Video: ಬುಲೆಟ್​ ಬೈಕ್​ ಏರಿ ಮಂಟಪಕ್ಕೆ ಹೊರಟ ವಧು! ಕಾಲ ಬದಲಾಗಿದೆ ಕಣ್ರೀ

ಹಿಂದೆಲ್ಲಾ ವರ ಕುದುರೆಯ ಮೇಲೆ ಸವಾರಿ ಮಾಡಿಕೊಂಡು ಮದುವೆ ಮಂಟಪಕ್ಕೆ ಬರುವ ಕ್ರಮವಿತ್ತು. ಆದರೀಗ ಕೊಂಚ ಬದಲಾವಣೆ ಎಂಬಂತೆ ದುಬಾರಿ ಕಾರಿನಲ್ಲಿ ಕುಳಿತು ಮಂಟಪಕ್ಕೆ ಬರುತ್ತಿದ್ದಾರೆ. ಅದರಂತೆಯೇ ವಧುವನ್ನು ಆಕೆಯ ಮಾವ ಹೆಗಲ ಮೇಲೆ ಕೂರಿಸಿಕೊಂಡು ಮಂಟಕ್ಕೆ ಕರೆತರುತ್ತಿದ್ದರು. ಆದರೀಗ ಕಾರನ್ನು ಸಿಂಗರಿಸಿ ಅದರಲ್ಲಿ ವಧು ಮಂಟಪಕ್ಕೆ ಬರುತ್ತಾಳೆ.

ವೈಶಾಲಿ ಚೌಧರಿ

ವೈಶಾಲಿ ಚೌಧರಿ

 • Share this:
  ಕಾಲ ಬದಲಾಗಿದೆ. ಹಿಂದೆಲ್ಲಾ ವರನು ಮಂಟಪಕ್ಕೆ ಕುದುರೆಯ ಮೇಲೆ ಸವಾರಿ ಮಾಡಿ ಬರುತ್ತಿದ್ದನು. ಆದರೀಗ ವಧು ಬೈಕ್​ ಮೇಲೆ ಮಂಟಕ್ಕೆ ತೆರಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್​ ಆಗಿದೆ. ಅಚ್ಚರಿಯ ಸಂಗತಿ ಏನಂದರೆ ಲೆಹೆಂಗಾ ಧರಿಸಿಕೊಂಡು, ಅದರಲ್ಲೂ ಭಾರವಾದ ಬುಲೆಟ್​ ಬೈಕ್​  (Bike)ಅನ್ನು ತಾನೇ ಸವಾರಿ ಮಾಡಿಕೊಂಡು ವಧು ಮಂಟಪಕ್ಕೆ ತೆರಳುವ ವಿಡಿಯೋ (Video) ಇದಾಗಿದೆ. ಸದ್ಯ ಈ ವಿಡಿಯೋ ಇನ್​ಸ್ಟಾಗ್ರಾಂನಲ್ಲಿ (Instagram) ವೈರಲ್ (Viral)​ ಆಗುತ್ತಿದ್ದು, ಅನೇಕರು ಈ ವಿಡಿಯೋ ವೀಕ್ಷಿಸಿ ಕಾಮೆಂಟ್​​ ಮಾಡುತ್ತಿದ್ದಾರೆ.

  ಹಿಂದೆಲ್ಲಾ ವರ ಕುದುರೆಯ ಮೇಲೆ ಸವಾರಿ ಮಾಡಿಕೊಂಡು ಮದುವೆ ಮಂಟಪಕ್ಕೆ ಬರುವ ಕ್ರಮವಿತ್ತು. ಆದರೀಗ ಕೊಂಚ ಬದಲಾವಣೆ ಎಂಬಂತೆ ದುಬಾರಿ ಕಾರಿನಲ್ಲಿ ಕುಳಿತು ಮಂಟಪಕ್ಕೆ ಬರುತ್ತಿದ್ದಾರೆ. ಅದರಂತೆಯೇ ವಧುವನ್ನು ಆಕೆಯ ಮಾವ ಹೆಗಲ ಮೇಲೆ ಕೂರಿಸಿಕೊಂಡು ಮಂಟಕ್ಕೆ ಕರೆತರುತ್ತಿದ್ದರು. ಆದರೀಗ ಕಾರನ್ನು ಸಿಂಗರಿಸಿ ಅದರಲ್ಲಿ ವಧು ಮಂಟಪಕ್ಕೆ ಬರುತ್ತಾಳೆ. ಆದರೆ ಈ ವಿಡಿಯೋದಲ್ಲಿ ನೋಡುವುದಾದರೆ ವಧು ಕೊಂಚ ಚೇಂಜಸ್​ ಇರಲಿ ಎಂದು ತಾನೇ ಬುಲೆಟ್​ ಬೈಕ್​ ಏರಿ ಮಂಟಪಕ್ಕೆ ಹೋಗುತ್ತಿದ್ದಾಳೆ. ಲೆಹೆಂಗಾವನ್ನು ಧರಿಸಿ ಭಾರವಾದ ಬುಲೆಟ್​ ಏರಿ ಮಂಟಪದತ್ತ ಹೋಗುತ್ತಿದ್ದಾಳೆ. ಆಕೆ ಹೋಗುವ ದಾರಿ ಮಧ್ಯದಲ್ಲಿ ವಿಡಿಯೋ ಚಿತ್ರೀಕರಿಸಲಾಗಿದೆ. ಈ ವಿಡಿಯೋವನ್ನು ವಧುವೇ ತನ್ನ ಇನ್​​​ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾಳೆ.

  ಇದನ್ನೂ ಓದಿ: Viral Photo: ತಂದೆಯಿಂದ ಮಗಳಿಗೆ ಹೃದಯಸ್ಪರ್ಶಿ ನೋಟ್; ಪತ್ರ ನೋಡಿ ನೆಟ್ಟಿಗರೇ ಭಾವುಕರಾದ್ರು!

  ವಧುವಿನ ಹೆಸರು ವೈಶಾಲಿ ಚೌಧರಿ ಈಕೆ ಮಂಟಪಕ್ಕೆ ತೆರಳಲು ಬೈಕ್​ ಏರಿದ್ದಾಳೆ. ಮಾತ್ರವಲ್ಲದೆ ಈ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಳೆ. ಆಕೆಯ ಮೇಕಪ್​ ಆರ್ಟಿಸ್ಟ್​ ದಿಪಾಲಿ ಕೂಡ ಇದನ್ನು ಶೇರ್​ ಮಾಡಿದ್ದಾಳೆ. ಸದ್ಯ ಈ ಘಟನೆ ದೆಹಲಿಯಲ್ಲಿ ನಡೆದಿದ್ದು, ಈ ವಿಡಿಯೋವನ್ನು ಸುಮಾರು 1 ಮಿಲಿಯನ್​ಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

  ಕೆಲವರಂತೂ ವಧುವಿನ ಬೈಕ್​ ರೈಡ್​ ಕಂಡು ಬಗೆ ಬಗೆಯ ಕಾಮೆಂಟ್​ ಬರೆದಿದ್ದಾರೆ. ಅದರಲ್ಲಿ ಒಬ್ಬ ತುಂಬಾ ಚೆನ್ನಾಗಿದೆ ಎಂದರೆ. ಮತ್ತೋರ್ವ ವುಮೆನ್​ ಪವರ್​ ಲೈನ್​ ಎಂದು ಬರೆದಿದ್ದಾನೆ.


  ಇದನ್ನೂ ಓದಿ: Weight Loss: ತೂಕ ಇಳಿಸಲು ಯಾವ ರೀತಿ ಡಯೆಟ್ ಫಾಲೋ ಮಾಡಬೇಕು?

  ಉಡುಪಿಯಲ್ಲಿ ಹುಲಿವೇಷಧಾರಿಯೊಂದಿಗೆ ಹೆಜ್ಜೆ ಹಾಕಿದ ಬಾಲಕಿ; ವಿಡಿಯೋ ವೈರಲ್​

  ಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ಉಡುಪಿಯ ಕೃಷ್ಣ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ಜರುಗುತ್ತದೆ. ಈ ಸಮಯದಲ್ಲಿ ಹುಲಿವೇಷಧಾರಿಗಳನ್ನು ಆ ಭಾಗದಲ್ಲಿ ಕಣ್ತುಂಬಿಕೊಳ್ಳಬಹುದು. ಟಾಸೆಯ ಪೆಟ್ಟಿಗೆ ಹುಲಿವೇಷಧಾರಿಗಳು ಹೆಜ್ಜೆ ಹಾಕುತ್ತಾ ನೃತ್ಯ ಮಾಡುತ್ತಾರೆ. ಒಂದೊಂದೇ ಹೆಜ್ಜೆ ಹಾಕುತ್ತಾ ನಲಿಯುತ್ತಾರೆ. ಹುಲಿವೇಷಧಾರಿಗಳು ನೃತ್ಯ ಮಾಡುವಾಗ ಮತ್ತು ಟಾಸೆ ಸೌಂಡಿಗೆ ಹತ್ತಿರವಿದ್ದ ಜನರು ಕೂಡ ನಲಿಯುವುದುಂಟು. ಅದರಂತೆಯೇ ಪುಟ್ಟ ಬಾಲಕಿ ಹುಲಿವೇಷಧಾರಿಯೊಂದಿಗೆ ನೃತ್ಯ (Dance) ಮಾಡಿದ ದೃಶ್ಯವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral)​ ಆಗಿದೆ.

  ಪುಟಾಣಿ ಬಾಲಕಿ ಹುಲಿವೇಷಧಾರಿಯೊಂದಿಗೆ ಹೆಜ್ಜೆ ಹಾಕಿದ್ದಾಳೆ. ಯಾವುದೇ ವೇಷಭೂಷಣವಿಲ್ಲದೆ ಆಕೆ ನೃತ್ಯ ಮಾಡಿರುವುದನ್ನು ನೆರೆದಿದ್ದ ಜನರು ವಿಡಿಯೋ ಮಾಡಿದ್ದಾರೆ. ಅದರಲ್ಲೊಬ್ಬ ವ್ಯಕ್ತಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗುತ್ತಿದ್ದು, ಬಾಲಕಿಯ ನೃತ್ಯ ನೋಡಿ ಜನರು ಬಗೆ ಬಗೆಯ ಕಾಮೆಂಟ್​ ಬರೆಯುತ್ತಿದ್ದಾರೆ.

  ಮೊದಲೇ ಹೇಳಿದಂತೆ ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಹುಲಿವೇಷವನ್ನು ಹೆಚ್ಚಾಗಿ ಕಾಣಬಹುದು. ಆದರೆ ಈ ವೈರಲ್​ ಆದ ವಿಡಿಯೋ ಮಾತ್ರ ಉಡುಪಿ ಭಾಗದ್ದು, ವಿಸಿಟ್​ ಉಡುಪಿ ಎಂಬ ಟ್ವಿಟ್ಟರ್​ ಖಾತೆಯಲ್ಲಿ ಈ ವಿಡಿಯೋವನ್ನು ಹಾಕಲಾಗಿದೆ. ಓಹ್​ ನನ್ನ ದೇವರೇ, ಇದಂತೂ ಸೂಪರ್​ ಕೂಟ್​ ಎಂದು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ


  ಏನಿದು ಘಟನೆ:

  ಹುಲಿ ವೇಷಧಾರಿಗಳು ನೆರೆದಿದ್ದ ಸಮಯದಲ್ಲಿ. ಒಬ್ಬ ಹುಲಿವೇಷವನ್ನು ಹಾಕಿದ್ದ ವ್ಯಕ್ತಿ ನೃತ್ಯ ಮಾಡಲು ತಯಾರಾಗುತ್ತಾನೆ. ಈ ವೇಳೆ ಆತನಿಗೆ ಹಣದ ಮಾಲೆ ಅಥವಾ ಹೂವಿನ ಮಾಲೆ ಹಾಕಿ ಗೌರವಿಸುದುಂಟು. ಅದರಂತೆ ತಾಯಿಯೊಬ್ಬಳು ತನ್ನ ಮಗಳೊಂದಿಗೆ ಹುಲಿವೇಷದ ವ್ಯಕ್ತಿಗೆ ಗೌರವ ಸೂಚಕವಾಗಿ ಮಾಲೆ ಹಾಕುತ್ತಾರೆ. ಈ ವೇಳೆ ಆತ ತಾಯಿಗೆ ಧನ್ಯವಾದ ತಿಳಿಸುತ್ತಾನೆ. ನಂತರ ತಾಯಿಯ ಜೊತೆಗೆ ಬಂದ ಪುಟ್ಟ ಬಾಲಕಿಯ ಕೈ ಹಿಡಿದುಕೊಂಡು ಹುಲಿವೇಷಧಾರಿ ನೃತ್ಯ ಮಾಡುತ್ತಾನೆ. ಬಾಲಕಿ ಕೂಡ ಆತನೊಂದಿಗೆ ಒಂದೊಂದೇ ಹೆಜ್ಜೆ ಹಾಕುತ್ತಾ ಹುಲಿಕುಣಿತ ಹಾಕುತ್ತಾಳೆ. ಬಳಿಕ ಬಾಲಕಿ ನೃತ್ಯ ಮಾಡುವುದನ್ನು ಕಂಡು ಮತ್ತೋರ್ವ ಬಾಲಕನು ದೃಶ್ಯದಲ್ಲಿ ಎಂಟ್ರಿ ನೀಡುತ್ತಾನೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  Published by:Harshith AS
  First published: