Viral Story: ಗಿಚ್ಚಿ ಗಿಲಿಗಿಲಿ! ಇವ್ನೇನ್ ಗುರೂ, ಫೋಟೋಗ್ರಾಫರ್​ ಬರಲಿಲ್ಲ ಅಂತ ಮದ್ವೆನೇ ಬೇಡ್ವಂತೆ

ತನ್ನ ಕುತ್ತಿಗೆಗೆ ಮಂಗಳಸೂತ್ರವನ್ನು ಕಟ್ಟಿ ಜೀವನ ಸಂಗಾತಿಯಾಗುವವರು ಮದುವೆ ಮನೆಗೆ ಬರುವಾಗ ತಮ್ಮ ಕಡೆಯ ಛಾಯಾಗ್ರಾಹಕನನ್ನು ತನ್ನೊಂದಿಗೆ ಕರೆತರಲು ಮರೆತಿದ್ದರಿಂದ ಈಗ ವಧು ಮದುವೆಯಾಗಲು ನಿರಾಕರಿಸಿದ್ದಾರೆ. ಕಾನ್ಪುರದ ದೇಹತ್ ಜಿಲ್ಲೆಯ ಗ್ರಾಮವೊಂದರಲ್ಲಿ ಭಾನುವಾರ ಈ ಘಟನೆ ವರದಿಯಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮೊದಲೆಲ್ಲಾ ಅಪ್ಪ ಅಮ್ಮ ನೋಡಿ ನಿರ್ಧಾರ ಮಾಡಿದ ವರನನ್ನು ವಧು (Bride) ಏನೂ ಮಾತಾಡದೆ ಮದುವೆಯಾಗುತ್ತಿದ್ದರು. ಆದರೆ ಈಗ ಸಮಯ ಬದಲಾಗಿದೆ, ಏಕೆಂದರೆ ಬಹುತೇಕ ಹೆಣ್ಣು ಮಕ್ಕಳು (Children) ಚೆನ್ನಾಗಿ ಓದಿಕೊಂಡು ಅವರ ಭವಿಷ್ಯದಲ್ಲಿ ಯಾರೊಂದಿಗೆ ಮತ್ತು ಎಂತಹ ಬಾಳ ಸಂಗಾತಿಯನ್ನು ಮದುವೆಯಾದರೆ ಆಕೆ ಸಂತೋಷದಿಂದ ಇರಬಹುದು ಎಂದು ಅವರು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಈ ಮದುವೆಯ (Marriage) ಮಂಟಪದಲ್ಲಿ ಇನ್ನೇನೂ ಮದುವೆ ಆಗಿಯೇ ಬಿಡುತ್ತದೆ ಎಂದಾಗ ವಧು ವರನು (Bride and Groom) ಚೆನ್ನಾಗಿ ಓದಿಕೊಂಡಿಲ್ಲ, ತಲೆಯಲ್ಲಿ ಕೂದಲೆ ಇಲ್ಲ ಮತ್ತು ಮದುವೆ ಮಂಟಪಕ್ಕೆ ಮದ್ಯಪಾನ ಮಾಡಿ ಬಂದಿದ್ದಾರೆ ಎಂಬ ಅನೇಕ ಕಾರಣಗಳನ್ನು ಮುಂದೆ ಇಟ್ಟು ವರನನ್ನು ತಿರಸ್ಕರಿಸಿದ ಘಟನೆಗಳ ವೀಡಿಯೋಗಳನ್ನು ನಾವು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ನೋಡುತ್ತಿದ್ದೇವೆ.

ಮೊದಲೆಲ್ಲಾ ವರನ ಕಡೆಯವರು ವಧುವಿನ ತಂದೆ ತಾಯಿ ಹೇಳಿದ ಉಡುಗೊರೆಯನ್ನು ಮತ್ತು ಒಡವೆಗಳನ್ನು ಮಾಡಿಸಿಲ್ಲ ಎಂದು ಮತ್ತು ಅನೇಕ ಮನಸ್ತಾಪಗಳಿಂದಾಗಿ ವಧುವನ್ನು ತಿರಸ್ಕರಿಸುತ್ತಿದ್ದರು. ಕಾಲ ಚಕ್ರ ತಿರುಗುತ್ತಾ ಇರುತ್ತದೆ ಎನ್ನುವುದಕ್ಕೆ ಇಲ್ಲಿದೆ ನೋಡಿ ಜ್ವಲಂತ ಸಾಕ್ಷಿ. ಈಗ ವಧುವಿನ ಕೈಯಲ್ಲಿದೆ ಅವರು ಯಾರನ್ನು ಮದುವೆಯಾಗಬೇಕೆಂಬ ನಿರ್ಧಾರ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇಲ್ಲಿಯೂ ಸಹ ಇಂತಹದೇ ಒಂದು ಘಟನೆ ನಡೆದಿದೆ ನೋಡಿ.

ಮದುವೆ ಮನೆಯಲ್ಲಿ ನಡೆದಿದ್ದೇನು
ತನ್ನ ಕುತ್ತಿಗೆಗೆ ಮಂಗಳಸೂತ್ರವನ್ನು ಕಟ್ಟಿ ಜೀವನ ಸಂಗಾತಿಯಾಗುವವರು ಮದುವೆ ಮನೆಗೆ ಬರುವಾಗ ತಮ್ಮ ಕಡೆಯ ಛಾಯಾಗ್ರಾಹಕನನ್ನು ತನ್ನೊಂದಿಗೆ ಕರೆತರಲು ಮರೆತಿದ್ದರಿಂದ ಈಗ ವಧು ಮದುವೆಯಾಗಲು ನಿರಾಕರಿಸಿದ್ದಾರೆ. ಕಾನ್ಪುರದ ದೇಹತ್ ಜಿಲ್ಲೆಯ ಗ್ರಾಮವೊಂದರಲ್ಲಿ ಭಾನುವಾರ ಈ ಘಟನೆ ವರದಿಯಾಗಿದೆ.

ಇದನ್ನೂ ಓದಿ: Singer Death: ಹಾಡುತ್ತಲೇ ಬದುಕು ಮುಗಿಸಿದ ಹಿರಿಯ ಗಾಯಕ! ಅಭಿಮಾನಿಗಳ ಮುಂದೆ ವೇದಿಕೆ ಮೇಲೆೆಯೇ ಕೊನೆಯುಸಿರು

ಕಾನ್ಪುರದ ದೇಹತ್ ನ ಮಂಗಲ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದ ರೈತನ ಮಗಳ ಮದುವೆ ಭೋಗ್ನಿಪುರದಲ್ಲಿ ವಾಸಿಸುವ ವ್ಯಕ್ತಿಯೊಂದಿಗೆ ನಿಶ್ಚಯವಾಗಿತ್ತು. ಹಾರ ಬದಲಾಯಿಸಿಕೊಳ್ಳುವ ಸಮಾರಂಭಕ್ಕಾಗಿ ವೇದಿಕೆಯನ್ನು ಸುಂದರವಾಗಿ ಅಲಂಕರಿಸಲಾಗಿತ್ತು, 'ಬಾರಾತ್' (ಮದುವೆ ದಿಬ್ಬಣ) ಬಂದಾಗ ವಧುವಿನ ಕುಟುಂಬದವರು ಅದನ್ನು ತುಂಬಾನೇ ಅದ್ಧೂರಿಯಾಗಿ ಸ್ವಾಗತಿಸಿದರು ಮತ್ತು ವಧು ಮತ್ತು ವರರು ಇಬ್ಬರೂ ಹಾರವನ್ನು ಬದಲಾಯಿಸಿಕೊಳ್ಳುವ ಸಮಾರಂಭಕ್ಕಾಗಿ ವೇದಿಕೆಯನ್ನು ಹತ್ತಿದರು.

ಸಮಾರಂಭದಲ್ಲಿ ಭಾಗವಹಿಸಲು ನಿರಾಕರಿಸಿದ ವಧು
ವೇದಿಕೆ ಹತ್ತುವವರೆಗೆ ಎಲ್ಲವೂ ಸರಿಯಾಗಿಯೇ ಇತ್ತು, ಆ ಹಾರ ಬದಲಾಯಿಸಿಕೊಳ್ಳುವ ಸ್ಮರಣೀಯ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಯಾವುದೇ ಛಾಯಾಗ್ರಾಹಕ ಇಲ್ಲ ಎಂದು ವಧು ಅರಿತುಕೊಂಡಳು ಮತ್ತು ಆ ಸಮಾರಂಭದಲ್ಲಿ ಭಾಗವಹಿಸಲು ನಿರಾಕರಿಸಿದಳು. ನಂತರ ಅವಳು ಆ ವೇದಿಕೆಯಿಂದ ಕೆಳಗಿಳಿದು ತನ್ನ ನೆರೆಹೊರೆಯವರ ಮನೆಗೆ ಹೊರಟು ಹೋದಳು ಎಂದು ಹೇಳಲಾಗುತ್ತಿದೆ.

ನಂತರ ಆ ವಧು ಹೋಗಿದ್ದನ್ನು ನೋಡಿದ ಎಲ್ಲಾ ಹಿರಿಯರು ಹೋಗಿ ಆ ಹುಡುಗಿಯನ್ನು ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರು, ಆದರೆ ಅವಳು ಮಾತ್ರ ಯಾವುದೇ ಮಾತಿಗೆ ಒಪ್ಪಲಿಲ್ಲ. "ಇಂದು ನಮ್ಮ ಮದುವೆಯ ಬಗ್ಗೆ ಕಾಳಜಿ ವಹಿಸದ ವ್ಯಕ್ತಿ, ಭವಿಷ್ಯದಲ್ಲಿ ಅವನು ನನ್ನನ್ನು ಹೇಗೆ ನೋಡಿಕೊಳ್ಳುತ್ತಾನೆ" ಎಂದು ಆಕೆ ಅಲ್ಲಿರುವ ಹಿರಿಯರಿಗೆ ಪ್ರಶ್ನೆ ಹಾಕಿದಳು.

ಪೊಲೀಸ್ ತಾನೇ ಮೆಟ್ಟಿಲೇರಿದ ಮದುವೆಯ ಮನೆಯವರು
ಕುಟುಂಬದ ಹಿರಿಯರು ಸಹ ಅವಳನ್ನು ಮನವೊಲಿಸಲು ಪ್ರಯತ್ನಿಸಿದರು, ಆದರೆ ಎಲ್ಲಾ ಪ್ರಯತ್ನಗಳು ವ್ಯರ್ಥವಾಯಿತು. ಅದರ ನಂತರ ವಿಷಯವು ಪೊಲೀಸ್ ಠಾಣೆಯನ್ನು ತಲುಪಿತು, ಅಲ್ಲಿ ಎರಡೂ ಕಡೆಯವರು ಪರಸ್ಪರ ಒಪ್ಪಿಗೆಯಿಂದ ವಿನಿಮಯವಾದ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ಹಿಂದಿರುಗಿಸಲು ಒಪ್ಪಿಕೊಂಡರು.

ಇದನ್ನೂ ಓದಿ: How to Identify Liar: ನಿಮ್ಮ ಬಾಯ್​ ಫ್ರೆಂಡ್​ ಸುಳ್ಳು ಹೇಳುತ್ತಿದ್ದಾನಾ? ಹೀಗೆ ಪತ್ತೆಹಚ್ಚಿ

"ಎರಡೂ ಪಕ್ಷಗಳು ಪರಸ್ಪರ ನೀಡಿದ ಸಾಮಾನುಗಳನ್ನು ಮತ್ತು ನಗದು ಹಣವನ್ನು ಹಿಂದಿರುಗಿಸಿದವು. ಇದರ ನಂತರ, ವರನು ವಧುವಿಲ್ಲದೆ ತನ್ನ ಹುಟ್ಟೂರಿಗೆ ಹೊರಟು ಹೋದನು" ಎಂದು ಅವರು ಹೇಳಿದರು ಮತ್ತು "ಛಾಯಾಗ್ರಾಹಕ ಮತ್ತು ವೀಡಿಯೋಗ್ರಾಫರ್ ಬಗ್ಗೆ ವಿವಾದವಿತ್ತು, ಅದನ್ನು ವರನ ಕಡೆಯವರು ವ್ಯವಸ್ಥೆ ಮಾಡಲಿಲ್ಲ, ಇದರಿಂದಾಗಿ ಹುಡುಗಿ ಕೋಪಗೊಂಡಳು ಮತ್ತು ಮದುವೆಯಾಗಲು ನಿರಾಕರಿಸಿದಳು" ಎಂದು ಮಂಗಲ್ಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಡೋರಿ ಲಾಲ್ ಅವರು ಹೇಳಿದರು.
Published by:Ashwini Prabhu
First published: