ಮೊದಲೆಲ್ಲಾ ಮದುವೆಗಳು (Marriage) ಎಂದರೆ ತುಂಬಾನೇ ಸಂಪ್ರದಾಯ ಬದ್ದವಾಗಿ ತುಂಬಾನೇ ಸಂಭ್ರಮ ಮತ್ತು ಸಡಗರದಿಂದ, ಯಾವುದೇ ಒಂದು ಜಗಳ, ವಾದ-ವಿವಾದಗಳು ಮತ್ತು ಎಡವಟ್ಟುಗಳು ನಡೆಯದಂತೆ ಜರುಗುತ್ತಿದ್ದವು. ಆದರೆ ಇತ್ತೀಚಿನ ಮದುವೆಗಳಲ್ಲಿ ಏನಾದರೊಂದು ಎಡವಟ್ಟುಗಳು ನಡೆಯುತ್ತಲೇ ಇರುತ್ತವೆ ಮತ್ತು ಅಷ್ಟೇ ಅಲ್ಲದೆ ಏನಾದರೊಂದು ನೂತನವಾದ ಐಡಿಯಾ (Idea) ಮದುವೆ ಮನೆಯಲ್ಲಿ ಎಲ್ಲರ ಗಮನ ಸೆಳೆದಿರುತ್ತದೆ ಅಂತ ಹೇಳಬಹುದು. ಇಂತಹ ವಿಡಿಯೋಗಳನ್ನು ನಾವೆಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ತುಂಬಾನೇ ನೋಡಿದ್ದೇವೆ ಅಂತ ಹೇಳಬಹುದು.
ಇತ್ತೀಚೆಗೆ ಮದುವೆ ವಿಡಿಯೋಗಳು ತುಂಬಾನೇ ವೈರಲ್ ಆಗುತ್ತಿವೆ
ವರ ಮದುವೆ ದಿನ ಮದ್ಯ ಕುಡಿದು ಬಂದ, ವಧು 10ನೇ ತರಗತಿಯಲ್ಲಿ ಕಡಿಮೆ ಅಂಕಗಳನ್ನು ತೆಗೆದುಕೊಂಡಿದ್ದಾಳೆ, ಮದುವೆಯಲ್ಲಿ ಅಡುಗೆ ಚೆನ್ನಾಗಿ ಮಾಡಿಸಿಲ್ಲ ಅಂತ ಅನೇಕ ಕಾರಣಗಳಿಗೆ ಸುಸೂತ್ರವಾಗಿ ನಡೆಯಬೇಕಿದ್ದ ಮದುವೆಗಳು ಅರ್ಧಕ್ಕೆ ರದ್ದಾಗಿರುವುದನ್ನು ನಾವೆಲ್ಲಾ ವೀಡಿಯೋಗಳಲ್ಲಿ ನೋಡಿದ್ದೇವೆ.
ಇನ್ನೂ ಕೆಲವು ಮದುವೆಗಳಲ್ಲಿ ವಧು ಬೈಕ್ ಮೇಲೆ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದು, ವರ ಪ್ರಾಣಿ ಹಿಂಸೆ ಮಾಡಬಾರದು ಅಂತ ಕುದುರೆಯನ್ನು ಬಿಟ್ಟು ನಡೆದುಕೊಂಡು ಮದುವೆ ಮಂಟಪಕ್ಕೆ ಬಂದದ್ದು, ವಧು-ವರರಿಬ್ಬರು ಮದುವೆ ಮಂಟಪಕ್ಕೆ ಏರ್ ಬಲೂನ್ ಜೋಕಾಲಿಯಲ್ಲಿ ಕುಳಿತು ಗಾಳಿಯಲ್ಲಿ ಹಾರಾಡುತ್ತಾ ಎಂಟ್ರಿ ಕೊಟ್ಟಿದ್ದು. ಹೀಗೆ ಒಂದೇ, ಎರಡೇ.. ಇವು ಮದುವೆಗೆ ಬಂದ ಅತಿಥಿಗಳನ್ನು ತುಂಬಾನೇ ಮನರಂಜಿಸಿವೆ.
ಇಲ್ನೋಡಿ, ಆಚರಣೆಯಲ್ಲಿ ಮಗ್ನರಾಗಿದ್ದ ವಧುವನ್ನು ಎಳೆದುಕೊಂಡು ಹೋದ್ರು
ಮದುವೆ ಸಮಾರಂಭಗಳ ಬಗ್ಗೆ ಈಗೇಕೆ ಮಾತು ಅಂತೀರಾ? ಇಲ್ಲೊಂದು ಮದುವೆ ಮಂಟಪದಲ್ಲಿ ಮದುವೆ ನಡೆಯುವಾಗ ಸಂಬಂಧಿಕರು ಸೇರಿ ಹೇಗೆ ಆ ವಧುವನ್ನು ಸರಸರನೆ ಎಳೆದುಕೊಂಡು ಹೋಗಿದ್ದಾರೆ ನೋಡಿ.
ಇದನ್ನೂ ಓದಿ: ಇದು 20 ವರ್ಷಗಳ ಹಿಂದೆ ಬೇಯಿಸಿಟ್ಟ ಮೊಟ್ಟೆಗಳು, ಆದ್ರೂ ಹಾಳಾಗಿಲ್ಲ ಗೊತ್ತಾ?
ಮದುವೆಯಲ್ಲಿ ನಡೆಯುವ ಆಚರಣೆಗಳು ಜಾತಿ, ಸಮುದಾಯ, ಧರ್ಮ ಮತ್ತು ದೇಶದೊಂದಿಗೆ ಬದಲಾಗುತ್ತವೆ. ಪ್ರತಿಯೊಂದು ಸಾಂಪ್ರದಾಯಿಕ ಆಚರಣೆಯ ಹಿಂದೆಯೂ ಒಂದು ಕಾರಣ ಇರುತ್ತದೆ. ಆದರೆ ಕೆಲವೊಮ್ಮೆ ಈ ಆಚರಣೆಗಳನ್ನು ಮಾಡುವಾಗ ನಮಗೆ ಗೊತ್ತಿಲ್ಲದೆಯೇ ಎಡವಟ್ಟುಗಳಾಗುತ್ತವೆ ಅಂತ ಹೇಳಬಹುದು. ಇಲ್ಲಿಯೂ ಸಹ ಹಾಗೆ ನಡೆದಿದೆ ನೋಡಿ.
View this post on Instagram
ಇದನ್ನೂ ಓದಿ: ತನ್ನ ಮೊದಲ ಸಂಬಳದಲ್ಲಿ ಅಪ್ಪನಿಗೆ ಗಿಫ್ಟ್ ಕೊಟ್ಟ ಮಗಳು! ವಿಡಿಯೋ ಫುಲ್ ವೈರಲ್
ವಿಡಿಯೋ ಶುರುವಾದಾಗ ಅಲ್ಲಿ ಮದುವೆ ಮಂಟಪದಲ್ಲಿ ವರ ಮತ್ತು ವಧು ಇಬ್ಬರೂ ಒಂದು ಆಚರಣೆಯಲ್ಲಿ ಮಗ್ನರಾಗಿರುವುದನ್ನು ನಾವು ನೋಡಬಹುದು. ನೋಡು ನೋಡುತ್ತಿದ್ದಂತೆಯೇ ವರ ಮತ್ತು ವಧುವಿನ ಸಂಬಂಧಿಕರು 'ಹಗ್ಗ-ಜಗ್ಗಾಟ' ದ ರೀತಿಯ ಆಟವನ್ನು ಆಡುತ್ತಾ ಒಂದು ಕೆಂಪು ದುಪ್ಪಟ್ಟಾವನ್ನು ಎಳೆಯುವುದನ್ನು ಕಾಣಬಹುದು. ಎರಡೂ ಕಡೆಯ ಸಂಬಂಧಿಕರು ತಮ್ಮ ಶಕ್ತಿ ಪ್ರದರ್ಶನ ಮಾಡಲು ಹೋಗಿ, ಪಾಪ ಮಧ್ಯೆ ಅಲ್ಲಿಯೇ ಕುಳಿತಿರುವ ವಧುವನ್ನು ಹಿಗ್ಗಾ ಮುಗ್ಗಾ ಎಳೆದುಕೊಂಡು ಹೋಗಿದ್ದನ್ನು ನೋಡಬಹುದು.
ಈ ಆಟದಲ್ಲಿ ಆ ಕೆಂಪು ದುಪ್ಪಟ್ಟಾವನ್ನು ಎಳೆದಾಡಲು ಹೋಗಿ ಕೆಲವರು ವಧುವಿನ ಮೇಲೆ ಬೀಳುತ್ತಾರೆ. ತಕ್ಷಣವೇ ವಧುವನ್ನ ಹಾಗೆ ಮುಂದಕ್ಕೆ ಎಳೆದುಕೊಂಡು ಹೋಗುತ್ತಾರೆ. ಏತನ್ಮಧ್ಯೆ, ಇನ್ನೊಂದು ಬದಿಯಲ್ಲಿರುವ ಗುಂಪು ಆಟವನ್ನು ಗೆಲ್ಲುವ ಉತ್ಸಾಹದಲ್ಲಿ ಆ ಕೆಂಪು ದುಪ್ಪಟ್ಟಾವನ್ನು ಎಳೆಯುತ್ತಲೇ ಇರುತ್ತದೆ.
ಸಖತ್ ವೈರಲ್ ಆಗಿದೆ ಈ ವಿಡಿಯೋ
ಈ ಇಡೀ ಘಟನೆ ನೋಡುಗರಿಗೆ ಖಂಡಿತವಾಗಿಯೂ ಸಾಕಷ್ಟು ಮಜ ನೀಡಿರುತ್ತದೆ. ಈ ವಿಡಿಯೋ 5 ಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಪಡೆದಿದೆ. ನೆಟ್ಟಿಗರು ಈ ವಿಡಿಯೋ ನೋಡಿದ ನೆಟ್ಟಿಗರು ಕಾಮೆಂಟ್ ಮಾಡಿದ್ದೆ ಮಾಡಿದ್ದು. ಈ ವಿಡಿಯೋಗೆ ಸುಮಾರು 4 ಸಾವಿರಕ್ಕಿಂತಲೂ ಹೆಚ್ಚು ಕಾಮೆಂಟ್ ಗಳು ಬಂದಿವೆ ಅಂತ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ