• Home
  • »
  • News
  • »
  • trend
  • »
  • Viral Video: ಮದುವೆಯಲ್ಲಿ ವಧುವಿನ ಮಾಸ್ ಡ್ಯಾನ್ಸ್ ವಿಡಿಯೋ; ವರ ಮಾಡಿದ್ದೇನು ಗೊತ್ತು?

Viral Video: ಮದುವೆಯಲ್ಲಿ ವಧುವಿನ ಮಾಸ್ ಡ್ಯಾನ್ಸ್ ವಿಡಿಯೋ; ವರ ಮಾಡಿದ್ದೇನು ಗೊತ್ತು?

ವಧುವಿನ ಡ್ಯಾನ್ಸ್

ವಧುವಿನ ಡ್ಯಾನ್ಸ್

ಮದುವೆಯಲ್ಲಿ ವಧು-ವರರು ತಮ್ಮ ಸಂಬಂಧಿಕರೊಂದಿಗೆ ಸಂಗೀತದ ಹೆಸರಿನಲ್ಲಿ ನೃತ್ಯ ಮಾಡುತ್ತಾರೆ. ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

  • Share this:

ಇದು ಸೋಶಿಯಲ್ ಮೀಡಿಯಾ (Social Media) ಕಾಲ. ಈಗ ಏನೇ ನಡೆದ್ರೂ ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತದೆ. ಜನರು ಸಹ ತಮ್ಮ ಸುತ್ತಮುತ್ತಲಿನ ವಿಡಿಯೋಗಳನ್ನು ವಾಟ್ಸಪ್ (Whatsapp) ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಹಾಗಾಗಿ ಸಿಕ್ಕಾಪಟ್ಟೆ ವೈರಲ್  ಆಗುವ ಮೂಲಕ ವಿಶ್ವದ ಮೂಲೆ ಮೂಲೆಗೂ ತಲುಪುತ್ತವೆ. ಇತ್ತೀಚೆಗೆ ಮದುವೆಯ ವಿಡಿಯೋಗಳು (Marriage video) ಹೆಚ್ಚು ವೈರಲ್ ಆಗುತ್ತಿವೆ. ಕೆಲವು ವೀಡಿಯೋಗಳಲ್ಲಿ ವಧು-ವರರ ಡ್ಯಾನ್ಸ್ (Groom And Bride Dance video) ಇದ್ದರೆ, ಒಂದಿಷ್ಟು ಫನ್ನಿ ವಿಡಿಯೋ (Funny Video)ಗಳು ಇರುತ್ತವೆ. ಇಂತಹ ವಿಡಿಯೋಗಳು ನೆಟ್ಟಿಗರನ್ನು ಹೆಚ್ಚು ಆಕರ್ಷಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವುದು ಗೊತ್ತಿರುವ ವಿಚಾರ. ಜನರು ಕೂಡ ಇಂತಹ ವಿಡಿಯೋಗಳನ್ನು ಇಷ್ಟಪಟ್ಟು ಶೇರ್ ಮಾಡಿಕೊಳ್ಳುತ್ತಾರೆ.


ಕಳೆದ ಒಂದು ದಶಕದಿಂದ ಮದುವೆಗಳು ನಡೆಯುವ ರೀತಿ ಬದಲಾಗಿದೆ. ಮದುವೆ ವೇದಿಕೆಯ ಮೇಲೆ ವಧು ಮತ್ತು ವರ ಸಂಕೋಚದಿಂದ ಕುಳಿತುಕೊಳ್ಳುವ ದಿನಗಳು ದೂರವಾಗಿವೆ. ಈಗೇನಿದ್ರೂ ವಧು ವರ ವೇದಿಕೆ ಮೇಲೆ ಗೆಳೆಯರ ಜೊತೆ ಡ್ಯಾನ್ಸ್ ಮಾಡೋದು ಟ್ರೆಂಡ್.


ವಧು ವರರ ಡ್ಯಾನ್ಸ್ ವಿಡಿಯೋ ವೈರಲ್


ವಧು-ವರರು ಹೊಸ ಜೀವನಕ್ಕೆ ಕಾಲಿಡುವ ಕ್ಷಣಗಳನ್ನು ಮೆಲುಕು ಹಾಕಲು ಬಯಸುತ್ತಾರೆ. ಮದುವೆಯಲ್ಲಿ ವಧು-ವರರು ತಮ್ಮ ಸಂಬಂಧಿಕರೊಂದಿಗೆ ಸಂಗೀತದ ಹೆಸರಿನಲ್ಲಿ ನೃತ್ಯ ಮಾಡುತ್ತಾರೆ. ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.


ಇದನ್ನೂ ಓದಿ:  Viral News: ವೇದಿಕೆ ಮೇಲೆಯೇ ವಧು-ವರ ಡಿಶುಂ ಡಿಶುಂ; ಈಗಲೇ ಹಿಂಗಾದ್ರೆ ಮುಂದೇಗೆ?


ವಧುವಿನ ಮೇಲೆ ನೋಟು ಎಸೆದ ವರ


ಇತ್ತೀಚಿನ ವೈರಲ್ ವೀಡಿಯೊದಲ್ಲಿ, ವಧು ಭಾಂಗ್ರಾ ರಾಗಕ್ಕೆ ನೃತ್ಯ ಮಾಡಿದ್ದಾರೆ. ಗೋಲ್ಡನ್ ಡಿಸೈನರ್ ಲೆಹೆಂಗಾದಲ್ಲಿ ಮಧು ಮಗಳು ಸಖತ್ ಆಗಿ ಸ್ಟೆಪ್ ಹಾಕಿದ್ದಾಳೆ. ವಧುವಿನ ಜೊತೆ ವರ ಸಹ ಡ್ಯಾನ್ಸ್ ಮಾಡಿದ್ದಾನೆ. ನಂತರ ವರ ವಧುವಿನ ಮೇಲೆ ನೋಟುಗಳನ್ನು ಎಸೆದಿದ್ದಾನೆ. ಇಬ್ಬರ ನೃತ್ಯಕ್ಕೆ ನೆಟಿಜನ್‌ಗಳು ಫಿದಾ ಆಗಿದ್ದಾರೆ. ನವಜೋಡಿಯ ಜೊತೆ ಕುಟುಂಬಸ್ಥರು ಮತ್ತು ಆಪ್ತ ಗೆಳೆಯರು ಡ್ಯಾನ್ಸ್ ಮಾಡಿದ್ದಾರೆ.


ವಿಡಿಯೋಗೆ 25 ಲಕ್ಷಕ್ಕೂ ಅಧಿಕ ವ್ಯೂವ್


ವಧು ಮತ್ತು ವರನ ಡ್ಯಾನ್ಸ್ ಗೆ ನೆಟ್ಟಿಗರು ಫನ್ನಿ ಫನ್ನಿ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ಈ ವಿಡಿಯೂ 25 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ವಿಡಿಯೋಗೆ 1.70 ಲಕ್ಷಕ್ಕೂ ಅಧಿಕ ಲೈಕ್​ ಪಡೆದುಕೊಂಡಿದೆ.


ವರಮಾಲೆ ಹಿಡಿದು ವರನಿಗಾಗಿ 3 ಗಂಟೆ ವೇದಿಕೆ ಮೇಲೆ ನಿಂತ ವಧು


ಮಧ್ಯಪ್ರದೇಶದ ಛತ್ತರ್ ಪುರ(Chhatarpur, Madhya Pradesh)ದಲ್ಲಿ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು. ಒಟ್ಟು 11 ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟಿವೆ. ಆದ್ರೆ 11 ಜೋಡಿಗಳಲ್ಲಿ ಒರ್ವ ವಧು ಕೈಯಲ್ಲಿ ವರಮಾಲೆ ಹಿಡಿದು ಬರೋಬ್ಬರಿ ಮೂರು ಗಂಟೆ ಕಾದಿದ್ದಾಳೆ. ವರ ರಾಮ್ ಜೀ ಸೇನ್ ಮತ್ತು ವಧು ಪ್ರೀತಿ ಸೇನ್ ಮದುವೆಯನ್ನು ಕುಟುಂಬಸ್ಥರು ಸಾಮೂಹಿಕ ವಿವಾಹದಲ್ಲಿ ನೆರೆವೇರಿಸಲು ತೀರ್ಮಾನಿಸಿದ್ದರು.


ಇದನ್ನೂ ಓದಿ:  Viral Story: 5 ದಿನದಲ್ಲಿ 2 ಬಾರಿ ಗರ್ಭಿಣಿಯಾದ ಮಹಿಳೆ! ಆದರೆ ಹುಟ್ಟಿದ ಮಕ್ಕಳು ಅವಳಿಗಳಲ್ಲ!


ಮದುವೆ ಮತ್ತು ಪರೀಕ್ಷಾ ದಿನಾಂಕ ಒಂದೇ ಆಗಿತ್ತು.  ಆದ್ರೆ ವರ ರಾಮ್ ಜೀ ಪರೀಕ್ಷೆ ಬರೆಯಲು ನಿರ್ಧರಿಸಿದ್ದರು. ಇದಕ್ಕೆ ಎರಡೂ ಕುಟುಂಬಗಳ ಒಪ್ಪಿಗೆ ಸಹ ಪಡೆದುಕೊಂಡಿದ್ರು . ಪರೀಕ್ಷಾ ಕೇಂದ್ರದಿಂದ ನೇರವಾಗಿ ಕಲ್ಯಾಣ ಮಂಟಪಕ್ಕೆ ಬಂದ ವರ ರಾಜ್ ಜೀ ವಧುವಿಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ. 11 ಜೋಡಿಗಳಲ್ಲಿ ರಾಮ್ ಜೀ ಮತ್ತು ಪ್ರೀತಿ ಜೋಡಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿತ್ತು.

Published by:Mahmadrafik K
First published: