Viral Bride: ತಮಾಷೆ ಮಾಡೋಕೆ ಹೋಗಿ ಗಂಡನಿಗೆ ಹೀಗೆ ಮಾಡೋದಾ ಈ ವಧು? ವಿಡಿಯೋ ವೈರಲ್

ಸಂತೋಷದಲ್ಲಿರುವ ನವ ವಧು ಮತ್ತು ವರರು ತಮ್ಮ ಆ ವಿಶೇಷ ದಿನವನ್ನು ಹೇಗೆ ಇನ್ನಷ್ಟೂ ವಿಶೇಷವನ್ನಾಗಿ ಮಾಡಿಕೊಂಡು ಸಂತೋಷದಿಂದ ಕಳೆಯಬೇಕು ಎಂದು ಅನೇಕ ರೀತಿಯ ಯೋಜನೆಗಳನ್ನು ಹಾಕಿ ಕೊಳ್ಳುವುದನ್ನು ನಾವೆಲ್ಲಾ ಇತ್ತೀಚಿನ ಮದುವೆಗಳಲ್ಲಿ ಸ್ವಲ್ಪ ಹೆಚ್ಚಾಗಿಯೇ ನೋಡುತ್ತಿದ್ದೇವೆ ಎಂದು ಹೇಳಬಹುದು.

ವಧುವಿನೊಂದಿಗೆ ಪೂಲ್​​ನಲ್ಲಿ ರಿದ್ದೇಶ್

ವಧುವಿನೊಂದಿಗೆ ಪೂಲ್​​ನಲ್ಲಿ ರಿದ್ದೇಶ್

  • Share this:
ಮದುವೆಯ (Marriage) ದಿನ ಎಂದರೆ ಯಾರಿಗೆ ತಾನೇ ಸಂಭ್ರಮವಿರುವುದಿಲ್ಲ ಹೇಳಿ? ಅದರಲ್ಲೂ ಈ ಮದುವೆ ಆಗುವಂತಹ ನವ ವಧು ಮತ್ತು ವರರಿಗೆ ಯಾವಾಗಲೂ ಈ ದಿವಸ ತುಂಬಾನೇ ವಿಶೇಷವಾಗಿರುತ್ತದೆ (Special) ಎಂದು ಹೇಳಬಹುದು. ಸಂತೋಷದಲ್ಲಿರುವ (Happy) ನವ ವಧು (Bride) ಮತ್ತು ವರರು ತಮ್ಮ ಆ ವಿಶೇಷ ದಿನವನ್ನು ಹೇಗೆ ಇನ್ನಷ್ಟೂ ವಿಶೇಷವನ್ನಾಗಿ ಮಾಡಿಕೊಂಡು ಸಂತೋಷದಿಂದ ಕಳೆಯಬೇಕು ಎಂದು ಅನೇಕ ರೀತಿಯ ಯೋಜನೆಗಳನ್ನು ಹಾಕಿ ಕೊಳ್ಳುವುದನ್ನು ನಾವೆಲ್ಲಾ ಇತ್ತೀಚಿನ ಮದುವೆಗಳಲ್ಲಿ ಸ್ವಲ್ಪ ಹೆಚ್ಚಾಗಿಯೇ ನೋಡುತ್ತಿದ್ದೇವೆ ಎಂದು ಹೇಳಬಹುದು.

ಮದುವೆಯ ದಿನದಂದು ವಧು ಮತ್ತು ವರ ವಿಭಿನ್ನವಾಗಿ ಕಾಣಿಸಿಕೊಳ್ಳುವುದು, ಮದುವೆ ಮಂಟಪಕ್ಕೆ ಎಂಟ್ರಿ ನೀಡುವುದು, ಭವ್ಯವಾದ ಉಡುಗೆಯನ್ನು ಧರಿಸಿ ಬರುವುದು ಇದೆಲ್ಲವನ್ನು ನಾವು ಅನೇಕ ವೀಡಿಯೋಗಳಲ್ಲಿ ಈಗಾಗಲೇ ನೋಡಿರುತ್ತೇವೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೋಗಳಲ್ಲಿ ನವ ವಧು ವರರು ಮದುವೆಯ ದಿನ ತುಂಬಾ ಉತ್ಸಾಹದಿಂದ ಏನೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿರುವ ವೀಡಿಯೋಗಳನ್ನು ನಾವೆಲ್ಲಾ ನೋಡಿರುತ್ತೇವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ವಿಶಿಷ್ಟವಾದ ಜೈಮಾಲಾ ಸಮಾರಂಭ

ಇತ್ತೀಚೆಗೆ ನಾವು ಒಂದು ವೀಡಿಯೋದಲ್ಲಿ ಒಂದು ವಿವಾಹದಲ್ಲಿ ನಡೆದ ವಿಶಿಷ್ಟವಾದ ಜೈಮಾಲಾ ಸಮಾರಂಭವನ್ನು ನೋಡಿದ್ದೆವು. ವಧು ಮತ್ತು ವರ ತಮ್ಮ ಹಾರವನ್ನು ಬದಲಾಯಿಸಿಕೊಳ್ಳುವಾಗ ಒಂದು ಬಾಲ್ ಪೂಲ್ ನಲ್ಲಿ ಬಂದು ನಿಂತಾಗ ಆ ಪೂಲ್ ನಲ್ಲಿ ಅವರಿಬ್ಬರ ಸುತ್ತಲೂ ಅತಿಥಿಗಳು ನಿಂತಿದ್ದು ಚೆಪ್ಪಾಳೆ ಹೊಡೆಯುತ್ತಾ, ಶಿಳ್ಳೆ ಹೊಡೆಯುತ್ತಾ ನಿಂತಿದ್ದು, ಆ ಪೂಲ್ ನಲ್ಲಿ ಗುಲಾಬಿ ಬಣ್ಣದ ಚಿಕ್ಕ ಪುಟ್ಟ ಬಾಲ್ ಗಳನ್ನು ಹಾಕಿದರು. ಈ ಒಟ್ಟು ಅಲಂಕಾರ ನೋಡುಗರ ಕಣ್ಣಿಗೆ ತುಂಬಾನೇ ಹಿತ ನೀಡುವಂತಿತ್ತು.

ತಮಾಷೆ ಮಾಡೋಕೆ ಹೋಗಿ ಇದೇನಾಯ್ತು?

ಮತ್ತೊಮ್ಮೆ ಇಂತಹದೇ ಒಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ನೋಡಿ. ಇಲ್ಲಿ ಈ ವಧು ಮತ್ತು ವರನ ನಡುವಿನ ತಮಾಷೆಯ ಕ್ಷಣವನ್ನು ತೋರಿಸುವ ವೀಡಿಯೋ ಜನರನ್ನು ನಗುವಂತೆ ಮಾಡಿದೆ ಎಂದು ಹೇಳಬಹುದು.

ಸ್ವಿಮ್ಮಿಂಗ್ ಪೂಲ್​ಗೆ ಬಿದ್ದ ಜೋಡಿ

ವೀಡಿಯೋದಲ್ಲಿ ವಧು ತನ್ನ ಗಂಡನನ್ನು ಈಜುಕೊಳಕ್ಕೆ ತಳ್ಳಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದಾಗಿದೆ. ಘಟನೆಗಳ ಸರದಿಯಲ್ಲಿ, ಅವಳು ವಿಫಲಳಾಗುತ್ತಾಳೆ ಮತ್ತು ಈ ವೀಡಿಯೋ ಒಂದು ಮುದ್ದಾದ ಟ್ವಿಸ್ಟ್ ನೊಂದಿಗೆ ಕೊನೆಗೊಳ್ಳುತ್ತದೆ. ಈ ವೀಡಿಯೋವನ್ನು ಕ್ರಿಮ್ಸನ್ ಸರ್ಕಲ್ ವೆಡ್ಡಿಂಗ್ಸ್ ಎಂಬ ವೆಡ್ಡಿಂಗ್ ಪ್ಲ್ಯಾನಿಂಗ್ ಏಜೆನ್ಸಿಯ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ.

"ಎರಡು ಸುಂದರ ಆತ್ಮಗಳು, ಪ್ರೀತಿಯಲ್ಲಿ ಬೀಳುವುದು ಎಂದರೆ ಇದೇ ಇರಬೇಕು"ಎಂದು ಅವರು ವೀಡಿಯೋವನ್ನು ಪೋಸ್ಟ್ ಮಾಡುವಾಗ ಜೋರಾಗಿ ನಗುವ ಎಮೋಟಿಕಾನ್ ನೊಂದಿಗೆ ಶೀರ್ಷಿಕೆಯನ್ನು ಬರೆದಿದ್ದಾರೆ.

ಇದನ್ನೂ ಓದಿ: Bride Exchange: ಕರೆಂಟು ಹೋದ ಟೈಮಲಿ ವಧು-ವರರೇ ಅದಲು ಬದಲು; ಅವನ ಹುಡುಗಿಗೆ ಇವನು, ಇವನ ಹುಡುಗಿಗೆ ಅವನು ತಾಳಿ ಕಟ್ಟಿದ!

ವರ ಮತ್ತು ವಧು ತಮ್ಮ ಮದುವೆಯ ಉಡುಪಿನಲ್ಲಿ ಅಲಂಕೃತವಾದ ಈಜುಕೊಳದ ಪಕ್ಕದಲ್ಲಿ ನಿಂತಿರುವುದನ್ನು ಈ ವೀಡಿಯೋದ ಆರಂಭದಲ್ಲಿ ನೋಡಬಹುದು. ಕೆಲವೇ ಕ್ಷಣಗಳಲ್ಲಿ, ವಧು ವರನನ್ನು ಈಜುಕೊಳಕ್ಕೆ ತಳ್ಳಲು ಪ್ರಯತ್ನಿಸುತ್ತಾಳೆ. ಮೊದಲಿಗೆ ಅವನು ಬೀಳಲು ಪ್ರಾರಂಭಿಸುತ್ತಾನೆ, ಆದರೆ ಕೊನೆಯ ಕ್ಷಣದಲ್ಲಿ ಅವನು ತನ್ನ ವಧುವನ್ನು ಹಿಡಿದು ಕೊಳ್ಳುತ್ತಾನೆ ಮತ್ತು ಅವರಿಬ್ಬರೂ ಕೊಳದೊಳಗೆ ಬೀಳುತ್ತಾರೆ. ಸಂಪೂರ್ಣ ಘಟನೆಯುದ್ದಕ್ಕೂ ಅವರಿಬ್ಬರು ಹೇಗೆ ನಗು ನಗುತ್ತಾ ಇದ್ದಾರೆ ಎನ್ನುವುದನ್ನು ನೀವು ಈ ವೀಡಿಯೋದಲ್ಲಿ ನೋಡಬಹುದು.


ಕೊನೆಗೆ ಇಬ್ಬರು ಆ ಈಜುಕೊಳದಲ್ಲಿ ಬಿದ್ದಾಗ, ಆ ವಧು ತನ್ನ ವರನ ಕೆನ್ನೆಗೆ ಮುತ್ತೊಂದನ್ನು ನೀಡುವುದರೊಂದಿಗೆ ಈ ವೀಡಿಯೋ ಕೊನೆಗೊಳ್ಳುತ್ತದೆ.

ಇದನ್ನೂ ಓದಿ: Prisoners: ಪುಸ್ತಕ ಓದೋ ಖೈದಿಗಳಿಗೆ ಜೈಲಿನಿಂದ ಬೇಗ ಮುಕ್ತಿ! ಇಂಥಾ ಆಫರ್ ಎಲ್ಲೂ ಸಿಗಲ್ಲ ನೋಡಿ

ಈ ವೀಡಿಯೋ ಇದುವರೆಗೂ 1.3 ಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ ಮತ್ತು ಈ ಪೋಸ್ಟ್ ನ ಹಂಚಿಕೆಯು ವಿವಿಧ ಕಾಮೆಂಟ್ ಗಳನ್ನು ಪೋಸ್ಟ್ ಮಾಡಲು ಜನರನ್ನು ಪ್ರೇರೇಪಿಸಿದೆ.

"ಇದು ಕ್ಯಾಮೆರಾದಲ್ಲಿ ಸೆರೆಯಾದ ಅತ್ಯಂತ ಸುಂದರವಾದ ಕ್ಷಣ" ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ. "ಅವರ ವಿವಾಹವು ವಿನೋದಮಯವಾಗಿರುತ್ತದೆ ಎಂದು ನಾನು ಪಣ ತೊಡುತ್ತೇನೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. "ಸುಂದರ ದಂಪತಿಗಳು" ಎಂದು ಮೂರನೆಯವನು ಕಾಮೆಂಟ್ ಮಾಡಿದ್ದಾರೆ. "ಸೋ ಕ್ಯೂಟೀ" ಎಂದು ನಾಲ್ಕನೆಯವರು ಕಾಮೆಂಟ್ ಮಾಡಿದ್ದಾರೆ.
Published by:Divya D
First published: