Pre Wedding Photoshoot: ಉಯ್ಯಾಲೆ ತುಂಡಾಗಿ ನೀರಿನಲ್ಲಿ ಬಿದ್ದ ಯುವತಿ

ದೊಡ್ಡದಾದ ಪಿಂಕ್ ಗೌನ್ ಧರಿಸಿದ ವಧು ಉಯ್ಯಾಲೆಯಲ್ಲಿ ಕುಳಿತುಕೊಳ್ಳುತ್ತಾಳೆ. ಹಿಂದಿನಿಂದ ಓರ್ವ ಉಯ್ಯಾಲೆ ತೂಗುತ್ತಾನೆ. ನೋಡ ನೋಡುತ್ತಿದ್ದಂತೆ ಉಯ್ಯಾಲೆಯ ಹಗ್ಗ ತುಂಡಾದ ಪರಿಣಾಮ ವಧು ನೀರಿನಲ್ಲಿ ಬಿದ್ದಿದ್ದಾಳೆ.

ಫೋಟೋಶೂಟ್

ಫೋಟೋಶೂಟ್

  • Share this:
ಮದುವೆ (Marriage) ಅನ್ನೋದು ಸುಂದರ ಕನಸು (Dream). ತಮ್ಮ ಮದುವೆ ದಿನ ಅದು ಇರಬೇಕು, ಹಾಗೆ ನಡೆಯಬೇಕು ಎಂಬ ಕನಸು ಕಾಣುತ್ತಾರೆ. ಕೆಲ ವರ್ಷಗಳಿಂದ ಮದುವೆ ಮುಂಚೆ ಫೋಟೋಶೂಟ್ (Pre Wedding Photoshoot) ಮಾಡಿಸೋದು ಟ್ರೆಂಡ್. ಇನ್ನು ಮದುವೆ ಫೋಟೋಶೂಟ್ ಥೀಮ್ ಬಗ್ಗೆ ಜೋಡಿಗಳು ಸಿಕ್ಕಾಪಟ್ಟೆ ತಲೆ ಕೆಡಿಸಿಕೊಳ್ಳುತ್ತಾರೆ. ಪ್ರಿ-ವೆಡ್ಡಿಂಗ್​ ಫೋಟೋ ಶೂಟ್ ಮದುವೆಯ ಒಂದು ಭಾಗವಾಗಿ ಸಹ ಬದಲಾಗಿದೆ. ಹೀಗಾಗಿ ಮದುವೆಯಾಗ ಬಯಸುವ ಅನೇಕ ಜೋಡಿಗಳು (Couple) ಪ್ರಿ-ವೆಡ್ಡಿಂಗ್​ ಫೋಟೋ ಶೂಟ್​ ಮಾಡಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಈ ಫೋಟೋಶೂಟ್ ಮಾಡಿಸುವಾಗ ಆಗುವ ಮಿಸ್ಟೇಕ್ ಗಳು ವೈರಲ್ ಆಗುತ್ತಿರುತ್ತವೆ

ಈ ಹಿಂದೆ ಕೇರಳದ ಜೋಡಿಯೊಂದು ತೆಪ್ಪದಲ್ಲಿ ಫೋಟೋಶೂಟ್ ಮಾಡಿಸುತ್ತಿತ್ತು. ನೋಡ ನೋಡುತ್ತಿದ್ದಂತೆ ತೆಪ್ಪ ಮುಗುಚಿ ಬಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಫೋಟೋಶೂಟ್ ವೇಳೆಯಲ್ಲಾದ ಎಡವಟ್ಟಿನ ವಿಡಿಯೋ ಹರಿದಾಡುತ್ತಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?

ವಧು ಫೋಟೋಶೂಟ್ ಮಾಡಿಸಲು ನದಿ ಬಳಿ ತೆರಳಿದ್ದಾರೆ. ದೊಡ್ಡದಾದ ಪಿಂಕ್ ಗೌನ್ ಧರಿಸಿದ ವಧು ಉಯ್ಯಾಲೆಯಲ್ಲಿ ಕುಳಿತುಕೊಳ್ಳುತ್ತಾಳೆ. ಹಿಂದಿನಿಂದ ಓರ್ವ ಉಯ್ಯಾಲೆ ತೂಗುತ್ತಾನೆ. ನೋಡ ನೋಡುತ್ತಿದ್ದಂತೆ ಉಯ್ಯಾಲೆಯ ಹಗ್ಗ ತುಂಡಾದ ಪರಿಣಾಮ ವಧು ನೀರಿನಲ್ಲಿ ಬಿದ್ದಿದ್ದಾಳೆ. ನಂತರ ವಧು ನಗುತ್ತಾ ಈಜಿಕೊಂಡು ದಡ ಸೇರಿದ್ದಾಳೆ.

ಇದನ್ನೂ ಓದಿ:  Viral Video: ವೇದಿಕೆಯಲ್ಲೇ ವರನ ಗೆಳೆಯರಿಗೆ ಚಮಕ್ ಕೊಟ್ಟ ವಧುವಿನ ವಿಡಿಯೋ ವೈರಲ್




ಮೂರು ದಿನಗಳ ಹಿಂದೆ ಈ ವಿಡಿಯೋ ಪಂಜಾಬ್ ಇಂಡಸ್ಟ್ರಿ ಹೆಸರಿನ ಇನ್ ಸ್ಟಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದ್ದು, ವೈರಲ್ ಆಗಿದೆ. ಈ ವಿಡಿಯೋಗೆ 8 ಸಾವಿರಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ಫನ್ನಿ ಕಮೆಂಟ್ ಮಾಡುತ್ತಿದ್ದಾರೆ.

ಫೋಟೋಶೂಟ್ ಥೀಮ್

ಕೆಲವರು ಮದುವೆ ಫೋಟೋಶೂಟ್ (Photoshoot) ಗಾಗಿ ವಿದೇಶಕ್ಕೆ ತೆರಳುತ್ತಾರೆ. ಉಳಿದವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸ್ಥಳ ಮತ್ತು ಫೋಟೋಶೂಟ್ ಥೀಮ್ ಆಯ್ಕೆ ಮಾಡಿಕೊಳ್ಳುತ್ತಾರೆ. ಕಳೆದ ವರ್ಷ ಧಾರವಾಡದ ಒಂದು ಜೋಡಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಕವಿ ದ.ರಾ.ಬೇಂದ್ರೆ ಅವರ ವಸ್ತುಗಳನ್ನು ಬಳಸಿ Black And White ಫೋಟೋಶೂಟ್ ಸಖತ್ ವೈರಲ್ ಆಗಿತ್ತು.

ಇದನ್ನೂ ಓದಿ:  Viral News: ಕೊನೆ ಕ್ಷಣದಲ್ಲಿ ‘ಕಬೂಲ್’ ಇಲ್ಲ ಎಂದ ವಧು: ವರನನ್ನ ನೋಡ್ತಿದ್ದಂತೆ ಯುವತಿಯ ನಿರ್ಧಾರ

ಸಲಿಂಗಿಗಳ ಪ್ರಿ ವೆಡ್ಡಿಂಗ್ ಫೋಟೋಶೂಟ್

ಕೇರಳದ ಸಲಿಂಗಿ ಜೋಡಿಯೊಂದು ಪ್ರಿ-ವೆಡ್ಡಿಂಗ್​ ಫೋಟೋ ಶೂಟ್​ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿತ್ತು. ಸಲಿಂಗಿಗಳ ಪ್ರಿ-ವೆಡ್ಡಿಂಗ್​ ಫೋಟೋ ಶೂಟ್​​ಗೆ ನೀಡುವ ರೊಮ್ಯಾಂಟಿಕ್​​​ ಪೋಸ್​​​ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. ಕೇರಳದ ಅಬ್ದುಲ್​​ ರೆಹಿಮ್​ ಮತ್ತು ನೆವಿದ್​ ಆಂಟೋನಿ ಚುಲ್ಲಿಕಾಲ್​​ ಪ್ರಿ-ವೆಡ್ಡಿಂಗ್​ ಫೋಟೋಶೂಟ್​​ಗೆ ಪೋಸ್​ ನೀಡುವ ಸಲಿಂಗಿ ಜೋಡಿ.

ಸಾವು ತಂದ ಫೋಟೋಶೂಟ್

ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳಾದ ಚಂದ್ರು (28), ಶಶಿಕಲಾ (20) ಅವರ ಮದುವೆ ಕಳೆದ ವರ್ಷ ನವೆಂಬರ್ 22ರಂದು ನಿಶ್ಚಯವಾಗಿತ್ತು. ಹೀಗಾಗಿ, ಕಾವೇರಿ ನದಿ ಮಧ್ಯೆ ಫೋಟೋ ತೆಗೆಸಿಕೊಳ್ಳಲು ಅವರಿಬ್ಬರೂ ಮುಂದಾಗಿದ್ದರು. ಶಶಿಕಲಾ ಹೈ ಹೀಲ್ಸ್​ ಚಪ್ಪಲಿ ಧರಿಸಿದ್ದರಿಂದ ತೆಪ್ಪದ ಮೇಲೆ ನಿಂತಾಗ ಅದು ಮಗುಚಿತ್ತು.

ಉದ್ದದ ಗೌನ್ ಧರಿಸಿದ್ದ ಶಶಿಕಲಾ ಹೈಹೀಲ್ಸ್​​ ಚಪ್ಪಲಿ ಹಾಕಿಕೊಂಡು, ನದಿಯ ಮಧ್ಯೆ ತೆಪ್ಪದಲ್ಲಿ ನಿಂತು ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದರು. ಆಗ ತೆಪ್ಪ ಮಗುಚಿದೆ  ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದರು.

ಶಶಿಕಲಾ ಮತ್ತು ಚಂದ್ರು ಸಾಯುವ ಮೊದಲು ಮಾಡಿಸಿಕೊಂಡಿದ್ದ ಪ್ರೀ ವೆಡ್ಡಿಂಗ್ ಫೋಟೋಶೂಟ್​ನ ಫೋಟೋಗಳು ಈಗ ವೈರಲ್ ಆಗಿವೆ. ಸಾಯುವಾಗ ಧರಿಸಿದ್ದ ಬಟ್ಟೆಯಲ್ಲೂ ಅವರು ಪೋಟೋಶೂಟ್ ಮಾಡಿಸಿಕೊಂಡಿದ್ದರು. ನದಿ ಪಕ್ಕದಲ್ಲೂ ಹಲವು ಪೋಟೋಗಳ ಚಿತ್ರೀಕರಣ ಮಾಡಲಾಗಿತ್ತು. ನದಿ ನೋಡಿದ ಮೇಲೆ ತೆಪ್ಪದಲ್ಲಿ ಕುಳಿತು ಪೋಟೋ ತೆಗೆಯುವ ಪ್ಲಾನ್ ಮಾಡಿದ್ದರು. ಆದರೆ, ಮುಂಜಾಗ್ರತಾ ಕ್ರಮವಿಲ್ಲದೆ ತೆಪ್ಪ ಏರಿದ್ದರಿಂದ ಮುಳುಗಿ ಸಾವನ್ನಪ್ಪಿದ್ದರು.
Published by:Mahmadrafik K
First published: