Viral Video: ಮದುವೆಯಾದ ಕೆಲವೇ ಕ್ಷಣಗಳಲ್ಲಿ ಸಿಗರೇಟ್​ ಸೇದಿದ ವಧು.. ಎಲ್ಲರಿಗೂ ಶಾಕ್​!

ವಧು ವರನ ಪಕ್ಕದಲ್ಲಿ ಕುಳಿತುಕೊಂಡು ಸಿಗರೇಟ್ ಸೇದಿ  ಉಂಗುರುದ ಆಕಾರದಲ್ಲಿ ಹೊಗೆ ಬಿಡುತ್ತಿರುವ ವಿಡಿಯೋ ವೈರಲ್​ ಆಗಿದೆ.

ಸೀಗರೇಟ್​​ ಸೇದಿದ ವಧು

ಸೀಗರೇಟ್​​ ಸೇದಿದ ವಧು

  • Share this:
    ಮದುವೆಗಳು ಎಂದರೆ ಸಂಪ್ರದಾಯ, ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಒಂದು ಆಚರಣೆಯಾಗಿದೆ. ಆದರೆ ಇತ್ತೀಚಿನ ಮದುವೆಗಳಲ್ಲಿ ನಡೆಯುತ್ತಿರುವಂತಹ ಘಟನೆಗಳು ಮದುವೆಯ ಬಗ್ಗೆ ಇದ್ದಂತಹ ಒಳ್ಳೆಯ ಅಭಿಪ್ರಾಯವನ್ನು ಹಾಳು ಮಾಡುತ್ತಿರುವುದು ತುಂಬಾ ವಿಷಾದದ ಸಂಗತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಮದುವೆಗಳಲ್ಲಿ ವಧು ವರರು ಅನೇಕ ರೀತಿಯ ತಕರಾರುಗಳನ್ನು ಮಾಡುತ್ತಿದ್ದು ಆ ವಿಡಿಯೋ ತುಣುಕುಗಳನ್ನು ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದು ವಿಡಿಯೋಗಳು ವೈರಲ್ ಆಗುತ್ತಿವೆ. ಮದುವೆ ಮನೆಗಳಲ್ಲಿ ಆಗುವಂತಹ ವಿಚಿತ್ರ ಘಟನೆಗಳಿಂದಾಗಿ ಮದುವೆಗೆ ಬಂದ ಅತಿಥಿಗಳು ಬೆಚ್ಚಿ ಬೀಳುತ್ತಿದ್ದಾರೆ ಮತ್ತು ಕೆಲವೊಮ್ಮೆ ಘಟನೆಯು ಹಾಸ್ಯಸ್ಪದವಾಗಿದ್ದರೆ ಬಂದಂತಹ ಅತಿಥಿಗಳು ನಕ್ಕು ನಕ್ಕು ಸುಸ್ತಾಗುತ್ತಿದ್ದಾರೆ. ಇಲ್ಲಿ ಸಹ ಅಂತಹದೇ ಒಂದು ಘಟನೆ ನಡೆದಿದ್ದು ಆ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ವಧು ಮಾಡಿದ ಅವಾಂತರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.


    ಇಲ್ಲಿ ಮದುವೆ ನಡೆಯುತ್ತಿರುವಾಗಲೇ ವಧು ವರನ ಪಕ್ಕದಲ್ಲಿ ಕುಳಿತುಕೊಂಡು ಸಿಗರೇಟ್ ಸೇದಿ  ಉಂಗುರುದ ಆಕಾರದಲ್ಲಿ ಹೊಗೆ ಬಿಡುತ್ತಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ವಧುವಿನ ವರ್ತನೆಗೆ ಬೇಸರಗೊಂಡಿದ್ದಾರೆ.






    ಮದುವೆಯ ಎಲ್ಲಾ ಆಚರಣೆಗಳು ಪೂರ್ಣಗೊಂಡ ನಂತರ, ವಧು ವರರು ಹತ್ತಿರದ ಸಂಬಂಧಿಕರೊಂದಿಗೆ ಒಂದೆಡೆ ಕುಳಿತುಕೊಂಡು ಊಟ ಮಾಡಬೇಕು, ವಧು ವರರು ತಮ್ಮ ಕೈಗಳಿಂದ ತುತ್ತನ್ನು ಪರಸ್ಪರ ತಿನ್ನಿಸಿಕೊಳ್ಳಬೇಕು ಅಷ್ಟರಲ್ಲಿಯೇ ವಧು ಸಿಗರೇಟ್ ಸೇದಲು ಶುರು ಮಾಡಿ ಉಂಗುರದ ಆಕಾರದಲ್ಲಿ ಬಾಯಿಂದ ಹೊಗೆಯನ್ನು ಬಿಡಲು ಪ್ರಾರಂಭಿಸಿದಳು. ಅಲ್ಲಿದ್ದವರು ಒಂದು ಕ್ಷಣ ಮೂಕವಿಸ್ಮಿತರಾದರು.




    ವಧು ತನ್ನ ಬಾಯಿಯಲ್ಲಿ ಏನೋ ತಿನ್ನುತ್ತಿದ್ದು ಮತ್ತು ಬಾಯಿಯಿಂದ ಹೊಗೆ ಹೊರಬರಲು ಪ್ರಾರಂಭಿಸುತ್ತದೆ. ವಾಸ್ತವವಾಗಿ, ಧೂಮಪಾನ ಮಾಡುತ್ತಿಲ್ಲ, ಆದರೆ ವಿಡಿಯೋವನ್ನು ಹಾಗೆ ಎಡಿಟ್ ಮಾಡಲಾಗಿದ್ದು, ನೂತನ ವಧು ವರರಿಗೆ ನೀಡಲಾದ ಆಹಾರ ತುಂಬಾ ಬಿಸಿಯಾಗಿರುತ್ತದೆ ಅಥವಾ ತುಂಬಾ ಖಾರವಾಗಿ ಇರುತ್ತದೆ. ಆದ್ದರಿಂದ ವಧು ಅದನ್ನು ತನ್ನ ಬಾಯಲ್ಲಿ ಇಟ್ಟುಕೊಂಡಾಗ ಈ ರೀತಿಯಾಗಿ ಹೊಗೆ ಬಿಟ್ಟಿದ್ದಾರೆ ಮತ್ತು ವರನು ಅವಳನ್ನು ಒಂದು ಕ್ಷಣ ಕೈಯಿಂದ ಸುಮ್ಮನಿರುವಂತೆ ಹೇಳುವುದನ್ನು ನಾವು ಈ ವಿಡಿಯೋದಲ್ಲಿ ಗಮನಿಸುತ್ತೇವೆ.


    ಈ ವಿಡಿಯೋವನ್ನು ನಿರಂಜನ್ ಎನ್ನುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಪೇಜ್ನಲ್ಲಿ ಹಂಚಿಕೊಂಡಿದ್ದು, ಸುಮಾರು 1300 ಜನರು ಈ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ ಮತ್ತು ಸಾಕಷ್ಟು ಜನರು ತಿಕ್ರಿಯೆ ನೀಡಿದ್ದಾರೆ. ಇದನ್ನು ನೋಡಿದ ಕೆಲವು ನೆಟ್ಟಿಗರು ಇದನ್ನು ಹಾಸ್ಯಸ್ಪದವಾಗಿ ನೋಡಿದ್ದಾರೆ ಮತ್ತು ಕೆಲವರು ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸಿ ವಧುವಿನ ವರ್ತನೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಮದುವೆ ಮನೆಗಳಲ್ಲಿ ನಡೆಯಬೇಕಾದ ಸಡಗರಕ್ಕಿಂತಲೂ ಹೆಚ್ಚಾಗಿ ಇಂತಹ ಘಟನೆಗಳು ನಡೆಯುತ್ತಿರುವುದು ನಿಜಕ್ಕೂ ಯೋಚನೆ ಮಾಡುವಂತಹ ವಿಚಾರವೇ ಆಗಿದೆ.
    First published: