ಇತ್ತೀಚೆಗೆ ಮದುವೆಯ (Wedding) ದಿನ ಹತ್ತಿರ ಬಂದರೆ ಸಾಕು, ನವ ವಧು-ವರರು (Bride and Groom) ಒಂದು ಸುಂದರವಾದ ಸ್ಥಳವನ್ನು (Beautiful Place) ಹುಡುಕಿಕೊಂಡು ಅಲ್ಲಿ ಮದುವೆಗೂ ಮುಂಚೆ ‘ಪ್ರೀ ವೆಡ್ಡಿಂಗ್’ ಫೋಟೋಶೂಟ್ Pre-Wedding Photoshoot) ಅಂತ ಮಾಡಿಸುತ್ತಾರೆ. ನಂತರ ಮದುವೆಯ ಸಮಾರಂಭದ (Wedding Ceremony) ದಿನ ಫೋಟೋ ತೆಗೆಸಿಕೊಳ್ಳುವುದು ಇದ್ದೇ ಇರುತ್ತದೆ ಮತ್ತು ಮದುವೆಯ ನಂತರ ಸಹ ವಧು-ವರರು ಬೇರೆ ಬೇರೆ ಪೋಸ್ ನಲ್ಲಿ (Pose) ಇಬ್ಬರು ಕೈ ಕೈ ಹಿಡಿದುಕೊಂಡು ಜೊತೆಯಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುವುದನ್ನು ನಾವು ಮದುವೆ ಸಮಾರಂಭದ ಸ್ಥಳಗಳಲ್ಲಿ ನೋಡಿರುತ್ತೇವೆ.
ಫೋಟೋಶೂಟ್ ನಲ್ಲಿ ಇವರಿದ್ದಾರೆ ಒಳ್ಳೆಯದು
ಹೀಗೆ ತಾವು ಮಾಡಿಸಿಕೊಳ್ಳುವ ಫೋಟೋಶೂಟ್ ನಲ್ಲಿ ಬಹುತೇಕರು ತಮ್ಮ ಹಾಗೂ ತಮ್ಮ ಕೈ ಹಿಡಿಯುವ ವರನ ಉಪಸ್ಥಿತಿಯನ್ನು ಬಯಸುವುದುಂಟು. ಆದರೆ ಇಲ್ಲೊಬ್ಬ ಮದುವೆ ಹೆಣ್ಣು ತನ್ನ ಫೋಟೋಶೂಟ್ ನಲ್ಲಿ ಯಾರಿದ್ದರೆ ಒಳ್ಳೆಯದು ಎಂದು ಬಯಸಿದ್ದಾಳೆ ಒಮ್ಮೆ ನೋಡಿ.
ಮದುವೆಯ ದಿನ ಎಂದರೆ ಯಾರಿಗೆ ತಾನೇ ವಿಶೇಷವಾಗಿರುವುದಿಲ್ಲ ಹೇಳಿ? ಅಂದು ತೆಗೆಸಿಕೊಳ್ಳುವ ಫೋಟೋಗಳು ಮತ್ತು ವೀಡಿಯೋಗಳು ಖಂಡಿತವಾಗಿಯೂ ಜೀವನದುದ್ದಕ್ಕೂ ಈ ಸ್ಮರಣೀಯ ಕ್ಷಣಗಳನ್ನು ಆನಂದಿಸುವಂತೆ ಮಾಡುತ್ತವೆ. ಈ ಫೋಟೋಗಳು ಮತ್ತು ವೀಡಿಯೋಗಳನ್ನು ಯಾವಾಗಲಾದರೂ ನೋಡಿದರೂ ಸಹ ನಮ್ಮ ಜೊತೆಗೆ ಯಾರು ಫೋಟೋ ತೆಗೆಸಿಕೊಂಡಿದ್ದು ಎಂದು ಸದಾ ನೆನಪಿನಲ್ಲಿ ಉಳಿಯುವಂತದ್ದು ಆಗಿರುತ್ತದೆ.
ಅಕ್ಕನ ಮುದ್ದಾದ ಪುಟ್ಟ ಮಗು
ಆದ್ದರಿಂದ ಅನೇಕ ವಧು-ವರರು ತಮ್ಮ ಮದುವೆಯ ದಿನದ ಫೋಟೋಶೂಟ್ ಗಳಲ್ಲಿ ತಮಗೆ ತುಂಬಾನೇ ಪ್ರೀತಿ ಪಾತ್ರರಾಗಿರುವ ಜನರು, ಆಪ್ತರು ತಮ್ಮ ಸುತ್ತಲೂ ಇರಬೇಕೆಂದು ಬಯಸುತ್ತಾರೆ. ಇಲ್ಲೊಬ್ಬ ವಧು ತನ್ನ ಮದುವೆಯ ಹಿಂದಿನ ದಿನದ ಸಂಗೀತ್ ಸಮಾರಂಭದ ಸಮಯದಲ್ಲಿ ಮತ್ತು ತನ್ನ ಮದುವೆಯ ಫೋಟೋಶೂಟ್ ನಲ್ಲಿ ತನ್ನ ಅಕ್ಕನ ಮುದ್ದಾದ ಪುಟ್ಟ ಮಗು ಇರಲೇಬೇಕೆಂದು ಬಯಸಿದ್ದಾಳೆ.
ವಿಶೇಷ ಅಗತ್ಯಗಳಿರುವ ಮಕ್ಕಳ ಜಾಗೃತಿ ಮೂಡಿಸುವ ವಿಡಿಯೋ
ಮೋನಿಕಾ ಥಾಪಾ ಎಂಬ ಮಹಿಳೆಯ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇದು ವಿಶೇಷ ಅಗತ್ಯಗಳಿರುವ ಮಕ್ಕಳ ಬಗ್ಗೆ ಮತ್ತು ಅವರನ್ನು ಹೇಗೆ ಬೆಳೆಸುವುದು ಎಂಬುದರ ಬಗ್ಗೆ ಜಾಗೃತಿ ಮೂಡಿಸುತ್ತದೆ. ಅವಳು ಮತ್ತು ಅವಳ ಕುಟುಂಬವು ಅಮೆರಿಕಾದ ಟೆಕ್ಸಾಸ್ ನ ಡಲ್ಲಾಸ್ ನಲ್ಲಿ ನೆಲೆಸಿದೆ ಮತ್ತು ಅವಳ ಮಗನಿಗೆ ಆಟಿಸಂ ಇದೆ.
ಇದನ್ನೂ ಓದಿ: Viral Video: ವ್ಯಕ್ತಿಯನ್ನು ಹಿಂಬಾಲಿಸಿಕೊಂಡು ಬಂದ ಅಳಿಲುಗಳು, ನಮಗೆ ತುಂಬಾ ಹೊಟ್ಟೆ ಕಿಚ್ಚಾಗುತ್ತಿದೆ ಎಂದ ನೆಟ್ಟಿಗರು!
"ಅಂಗವೈಕಲ್ಯ ಸ್ಟೀರಿಯೊಟೈಪ್ ಗಳ ವಿರುದ್ಧ ಹೋರಾಡಲು" ಅವರು ಇನ್‌ಸ್ಟಾಗ್ರಾಮ್ ನಲ್ಲಿ ಒಂದು ಪುಟವನ್ನು ರಚಿಸಿದ್ದು, ಆ ಪುಟವು 22,000ಕ್ಕೂ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದೆ. ಇದು ಅವಳು ತನ್ನ ಮಗನ ಆಟಿಸಂ ನ ಬಗ್ಗೆ ವಿನೋದ ಮತ್ತು ಅದನ್ನು ಸ್ವೀಕರಿಸಿರುವ ರೀತಿಯಲ್ಲಿ ಹಂಚಿಕೊಂಡಿರುವ ವೀಡಿಯೋಗಳಲ್ಲಿ ಈ ವೀಡಿಯೋ ಸಹ ಒಂದಾಗಿದೆ.
ವೀಡಿಯೋದಲ್ಲಿ, ಮೋನಿಕಾ ಅವರ ಸಹೋದರಿಯನ್ನು ಅವರ ಸಂಗೀತ್ ಸಮಾರಂಭದ ಫೋಟೋಶೂಟ್ ಸಮಯ ಕಾಣಬಹುದು. ಫೋಟೋಶೂಟ್ ಸಮಯದಲ್ಲಿ ಅವಳು ತನ್ನ ಅಕ್ಕನ ಪುಟ್ಟ ಮಗನನ್ನು ತನ್ನೊಂದಿಗೆ ಇರುವಂತೆ ಬಯಸಿದಳು ಮತ್ತು ಅದು ಹೇಗೆ ನಡೆಯಿತು ಎಂದು ವೀಡಿಯೋ ವಿವರಗಳನ್ನು ನೀಡುತ್ತದೆ. ಫೋಟೋಶೂಟ್ ಸಮಯದಲ್ಲಿ ಮುದ್ದಾದ ಮಗುವು ಸುತ್ತಲೂ ಉಲ್ಲಾಸದಿಂದ ಕುಣಿಯುವುದನ್ನು ಮತ್ತು ಮೋಜು ಮಾಡುವುದನ್ನು ನಾವು ಕಾಣಬಹುದು.
View this post on Instagram
ಈ ವೀಡಿಯೋವನ್ನು ಮೇ 6 ರಂದು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ ಮತ್ತು ಇಲ್ಲಿಯವರೆಗೂ ಈ ವೀಡಿಯೋಗೆ ಸುಮಾರು 22,000 ಲೈಕ್ ಗಳು ಬಂದಿವೆ. ಈ ವೀಡಿಯೋವು ಹಲವಾರು ಮೆಚ್ಚುಗೆಯ ಕಾಮೆಂಟ್ ಗಳನ್ನು ಸಹ ಸ್ವೀಕರಿಸಿದೆ ಎಂದು ಹೇಳಬಹುದು. "ಇದು ತುಂಬಾನೇ ಸುಂದರವಾಗಿದೆ, ನಿಮ್ಮ ಸ್ವೀಕಾರವು ನನ್ನನ್ನು ತುಂಬಾ ಭಾವುಕನನ್ನಾಗಿ ಮಾಡಿತು" ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಬರೆದಿದ್ದಾರೆ.
ಇದನ್ನೂ ಓದಿ: ಅಂದು ಭಿಕ್ಷುಕಿ, ಇಂದು SSLC ಫಲಿತಾಂಶ ಸಾಧಕಿ! ಹೆತ್ತವರಿಲ್ಲದ ನೋವಿನಲ್ಲಿಯೂ ಸೋನು ಸಾಧನೆ!
"ಅವನು ತುಂಬಾ ಮುದ್ದಾಗಿದ್ದಾನೆ" ಎಂದು ಮತ್ತೊಂದು ಕಾಮೆಂಟ್ ಹೇಳುತ್ತದೆ. ಮೋನಿಕಾ ಅವರ ಸಹೋದರಿ, ವಧು ಕೂಡ ಕಾಮೆಂಟ್ ವಿಭಾಗಕ್ಕೆ ಹೋಗಿ "ನಾನು ಈ ಫೋಟೋಶೂಟ್ ಬಗ್ಗೆ ವಿಷಾದಿಸುವುದಿಲ್ಲ" ಎಂದು ಬರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ