂಡಿದ್ದಾಳೆ.

    ಈ ಬಗ್ಗೆ ಮಾತನಾಡಿದ ಲೂಸಿ, ಮಗನ ಫೋಟೋ ಫೇಸ್​ಬುಕ್​ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದೇ ತಡ ಅನೇಕರು ನನಗೆ ಮೆಸೇಜ್​ ಮಾಡಿದ್ದಾರೆ ಎಂದು ಹೇಳಿದ್ದಾಳೆ.

    ಇದನ್ನು ಓದಿ:WhatsApp: ಅಕ್ಟೋಬರ್​ನಲ್ಲಿ 20 ಲಕ್ಷ ವಾಟ್ಸ್​ಆ್ಯಪ್​ ಖಾತೆಗಳು ಬ್ಯಾನ್​! ಯಾಕಾಗಿ?

    ಪ್ರಾರಂಭದಲ್ಲಿ ಲೂಸಿ ಜನರು ಸೋಫಾದ ಬಗ್ಗೆ ತಪ್ಪಾಗಿ ಮೆಸೇಜ್​ ಮಾಡುತ್ತಿದ್ದಾರಲ್ಲ ಅಂದುಕೊಂಡಳು. ನಂತರ ಫೋಟೋವನ್ನು ಗಮನಿಸಿದಾಗ ತನ್ನ ಮಗುವಿನ ಫೋಟೋವನ್ನು ಹಂಚಿಕೊಂಡಿರುವುದನ್ನು ನೋಡುತ್ತಾಳೆ. ತನ್ನ ತಪ್ಪಿನ ಅರಿವಾಗಿ ಲೂಸಿ ಮತ್ತೊಂದು ಪೋಸ್ಟ್​ನಲ್ಲಿ ‘‘ಕ್ಷಮಿಸಿ, ಮಗುವನ್ನು ಮಾರಾಟ ಮಾಡುದಿಲ್ಲ’’ ಎಂದು ಹೇಳಿಕೊಂಡಿದ್ದಾಳೆ.

    ಇಂತಹ ಘಟನೆಗಳು ಆಗಾಗ ಬೆಳಕಿಗೆ ಬರುತ್ತಿರುತ್ತದೆ. ಉದ್ದೇಶ ಪೂರ್ವಕವಾಗಿ ಅಲ್ಲದಿದ್ದರು, ಕೆಲವೊಮ್ಮೆ ಗೊತ್ತೆಯಿಲ್ಲದೆ ಇಂತಹ ಘಟನೆಗಳು ನಡೆಯುತ್ತದೆ. ಅದರಂತೆ ಲೂಸಿ ಕೂಡ ಹೊಸ ಸೋಫಾ ಕೊಂಡುಕೊಳ್ಳಬೇಕು ಎಂಬ ಕನಸಿಂದ ಹಳೆಯ ಸೋಫಾ ಮಾರಲು ಮುಂದಾಗಿದ್ದಳು. ಮಧ್ಯವರ್ತಿಗಳಿಂದ ಹಣ ಕಳೆದುಕೊಳ್ಳುವ ಬದಲು ತಾನೇ ಆನ್​ಲೈನ್​ ಮೂಲಕ ಸೋಫಾ ಮಾರಾಟ ಬಗ್ಗೆ ಹಂಚಿಕೊಂಡಳು. ಸೋಪಾ ಮಾರೋದರ ಜೊತೆಗೆ ಸೋಫಾದ ಫೋಟೋವನ್ನು ಹಂಚಿಕೊಳ್ಳಬೇಕಾಗುತ್ತದೆ. ಅಂದರೆ ಸೋಫಾ ಹೇಗಿದೆ? ಯಾವ ಬಣ್ಣದಿಂದ ಕೂಡಿದೆ ಇದೆಲ್ಲರ ಮಾಹಿತಿಗಾಗಿ ಫೋಟೋ ಹಂಚಿಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಅದರಂತೆ ಲೂಸಿ ಕೂಡ ಮನೆಯ ಹಳೆಯ ಸೋಫಾ ಮಾರಲು ಮುಂದಾಗುತ್ತಾಳೆ. ಆದರೆ ಸ್ಮಾರ್ಟ್​ಫೋನ್​ನಲ್ಲಿ ಸೋಫಾದ ಫೋಟೋದ ಜೊತೆಗೆ ಅವಿತುಕೊಂಡಿದ್ದ ಮಗುವಿನ ಫೋಟೋವನ್ನು ಆಕೆ ಹಂಚಿಕೊಂಡಿದ್ದಳು.



    ಇದನ್ನು ಓದಿ: Cannabis Pizza: ಥೈಲ್ಯಾಂಡಿನ ಗಾಂಜಾ ಎಲೆಯ ಪಿಜ್ಜಾ ತಿಂದರೂ ನಶೆ ಏರಲ್ಲ..!

    ಕಣ್ಣಾರೆ ಕಂಡರು ಪರಾಂಬರಿಸಿ ನೋಡು ಎಂಬ ಗಾದೆಯಂತೆ ಯಾವುದೇ ಕೆಲಸ ಮಾಡಿದ ನಂತರ ಮತ್ತೊಂದು ಬಾರಿ ಸರಿಯಾಗಿ ವೀಕ್ಷಿಸುವುದು ಮುಖ್ಯ. ಆದರೆ ಲೂಸಿ ಮಾತ್ರ ಫೋಟೋ ಹಂಚಿಕೊಂಡ ಬಳಿಕ ಅದನ್ನು ಸರಿಯಾಗಿ ಗಮನಿಸಿಲ್ಲ. ಕೊನೆಗೆ ಸಂದೇಶಗಳು ಬರಲಾರಂಭಿಸಿದ ನಂತರ ತನ್ನ ತಪ್ಪೇನು ಎಂಬುದು ಅರಿವಿಗೆ ಬಂದಿದೆ.

    ಕೊನೆಗೆ ಲೂಸಿ ಕ್ಷಮಾಪಣಿ ಕೇಳಿದ್ದಾಳೆ. ಇಲ್ಲವಾದರೆ ಹೆಚ್ಚಿನ ಸಂದೇಶ ಜೊತೆಗೆ ಮಗು ಮಾರಾಟ ಮಾಡುವ ಪ್ರಕರಣದಲ್ಲಿ ಆಕೆ ಸಿಲುಕಿಕೊಳ್ಳಬೇಕಾದ ಪರಿದ್ಥಿತಿ ನಿರ್ಮಾಣವಾಗುತ್ತಿತ್ತು.
    Published by:Harshith AS
    First published: