Video Viral: ನಾನು ಸೆಲೆಕ್ಟ್​ ಮಾಡಿದ ಹಾಡು ಹಾಕಿದ್ರೆ ಮಂಟಪಕ್ಕೆ ಬರ್ತೇನೆ ಎಂದು ಹಠ ಹಿಡಿದ ವಧು!

ಮದುವೆಯಲ್ಲಿ ವಧುವಿನ ಪ್ರವೇಶವು ಅತ್ಯಂತ ಮುಖ್ಯವಾದದ್ದು, ಏಕೆಂದರೆ ವರ ಸೇರಿದಂತೆ ಪ್ರತಿಯೊಬ್ಬರೂ ನವ ವಧು ನೋಡಲು ಹೇಗೆ ಕಾಣುತ್ತಾರೆಂದು ತುಂಬಾ ಕಾತುರರಾಗಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ವಧುವಿನ ಪ್ರವೇಶವನ್ನು ಹಾಡುಗಳು ಹಾಕಿ ಮತ್ತು ನೃತ್ಯ ಪ್ರದರ್ಶನಗಳೊಂದಿಗೆ ಮಾಡಲಾಗುತ್ತದೆ.

ವಧು

ವಧು

  • Share this:

ನನ್ನ ಮದುವೆ ಹೀಗೆ ಆಗಬೇಕು, ಇಂತವರ ಜೊತೆಗೆ ಆಗಬೇಕು ಮತ್ತು ತುಂಬಾ ವಿಜೃಂಭಣೆಯಿಂದಾಗಬೇಕು ಎಂಬುದು ಅನೇಕ ಯುವಕ ಯುವತಿಯರ ಆಸೆಯಾಗಿರುವುದನ್ನು ನಾವೆಲ್ಲ ನೋಡಿರುತ್ತೇವೆ.ಇತ್ತೀಚೆಗೆ ನವ ವಧು ಅಥವಾ ವರ ತಮ್ಮ ಮದುವೆಯಲ್ಲಿ ಕಿಂಚಿತ್ತು ಅವ್ಯವಸ್ಥೆಯಾದರೂ ಮದುವೆ ಮನೆ ಬಿಟ್ಟು ಹೋಗುವಂತಹ ಸಂದರ್ಭಗಳು ನಾವೆಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವೀಡಿಯೋ ತುಣುಕುಗಳನ್ನು ನೋಡಿರುತ್ತೇವೆ.ವಿವಾಹವು ಬಾಲ್ಯದಿಂದಲೂ ಹುಡುಗಿಯರು ಕಾಣುವಂತಹ ಅನೇಕ ಕನಸುಗಳಲ್ಲಿ ಒಂದಾಗಿದ್ದು, ಎಲ್ಲಾ ವಿವಾಹ ಪೂರ್ವ ಆಚರಣೆಗಳು, ಮದುವೆಗೆ ಹಾಕಿಕೊಳ್ಳುವ ಉಡುಪು ಮತ್ತು ಮುಖ್ಯವಾಗಿ ಮದುವೆ ಮನೆಗೆ ಅವರ ಪ್ರವೇಶ ಹೀಗಿರಬೇಕು, ಎಲ್ಲವೂ ಸರಿಯಾಗಿ ಇರಬೇಕು ಎಂದುಕೊಳ್ಳುವುದು ಸಹಜ.


ಮದುವೆಯಲ್ಲಿ ವಧುವಿನ ಪ್ರವೇಶವು ಅತ್ಯಂತ ಮುಖ್ಯವಾದದ್ದು, ಏಕೆಂದರೆ ವರ ಸೇರಿದಂತೆ ಪ್ರತಿಯೊಬ್ಬರೂ ನವ ವಧು ನೋಡಲು ಹೇಗೆ ಕಾಣುತ್ತಾರೆಂದು ತುಂಬಾ ಕಾತುರರಾಗಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ವಧುವಿನ ಪ್ರವೇಶವನ್ನು ಹಾಡುಗಳು ಹಾಕಿ ಮತ್ತು ನೃತ್ಯ ಪ್ರದರ್ಶನಗಳೊಂದಿಗೆ ಮಾಡಲಾಗುತ್ತದೆ.


ಆದರೆ ಇಲ್ಲಿ ನವ ವಧು ತನ್ನ ಮದುವೆಯಲ್ಲಿ ಮದುವೆ ಮನೆ ಒಳಗೆ ಹೋಗಲು ನಿರಾಕರಿಸಿದ್ದು ಏಕೆ ಅಂತ ನೋಡಿದರೆ ನೀವು ಹೀಗೂ ಉಂಟೆ ಎಂದುಕೊಳ್ಳುವುದು ಗ್ಯಾರಂಟಿ.


Photos: ಭಾರತದಲ್ಲಿ ಕಾಣಸಿಗುವ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿಗಳಿವು!

ವಧು ಮದುವೆ ನಡೆಯುವ ಮನೆಗೆ ಬಂದು ಒಳಗೆ ಬರಲು ನಿರಾಕರಿಸಿದರು, ಏಕೆಂದರೆ ಮೊದಲೇ ಅವರ ಆಯ್ಕೆ ಮಾಡಿದ ಹಾಡು ಹಾಕಲು ಹೇಳಿದ್ದರಂತೆ. ಆದರೆ ಅವರು ಮದುವೆ ಮನೆಗೆ ಬಂದಾಗ ಆ ಹಾಡು ಹಾಕಲಿಲ್ಲ ಎಂದು ಮುನಿಸಿಕೊಂಡು ಮದುವೆಯ ಮನೆಯನ್ನು ಪ್ರವೇಶಿಸಲು ನಿರಾಕರಿಸಿದರು.


ತಾನು ಹೇಳಿದ ಹಾಡು ಹಾಕಿದರೆ ಮಾತ್ರ ಒಳಗೆ ಬರುವುದಾಗಿ ವಧು ಹೇಳಿದಳು. ವಿಡಿಯೊದಲ್ಲಿ ವಧು ಹಿಂದಿಯಲ್ಲಿ "ಆ ಹಾಡನ್ನು ಮಾತ್ರ ಹಾಕಬೇಕು ಎಂದು ನಾನು ಹೇಳಿದ್ದೆ, ನೀವು ಯಾಕೆ ಆ ಹಾಡು ಹಾಕಿಲ್ಲ", ಎಂದು ಹೇಳುವುದನ್ನು ನಾವು ವೈರಲ್ ಆದ ವಿಡಿಯೋದಲ್ಲಿ ನೋಡಬಹುದಾಗಿದೆ.


“ನೀವು ಆ ಹಾಡು ಹಾಕಿ ಮೊದಲು, ಇಲ್ಲ ಅಂದರೆ ನಾನು ಒಳಗೆ ಬರುವುದಿಲ್ಲ” ಅಂತ ಮುನಿಸಿಕೊಂಡ ವಧು ಅಲ್ಲಿದ್ದವರಿಗೆ ಹೇಳಿದ್ದನ್ನು ಸಹ ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಡಿಯೋವನ್ನು ಮೊದಲು "ದಿ ವೆಡ್ಡಿಂಗ್ ಬ್ರಿಗೇಡ್" ಹೆಸರಿನ ಪುಟದಲ್ಲಿ ಹಂಚಿಕೊಳ್ಳಲಾಗಿದೆ.


ಈ ವಿಡಿಯೋವನ್ನು ಸುಮಾರು 23,000 ಜನರು ಲೈಕ್‌ ಮಾಡಿದ್ದು, 300ಕ್ಕೂ ಹೆಚ್ಚು ಬಳಕೆದಾರರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ವಿಡಿಯೋ ನೋಡಿದ ಒಬ್ಬರು "ನೀವು ನಿಮ್ಮ ಆಯ್ಕೆ ಮಾಡಿದ ಹಾಡು ಹಾಕುವವರೆಗೆ ಮದುವೆ ಮನೆಯ ಒಳಗೆ ಹೋಗಬೇಡಿ" ಎಂದು ಪ್ರತಿಕ್ರಿಯಿಸಿದ್ದಾರೆ.






ಇನ್ನೊಬ್ಬರು "ನಾನು ಅವಳ ನೋವನ್ನು ಅರ್ಥ ಮಾಡಿಕೊಳ್ಳಬಲ್ಲೆ" ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬ ಬಳಕೆದಾರರು "ಆಕೆಯ ನೋವು ನನ್ನ ನೋವು ಒಂದೇ ಆಗಿದೆ, ಅವರು ಹೇಳಿದ ಹಾಡನ್ನು ಹಾಕಲಾಯಿತು ಎಂದು ನಾನು ಭಾವಿಸುತ್ತೇನೆ" ಎಂದು ಪ್ರತಿಕ್ರಿಯಿಸಿದರು.


First published: