• Home
  • »
  • News
  • »
  • trend
  • »
  • Wedding Viral Story: ಬೈಕ್ ಕೊಡಿಸದ್ದಕ್ಕೆ ಮಂಟಪದಿಂದ ಓಡಿಹೋದ ವರ!

Wedding Viral Story: ಬೈಕ್ ಕೊಡಿಸದ್ದಕ್ಕೆ ಮಂಟಪದಿಂದ ಓಡಿಹೋದ ವರ!

ಹೊಸ ಘಟನೆಯಲ್ಲಿ ತಾನು ಕೇಳಿದ ಮೋಟರ್ ಬೈಕ್ ಕೊಡಲಿಲ್ಲ ಅಂತ ಮದುವೆ ಮಂಟಪದಿಂದ ವರ ಓಡಿ ಹೋದಂತಹ ಇನ್ನೊಂದು ಸುದ್ದಿ ಹೊರಬಂದಿದೆ.

ಹೊಸ ಘಟನೆಯಲ್ಲಿ ತಾನು ಕೇಳಿದ ಮೋಟರ್ ಬೈಕ್ ಕೊಡಲಿಲ್ಲ ಅಂತ ಮದುವೆ ಮಂಟಪದಿಂದ ವರ ಓಡಿ ಹೋದಂತಹ ಇನ್ನೊಂದು ಸುದ್ದಿ ಹೊರಬಂದಿದೆ.

ಹೊಸ ಘಟನೆಯಲ್ಲಿ ತಾನು ಕೇಳಿದ ಮೋಟರ್ ಬೈಕ್ ಕೊಡಲಿಲ್ಲ ಅಂತ ಮದುವೆ ಮಂಟಪದಿಂದ ವರ ಓಡಿ ಹೋದಂತಹ ಇನ್ನೊಂದು ಸುದ್ದಿ ಹೊರಬಂದಿದೆ.

  • Share this:

ಎಷ್ಟೋ ಬಾರಿ ಮದುವೆಗಳಲ್ಲಿ (Marriage) ಈ ವರದಕ್ಷಿಣೆ (Dowry) ಕೊಡುವುದು ತಪ್ಪು ಮತ್ತು ಈ ರೀತಿಯ ವರದಕ್ಷಿಣೆಯನ್ನು ವಧುವಿನ (Bride) ತಂದೆ ತಾಯಿಯಿಂದ ಡಿಮ್ಯಾಂಡ್ ಮಾಡಿ ತೆಗೆದುಕೊಳ್ಳುವುದು ಸಹ ತಪ್ಪು ಅಂತ ಗೊತ್ತಿದ್ದರೂ ಸಹ, ವರನ ಕಡೆಯವರು ತಮಗೆ ಬೇಕಾದಷ್ಟು ವರದಕ್ಷಿಣೆ ಕೊಡಲಿಲ್ಲ ಅಂತ ಮದುವೆ ಮಧ್ಯೆದಲ್ಲಿಯೇ ಮಂಟಪವನ್ನು ಬಿಟ್ಟು ಹೋಗಿರುವ ಅನೇಕ ಘಟನೆಗಳನ್ನು ನೋಡಿರುತ್ತೇವೆ. ಹಿಂದೊಮ್ಮೆ ಒಂದು ಘಟನೆಯಲ್ಲಿ ವಧು ತನ್ನನ್ನು ಮದುವೆಯಾಗುವ ವರನು (Groom) ಕಂಠಪೂರ್ತಿಯಾಗಿ ಕುಡಿದು ಬಂದ ಕಾರಣಕ್ಕಾಗಿ ಮದುವೆಯನ್ನು ಅರ್ಧಕ್ಕೆ ನಿಲ್ಲಿಸಿ ಹೋದ ಘಟನೆಯೊಂದು ನಡೆದಿತ್ತು.


ಈಗ ಇನ್ನೊಂದು ಹೊಸ ಘಟನೆಯಲ್ಲಿ ತಾನು ಕೇಳಿದ ಮೋಟರ್ ಬೈಕ್ ಕೊಡಲಿಲ್ಲ ಅಂತ ಮದುವೆ ಮಂಟಪದಿಂದ ವರ ಓಡಿ ಹೋದಂತಹ ಇನ್ನೊಂದು ಸುದ್ದಿ ಹೊರಬಂದಿದೆ.


ಬೈಕ್ ಕೊಡಿಸಲಿಲ್ಲ ಅಂತ ವರ ಮದುವೆ ಮಧ್ಯೆ ಎದ್ದು ಹೋಗಿದ್ದಾರೆ


ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಇತ್ತೀಚೆಗೆ ವರನೊಬ್ಬ ತನ್ನ ವರದಕ್ಷಿಣೆ ಬೇಡಿಕೆಯನ್ನು ವಧುವಿನ ಮನೆಯವರು ಪೂರೈಸದ ಕಾರಣ ಮದುವೆ ಸಮಾರಂಭದ ವೇಳೆ ಮದುವೆ ಮಂಟಪದಿಂದ ಎದ್ದು ಓಡಿ ಹೋಗಿರುವ ಆಘಾತಕಾರಿ ಘಟನೆ ನಡೆದಿದೆ.




ಇದನ್ನು ನೋಡಿಕೊಂಡು ಆ ವಧು ಸುಮ್ಮನೆ ಕೂರಲಿಲ್ಲ, ವಧು ಆ ವರನ ಬಳಿ ಹೋಗಿ ತನ್ನನ್ನು ಮದುವೆಯಾಗು ಅಂತ ಹೇಳಿ ಪಟ್ಟು ಹಿಡಿದಿದ್ದಾಳೆ. ಅವಳು ವರ ಮತ್ತು ಅವನ ಕುಟುಂಬ ಸದಸ್ಯರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರನ್ನು ಸಹ ದಾಖಲಿಸಿದ್ದಾಳೆ.


ತನ್ನನ್ನು ಮದುವೆಯಾಗಲೇಬೇಕು ಅಂತ ಹಠ ಹಿಡಿದು ಕುಳಿತ ವಧುವಿಗೆ ಮಣಿದ ವರ


ಹೀಗೆ ಪೊಲೀಸ್ ಕೇಸ್ ಮಾಡಿ ತನ್ನನ್ನೇ ಮದುವೆಯಾಗಬೇಕು ನೀನು ಅಂತ ಹಠ ಹಿಡಿದು ಕುಳಿತ ವಧುವಿನ ಹಠಕ್ಕೆ ಕೊನೆಗೂ ಫಲ ಸಿಕ್ಕಿದೆ ನೋಡಿ. ಮದುವೆ ಬೇಡ ಅಂತ ಹೋದ ವರನು ಎರಡು ದಿನಗಳ ನಂತರ ಮತ್ತೆ ಬಂದು ವರದಕ್ಷಿಣೆಗಾಗಿ ಅವಳನ್ನು ಬಿಟ್ಟುಹೋದ ಅದೇ ಮದುವೆ ಮಂಟಪದಲ್ಲಿ ಮದುವೆಯಾದನು. ಬಾರಾಬಂಕಿಯ ಜಹಾಂಗೀರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಕುಟಿ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ.


ಸ್ಥಳೀಯ ಪತ್ರಿಕೆಯಲ್ಲಿನ ವರದಿಯ ಪ್ರಕಾರ, ತಿಲಕ್ ಸಮಾರಂಭದ ನಂತರ ವರನು ವಧುವಿನ ಕುಟುಂಬದಿಂದ ವರದಕ್ಷಿಣೆಯಾಗಿ ಮೋಟರ್ ಬೈಕ್ ಗೆ ಬೇಡಿಕೆ ಇಟ್ಟಿದ್ದನು.


ಆದರೂ ಹುಡುಗಿಯ ಕುಟುಂಬವು ಅವನ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗಲಿಲ್ಲ. ನಂತರ ಅವನು ಮಂಟಪದಿಂದ ಓಡಿ ಹೋಗಿದ್ದನು. ವರನ ಕಡೆಯವರು ಡಿಜೆ ಮತ್ತು ಡ್ಯಾನ್ಸ್ ಗೆ ಸಂಬಂಧಿಸಿದಂತೆ ಸಹ ದಿಬ್ಬಣ ಮತ್ತು ವಧುವಿನ ಗ್ರಾಮಸ್ಥರ ನಡುವೆ ಜಗಳ ಸಹ ನಡೆದಿತ್ತು ಎಂದು ಹೇಳಲಾಗುತ್ತಿದೆ. ಅಯೋಧ್ಯಾ ಜಿಲ್ಲೆಯ ಮಾವಾಯಿ ಗ್ರಾಮದವರಾದ ವರ ಮದುವೆಯಾಗಲು ಬಂದಿದ್ದರು ಎಂದು ವರದಿಯಾಗಿದೆ.


ಒಂದು ಮೋಟರ್ ಬೈಕ್ ಕೊಡಿಸುವ ಡಿಮ್ಯಾಂಡ್ ಇಟ್ಟಿದ್ದರಂತೆ ವರ


ಇದಾದ ನಂತರ, ವರನು ಮದುವೆ ಮಂಟಪಕ್ಕೆ ಬಂದು ಇದ್ದಕ್ಕಿದ್ದಂತೆ ವರದಕ್ಷಿಣೆಯಾಗಿ ಒಂದು ಮೋಟರ್ ಬೈಕ್ ಕೊಡಿಸುವಂತೆ ಕೇಳಿಕೊಂಡನು. ವಧುವಿನ ಕುಟುಂಬವು ಬೈಕ್ ಖರೀದಿಸಿ ಕೊಡಲು ತಮಗೆ ಆಗುವುದಿಲ್ಲ ಅಂತ ಹೇಳಿದಾಗ, ವರ ಮದುವೆ ಮಾಡಿಕೊಳ್ಳದೆ ಮಂಟಪದಿಂದ ಓಡಿ ಹೋಗಿದ್ದ.


ಅದರ ನಂತರ, ವಧು ಮತ್ತು ಅವಳ ಕುಟುಂಬ ಸದಸ್ಯರು ಹುಡುಗನ ಕಡೆಯವರಿಗೆ ಮದುವೆ ಪೂರ್ಣಗೊಳಿಸಲು ಸಾಕಷ್ಟು ಬೇಡಿಕೊಂಡರು, ಆದರೆ ಅವರು ಅವರ ಮಾತನ್ನು ಕೇಳಲಿಲ್ಲ ಎಂದು ವರದಿಯಾಗಿದೆ.


ಇದನ್ನೂ ಓದಿ: Anand Mahindra: ಆನಂದ್‌ ಮಹೀಂದ್ರಾ ಅವರು ಶೇರ್​ ಮಾಡಿರುವ ವೈರಲ್​​ ಫೋಟೋ ಹೇಗಿದೆ ಗೊತ್ತಾ?


ಆದರೆ ಹುಡುಗಿ ಅದೇ ಯುವಕನನ್ನು ಮದುವೆಯಾಗಲು ಹಠ ಹಿಡಿದಳು. ತನ್ನ ಕುಟುಂಬದ ಗೌರವವನ್ನು ಉಳಿಸಲು ಅದೇ ವರನೊಂದಿಗೆ ತನ್ನ ಮದುವೆ ಮಾಡಿಸಿ ಅಂತ ವಧು ಎಸ್‌ಪಿ ಬಳಿ ಮನವಿ ಮಾಡಿಕೊಂಡಳು.


ನಂತರ ಹುಡುಗಿಯ ಹಠ ಫಲ ನೀಡಿತು ಮತ್ತು ಅವಳು ಅವನನ್ನು ಅದೇ ಮಂಟಪದಲ್ಲಿ ಮದುವೆಯಾದಳು.


ಏತನ್ಮಧ್ಯೆ, ವರ ಮತ್ತು ಅವನ ತಂದೆ ನಂತರ ತಮ್ಮ ತಪ್ಪನ್ನು ಒಪ್ಪಿಕೊಂಡರು ಮತ್ತು ವಧುವನ್ನು ತಮ್ಮ ಮನೆ ತುಂಬಿಸಿಕೊಳ್ಳಲು ಸಂತೋಷ ಪಡುತ್ತೇವೆ ಅಂತ ಹೇಳಿದರು.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು