Viral Video: ಮದುವೆ ಮಂಟಪದಲ್ಲಿ ವಧುವಿನ ಆಟ ನೋಡಿ ದಂಗಾದ ಅತಿಥಿಗಳು! ಇಷ್ಟಕ್ಕೂ ಆಕೆ ಮಾಡಿದ್ದಾದರೂ ಏನು?

ಮದುವೆ ಮಂತ್ರಗಳಿಂದ ಬೋರ್​ ಆದ ವಧು ಅಲ್ಲೇ ಇದ್ದ ಹೂಗಳೊಂದಿಗೆ ಆಟವಾಡಿದ್ದಾಳೆ. ಚಿಕ್ಕ ಮಗುವಿನಂತೆ ಹೂಗಳೊಂದಿಗೆ ಆಡುವುದನ್ನು ನೋಡಿ ಅತಿಥಿಗಳಿಗೆ ಶಾಕ್​ ಆಗಿದೆ.

ವೈರಲ್​ ಆದ ವಧು

ವೈರಲ್​ ಆದ ವಧು

  • Share this:

    ಮೊದಲೆಲ್ಲಾ ವಧು ವರರು ಮದುವೆ ಮಂಟಪದಲ್ಲಿ ಪರಸ್ಪರ ಮುಖವನ್ನು ನೋಡಬೇಕು ಅಂದುಕೊಂಡರೆ ಅಷ್ಟೊಂದು ಸುಲಭವಾದ ಮಾತಲ್ಲ, ಆದರೆ ಇತ್ತೀಚೆಗೆ ಮದುವೆಯಲ್ಲಿ ವಧು ವರರು ಅತಿಥಿಗಳ ಮುಂದೆಯೇ ವಿಚಿತ್ರವಾಗಿ ಆಡುತ್ತಿದ್ದುದ್ದನ್ನು ನಾವೆಲ್ಲಾ ಇತ್ತೀಚೆಗೆ ಬಿಡುಗಡೆಯಾದಂತಹ ಅನೇಕ ವೈರಲ್ ವಿಡಿಯೋಗಳ ತುಣುಕುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿರುತ್ತೇವೆ. ಅದರಲ್ಲಿ ಕೆಲವೊಂದು ಘಟನೆಗಳು ಹಾಸ್ಯಾಸ್ಪದವಾಗಿದ್ದರೆ ಜನರು ಅದನ್ನು ನೋಡಿ ನಕ್ಕು ಮರೆತು ಬಿಡುತ್ತಾರೆ. ಇನ್ನೂ ಕೆಲವು ಘಟನೆಗಳು ತುಂಬಾ ಗಂಭೀರತೆಯನ್ನು ಪಡೆದುಕೊಂಡು ಮದುವೆಯೆ ಮುರಿದು ಬೀಳುವಂತೆ ಮಾಡಿದೆ. ಸಮಯ ಬದಲಾದಂತೆ ಮದುವೆಯ ಸಡಗರ, ಆಚರಣೆಯಲ್ಲಿ ತುಂಬಾ ಬದಲಾವಣೆಗಳನ್ನು ನಾವು ಕಾಣುತ್ತಿದ್ದು, ಇಲ್ಲಿಯೂ ಅದೇ ರೀತಿಯಾದ ಒಂದು ಘಟನೆ ನಡೆದಿದೆ.


    ಸಾಮಾಜಿಕ ಮಾಧ್ಯಮಗಳಲ್ಲಿ ಹೊಸ ವೀಡಿಯೊವೊಂದು ಕಾಣಿಸಿಕೊಂಡಿದ್ದು, ಅಲ್ಲಿ ವಧು ವರರು ತಮ್ಮ ಮದುವೆ ಮಂಟಪದಲ್ಲಿ ಕುಳಿತುಕೊಂಡಿರುತ್ತಾರೆ . ಅನೇಕ ಜನರು ಮದುವೆಗೆ ಬಂದಂತಹ ಅತಿಥಿಗಳು ಎಲ್ಲರೂ ಅವರನ್ನು ಸುತ್ತುವರೆದು ಕುಳಿತುಕೊಂಡಿರುತ್ತಾರೆ. ನವ ವಧು ಮಾತ್ರ ಅರ್ಚಕರು ಓದುವ ಮಂತ್ರಗಳ ಕಡೆಗೆ ಗಮನ ಹರಿಸದೆ, ಅಲ್ಲೇ ಕೆಳಗೆ ಇಟ್ಟಿರುವಂತಹ ಹೂವುಗಳನ್ನು ಎತ್ತಿಕೊಂಡು ಸಂತೋಷದಿಂದ ಗಾಳಿಯಲ್ಲಿ ಎಸೆಯುತ್ತಿರುತ್ತಾಳೆ.


    ಇದನ್ನು ನೋಡಿ ಅಲ್ಲಿದ್ದವರಿಗೆಲ್ಲ ಒಂದು ರೀತಿಯ ಅನುಮಾನ ಏಕೆ ಈ ವಧು ಹೀಗೆ ಹೂವುಗಳನ್ನು ತೆಗೆದುಕೊಂಡು ತನ್ನ ಕೈಯಲ್ಲಿ ಹಿಡಿದುಕೊಂಡು ಮೇಲೆ ಹಾರಿಸುತ್ತಿದ್ದಾಳೆ ಎಂದು. ಆದರೆ ಅಲ್ಲೇ ಪಕ್ಕದಲ್ಲಿಯೇ ಕುಳಿತಂತಹ ವರನು ಯಾವುದೇ ರೀತಿಯ ಭಾವನೆಯನ್ನು ತೋರಿಸುವುದಿಲ್ಲ. ಹಾಗೆಯೆ ಸುಮ್ಮನೆ ನಗುಮುಖದಿಂದ ಕುಳಿತಿರುತ್ತಾನೆ.






    ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಏಂಜಲ್ ರಾಯ್ ಎನ್ನುವವರು ಹಂಚಿಕೊಂಡಿದ್ದು, ಸುಮಾರು ಇದಕ್ಕೆ 5 ಲಕ್ಷ 68 ಸಾವಿರ ಜನರು ನೋಡಿ ಮೆಚ್ಚಿಕೊಂಡಿದ್ದಾರೆ. ಇನ್ನೂ ಜನರು ಇದನ್ನು ನೋಡುತ್ತಲೇ ಇರುವುದು ಇದರ ಸಂಖ್ಯೆ ಇನ್ನು ಹೆಚ್ಚಾಗಬಹುದು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಒಬ್ಬರು ಶೀರ್ಷಿಕೆಯನ್ನು ಓದಿದಾಗ, ಅದು ವಿವಾಹವಲ್ಲ ಆದರೆ ಚಿತ್ರೀಕರಣದ ಸೆಟಪ್ ಎಂದು ಅವರು ಅರಿತುಕೊಳ್ಳುತ್ತಾರೆ.


    ವಧು ಮತ್ತು ವರನನ್ನು ತುಂಬಾ ಒಳ್ಳೆಯ ಉಡುಗೆಯಲ್ಲಿ ಕಾಣಬಹುದಾಗಿದ್ದು, ವಿಡಿಯೋ ತುಂಬಾ ನೈಜವಾಗಿ ಮೂಡಿಬಂದಿದೆ. ಈ ಕೃತ್ಯವು ಚಿತ್ರೀಕರಣಕ್ಕಾಗಿ ಇದ್ದರೂ, ನೆಟ್ಟಿಗರು ಮಾತ್ರ ವಧುವಿನ ಸಕಾರಾತ್ಮಕ ಮತ್ತು ರೋಮಾಂಚಕ ಮನೋಭಾವವನ್ನು ಇಷ್ಟ ಪಟ್ಟಿದ್ದು, ಈ ವೀಡಿಯೊ ತುಂಬಾ ವೈರಲ್ ಆಗಲು ಮುಖ್ಯ ಕಾರಣವಾಗಿದೆ ಎಂದು ಹೇಳಬಹುದು. ಈ ವೀಡಿಯೊ ನೋಡಿದವರಿಗೆ ಇದು ಚಿತ್ರೀಕರಣ ಮಾಡಿದ್ದು ಅಂತ ಗೊತ್ತೇ ಆಗದ ರೀತಿಯಲ್ಲಿ ಮಾಡಿದ್ದಾರೆ.


    ಹೀಗೆ ಅನೇಕ ರೀತಿಯಲ್ಲಿ ಮದುವೆಗಳು ಸುದ್ದಿ ಯಾಗುತ್ತಿವೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಂತಹ ವೀಡಿಯೊಗಳು ವೈರಲ್ ಆಗುತ್ತಿವೆ. ಆದರೆ ಈ ಮೇಲಿನ ವಿಡಿಯೋ ಮದುವೆಯ ಸನ್ನಿವೇಶದ ಚಿತ್ರೀಕರಣವಾಗಿದ್ದು ಇದನ್ನು ಹಂಚಿಕೊಂಡರು ವೈರಲ್ ಆಗಿರುವುದು ವಿಶೇಷವಾದ ಸಂಗತಿಯಾಗಿದೆ.

    First published: