Bride Viral Video: ನವ ವಧು ವಿವಾಹ ವೇಳೆ ವರನ ಸ್ನೇಹಿತರ ಮೇಲೆ ಕೋಪಗೊಂಡಿದ್ದೇಕೆ? ಈ ವೈರಲ್ ವಿಡಿಯೋ ನೋಡಿ!

ಈ ವಿಡಿಯೊವನ್ನು ನೋಡಿದ ನೆಟ್ಟಿಗರು ತುಂಬಾ ನಕ್ಕಿದ್ದಾರೆ. ಈ ವಿಡಿಯೋಗೆ ಒಂದು ಹಿಂದಿ ಹಾಡನ್ನು ಸಹ ಸೇರಿಸಿದ್ದು ನೋಡುಗರಿಗೆ ತುಂಬಾನೇ ನಗು ತರಿಸುವಂತೆ ಮಾಡುತ್ತದೆ.

ವರನ ಸ್ನೇಹಿತರ ಮೇಲೆ ಕೋಪಗೊಂಡು ನೋಡುತ್ತಿರುವ ವಧು.

ವರನ ಸ್ನೇಹಿತರ ಮೇಲೆ ಕೋಪಗೊಂಡು ನೋಡುತ್ತಿರುವ ವಧು.

  • Share this:
    ಏನೇ ಮಾಡಿದರೂ ಒಂದು ಮಿತಿಯಲ್ಲಿದ್ದರೆ ಎಲ್ಲವೂ ಚೆನ್ನಾಗಿರುತ್ತದೆ. ಆ ಮಿತಿ ದಾಟಿದರೆ ಎಂತಹವರಿಗೂ ಕೋಪ ಬರುವುದು ಸಹಜ. ಸಾಮಾನ್ಯವಾಗಿ ಈ ಮದುವೆಗಳಲ್ಲಿ ವರನ ಸ್ನೇಹಿತರು, ವಧುವಿನ ಸ್ನೇಹಿತರು ಮದುವೆ ನಡೆಯುವ ಮಂಟಪದಲ್ಲಿ ಯಾವುದೋ ಒಂದು ಮೂಲೆಯಲ್ಲಿ ಗುಂಪಾಗಿ ಕುಳಿತುಕೊಂಡು ನವ ವಧು -ವರನನ್ನು ನೋಡಿ ತಮಾಷೆ ಮಾಡುವುದನ್ನು ನಾವೆಲ್ಲಾ ನೋಡಿಯೇ ಇರುತ್ತೇವೆ. ಕೆಲವೊಂದು ಕಡೆ ಮದುವೆಗಳಲ್ಲಿ ಯುವಕರು ಗುಂಪಾಗಿ ಕುಳಿತುಕೊಂಡು ವಧು -ವರನ ಬಗ್ಗೆ ಟೀಕೆಗಳನ್ನು ಮಾಡುತ್ತಾ, ತಮಾಷೆ ಮಾಡುತ್ತಾ ಮದುವೆಗೆ ಬಂದಂತಹ ಎಲ್ಲಾ ಅತಿಥಿಗಳನ್ನು ಸಹ ನಗಿಸುವುದನ್ನು ಎಲ್ಲರೂ ಇಷ್ಟ ಪಡುತ್ತಾರೆ. ಆದರೆ ಆ ತಮಾಷೆಯು ಮಿತಿ ಮೀರಿದರೆ ಆ ನಗುವು ಇನ್ನೊಬ್ಬರಿಗೆ ನೋವು ಉಂಟು ಮಾಡಬಹುದು.

    ವಧುವಿನ ವಿಭಿನ್ನವಾದ ಮದುವೆ ಉಡುಪುಗಳನ್ನು ಅಥವಾ ವರನ ವಿಭಿನ್ನವಾದ ಮದುವೆ ಮಂಟಪದ ಪ್ರವೇಶಕ್ಕಾಗಿ ಆಗಾಗ್ಗೆ ವಿಡಿಯೋಗಳು ವೈರಲ್ ಆಗುತ್ತಿವೆ. ಕೆಲವೊಮ್ಮೆ ಮದುವೆಯಲ್ಲಿ ವಧು- ವರರು ಮಾಡಿದಂತಹ ನೃತ್ಯವು ಅವರನ್ನು ಜನಪ್ರಿಯಗೊಳಿಸುತ್ತದೆ. ಆದರೆ ಇಲ್ಲಿ ಸ್ವಲ್ಪ ವಿಭಿನ್ನ. ವಧು ಒಬ್ಬಳು ಮದುವೆ ಸಮಯದಲ್ಲಿ  ಕೋಪಗೊಂಡಿರುವ ವಿಡಿಯೋ ವೈರಲ್ ಆಗಿದೆ.

    ಇಲ್ಲಿ ಅಂತಹದೇ ಒಂದು ಘಟನೆಯಲ್ಲಿ ವರನ ಸ್ನೇಹಿತರು ಕುಳಿತು ಅವರಿಬ್ಬರನ್ನು ರೇಗಿಸುತ್ತಿರುವುದನ್ನು ನೋಡಿ ವಧು ತುಂಬಾ ಕೋಪಗೊಂಡಿದ್ದಾರೆ. ವೈರಲ್ ಆಗಿರುವ ವೀಡಿಯೊದಲ್ಲಿ, ನವ ವಧು ಮತ್ತು ವರ ಇಬ್ಬರು ತಮ್ಮ ಹಾರವನ್ನು ಬದಲಾಯಿಸಿಕೊಳ್ಳುವ ಸಮಾರಂಭಕ್ಕಾಗಿ ವೇದಿಕೆಯ ಮೇಲೆ ಸಜ್ಜಾಗಿ ನಿಂತಿರುವುದನ್ನು ಕಾಣಬಹುದು. ಅದೇ ಸಮಯದಲ್ಲಿ, ವಧುವು ವೇದಿಕೆಯ ಮೇಲೆ ತುಂಬಾ ಕೋಪಗೊಳ್ಳುವುದನ್ನು ಕಾಣಬಹುದು. ವೇದಿಕೆಯಿಂದ, ವಧು ಮದುವೆಗೆ ಬಂದಂತಹ ಅತಿಥಿಗಳ ಮಧ್ಯೆ ಕುಳಿತಿದ್ದ ವರನ ಸ್ನೇಹಿತರಿಗೆ ಕೋಪದಿಂದ ನೋಡುವುದನ್ನು ಮತ್ತು ವರನು ತನಗೆ ಏನು ಗೊತ್ತಿಲ್ಲ ಎಂಬಂತೆ ಸುಮ್ಮನೆ ಕೈಯಲ್ಲಿರುವ ಹಾರವನ್ನು ವಧುವಿಗೆ ಹಾಕಿ ಸುಮ್ಮನೆ ನಿಂತುಕೊಂಡಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.




    ಈ ವಿಡಿಯೊವನ್ನು ನೋಡಿದ ನೆಟ್ಟಿಗರು ತುಂಬಾ ನಕ್ಕಿದ್ದಾರೆ. ಈ ವಿಡಿಯೋಗೆ ಒಂದು ಹಿಂದಿ ಹಾಡನ್ನು ಸಹ ಸೇರಿಸಿದ್ದು ನೋಡುಗರಿಗೆ ತುಂಬಾನೇ ನಗು ತರಿಸುವಂತೆ ಮಾಡುತ್ತದೆ.

    ವರನ ಸ್ನೇಹಿತರು ದಂಪತಿಗಳನ್ನು ಕೀಟಲೆ ಮಾಡುತ್ತಿದ್ದಾಗ ವಧು ಕೋಪಗೊಳ್ಳುವುದನ್ನು ನಾವು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು. ಈ ವಿಡಿಯೋವನ್ನುನಿರಂಜನ್ ಮಹಾಪಾತ್ರ ಎಂಬುವವರು ಇನ್‌ಸ್ಟಾಗ್ರಾಮ್ ನಲ್ಲಿರುವ ತಮ್ಮ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ವಧುವಿನ ಕೋಪಕ್ಕೆ ಲಕ್ಷಾಂತರ ಜನರು ಸಾಕ್ಷಿಯಾಗಿದ್ದಾರೆ. ಹೇಗೆ ಅಂತೀರಾ? ಈ ವೈರಲ್ ವಿಡಿಯೋವನ್ನು 1 ಲಕ್ಷ 62 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 600ಕ್ಕೂ ಹೆಚ್ಚು ಜನರು ಈ ವೀಡಿಯೋವನ್ನು ಇಷ್ಟಪಟ್ಟಿದ್ದಾರೆ.

    ಇದನ್ನು ಓದಿ: Viral Video: ಪ್ಯಾರೀಸ್‌ನ ಬೀದಿಗಳಲ್ಲಿ ಪೇಟಿಂಗ್ ಮಾರಾಟ ಮಾಡುತ್ತಿದ್ದ ಆ ವ್ಯಕ್ತಿಗೆ ಈ ಮಹಿಳೆ ಮಾಡಿದ್ದೇನು ಗೊತ್ತಾ?

    ವಧುವಿನ ಕೋಪದ ಪ್ರತಿಕ್ರಿಯೆಯ ಹೊರತಾಗಿಯೂ, ವಿಡಿಯೋ ಸಾಕಷ್ಟು ತಮಾಷೆಯ ವಿಡಿಯೋ ಆಗಿ ಮಾರ್ಪಟ್ಟಿದೆ ಮತ್ತು ಅದನ್ನು ನೋಡಿದ ನಂತರ ಜನರು ತಮ್ಮ ನಗುವನ್ನು ಹಿಡಿದಿಟ್ಟುಕೊಳ್ಳಲು ಆಗುತ್ತಿಲ್ಲ. ಇಂತಹ ಘಟನೆಗಳು ಇತ್ತೀಚಿನ ಮದುವೆ ಸಮಾರಂಭದಲ್ಲಿ ತುಂಬಾನೇ ನಡೆಯುತ್ತಿದ್ದು, ಅಂತಹ ವೀಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ವೈರಲ್ ಆಗುತ್ತಿವೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
    Published by:HR Ramesh
    First published: