Bride and Groom: ಅನಕ್ಷರಸ್ಥ ವರ ಬೇಡ ಅಂತ ಮಂಟಪದಲ್ಲೇ ಹಾರ ಕಿತ್ತೆಸದ ವಧು! ವಿಡಿಯೋ ವೈರಲ್

ವಧು ಮದುವೆಗೆ ನಿರಾಕರಿಸುತ್ತಿರುವ ಕಾರಣದಲ್ಲಿ ಒಂದು ಒಳ್ಳೆಯ ಸಂದೇಶವಂತೂ ಇದೆ. ವಧು ವರನನ್ನು ಒಲ್ಲೆ ಎನ್ನಲು ಕಾರಣವೇನು ಅನ್ನುತ್ತೀರಾ? ಆತನ ಅನಕ್ಷರಸ್ಥತೆ ! ಹೌದು, ಓದುಬರಹ ಬಾರದ ಹುಡುಗ ತನಗೆ ಬೇಡ ಅನ್ನುತ್ತಿದ್ದಾಳೆ ವಧು.

ವಧು ಹಾಗೂ ವರ

ವಧು ಹಾಗೂ ವರ

  • Share this:
ವರದಕ್ಷಿಣೆ (Dowry) ವಿಚಾರಕ್ಕೋ ಅಥವಾ ವಧುವಿನಲ್ಲಿ (Bride) ಏನಾದರೂ ಕೊರತೆಯಿದೆ ಎಂದೋ ಮದುವೆ ಮಂಟಪದ ವರಗೆ (Groom) ಬಂದ ಮದುವೆಗಳು ನಿಂತು ಹೋಗುವ ಕಾಲವೊಂದಿತ್ತು. ಆಗೆಲ್ಲಾ ವರ ಮಹಾಶಯ ಮುದುಕನಿರಲಿ, ಪೆದ್ದನಿರಲಿ ಮದುವೆಗೆ (Marriage) ಯೋಗ್ಯ ಅನಿಸಿಕೊಳ್ಳುತ್ತಿದ್ದ. ಆದರೆ, ಈಗ ಕಾಲ ಬದಲಾಗಿದೆ. ಹೆಣ್ಣು ಕೂಡ ತನ್ನ ಕಲ್ಪನೆಯ ವರನೇ ಬೇಕೆಂದು ಹಠ ಹಿಡಿಯತೊಡಗಿದ್ದಾಳೆ. ವರ ಕುಡುಕನೆಂದು (Drunkard), ವರನ ಸ್ನೇಹಿತರ (Friends) ಬಳಗ ಸರಿ ಇಲ್ಲ, ವರನ ಚಾರಿತ್ರ್ಯ ಸರಿ ಇಲ್ಲ ಎಂದು ಮದುವೆ ಮಂಟಪದಲ್ಲೇ ವಧು ಮದುವೆಯಾಗಲು ಒಲ್ಲೆ ಎನ್ನುವಂತಹ ಘಟನೆಗಳಂತೂ ಈಗ ಸಾಮಾನ್ಯ ಎಂಬಂತಾಗಿದೆ. ಅಂತದ್ದೇ ಘಟನೆಯ ವಿಡಿಯೊವೊಂದು (Video) ಈಗ ಸಾಮಾಜಿಕ ಮಾಧ್ಯಮದಲ್ಲಿ (Social media) ವೈರಲ್ ಆಗುತ್ತಿದೆ. ವಧುವೊಬ್ಬಳು ವರನಿಗೆ ಹಾರ ಹಾಕಲು ನಿರಾಕರಿಸುತ್ತಿರುವ ವಿಡಿಯೋ ಅದು. ಅಷ್ಟಕ್ಕೂ ಆ ವಿಡಿಯೋ ಅಸಲಿಯೋ ಅಥವಾ ನಕಲಿಯೋ ತಿಳಿದು ಬಂದಿಲ್ಲ.

ಅಸಲಿಯಾಗಲಿ, ನಕಲಿಯಾಗಲಿ ವಧು ಮದುವೆಗೆ ನಿರಾಕರಿಸುತ್ತಿರುವ ಕಾರಣದಲ್ಲಿ ಒಂದು ಒಳ್ಳೆಯ ಸಂದೇಶವಂತೂ ಇದೆ. ವಧು ವರನನ್ನು ಒಲ್ಲೆ ಎನ್ನಲು ಕಾರಣವೇನು ಅನ್ನುತ್ತೀರಾ? ಆತನ ಅನಕ್ಷರಸ್ಥತೆ ! ಹೌದು, ಓದುಬರಹ ಬಾರದ ಹುಡುಗ ತನಗೆ ಬೇಡ ಅನ್ನುತ್ತಿದ್ದಾಳೆ ಆಕೆ.

ವೈರಲ್ ಆಗುತ್ತಿರುವ ಆ ವಿಡಿಯೋದಲ್ಲಿನ ದೃಶ್ಯ ಹೀಗಿದೆ:
ವರ ಮತ್ತು ವಧು ಹಾರ ಬದಲಾವಣೆಗೆ ನಿಂತಿರುತ್ತಾರೆ. ವಧು, ಹಾರವನ್ನು ವರನ ಕೊರಳಿಗೆ ಹಾಕುವ ಬದಲು, ತನಗೆ ಈ ಮದುವೆ ಬೇಡ ಎನ್ನುತ್ತಾ, ದಿಢೀರನೇ ಹಾರವನ್ನು ಎತ್ತಿ ಎಸೆಯುತ್ತಾಳೆ. ನೆರೆದಿರುವವರಲ್ಲಿ ಒಬ್ಬರು, ಮದುವೆ ಬೇಡ ಎನ್ನಲು ಏನು ಕಾರಣ ಕೇಳಿದಾಗ, ತಾನು ಒಬ್ಬ ಅನಕ್ಷರಸ್ಥನನ್ನು ಮದುವೆಯಾಗಲು ಇಷ್ಟಪಡುವುದಿಲ್ಲ ಎಂದು ಉತ್ತರಿಸುತ್ತಾಳೆ. “ನಾನು ವಿದ್ಯಾವಂತಳು ಮತ್ತು ಬಿ.ಎಡ್ ಮಾಡಿದ್ದೇನೆ ಎಂದು ಈಗಾಗಲೇ ನಿಮಗೆ ತಿಳಿಸಿದ್ದೇನೆ.

ಇವನು ಹೆಬ್ಬೆಟ್ಟು ಒತ್ತುವ ಅನಕ್ಷರಸ್ಥ. ಇವನ ಜೊತೆ ಖುಷಿಯಿಂದ ಬದುಕಲು ಸಾಧ್ಯವೇ ? ನೀವೇ ಹೇಳಿ? ನಾನು ಈ ಮದುವೆ ಆಗುವುದಿಲ್ಲ” ಎನ್ನುತ್ತಾಳೆ ಆಕೆ. ಆಗ ನೆರೆದವರಲ್ಲಿ ಒಬ್ಬರು, “ನೀನು ಮೊದಲೇ ಹೇಳಬೇಕಿತ್ತಲ್ಲ?” ಎಂದು ಪ್ರಶ್ನಿಸಿದಾಗ “ ನಾನು ಮೊದಲೇ ಹೇಳಿದ್ದೇ, ಆದರೆ ನನ್ನ ತಂದೆಗೆ ಹಣ, ಸಂಪತ್ತು ಮುಖ್ಯವಾಗಿತ್ತು” ಎಂದು ವರ ಈಗಾಗಲೇ ತನ್ನ ಕೊರಳಿಗೆ ಹಾಕಿದ್ದ ಹಾರವನ್ನು ಕೂಡ ಆಕೆ ತೆಗೆದು ಬಿಸಾಡುತ್ತಾಳೆ.

ಇದನ್ನೂ ಓದಿ:  Bride Exchange: ಕರೆಂಟು ಹೋದ ಟೈಮಲಿ ವಧು-ವರರೇ ಅದಲು ಬದಲು; ಅವನ ಹುಡುಗಿಗೆ ಇವನು, ಇವನ ಹುಡುಗಿಗೆ ಅವನು ತಾಳಿ ಕಟ್ಟಿದ!

ನೆರೆದವರು, “ ಈಗ ಯಾಕೆ ಹೀಗೆ ಮಾಡುತ್ತೀದ್ದೀಯಾ?” ಎಂದಾಗ, “ನನಗೆ ಓದುಬರಹವುಳ್ಳ ಹುಡುಗ ಬೇಕು, ನನ್ನ ಜೊತೆ ನಡೆಯುವವನು ಬೇಕು, ನನ್ನೊಡನೆ ಸರಿಯಾದ ರೀತಿಯಲ್ಲಿ ಮಾತನಾಡುವವನು ಬೇಕು, ಅನಕ್ಷರಸ್ಥ ಬೇಡ” ಎಂದು ಉತ್ತರಿಸುತ್ತಾಳೆ ಹುಡುಗಿ.

ಹುಡುಗ ಅನಕ್ಷರಸ್ಥ ಎಂದು ಮಂಟಪದಲ್ಲೇ ಮದುವೆಯನ್ನು ನಿರಾಕರಿಸಿದ ಹುಡುಗಿ
ಹುಡುಗ ಅನಕ್ಷರಸ್ಥ ಎಂಬ ಕಾರಣಕ್ಕಾಗಿ ಮಂಟಪದಲ್ಲೇ ಮದುವೆಯನ್ನು ನಿರಾಕರಿಸಿದ ಹುಡುಗಿಯ ಧೈರ್ಯ ಕಂಡು, ನೆಟ್ಟಿಗರು ವಾಹ್ ವಾಹ್ ಎಂದು ಕೊಂಡಾಡಿದ್ದಾರೆ.




“ನಾನು ಈ ಹುಡುಗಿಯನ್ನು ಪ್ರಶಂಸಿಸುತ್ತೇನೆ ಮತ್ತು ಆಕೆಗೆ ಸೆಲ್ಯೂಟ್ ಮಾಡುತ್ತೇನೆ, ಆಕೆಗೆ ನನ್ನ ಶುಭ ಹಾರೈಕೆಗಳು” ಎಂದು ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದರೆ, ಇನ್ನೊಬ್ಬ ನೆಟ್ಟಿಗ “ಬಳಿಕ. ವರ: ನನ್ನ ಪ್ರೀತಿಯನ್ನು ನಿರಾಕರಿಸಿ, ನನ್ನ ಸೇಡನ್ನು ನೋಡುತ್ತೀಯಾ” ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು“ಎಂತಹ ಅದ್ಭುತ ಹೆಜ್ಜೆ” ಎಂದು ಹೊಗಳಿದ್ದರೆ, ಇನ್ನೊಬ್ಬರು “ನನಗೆ ಹುಡುಗನ ಬಗ್ಗೆ ಅಯ್ಯೋ ಎನಿಸುತ್ತಿದೆ” ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ “ಅವಳ ಭಾವನೆಗಳನ್ನು ಗೌರವಿಸುತ್ತೆನೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:  Dog Swimming: ಈ ಈಜುಕೊಳದಲ್ಲಿ ಮನುಷ್ಯರು ಮಾತ್ರ ಅಲ್ಲ ನಾಯಿಗಳು ಕೂಡ ಸ್ವಿಮ್ ಮಾಡುತ್ತವೆ! ವಿಡಿಯೋ ವೈರಲ್

ವಿಡಿಯೋ ಅಸಲಿಯೋ ನಕಲಿಯೋ?
ಕೆಲವು ಬಳಕೆದಾರರು ಈ ವಿಡಿಯೋ ಅಸಲಿಯಲ್ಲ ನಕಲಿ ಇರಬೇಕು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. “ನಾನು ಅವರ ಪೇಜನ್ನು ಪರೀಕ್ಷಿಸಿದ್ದೇನೆ. ಅವರು ಈ ರೀತಿಯ ನಕಲಿ ವಿಡಿಯೋಗಳನ್ನೇ ಮಾಡುತ್ತಾರೆ” ಎಂದು ಇನ್‍ಸ್ಟಾಗ್ರಾಂ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
Published by:Ashwini Prabhu
First published: