ಸಾಮಾನ್ಯವಾಗಿ ಮದುವೆ (Marriage) ಸಮಾರಂಭ ಎಂದರೆ ಒಬ್ಬ ಒಳ್ಳೆಯ ಫೋಟೋಗ್ರಾಫರ್ ನನ್ನು (Photographer) ಮೊದಲೇ ಮಾತಾಡಿ ಮದುವೆ ಸಮಾರಂಭಕ್ಕೆ ಮೊದಲೇ ಬುಕ್ ಮಾಡಿರುವುದನ್ನು ನಾವೆಲ್ಲಾ ನೋಡುತ್ತೇವೆ. ಆದರೆ ಕೆಲವೊಮ್ಮೆ ಕೆಲ ಮದುವೆ ಸಮಾರಂಭಗಳಿಗೆ ಬುಕ್ ಮಾಡಿದ ಫೋಟೋಗ್ರಾಫರ್ ಗಳು ಯಾವುದೋ ಒಂದು ಅವರ ವೈಯುಕ್ತಿಕ ಕಾರಣದಿಂದಾಗಿ ಮದುವೆಗೆ ಬಂದು ಫೋಟೋಗಳನ್ನು ತೆಗೆಯಲು ಆಗುವುದಿಲ್ಲ. ಅಂತಹ ಗೊಂದಲದ ಸಂದರ್ಭಗಳಲ್ಲಿ ಮದುವೆ ಮನೆಯವರು ತಕ್ಷಣಕ್ಕೆ ಅಂತ ಇನ್ನೊಬ್ಬ ಫೋಟೋಗ್ರಾಫರ್ ನನ್ನು ತರಾತುರಿಯಲ್ಲಿ ಬುಕ್ ಮಾಡುತ್ತಾರೆ. ಆದರೆ ಇಂತಹ ಗೊಂದಲಗಳು ತೀರಾ ಕಡಿಮೆ ಅಂತಾನೆ ಹೇಳಬಹುದು ಇತ್ತೀಚಿನ ದಿನಗಳಲ್ಲಿ ಅಂತ ಹೇಳಬಹುದು. ಏಕೆಂದರೆ ಕೊಟ್ಟ ದಿನಾಂಕಕ್ಕೆ (Date) ಫೋಟೋಗ್ರಾಫರ್ ತಮಗೆ ಬರಲು ಆಗದೆ ಇದ್ದರೂ ಸಹ ಬದಲಿಗೆ ಇನ್ನೊಬ್ಬ ಫೋಟೋಗ್ರಾಫರ್ ಗೆ ಮದುವೆ ಸಮಾರಂಭಕ್ಕೆ ಕಳುಹಿಸಿಕೊಟ್ಟಿರುತ್ತಾರೆ.
ಕೊನೆಯ ಕ್ಷಣದಲ್ಲಿ ದುಬಾರಿ ಬೇಡಿಕೆ:
ಇಲ್ಲಿ ಒಂದು ಘಟನೆ ನಡೆದಿದ್ದು, ಅಲ್ಲಿ ಫೋಟೋಗ್ರಾಫರ್ ಕೊನೆಯ ಕ್ಷಣದಲ್ಲಿ ವಧುವಿನ ತಂದೆಗೆ ಹೆಚ್ಚಿನ ಸವಲತ್ತುಗಳಿಗೆ ಡಿಮ್ಯಾಂಡ್ ಮಾಡಿದ್ದು, ಕೊನೆಯ ಕ್ಷಣದಲ್ಲಿ ಮದುವೆ ಸಮಾರಂಭಕ್ಕೆ ಕೋಕ್ ನೀಡಿದ್ದಾರೆ. ಅಮೆರಿಕದ ನ್ಯೂಜೆರ್ಸಿಯ ಭಾರತೀಯ-ಅಮೆರಿಕನ್ ಸರ್ಜನ್ ತನ್ನ ಮಗಳ ಮದುವೆಗೆ ಮುಂಚಿತವಾಗಿ ಖ್ಯಾತ ಫೋಟೋಗ್ರಾಫರ್ ಒಬ್ಬರು ಬಿಟ್ಟು ಹೋಗಿದ್ದರಿಂದ ಅವರಿಗೆ 76,000 ಡಾಲರ್ ಮರುಪಾವತಿಗೆ ಒತ್ತಾಯಿಸಿದ್ದಾರೆ.
ಫೋಟೋಗ್ರಾಫರ್ ವಿರುದ್ದ ಕೇಸ್?
59 ವರ್ಷದ ಡಾ.ಅಮಿತ್ ಪಟೇಲ್ ಅವರು ತಾವು ಮೂದಲೇ ನೇಮಿಸಿಕೊಂಡಿದ್ದ ಕ್ಲೋನ್ ಗೆಸ್ಸೆಲ್ ಎಂಬ ಫೋಟೋಗ್ರಾಫರ್ ಅವರು ಕೊನೆಯ ಕ್ಷಣದಲ್ಲಿ ದುಬಾರಿ ಬೇಡಿಕೆಗಳನ್ನು ಸಲ್ಲಿಸಲು ಪ್ರಾರಂಭಿಸಿದರು ಎಂದು ಮೊಕದ್ದಮೆಯಲ್ಲಿ ಹೇಳಿದ್ದಾರೆ. 28 ವರ್ಷದ ಮಗಳಾದ ಅನಿಶಾ ಅವರು ಟರ್ಕಿಯಲ್ಲಿ ಅರ್ಜುನ್ ಮೆಹ್ತಾ ಅವರನ್ನು ಮದುವೆ ಆಗಲಿದ್ದರು. ಈ ವೇಳೆ ಮದುವೆಯ ಫೋಟೋಗಳನ್ನು ತೆಗೆಯಲು ಅವರು ಇನ್ನೊಬ್ಬ ವೃತ್ತಿಪರ ಫೋಟೋಗ್ರಾಫರ್ ನನ್ನು ಹುಡುಕಬೇಕಾಯಿತು.
ಇದನ್ನೂ ಓದಿ: Zomato: ನೀವು ಜೊಮ್ಯಾಟೋದಲ್ಲಿ ಫುಡ್ ಆರ್ಡರ್ ಮಾಡ್ತೀರಾ? ಇನ್ನು ಮುಂದೆ ಹುಷಾರ್!
ನಾಲ್ಕು ದಿನಗಳ ಈ ಮದುವೆ ಸಮಾರಂಭವನ್ನು ಬರೋಬ್ಬರಿ ಒಂದು ವರ್ಷಗಳ ಕಾಲ ಪ್ಲ್ಯಾನ್ ಮಾಡಲಾಗಿತ್ತು. ಮದುವೆಯಲ್ಲಿ ವಧುವು 13 ಕಸ್ಟಮ್ ಉಡುಗೆಗಳಲ್ಲಿ ಕಾಣಿಸಿಕೊಂಡರು, ಈ ಮದುವೆಯಲ್ಲಿ ಸುಮಾರು 250 ಅತಿಥಿಗಳು, ಉಪಸ್ಥಿತರಿದ್ದರು ಹಾಗು ವೋಗ್‌ನಲ್ಲಿನ ವೈಶಿಷ್ಟ್ಯವನ್ನು ಒಳಗೊಂಡಿತ್ತು ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ
ಗೆಸ್ಸೆಲ್ ಕೈಕೊಟ್ಟಿದ್ದರಿಂದ ಏನಾಯ್ತು ವಿವಾಹ?:
ನ್ಯೂಯಾರ್ಕ್ ಪೋಸ್ಟ್ ನೊಂದಿಗೆ ಮಾತನಾಡಿದ ಪಟೇಲ್ ಅವರು “ಇದು ನಮ್ಮ ಕುಟುಂಬದಲ್ಲಿಯೇ ಸುಮಾರು ದಿನಗಳ ನಂತರ ನಡೆದ ಮೊದಲ ವಿವಾಹವಾಗಿತ್ತು” ಎಂದು ಹೇಳಿದರು. ಆದರೆ ಗೆಸ್ಸೆಲ್ ಕಾರಣದಿಂದಾಗಿ ಮದುವೆಯ ಸಂಭ್ರಮವೇ ಹಾಳಾಯಿತು ಎಂದು ಫೋಟೋಗ್ರಾಫರ್‌ನನ್ನು ದೂಷಿಸಿದ್ದಾರೆ. ಮದುವೆಗೆ ಇನ್ನೇನು ಕ್ಷಣಗಣನೆ ಆರಂಭವಾಗುತ್ತಿರುವಾಗ ಆಯ್ಕೆ ಮಾಡಿದ ಫೋಟೋಗ್ರಾಫರ್ ಮದುವೆ ಸಮಾರಂಭಕ್ಕೆ ಬರುವುದಿಲ್ಲ ಎಂದು ಹೇಳಿದರೆ ಎಷ್ಟೇಲ್ಲಾ ಆತಂಕವಾಗುತ್ತದೆ ಹೇಳಿ ಎಂದು ಪಟೇಲ್ ಬೇಸರ ವ್ಯಕ್ತಪಡಿಸಿದರು.
ಕೊನೆಯ ಕ್ಷಣದಲ್ಲಿ ವಧುವಿನ ತಂದೆಗೆ ಏನಂತ ಬೇಡಿಕೆ ಇಟ್ಟಿದ್ದರು ಗೆಸ್ಸೆಲ್?
ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಗೆಸ್ಸೆಲ್ ಅವರ ಹೆಸರಿನ ಸ್ಟುಡಿಯೋವನ್ನು ಹೊಂದಿದ್ದು, ಮದುವೆಯ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಅವರೇ ಮುಖ್ಯ ಛಾಯಾಗ್ರಾಹಕ ಆಗಿರುತ್ತಾರೆ ಮತ್ತು ಅವರು ಮತ್ತು ಅವರ ತಂಡವು ಕಾರ್ಯಕ್ರಮಗಳು ನಡೆಯುವ ಸ್ಥಳಕ್ಕಿಂತ ವಿಭಿನ್ನ ಹೋಟೆಲ್ ನಲ್ಲಿ ಎಂದರೇ ಐಷಾರಾಮಿ ಹೋಟೆಲ್ ನಲ್ಲಿ ಉಳಿಯುತ್ತಾರೆ ಎಂದು ಲಿಖಿತವಾಗಿ ಒಪ್ಪಿಕೊಂಡರು.
ವಧುವಿನ ತಂದೆ ಟರ್ಕಿಗೆ ವಿಮಾನ ಹತ್ತಲು ಕಾಯುತ್ತಿದ್ದಾಗ ಗೆಸ್ಸೆಲ್ "ಯಾರು ಏನು ಮತ್ತು ಯಾವಾಗ ಶೂಟಿಂಗ್ ಮಾಡುತ್ತಿದ್ದಾರೆ ಎಂಬುದನ್ನು ತಾವು ನಿರ್ಧರಿಸುತ್ತಾರೆ" ಎಂದು ಪಟೇಲ್ ಅವರಿಗೆ ಇ-ಮೇಲ್ ಕಳುಹಿಸಿದ್ದಾರೆ ಮತ್ತು ಮದುವೆ ನಡೆಯಲಿರುವ ಅದೇ ಐಷಾರಾಮಿ ಹೋಟೆಲ್ ನಲ್ಲಿ ಅವರಿಗಾಗಿ ಕೋಣೆಗಳನ್ನು ಕಾಯ್ದಿರಿಸುವಂತೆ ಒತ್ತಾಯಿಸಿದರು ಎಂದು ಆರೋಪಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ