Bride On Boat: ವಿಪರೀತ ಮಳೆ, ಪ್ರವಾಹ! ದೋಣಿ ಹತ್ತಿ ವರನ ಮನೆಗೆ ಹೋದ ವಧುವಿನ ದಿಬ್ಬಣ!

Bride On Boat: ಆಂಧ್ರಪ್ರದೇಶದಲ್ಲಿ ತೀವ್ರ ಮಳೆಯಿಂದಾಗಿ ಬಹಳಷ್ಟು ಪ್ರದೇಶಗಳು ಜಲಾವೃತವಾಗಿವೆ. ನೆರೆ, ಪ್ರವಾಹ ಹೆಚ್ಚಾಗಿ ರಸ್ತೆಗಳು ಜಲಾವೃತವಾಗಿದ್ದು ವಧುವಿನ ದಿಬ್ಬಣವೊಂದು ದೋಣಿ ಏರಿ ವರನ ಮನೆಗೆ ಹೋಗುವ ದೃಶ್ಯ ವೈರಲ್ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅಮರಾವತಿ(ಜು.19): ಆಂಧ್ರ ಪ್ರದೇಶದಲ್ಲಿ (Andhra Pradesh) ತೀವ್ರ ಮಳೆಯಿಂದಾಗಿ (Rain) ಹಲವು ಪ್ರದೇಶದಲ್ಲಿ ಪ್ರವಾಹ ಸ್ಥಿತಿ ಕಂಡುಬಂದಿದೆ. ಮಹಾರಾಷ್ಟ್ರ, ಗುಜರಾತ್​ನಂತಹ ಉತ್ತರ ರಾಜ್ಯಗಳು ಮಳೆಗೆ ತತ್ತರಿಸಿದ್ದು ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರವೂ ವಿಪರೀತ ಮಳೆಯಿಂದ ನೆರೆ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯ ಈ ವಧುವಿನ ವಿವಾಹದ ಪ್ಲಾನ್ ಭಾರೀ ಮಳೆಯಿಂದಾಗಿ ಬಹುತೇಕ ಹಾಳಾಗಿದೆ. ರಸ್ತೆಗಳು ಜಲಾವೃತಗೊಂಡಿತ್ತು.  ವಧು ಮತ್ತು ಅವರ ಕುಟುಂಬವು (Family) ವರನ ಮನೆಗೆ ದೋಣಿಯನ್ನು (Boat) ಹತ್ತಿ ಬರಬೇಕಾಯಿತು. ಮದುವೆಯ ವಿಧಿವಿಧಾನಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ನಿರ್ಧರಿಸಿದರು. ಹಾಗಾಗಿ ಹಿಂದೆ ಮುಂದೆ ನೋಡದೆ ಎಲ್ಲರೂ ದೋಣಿ ಹತ್ತಿ ವರನ ಮನೆಗೆ ತೆರಳಿದ್ದಾರೆ.

ಮದುವೆ ಸಿಂಗಾರ, ದೋಣಿಯಲ್ಲಿ ದಿಬ್ಬಣ

ವಧು ಮತ್ತು ಆಕೆಯ ಕುಟುಂಬವು ಬಣ್ಣಬಣ್ಣದ ಬಟ್ಟೆಗಳನ್ನು ಧರಿಸಿ ವರನ ಮನೆಗೆ ಹೋಗುತ್ತಿರುವುದನ್ನು ತೋರಿಸುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. NDTV ವರದಿಯ ಪ್ರಕಾರ, ಮಾನ್ಸೂನ್ ತಪ್ಪಿಸಲು ವಧು ಮತ್ತು ವರರು ತಮ್ಮ ಮದುವೆಯನ್ನು ಆಗಸ್ಟ್‌ನಿಂದ ಜುಲೈವರೆಗೆ ಮುಂದೂಡಿದ್ದರು.

ಮದುವೆ ಪ್ಲಾನ್

ಆದರೂ ಕರಾವಳಿ ಆಂಧ್ರಪ್ರದೇಶವು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಭೀಕರ ಪ್ರವಾಹಕ್ಕೆ ಸಾಕ್ಷಿಯಾದ ಕಾರಣ ಅವರ ಮದುವೆ ಪ್ಲಾನ್ ವರ್ಕೌಟ್ ಆಗಿಲ್ಲ. ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಮದುವೆಯು ಆರಂಭದಲ್ಲಿ ವಿಳಂಬವಾಯಿತು. ಆದರೆ ವಧು ಮದುವೆಯ ವಿಧಿವಿಧಾನಗಳನ್ನು ಮುಗಿಸಲು ದೋಣಿಯಲ್ಲಿ ವರನ ಮನೆಗೆ ತೆರಳಿದರು.ವಿಡಿಯೋ ವೈರಲ್

ವಧು ತನ್ನ ಮದುವೆಯ ಸ್ಥಳಕ್ಕೆ ತೆರಳುವ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ತೆರೆದ ಜೀಪ್ ಬಾನೆಟ್ ಮೇಲೆ ವಧುವಿನ ಪ್ರವೇಶ ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿತ್ತು.

ಇದನ್ನೂ ಓದಿ: Viral Wedding: ಹಳೆ ಡ್ರೆಸ್ ಧರಿಸಿ ಮದುವೆಯಾದ ಯುವತಿ! ಎಲ್ಲವೂ ಸಿಂಪಲ್ ಸಿಂಪಲ್, ಕಾರಣ?

ಸಾಮಾನ್ಯವಾಗಿ ಮದುವೆಯ ಮೆರವಣಿಗೆಯನ್ನು ವರನೇತರುತ್ತಿದ್ದರೂ, ಮಧ್ಯಪ್ರದೇಶದ ಭೋಪಾಲ್‌ನ ಈ ವಧು ಯಥಾಸ್ಥಿತಿಗೆ ಸವಾಲು ಹಾಕಿದ್ದರು. ವೀಡಿಯೊದಲ್ಲಿ, ವಧು ಜನಪ್ರಿಯ ಬಾಲಿವುಡ್ ಹಾಡು ದಿಲ್ಲಿ ವಾಲಿ ಗರ್ಲ್‌ಫ್ರೆಂಡ್‌ನ ಬೀಟ್‌ಗಳಿಗೆ ನೃತ್ಯ ಮಾಡುವುದನ್ನು ಕಾಣಬಹುದು. ವೀಡಿಯೊದಲ್ಲಿನ ಮಹಿಳೆಯ ನೃತ್ಯವು ಹಂಪ್ಟಿ ಶರ್ಮಾ ಕಿ ದುಲ್ಹನಿಯಾ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು ನೆನಪಿಸುವಂತಿತ್ತು.

ಇದನ್ನೂ ಓದಿ: Marriage Agreement: ನವವಧು ಹೇಳಿದ್ದಕ್ಕೆ ಒಪ್ಪಂದಕ್ಕೆ ಸಹಿ ಹಾಕಿದ! ಆಮೇಲೆ ಓದಿ ನೋಡಿದ್ರೆ ಶಾಕ್

ವೈರಲ್ ಆದ ವರನ ತುಂಟಾಟ

ಇತ್ತೀಚಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ವಧು-ವರರ ಮದುವೆ ಸಂಬಂಧಿಕರ ಸಮ್ಮುಖದಲ್ಲಿ ನಡೆಯುತ್ತದೆ. ತಾಳಿ ಕಟ್ಟಿದ ನಂತರ ವರ ವಧುವಿಗೆ ಸಿಂಧೂರ ಹಚ್ಚುವ ಶಾಸ್ತ್ರ ನಡೆಯುತ್ತದೆ. ಪುರೋಹಿತರು ಒಂದೆಡೆ ಮಂತ್ರಗಳನ್ನು ಪಠಿಸುತ್ತಿದ್ದರೆ, ವರನು ತನ್ನ ಕೈಯಲ್ಲಿ ಸಿಂಧೂರ ತೆಗೆದುಕೊಂಡು ವಧುವಿನ ಹಣೆಯ ಮೇಲೆ ಉಜ್ಜುತ್ತಾನೆ. ನಂತರ ಎಲ್ಲರೂ ನೋಡುತ್ತಿದ್ದಂತೆ ವಧುವಿನ ಕೆನ್ನೆಗೆ ಮುತ್ತಿಡುತ್ತಾನೆ.

ನಾಚಿ ನೀರಾದ ವಧು

ವಧುವಿನ ಕೆನ್ನೆಗೆ ಮುತ್ತಿಟ್ಟ ನಂತರ, ವರನು ನಾಚಿಗೆಯಿಂದ ತನ್ನ ತಲೆಯನ್ನು ಮರೆಮಾಡುತ್ತಾನೆ. ಅವನು ಪಕ್ಕಕ್ಕೆ ತಿರುಗಿ ನಗುತ್ತಾನೆ. ಈ ಘಟನೆಯನ್ನು ನಿರೀಕ್ಷಿಸದ ಮದುಮಗಳು ನಾಚಿ ನೀರಾಗುತ್ತಾಳೆ. ಆದರೆ ಮಂಟಪದಲ್ಲಿದ್ದ ಹೆಂಗಸರು ಅಚ್ಚರಿಗೊಂಡು ನಗುತ್ತಾರೆ. ಕೊನೆಗೆ ಇಡೀ ಮದುವೆ ಮಂಟಪವೇ ನಗೆಗಡಲಲ್ಲಿ ತೇಲಿತು. ಮಂಟಪದ ಮುಂದೆ ಇದ್ದವರೂ ಸ್ವಲ್ಪ ಹೊತ್ತು ಹಾಯಾಗಿ ನಕ್ಕರು.
Published by:Divya D
First published: