Viral Video: ದಂಪತಿಗೆ ಕಿಸ್ ಮಾಡೋಕೆ ಹೇಳಿ ಎಂದ ವರನ ತಂದೆ: ಅರ್ಚಕ ಶಾಕ್

ಮದುವೆಯಲ್ಲಿ ಅರ್ಚಕರದ್ದು ಪ್ರಮುಖ ಪಾತ್ರ. ಅವರೇ ಎಲ್ಲರಿಗೂ ಏನು ಮಾಡಬೇಕು ಎಂಬುದರ ಬಗ್ಗೆ ನಿರ್ದೇಶನ ನೀಡುತ್ತಾರೆ. ಆದ್ರೆ ವರನ ತಂದೆಯೇ ಅರ್ಚಕರಿಗೆ ನಿರ್ದೇಶನ ನೀಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್ ವಿಡಿಯೋ

ವೈರಲ್ ವಿಡಿಯೋ

  • Share this:
ಭಾರತೀಯ (India) ಮದುವೆಗಳಂದ್ರೆ (Marriage) ವಿವಿಧ ಶಾಸ್ತ್ರಗಳನ್ನು ಒಳಗೊಂಡಿರುತ್ತವೆ. ಈ ಎಲ್ಲ ಶಾಸ್ತ್ರ, ಪೂಜೆಗಳು ಮುಗಿದ ಬಳಿಕವೇ ಮದುವೆ ಸಂಪನ್ನವಾಗುತ್ತದೆ. ಕೆಲವೊಮ್ಮೆ ಈ ಶಾಸ್ತ್ರಗಳನ್ನು ಪೂರೈಸುವ ವೇಳೆಗೆ ಜೋಡಿಗಳೇ (Couple) ಸುಸ್ತಾದಂತೆ ಕಾಣುತ್ತಾರೆ. ಹಾಗಾಗಿ ಕೆಲವರು ರಿಜಿಸ್ಟರ್ ಮ್ಯಾರೇಜ್ (Register Marriage) ಮೊರೆ ಹೋಗುತ್ತಾರೆ. ಸಂಪ್ರದಾಯಸ್ಥ ಕುಟುಂಬಗಳನ್ನು ಪ್ರತಿಯೊಂದು ಶಾಸ್ತ್ರವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಮೊದಲಿಗೆ ಕುಟುಂಬದ ಹಿರಿಯರು ಪ್ರತಿ ಶಾಸ್ತ್ರಗಳನ್ನು ಮಾಡಿಸುತ್ತಿದ್ದರು. ಈಗ ಕಾಲ ಬದಲಾಗಿದೆ. ಮದುವೆ ಮಾಡಿಸುವ ಏಜೆನ್ಸಿಗಳು (Wedding Planers) ಹುಟ್ಟಿಕೊಂಡಿವೆ. ಈ ಏಜೆನ್ಸಿಗಳೇ ಕುಟುಂಬಸ್ಥರ ಮದುವೆಯನ್ನು ಮುಂದೆ ನಿಂತು ಮಾಡುತ್ತಾರೆ. ಮದುವೆಯಲ್ಲಿ ಅರ್ಚಕರದ್ದು ಪ್ರಮುಖ ಪಾತ್ರ. ಅವರೇ ಎಲ್ಲರಿಗೂ ಏನು ಮಾಡಬೇಕು ಎಂಬುದರ ಬಗ್ಗೆ ನಿರ್ದೇಶನ ನೀಡುತ್ತಾರೆ. ಆದ್ರೆ ವರನ ತಂದೆಯೇ ಅರ್ಚಕರಿಗೆ ನಿರ್ದೇಶನ ನೀಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಭಾರತೀಯ ಸಂಪ್ರದಾಯದಂತೆ ಅದ್ಧೂರಿಯಾಗಿ ಮದುವೆ ನಡೆಯುತ್ತಿರೋದನ್ನು ವಿಡಿಯೋದಲ್ಲಿ ಕಾಣಬಹುದು. ಜೋಡಿ ವೇದಿಕೆ ಮೇಲೆ ಕುಳಿತಿದ್ರೆ ಮುಂಭಾಗದಲ್ಲಿರುವ ಅರ್ಚಕರು ಹಾರ ಬದಲಿಸಿಕೊಳ್ಳಿ, ಸಿಂಧೂರ ಹಚ್ಚಿ ಅಂತ ಹೇಳುತ್ತಿದ್ದರು. ಸಿಂಧೂರ ಇರಿಸಿದ ಬಳಿಕ ವರನ ತಂದೆ ಹೇಳಿದ ಮಾತು ಕೇಳಿ ಅರ್ಚಕರು ಮುಜುಗರಕ್ಕೆ ಒಳಗಾದರು.

ತುಟಿಗೆ ತುಟಿ ಸೇರಿಸಿದ ಜೋಡಿ

ಅರ್ಚಕರ ಬಳಿ ಬರುವ ವರನ ತಂದೆ, ಜೋಡಿಗೆ ಕಿಸ್ ಮಾಡುವಂತೆ ಹೇಳಿ ಅಂತ ಹೇಳುತ್ತಾರೆ. ಆಗ ಅರ್ಚಕರು ಅದು ಹೇಗೆ ಹೇಳೋದು ಅಂತ ನಗುತ್ತಾರೆ. ಆದ್ರೆ ಎಲ್ಲಿಯ ಜನರು ನೀವೇ ಹೇಳಿ ಎಂದು ಬಲವಂತ ಮಾಡುತ್ತಾರೆ. ಕೊನೆಗೆ ಅರ್ಚಕರು ಹೇಳಿದ ಬಳಿಕವೇ ದಂಪತಿ ಲಿಪ್ ಲಾಕ್ ಮಾಡಿದ್ದಾರೆ. ಜೋಡಿ ಕಿಸ್ ಮಾಡುತ್ತಲೇ ಅತಿಥಿಗಳೆಲ್ಲಾ ಜೋರಾಗಿ ಕೂಗಿ ಚಪ್ಪಾಳೆ ತಟ್ಟಿದ್ದಾರೆ.

ಇದನ್ನೂ ಓದಿ:  Mini Homes: ಬೆಂಕಿ ಪೊಟ್ಟಣದಷ್ಟು ಇರೋ ಪುಟಾಣಿ ಮನೆಯಲ್ಲಿವೆ ಎಲ್ಲ ಸೌಲಭ್ಯ: ಫೋಟೋಗಳಲ್ಲಿ ನೋಡಿ

ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ

Shutterdownphotography ಇನ್ ಸ್ಟಾಗ್ರಾಂ ಖಾತೆಯಲ್ಲಿ ಮದುವೆ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋ ಬಗ್ಗೆ ಪರ ವಿರೋಧ ಚರ್ಚೆಗಳು ಸಹ ನಡೆಯುತ್ತಿದೆ. ಈ ರೀತಿ ಹೇಳಿ ಅರ್ಚಕರನ್ನು ಮುಜಗರಕ್ಕೀಡು ಮಾಡೋದು ಖಂಡನೀಯ ಎಂದು ಕೆಲ ಸಂಪ್ರದಾಯವಾದಿಗಳು ಆಕ್ರೋಶ ಹೊರ ಹಾಕಿದ್ದಾರೆ. ಒಂದಿಷ್ಟು ಜನ ಫನ್ನಿ ಆಗಿದೆ ಅಂತಾನೂ ಕಮೆಂಟ್ ಮಾಡಿದ್ದಾರೆ.




ಆಕಾಶದಿಂದ ಇಳಿದು ಬಂದ ವರ

ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಥೀಮ್​ ವೆಡ್ಡಿಂಗ್ ಕಾನ್ಸೆಪ್ಟ್​ಗಳ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುವವರೇ ಹೆಚ್ಚು. ಕೆಲವರು ಬ್ಯಾಂಡ್ ಬಜಾಯಿಸುತ್ತಾ ಆಗಮಿಸಿದರೆ, ಇನ್ನು ಕೆಲ ನವ ವಧು-ವರರು ಕುಣಿದು ಕುಪ್ಪಳಿಸುತ್ತಾ ಮಂಟಪಕ್ಕೆ ಎಂಟ್ರಿ ಕೊಡುತ್ತಾರೆ. ಆದರೆ ಇವೆಲ್ಲವನ್ನು ಮೀರಿಸುವಂತೆ ಮಧುಮಗನೊಬ್ಬ ಸೂಪರ್ ಎಂಟ್ರಿ ಕೊಟ್ಟು ಸುದ್ದಿಯಾಗಿದ್ದಾರೆ. ಹೌದು, ಸ್ಕೈ ಡೈವಿಂಗ್ ಮೂಲಕ ವರ ತನ್ನ ಮದುವೆಗೆ ಎಂಟ್ರಿ ಕೊಟ್ಟ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ:  Viral Video: ವರ ಅಂದ್ರೆ ಹೀಗಿರಬೇಕು: ವೈರಲ್ ಆಗ್ತಿರೋ ಮುದ್ದಾದ ವಿಡಿಯೋ ನೀವೂ ನೋಡಿ

ಸಾಹಸ ಮಾಡಿ ಸುದ್ದಿಯಾದ ವರ

ಭಾರತೀಯ ಮೂಲದ ಅಮೆರಿಕ ನಿವಾಸಿ ಆಕಾಶ್ ಯಾದವ್ ಇಂತಹದೊಂದು ಸಾಹಸ ಮಾಡಿ ಸುದ್ದಿಯಾಗಿರುವವರು. ಮೆಕ್ಸಿಕೋದ ಲಾಸ್ ಕ್ಯಾಬೋಸ್‍ನಲ್ಲಿ ಗಗನ್‍ಪ್ರೀತ್ ಸಿಂಗ್ ಎಂಬವರೊಂದಿಗೆ ಮದುವೆ ಫಿಕ್ಸ್ ಮಾಡಲಾಗಿತ್ತು. ಅದರಂತೆ ಮಂಟಪದಲ್ಲಿ ಮಧುಮಗನಿಗಾಗಿ ಕಾದು ಕುಳಿತಿದ್ದವರಿಗೆ ಕಂಡಿದ್ದು ಆಕಾಶದಿಂದ ಇಳಿದು ಬರುತ್ತಿರುವ ವರ.

ವರನಿಗೆ ಚಪ್ಪಾಳೆ ಸ್ವಾಗತ

ಆಕಾಶ್ ಸ್ಕೈ ಡೈವಿಂಗ್ ಮಾಡುವ ಮೂಲಕ ಮದುವೆ ಮನೆಗೆ ಎಂಟ್ರಿ ಕೊಟ್ಟಿದ್ದರು. ಪ್ಯಾರಾಚೂಟ್ ಮೂಲಕ ಧರೆಗಿಳಿದ ಮಧುಮಗನ ನೋಡುತ್ತಿದ್ದಂತೆ ನೆರೆದಿದ್ದವರೆಲ್ಲರೂ ಚಪ್ಪಾಳೆಯೊಂದಿಗೆ ಸ್ವಾಗತಿಸಿದರು.
Published by:Mahmadrafik K
First published: