• Home
  • »
  • News
  • »
  • trend
  • »
  • Viral Story: ಈ ಕಾಲೇಜಿನಲ್ಲಿ ಓದಿದ ಹುಡ್ಗನನ್ನೇ ಈಕೆ ಮದ್ವೆಯಾಗೋದಂತೆ! ಬೇಡಿಕೆ ಪಟ್ಟಿ ದೊಡ್ಡದಿದೆ ಓದಿ

Viral Story: ಈ ಕಾಲೇಜಿನಲ್ಲಿ ಓದಿದ ಹುಡ್ಗನನ್ನೇ ಈಕೆ ಮದ್ವೆಯಾಗೋದಂತೆ! ಬೇಡಿಕೆ ಪಟ್ಟಿ ದೊಡ್ಡದಿದೆ ಓದಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇಲ್ಲೊಬ್ಬ ಹುಡುಗಿ ತನ್ನ ಭಾವಿವರನಿಂದ ಏನೆಲ್ಲಾ ನಿರೀಕ್ಷಿಸುತ್ತಿದ್ದಾಳೆ ಅಂತ ನೋಡಿ. ಶಾದಿ ಡಾಟ್ ಕಾಂನಲ್ಲಿ ಹುಡುಗಿಯೊಬ್ಬಳು ನೀಡಿದ ನಿರೀಕ್ಷೆಗಳ ಪಟ್ಟಿಯನ್ನು ಸ್ಕ್ರೀನ್‌ಶಾಟ್ ಅನ್ನು ರೆಡ್ಡಿಟ್‌ನಲ್ಲಿ ಬಳಕೆದಾರರು ಹಂಚಿಕೊಂಡಿದ್ದಾರೆ, ಇದರಲ್ಲಿ ವರ ಹೇಗೆಲ್ಲಾ ಇರಬೇಕು ಅಂತ ಹೇಳಿದ್ದಾಳೆ ಓದಿ ನೋಡಿ...

ಮುಂದೆ ಓದಿ ...
  • Share this:

ಮೊದಲೆಲ್ಲಾ ಮನೆಯಲ್ಲಿರುವ ಮಕ್ಕಳು (Children) ಬೆಳೆದು ವಿದ್ಯಾಭ್ಯಾಸ ಮುಗಿಸಿದರೆ ಸಾಕು ಅವರ ಮದುವೆ ಮಾಡಿಸಲು ಪೋಷಕರು ಓಡಾಡುತ್ತಿದ್ದರು. ಅದಕ್ಕಾಗಿ ತಂದೆ ಮತ್ತು ತಾಯಿ ತಮ್ಮ ಮಕ್ಕಳ ಫೋಟೋ ಮತ್ತು ಅವರ ಬಗ್ಗೆ ಮಾಹಿತಿಯನ್ನು ಹತ್ತಿರದ ಸಂಬಂಧಿಗಳಿಗೆ (Relatives) ಅಥವಾ ಸ್ನೇಹಿತರಿಗೆ ‘ಯಾರಾದರೂ ಒಳ್ಳೆಯ ಹುಡುಗ ಅಥವಾ ಹುಡುಗಿ ಇದ್ದರೆ ದಯವಿಟ್ಟು ಹೇಳಿ, ಜಾತಕ ನೋಡೋಣ’ ಅಂತ ಹೇಳುತ್ತಿದ್ದರು. ಹಾಗೆಯೇ ಹುಡುಗ ಮತ್ತು ಹುಡುಗಿಯ (Girl) ಜಾತಕ ಸೇರಿದರೆ ಸಾಕು, ಮದುವೆಯ (Marriage) ಮಾತುಕತೆಗಳು ಶುರು ಮಾಡಿಕೊಳ್ಳುತ್ತಿದ್ದರು. ಆಗಿನ ಸಮಯದಲ್ಲಿ ಹುಡುಗ ಮತ್ತು ಹುಡುಗಿ ಸಹ ತಮ್ಮ ಸಂಗಾತಿಯ ಆಯ್ಕೆಯಲ್ಲಿ ಅಷ್ಟೊಂದು ನಿರ್ದಿಷ್ಟವಾಗಿರಲಿಲ್ಲ. ಎಂದರೆ ಅಪ್ಪ ಅಮ್ಮ ತೋರಿಸಿದ ಹುಡುಗ (Boy) ಅಥವಾ ಹುಡುಗಿಯನ್ನು ಮದುವೆಯಾಗಲು ಒಪ್ಪಿಕೊಳ್ಳುತ್ತಿದ್ದರು.


ಆದರೆ ಈಗ ಸಮಯ ಬದಲಾಗಿದೆ, ಸಮಯಕ್ಕೆ ತಕ್ಕಂತೆ ಜನರ ರೂಢಿಗಳು ಮತ್ತು ಅಭಿರುಚಿಗಳು ಸಹ ಬದಲಾಗಿವೆ ಅಂತ ಹೇಳಬಹುದು. ಈಗೆಲ್ಲಾ ಮನೆಯವರು ನೋಡುವುದಕ್ಕಿಂತಲೂ ಮುಂಚಿತವಾಗಿ ಹುಡುಗ ಮತ್ತು ಹುಡುಗಿ ನೋಡಿ ಮಾಡಿಕೊಂಡ ನಂತರ ಪರಸ್ಪರರ ಅಭಿರುಚಿಗಳು ಹೊಂದಾಣಿಕೆಯಾದರೆ ಮನೆಯವರಿಗೆ ಮುಂದಿನ ಮದುವೆಯ ಮಾತುಕತೆಯನ್ನಾಡಲು ಹೇಳುತ್ತಾರೆ.


ಮದುವೆಯಾಗುವ ಸಂಗಾತಿ ಹೀಗೆ ಇರಬೇಕು ಅಂತ ನೀವು ಮ್ಯಾಟ್ರಿಮೋನಿಯಲ್ಲಿ ತಿಳಿಸಬಹುದು..
ಇದರ ಮಧ್ಯೆ ಈಗ ಅನೇಕ ಈ ಮದುವೆಗೆ ಸರಿಯಾದ ಸಂಗಾತಿಗಳನ್ನು ಹುಡುಕಿ ಕೊಡುತ್ತೇವೆ ಅಂತ ಮ್ಯಾಟ್ರಿಮೋನಿ ಸೈಟ್ ಗಳು ಸಹ ಹುಟ್ಟಿಕೊಂಡಿವೆ. ಅಲ್ಲಿ ಮದುವೆಯಾಗಲು ಇಚ್ಚಿಸುವವರು ತಮ್ಮ ವಿವರವನ್ನು ನೀಡಿ ತಮಗೆ ಎಂತಹ ಹುಡುಗ ಅಥವಾ ಹುಡುಗಿ ಬೇಕು ಅಂತ ಸಹ ಅಲ್ಲಿ ನೀವು ಉಲ್ಲೇಖಿಸಬಹುದು.


ಇದನ್ನೂ ಓದಿ:  Love Story: ಅಬ್ಬಬ್ಬಾ ಇದೆಂತಾ ಲವ್ ಸ್ಟೋರಿ? ಪತಿಯ ಗೆಳತಿಯ ಗಂಡನ ಪ್ರೀತಿಯಲ್ಲಿ ಬಿದ್ದ ಮಹಿಳೆ


ಇದರರ್ಥ ನಿಮ್ಮ ಬಾಳ ಸಂಗಾತಿಯಾಗುವವರು ಹೇಗಿರಬೇಕು ಅಂತ ನಿಮಗೆ ಆಸೆ ಇರುತ್ತದೆಯೋ, ಆ ಎಲ್ಲಾ ಅಗತ್ಯತೆಗಳ ಬಗ್ಗೆ ವಿವರವಾಗಿ ಅಲ್ಲಿ ತಿಳಿಸಬೇಕು. ಹೀಗೆ ಅನೇಕ ಜನರಿಗೆ ತಮಗೆ ಬೇಕಾದಂತಹ ಹುಡುಗ ಅಥವಾ ಹುಡುಗಿಯನ್ನು ಹುಡುಕಲು ಈ ಮ್ಯಾಟ್ರಿಮೋನಿ ಸೈಟ್ ಗಳು ಸಹಾಯ ಮಾಡುತ್ತಿವೆ. ಇದರಲ್ಲಿ ಜನರು ಕೆಲವು ವಿಲಕ್ಷಣವಾದ ನಿರೀಕ್ಷೆಗಳು ಮತ್ತು ನಿರ್ದಿಷ್ಟ ಬೇಡಿಕೆಗಳನ್ನು ಸಹ ಹೊಂದಿರುತ್ತಾರೆ ಅಂತ ಹೇಳಬಹುದು. ಕೆಲವರು 'ಮಕ್ಕಳನ್ನು ಬೆಳೆಸುವ ತಜ್ಞರನ್ನು' ಬಯಸಿದರೆ, ಇತರರು 'ಸಾಮಾಜಿಕ ಮಾಧ್ಯಮಗಳಿಗೆ ವ್ಯಸನಿಗಳಾಗಿರಬಾರದು' ಎಂದು ಬಯಸುತ್ತಾರೆ.


ವಧು ತನ್ನನ್ನು ಮದುವೆಯಾಗುವ ವರ ಹೇಗಿರಬೇಕು ಅಂತ ಹೇಳಿದ್ದಾಳೆ ನೋಡಿ..
ಈ ಬೇಡಿಕೆಗಳು ನಿಮಗೆ ವಿಲಕ್ಷಣ ಅಂತ ಅನ್ನಿಸಿದರೆ, ಇಲ್ಲೊಬ್ಬ ಹುಡುಗಿ ತನ್ನ ಭಾವೀ ವರನಿಂದ ಏನೆಲ್ಲಾ ನಿರೀಕ್ಷಿಸುತ್ತಿದ್ದಾಳೆ ಅಂತ ನೋಡಿ. ಶಾದಿ ಡಾಟ್ ಕಾಂ ನಲ್ಲಿ ಹುಡುಗಿಯೊಬ್ಬಳು ನೀಡಿದ ನಿರೀಕ್ಷೆಗಳ ಪಟ್ಟಿಯನ್ನು ಸ್ಕ್ರೀನ್‌ಶಾಟ್ ಅನ್ನು ರೆಡ್ಡಿಟ್ ನಲ್ಲಿ ಬಳಕೆದಾರರು ಹಂಚಿಕೊಂಡಿದ್ದಾರೆ, ಇದರಲ್ಲಿ ವಧು ಹೇಗೆಲ್ಲಾ ಇರಬೇಕು ಅಂತ ಹೇಳಿದ್ದಾಳೆ ನೋಡಿ. ಇದನ್ನು ನೋಡಿದರೆ ನಿಮಗೆ ನಿಜಕ್ಕೂ ಶಾಕ್ ಆಗುತ್ತದೆ.
ಈ ಪಟ್ಟಿಯಲ್ಲಿ ವಧು ತನ್ನ ವರನು ಟೈರ್ 1 ನಗರಗಳಲ್ಲಿರುವ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡಿರಬೇಕು ಅಂತ ನಗರಗಳ ಹೆಸರುಗಳನ್ನು ಅಲ್ಲಿ ಉಲ್ಲೇಖಿಸಿದ್ದಾರೆ. ವರನ ಸಂಬಳ ವರ್ಷಕ್ಕೆ 30 ಲಕ್ಷಕ್ಕಿಂತಲೂ ಕಡಿಮೆ ಇರಬಾರದಂತೆ ಮತ್ತು ವರನಾದವನು ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿರಬೇಕಂತೆ. ವರನ ಕುಟುಂಬ ಚಿಕ್ಕ ಕುಟುಂಬವಾಗಿರಬೇಕಂತೆ ಅಂತ ಉಲ್ಲೇಖಿಸಿದ್ದಾರೆ ನೋಡಿ.


ಇದನ್ನೂ ಓದಿ:  Viral News: ಗಂಡನ ಜೀವ ಉಳಿಸೋಕೆ 70ರಲ್ಲೂ ತನ್ನ ಕಿಡ್ನಿ ದಾನ ಮಾಡಿದ ಹೆಂಡ್ತಿ! ಇಂಥ ಪತ್ನಿ ಎಷ್ಟು ಜನಕ್ಕೆ ಸಿಗ್ತಾರೆ ಹೇಳಿ


ವಿಷಯಗಳನ್ನು ಇನ್ನಷ್ಟು ಜಟಿಲಗೊಳಿಸಲು ಮತ್ತು ಅಂತಹ ವರ ಸಿಗುವುದೇ ಕಷ್ಟವಾಗುವ ರೀತಿಯಲ್ಲಿ ವಧು ಕಾಲೇಜುಗಳ ಹೆಸರುಗಳನ್ನು ಸಹ ಹೇಳಿದ್ದಾರೆ. ಅವರ ಕೈ ಹಿಡಿಯುವ ವರ ಅಲ್ಲಿ ಹೇಳಿರುವ ಕಾಲೇಜುಗಳಲ್ಲಿ ಒಂದರಲ್ಲಿ ಓದಿರಬೇಕು ಅಂತ ಹೇಳಿದ್ದಾಳೆ.

Published by:Ashwini Prabhu
First published: