Viral Video: ಹಾರ ಹಾಕಲು ಬರುತ್ತಿದ್ದಂತೆ ವರನ ಕೆನ್ನೆಗೆ ಹೊಡೆದು ಕಾಲ್ಕಿತ್ತ ವಧು!

ಹಾರ ಹಾಕಲು ವರ ಬರುತ್ತಿದ್ದಂತೆ ವಧುವಿಗೆ ಏನಾಯ್ತೋ ಏನೋ ಗೊತ್ತಿಲ್ಲ. ದಿಢೀರ್ ಅಂತ ವರನ ಕಪಾಳಕ್ಕೆ ಎರಡು ಏಟು ಕೊಟ್ಟು ವೇದಿಕೆಯಿಂದ ಕೆಳಗೆ ಇಳಿದಿದ್ದಾಳೆ. ವಧು ಮದುವೆಗೆ ವಿರೋಧ ವ್ಯಕ್ತಪಡಿಸಿದ ಕೂಡಲೇ ಆಗಮಿಸಿದ್ದ ಜನರು ಶಾಕ್ ಆಗಿದ್ದರು.

ಮದುವೆ ವಿಡಿಯೋ

ಮದುವೆ ವಿಡಿಯೋ

  • Share this:
ಸೋಶಿಯಲ್ ಮೀಡಿಯಾ(Social Media)ದಲ್ಲಿ ಮದುವೆ ವಿಡಿಯೋ(Wedding Videos)ಗಳು ಹೆಚ್ಚು ವೈರಲ್ (Viral) ಆಗುತ್ತಿರುತ್ತವೆ. ಮದುವೆಯಲ್ಲಿ ಸಂಪ್ರದಾಯ, ಶಾಸ್ತ್ರಗಳು ವಿಭಿನ್ನವಾಗಿದ್ರೆ ಕ್ಷಣಾರ್ಧದಲ್ಲಿ ದೇಶದ ಮೂಲೆ ಮೂಲೆಗೂ ವಿಡಿಯೋಗಳು ತಲುಪುತ್ತವೆ. ಸದ್ಯ ವಧು-ವರ (Bride and Groom) ಜೊತೆಯಾಗಿ ವೇದಿಕೆ ಮೇಲೆ ಡ್ಯಾನ್ಸ್ (Dance) ಮಾಡೋದು ಸಹಜ. ಇಂತಹ ವಿಡಿಯೋಗಳನ್ನು ನೋಡಲು ನೆಟ್ಟಿಗರು ಹೆಚ್ಚು ಇಷ್ಟಪಡುತ್ತಾರೆ. ಇನ್ನೂ ವಧು ಮತ್ತು ವರನ ಎಂಟ್ರಿ ವಿಡಿಯೋಗಳನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ಆದ್ರೆ ಕೆಲ ಮದುವೆಗಳು ಮಧ್ಯದಲ್ಲಿಯೇ ಮುರಿದು ಬೀಳುತ್ತವೆ. ಕೆಲ ತಿಂಗಳ  ಹಿಂದೆ ವೇದಿಕೆ ಮೇಲೆಯೇ ವರ ಮತ್ತು ವಧು ಹೊಡೆದಾಡಿಕೊಂಡಿರುವ  ವಿಡಿಯೋ ವೈರಲ್ (Viral Video) ಆಗಿತ್ತು.

ಅಲ್ಲಿ ಮದುವೆಗೆ ಎಲ್ಲ ಸಿದ್ಧತೆಯೂ ನಡೆದಿತ್ತು. ವೇದಿಕೆ ಮುಂಭಾಗ ಸೇರಿದ್ದ ಜನರು ವರ ಮತ್ತು ವಧು ಹಾರ ಬದಲಿಸಿಕೊಳ್ಳುವ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದರು. ಇತ್ತ ವಿಡಿಯೋಗ್ರಾಫರ್ ಮತ್ತು ಕ್ಯಾಮೆರಾ ಮೆನ್ ಗಳು ಈ ಗಳಿಗೆ ಸೆರೆ ಹಿಡಿಯಲು ಸಿದ್ಧರಾಗಿದ್ದರು. ಮತ್ತೊಂದು ಕಡೆ ಎರಡೂ ಕುಟುಂಬಗಳ ಸದಸ್ಯರು ಸಂಭ್ರಮದಿಂದ ಓಡಾಡುತ್ತಿದ್ರು. ಆದ್ರೆ ಈ ಎಲ್ಲ ಸಂಭ್ರಮದ ಕ್ಷಣ ಕ್ಷಣಾರ್ಧದಲ್ಲಿ ಭಗ್ನಗೊಂಡಿದೆ.

ಹಾರ ಹಾಕಲು ವರ ಬರುತ್ತಿದ್ದಂತೆ ವಧುವಿಗೆ ಏನಾಯ್ತೋ ಏನೋ ಗೊತ್ತಿಲ್ಲ. ದಿಢೀರ್ ಅಂತ ವರನ ಕಪಾಳಕ್ಕೆ ಎರಡು ಏಟು ಕೊಟ್ಟು ವೇದಿಕೆಯಿಂದ ಕೆಳಗೆ ಇಳಿದಿದ್ದಾಳೆ. ವಧು ಮದುವೆಗೆ ವಿರೋಧ ವ್ಯಕ್ತಪಡಿಸಿದ ಕೂಡಲೇ ಆಗಮಿಸಿದ್ದ ಜನರು ಶಾಕ್ ಆಗಿದ್ದರು.

ಇದನ್ನೂ ಓದಿ:  ಆಂಧ್ರದಲ್ಲೊಂದು ವಿಚಿತ್ರ ಪದ್ಧತಿ.. ಮದುವೆ ವೇಳೆ ಹೆಣ್ಣಿನಂತೆ ಸೀರೆಯುಡುವ ವರ, ಗಂಡಿನಂತೆ ರೆಡಿಯಾಗುವ ವಧು!

ವೈರಲ್ ವಿಡಿಯೋದಲ್ಲಿ ಏನಿದೆ..?

ವೇದಿಕೆ ಮೇಲೆ ವರ ಸೂಟು ಬೂಟು ಹಾಕಿಕೊಂಡು ಕೈಯಲ್ಲಿ ತಾಜಾ  ಹೂಗಳಿಂದ ಸಿದ್ಧವಾದ ಮಾಲೆಯನ್ನು ಹಿಡಿದು ನಿಂತಿದ್ದನು. ಇತ್ತ ವಧು ಸಹ ಕೆಂಪು ಲೆಹೆಂಗಾ ಧರಿಸಿ, ಕೈಯಲ್ಲಿ ವರಮಾಲೆ ಹಿಡಿದಿದ್ದಳು. ಪಂಡಿತರು ಹಾರ ಬದಲಿಸಿಕೊಳ್ಳಿ ಎಂದು ಹೇಳಿದ್ದಾರೆ. ಮೊದಲಿಗೆ ವರ ಹಾಕಲು ಮುಂದಾದಾಗ ವಧು ರಣಚಂಡಿ ಆಗಿ ಆತನ ಮೇಲೆಯೇ ಹಲ್ಲೆ ನಡೆಸಿದ್ದಾಳೆ.ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಆದ್ರೆ ವಧುವಿನ ಈ ನಡೆಗೆ ಕಾರಣ ಏನು ಎಂಬುವುದು ತಿಳಿದು ಬಂದಿಲ್ಲ. ಕೊನೆಗೆ ಎರಡೂ ಕುಟುಂಬಗಳು ಒಮ್ಮತದಿಂದ ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ ಎಂದು ವರದಿಯಾಗಿದೆ. ಆದ್ರೆ ಮದುವೆ ನಡೀತಾ ಆಥವಾ ಇಲ್ಲ ಎಂಬುದರ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ.

ಇದನ್ನೂ ಓದಿ:  Viral Video: ಮದುವೆ ದಿನದಂದು ನವ ವಧು-ವರರು ಮಾಡಿಕೊಂಡ ಎಡವಟ್ಟು: ಮುಂದೇನಾಯ್ತು ಗೊತ್ತಾ..?

ಮಾಂಗಲ್ಯಧಾರಣೆ ವೇಳೆ ಎಲ್ಲರ ಮುಂದೆ ಕಣ್ಣೀರಿಟ್ಟ ವರ

ವಧು ಮದುವೆ (Marriage) ದಿನ ತವರು ಮನೆ ತೊರೆಯುವಾಗ ಆಕೆಯ ಇಡೀ ಕುಟುಂಬ (Bride family) ಕಣ್ಣೀರು ಹಾಕುತ್ತಿರುತ್ತದೆ. ಈಗ ಕಾಲ ಬದಲಾಗಿದ್ದು, ವಧು ಸಂತೋಷವಾಗಿ ಗಂಡನ ಮನೆಗೆ ತೆರಳುತ್ತಾಳೆ. ಮದುವೆ ದಿನವೂ ವಧು-ವರ ಡ್ಯಾನ್ಸ್ (Groom And Bride Dance Video) ಮಾಡೋದು ಫುಲ್ ಟ್ರೆಂಡ್. ಮದುವೆ ಅನ್ನೋದು ಭಾವನಾತ್ಮಕ ವಿಷಯ. ಮಾಂಗಲ್ಯ ಧಾರಣೆ ವೇಳೆ ಕಣ್ಣೀರು ಹಾಕಿರುವ ವಿಡಿಯೋ ಸೋಶಿಯಲ್ ಮೀಡಿಯಾ(Social Media)ದಲ್ಲಿ ವೈರಲ್ (Viral Video) ಆಗಿದೆ. ವಧುವನ್ನು ಪ್ರೀತಿಯಿಂದ ನೋಡುತ್ತಾ ವರ ಕಣ್ಣೀರು ಹಾಕಿದ್ದಾನೆ. ಈ ದೃಶ್ಯ ಕಂಡ ಅತಿಥಿಗಳೆಲ್ಲ ಒಂದು ಕ್ಷಣ ಭಾವುಕರಾಗಿದ್ದಾರೆ.
ವೆಡ್ಡಿಂಗ್‌ ವರ್ಲ್ಡ್‌ ಪೇಜ್ ಹೆಸರಿನ ಇನ್‌ ಸ್ಟಾಗ್ರಾಮ್ ಪೇಜ್‌ ನಲ್ಲಿ ಈ ಮದುವೆ ವಿಡಿಯೋವನ್ನು ಹಂಚಿಕೊಳ್ಳಲಾಲಗಿದೆ. ಈಗ ವೈರಲ್ ಆಗಿರುವ ಕ್ಲಿಪ್‌ನಲ್ಲಿ, ವಧು-ವರರು ಮಂಟಪದಲ್ಲಿ ಕುಳಿತಿದ್ದಾರೆ. ಮತ್ತೊಂದು ಕಡೆ ಅರ್ಚಕರು ಮಂತ್ರಗಳನ್ನು ಪಠಿಸುತ್ತಿರೋದನ್ನು ಕಾಣಬಹುದು.
Published by:Mahmadrafik K
First published: