ಮದುವೆ ಮಂಟಪದಲ್ಲಿ ವರನನ್ನೇ ಚುಡಾಯಿಸಿದ ವಧು : ನಗೆಗಡಲಲ್ಲಿ ತೇಲಿದ ಮದುವೆ ಮನೆ!

ವಧು ನಗುತ್ತಾ ತನ್ನ ಪತಿಯನ್ನು ಚುಡಾಯಿಸಿದ್ದಾಳೆ. ತನ್ನ  ಪತಿಯ ಪ್ರೀತಿ ಹೇಗಿದೆ ಎನ್ನುವುದನ್ನು ನಟ ಗೋವಿಂದ್ ಅವರ ಹಾಡಿನ ಮೂಲಕ ವ್ಯಕ್ತಪಡಿಸಿದ್ದಾಳೆ.

ನವಜೋಡಿ

ನವಜೋಡಿ

 • Share this:
  ಇಂದಿನ ಮದುವೆ ಮನೆಗಳು ಬದಲಾಗುತ್ತಿವೆ. ವಧು ಮತ್ತು ವರ ಇಬ್ಬರೂ ಇಂದು ವೇದಿಕೆಗಳಲ್ಲಿ ಯಾವುದೇ ಅಳುಕು, ಮುಜುಗರವಿಲ್ಲದೇ ಸಂಭ್ರಮದ ಕ್ಷಣಗಳನ್ನು ಖುಷಿಯಿಂದ ಅನುಭವಿಸುವುದನ್ನು ಕಾಣಬಹುದಾಗಿದೆ. ಅದು ಡ್ಯಾನ್ಸ್ ಇರಬಹುದು, ಇಲ್ಲವೇ ಸ್ನೇಹಿತರೊಟ್ಟಿಗೆ ಡಿಫರೆಂಟ್ ಭಂಗಿಗಳಲ್ಲಿ ಸೆಲ್ಫಿಗೆ ಪೋಸ್ ಕೊಡುವುದಿರಬಹುದು . ರೀಲ್ ವಿಡಿಯೋ ಮಾಡೋದಿರಬಹುದು. ಒಟ್ನಲ್ಲಿ  ನವಜೋಡಿಗಳ ಖದರ್ ಈಗ ಬೇರೆಯದ್ದೇ!

  ಇಲ್ಲಿ ವಧು ಸ್ವಲ್ಪ ಹೆಚ್ಚಾಗಿಯೇ ಎಲ್ಲರ ಗಮನ ಸೆಳೆಯುತ್ತಾಳೆ. ಹಿಂದೆಲ್ಲಾ ವಧು ಅಂದರೆ ತಲೆ ಮೇಲೆತ್ತದೆ, ವಾರೆಗಣ್ಣಿನಲ್ಲೇ ನೋಡುತ್ತಾ ಮದುವೆ ಮನೆಯಲ್ಲಿ ಸದ್ದಿಲ್ಲದೇ ಕೂರುತಿದ್ದ ಚಿತ್ರಣ ಕಂಡು ಬರುತ್ತದೆ. ಆದರೆ ಈಗಿನ ಹೆಣ್ಣುಮಕ್ಕಳು ಸಿಕ್ಕಾಪಟ್ಟೆ ಡಿಫರೆಂಟ್. ಆಕೆ ಎಲ್ಲವನ್ನೂ, ಎಲ್ಲರನ್ನೂ ಗಮನಿಸುತ್ತಾಳೆ, ತನ್ನ ಭಾವಿ ಪತಿಯನ್ನೇ ಚುಡಾಯಿಸುವುದು ಕೂಡ ಈಗ ಕ್ಯಾಮರಾಗಳಲ್ಲಿ ಸೆರೆಯಾಗುತ್ತಿದೆ.

  ಈಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರ ಮನ ಸೆಳೆಯುತ್ತಿದೆ. ಈ ವಿಡಿಯೋದಲ್ಲಿ ವರ ಮತ್ತು ವಧು ತಮ್ಮ ವಿವಾಹದ ಉಡುಗೆಯಲ್ಲಿ ಸಖತ್ ಆಕರ್ಷಕರಾಗಿ ಕಾಣುತ್ತಿದ್ದಾರೆ. ವರ ಮೌನವಾಗಿ, ತಾಳ್ಮೆಯಿಂದ ಕುಳಿತಿದ್ದಾನೆ. ಆದರೆ ವಧು ಕೊಂಚ ಡಿಫರೆಂಟ್! ಆಕೆ ತನ್ನ ಮದುವೆಯನ್ನು ಅದೆಷ್ಟು ಸೊಗಸಾಗಿ ಎಂಜಾಯ್ ಮಾಡಿದ್ದಾಳೆ ಅನ್ನೋದು ಗೊತ್ತಾಗುತ್ತದೆ.

  ಇದನ್ನೂ ಓದಿ: Viral Vedio: ಮದುವೆ ಆರತಕ್ಷತೆಯ ವೇದಿಕೆ ಮೇಲೆಯೇ ಹೆಂಡತಿಗೆ ಅವಮಾನ ಮಾಡಿದ ಗಂಡ!

  ಬಹಳ ಸಂತಸದಿಂದ ನಗುತ್ತಾ ತನ್ನ ಪತಿಯನ್ನು ಚುಡಾಯಿಸಿದ್ದಾಳೆ. ತನ್ನ  ಪತಿಯ ಪ್ರೀತಿ ಹೇಗಿದೆ ಎನ್ನುವುದನ್ನು ನಟ ಗೋವಿಂದ್ ಅವರ ಹಾಡಿನ ಮೂಲಕ ವ್ಯಕ್ತಪಡಿಸಿದ್ದಾಳೆ. ಹದ್ ಕರ್​ ದಿ ಆಪ್ನೆ ಎನ್ನುವ ಹಾಡನ್ನು ಜೋಷ್​ನಿಂದ ಹಾಡುತ್ತಿದ್ದಾಳೆ. ಮಧ್ಯೆ ಮಧ್ಯೆ ವರನ ಭುಜಕ್ಕೆ ಭುಜ ತಾಕಿಸಿ ಕಿಚಾಯಿಸುವ ದೃಶ್ಯವಂತು ನೋಡುಗರನ್ನು ನಗೆಗಡಲಲ್ಲಿ ತೇಲಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

  ಮದುವೆ ಸಮಾರಂಭದಲ್ಲಿ ವಧು ಬಹಳ ಉತ್ಸುಕಳಾಗಿ ಸಮಯ ಕಳೆದಿರುವುದು ವಿಡಿಯೋ ಸೆರೆಹಿಡಿದಿದೆ. ವಧು ಹಾಡನ್ನು ಹಾಡಲು ಪ್ರಾರಂಭಿಸಿದಾಗ, ಆಕೆ ಪಕ್ಕದಲ್ಲಿ ಬಹಳ ಸಂಕೋಚದ ಮುದ್ದೆಯಂತೆ ಕಂಡು ಬರುವ ವರನು ಇನ್ನಷ್ಟು ಮುಜುಗರಕ್ಕೆ ಒಳಗಾಗುವುದು ನೋಡುಗರಿಗೆ ನಗು ಮೂಡಿಸುತ್ತದೆ. ಅಬ್ಬಬ್ಬಾ! ಏನ್ ಕಾಡಿಸ್ತಾಳೆ ಹುಡುಗಿ ಅನ್ನೋಕು ಆಗೋದಿಲ್ಲ. ಯಾಕಂದ್ರೆ ಕ್ಯಾಮರಾ ಆನ್ ಆಗಿದೆ ಜೊತೆಗೆ ಮದುವೆ ಮನೆಯಲ್ಲಿ ಸೀನ್ ಆಗೋದು ಆತನಿಗೆ ಬೇಕಿಲ್ಲ. ಇನ್ನೂ ಖುಷಿ ಅಂದ್ರೆ ವರ ಒಳಗೊಳಗೆ ಈ ಕ್ಷಣವನ್ನು ಖುಷಿಯಿಂದ ಸ್ವೀಕರಿಸಬಹುದು ಅನ್ನೋದು ಇನ್ನೊಂದೆಡೆ ಅನಿಸುತ್ತದೆ.


  ಸದ್ಯ ಈ ವಧು ವರನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​​ ಆಗಿದೆ. ನಿಧಿ ಚೌಬೆ ಎನ್ನುವವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. 20,000 ಕ್ಕೂ ಹೆಚ್ಚು ಬಾರಿ ಈ ವಿಡಿಯೋ ವೀಕ್ಷಣೆ ಮಾಡಲಾಗಿದ್ದು, ಕೆಲವರು ವಧುವಿನ ಮುಖಭಾವವನ್ನು ಬಹಳವಾಗಿ ಮೆಚ್ಚಿಕೊಂಡಿದ್ದಾರೆ. ಎಕ್ಸ್​​ಪ್ರೆಷನ್ ಕ್ವೀನ್ ಎಂದಿದ್ದಾರೆ.
  ಇನ್ನೂ ಮೊನ್ನೆಯಷ್ಟೇ ಮತ್ತೊಬ್ಬ ವಧುವಿನ ವಿಡಿಯೋ ವೈರಲ್ ಆಗಿತ್ತು. ವರನ ಸ್ನೇಹಿತರು ಕೊಟ್ಟ ಕಾಮಿಡಿ ಉಡುಗೊರೆಯನ್ನು ಬಿಸಾಡಿ ತನ್ನ ಸಿಟ್ಟು ಪ್ರದರ್ಶನ ಮಾಡಿದ್ದರು. ಇಂದು ಈ ವಧು ವರನನ್ನೇ ಕಾಡಿಸಿದ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದೇನೇ ಇರಲಿ, ವಧು ಒಂದು ರೀತಿ ಮುದ್ದು ಮಗುವಿನಂತೆ, ಆಕೆ ನಕ್ಕರು, ಅತ್ತರೂ, ಸಿಡುಕಿದ್ರೂ, ಕಿಚಾಯಿಸಿದ್ರೂ ಮದುವೆ ದಿನ ಅವಳೇ ಸೆಂಟ್ರಾಫ್​ ಅಟ್ರ್ಯಾಕ್ಷನ್​​​! ಏನಂತೀರಾ
  Published by:Kavya V
  First published: