HOME » NEWS » Trend » BRIDE RAGES WEDDING DRESS LOOKS NOTHING LIKE ORDER BEFORE REALISING MORTIFYING MISTAKE HG

ದಯವಿಟ್ಟು ಗಮನಿಸಿ! ಆನ್​ಲೈನ್​ನಲ್ಲಿ ಬಟ್ಟೆ ಖರೀದಿ ಮಾಡಿದ ನಂತರ ಹೀಗೂ ಆಗ್ಬೋದು!

ಅಮೆರಿಕ ಮೂಲಕ ಪ್ರಜೆ ಆಬ್ರೆ ಅವರಿಗೆ ಮದುವೆ ನಿಶ್ವಯವಾಗಿತ್ತು. ಮದುವೆಗೆ ವೆಡ್ಡಿಂಗ್​ ಡ್ರೆಸ್​ ಖರೀದಿಸಲು ಆನ್​​ಲೈನ್​ ಮೊರೆ ಹೋಗಿದ್ದಳು ಆಬ್ರೆ.

news18-kannada
Updated:November 13, 2020, 3:49 PM IST
ದಯವಿಟ್ಟು ಗಮನಿಸಿ! ಆನ್​ಲೈನ್​ನಲ್ಲಿ ಬಟ್ಟೆ ಖರೀದಿ ಮಾಡಿದ ನಂತರ ಹೀಗೂ ಆಗ್ಬೋದು!
ಆಬ್ರೆ
  • Share this:
ಅನೇಕರು ತಮ್ಮ ಬ್ಯುಸಿ ಕೆಲಸದ ನಡುವೆ ಸದ್ಯ ಆನ್​ಲೈನ್​ಲ್ಲಿಯೇ ಎಲ್ಲವನ್ನು ಖರೀದಿಸುತ್ತಾರೆ. ಹಬ್ಬ, ಹುಟ್ಟುಹಬ್ಬ, ಮದುವೆ ಹೀಗೆ ಕಾರ್ಯಕ್ರಮಗಳಿಗೆ ಹೋಗುವ ಮೊದಲು ತಮಗಿಷ್ಟವಾದ ಬಟ್ಟೆಯನ್ನು ಆನ್​ಲೈನ್​ ಮೂಲಕ ನೋಡಿ ಖರೀದಿ ಮಾಡುತ್ತಾರೆ. ಅದರಂತೆ ಇಲ್ಲೊಬ್ಬಳು ತನ್ನ ಮದುವೆಗೆ ಆನ್​ಲೈನ್​ ಮೂಲಕ ವೆಡ್ಡಿಂಗ್​ ಡ್ರೆಸ್​ ಖರೀದಿಸಿದ್ದಾಳೆ. ಆದರೆ ಮನೆಗೆ ಬಂದು ಡ್ರೆಸ್​​ ತೆರೆದು ಧರಿಸಿ ನೋಡಿದ ಮೇಲೆ ಗಾಬರಿಗೊಂಡಿದ್ದಾಳೆ.

ಅಮೆರಿಕ ಮೂಲಕ ಪ್ರಜೆ ಆಬ್ರೆ ಅವರಿಗೆ ಮದುವೆ ನಿಶ್ವಯವಾಗಿತ್ತು. ಮದುವೆಗೆ ವೆಡ್ಡಿಂಗ್​ ಡ್ರೆಸ್​ ಖರೀದಿಸಲು ಆನ್​​ಲೈನ್​ ಮೊರೆ ಹೋಗಿದ್ದಳು ಆಬ್ರೆ. ಅಂದುಕೊಂಡಿದ್ದ ದಿನಾಂಕದಂದು ವೆಡ್ಡಿಂಗ್​ ಡ್ರೆಸ್​ ಆಕೆಯ ಮನೆಗೆ ಬಂದಿದೆ. ಆದರೆ ಅದನ್ನು ಧರಿಸಿ ನೋಡಿದ ನಂತರ ಗಾಬರಿಗೊಂಡಿದ್ದಾಳೆ. ಏಕೆಂದರೆ ಆಕೆ ಆನ್​ಲೈನ್​ನಲ್ಲಿ ಬುಕ್​ ಮಾಡುವ ವೇಳೆ ಇದ್ದ ಬಟ್ಟೆಗೂ, ಬಟ್ಟೆ  ಧರಿಸಿದ ನಂತರದ ವ್ಯತ್ಯಾಸವು ಆಕೆಯನ್ನು ಗಾಯರಿಯನ್ನಾಸಿದೆ.

ಇಷ್ಟಪಟ್ಟು ಆರ್ಡರ್​ ಮಾಡಿದ ಬಟ್ಟೆಯನ್ನು, ಅದರ ಕ್ವಾಲಿಟಿಯನ್ನು ನೋಡಿ ಸಿಟ್ಟಿಗೆದ್ದ ಆಬ್ರೆ ನಂತರ ಬಟ್ಟೆಯ ಕಂಪನಿಗೆ ಮೇಲ್​ ಮಾಡಿದ್ದಾಳೆ. ಆರ್ಡರ್​ ಮಾಡಿದ್ದಕ್ಕೆ ಇಂತಹ ಬಟ್ಟೆಯನ್ನು ಕಳುಹಿಸುವುದಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾಳೆ.

ಆಕೆಯ ಮೇಲ್​ಗೆ ಬಟ್ಟೆ ಕಂಪನಿ ಪ್ರತಿಕ್ರಿಯೆ ನೀಡಿದೆ. ದಯವಿಟ್ಟು ಗಮನಿಸಿ ವೆಡ್ಡಿಂಗ್​ ಡ್ರೆಸ್​ ಕಳುಹಿಸುವ ವೇಳೆ ಮಗಚಿತ್ತು ಎಂದು ಹೇಳಿದೆ. ಆನಂತರ ಆಬ್ರೆಗೆ ಕಂಪನಿ ಸರಿಯಾದ ಬಟ್ಟೆಯನ್ನು ಕಳುಹಿಸಿದೆ. ನಾನು ಸರಿಯಾಗಿ ನೋಡದೆ ಧರಿಸಿದೆ ಎಂದುಬು ನಂತರ ಜ್ನಾನೋದಯವಾಗಿದೆ.
Youtube Video

ನಂತರ ಆಬ್ರೆ ಸರಿಯಾಗಿ ಧರಿಸಿದಾಗ ಅತ್ಯುತ್ತಮವಾಗಿ ಕಾಣಿಸಿದೆಯಂತೆ. ಅಂತೂ ಸರಿಯಾಗಿ ನೋಡದೆ ಬಟ್ಟೆ ಧರಿಸಿಕೊಂಡ ಆಬ್ರೆ ನಗೆಪಾಟಲಿಗೀಡಾಗಿದ್ದಾಳೆ. ಈ ವಿಚಾರವನ್ನು ಆಕೆ ಫೇಸ್​ಬುಕ್​ನಲ್ಲಿ ಬರದುಕೊಂಡಿದ್ದಾಳೆ. ನನಗೆ 33 ವರ್ಷವಾದರ ಕೆಲವೊಮ್ಮ ಕಾಮನ್ಸೆನ್ಸ್​ ಕೈಕೊಡುತ್ತದೆ ಎಂದಿದ್ದಾಳೆ
Published by: Harshith AS
First published: November 13, 2020, 3:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories