Bride Entry: ಬಿಳಿ ಬೆಲೂನ್​ಗಳಲ್ಲಿ ಆಕಾಶದಲ್ಲಿ ತೇಲಿಬಂದ ವಧು! ಅಬ್ಬಾ ಎಂಥಾ ಎಂಟ್ರಿ

ಮದುವೆಯಲ್ಲಿ ನವ ವಧುಗಳು ಹಿಂದೆಂದೂ ಯಾರೂ ಮಾಡದ ವಿನೂತನ ಕೆಲಸಗಳನ್ನು ಮಾಡಲು ಬಯಸುತ್ತಾರೆ. ಆದ್ದರಿಂದ, ಹಿಂದೆಂದೂ ನೋಡಿರದ ವಧುವಿನ ಗ್ರ್ಯಾಂಡ್ ಎಂಟ್ರಿಯನ್ನು ತೋರಿಸುವ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವಧುವಿನ ಗ್ರ್ಯಾಂಡ್ ಎಂಟ್ರಿ

ವಧುವಿನ ಗ್ರ್ಯಾಂಡ್ ಎಂಟ್ರಿ

  • Share this:
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಮದುವೆಗೆ ಸಂಬಂಧಪಟ್ಟಂತಹ ಅನೇಕ ವಿಡಿಯೋಗಳು ವೈರಲ್ (Viral Video) ಆಗುತ್ತಿರುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಕೆಲವೊಂದು ಮದುವೆ ವಿಡಿಯೋಗಳು ನವ ವಧು ವರರು ತಮ್ಮ ಮದುವೆ ಸಮಾರಂಭಕ್ಕೆ ನೀಡುವ ಗ್ರ್ಯಾಂಡ್ ಎಂಟ್ರಿಯಿಂದಾಗಿ (Grand Entry) ಸಹ ವೈರಲ್ ಆಗಬಹುದು, ಇನ್ನು ಕೆಲವೊಂದು ಈ ಮದುವೆಗಳಲ್ಲಿ ನಡೆಯುವ ಎಡವಟ್ಟುಗಳಿಂದಾಗಿಯೂ ಸಹ ವೈರಲ್ ಆಗಿರಬಹುದು. ಒಟ್ಟಿನಲ್ಲಿ ಇತ್ತೀಚಿನ ಮದುವೆಗಳು ಎಂದರೆ ಅಲ್ಲಿ ಏನಾದರೊಂದು ಮನೋರಂಜನೆ ಮತ್ತು ವಿಭಿನ್ನವಾದುದ್ದು ನೋಡಲು ಸಿಗುವುದಂತೂ ಗ್ಯಾರಂಟಿ ಎಂದು ಹೇಳಬಹುದು.

ಇತ್ತೀಚಿನ ಮದುವೆಗಳಲ್ಲಿ ವಧು ವರರು ತಾವು ಯಾರಿಗಿಂತಲೂ ಕಡಿಮೆ ಇಲ್ಲ ಎಂಬಂತೆ ಸ್ಪರ್ಧಾತ್ಮಕವಾಗಿ ವಿನೂತನ ಪ್ರಯತ್ನಗಳಿಗೆ ಕೈ ಹಾಕುತ್ತಿರುವುದನ್ನು ನಾವು ನೋಡಬಹುದು. ಇದು ಅವರ ಉಡುಗೆಯಾಗಿರಲಿ ಅಥವಾ ವಧು ವರರ ಗ್ರ್ಯಾಂಡ್ ಎಂಟ್ರಿ ಆಗಿರಲಿ, ಎಲ್ಲವೂ ಅತ್ತ್ಯುತ್ತಮವಾಗಿರಬೇಕೆಂದು ಇಷ್ಟಪಡುತ್ತಾರೆ.

ಸಿಕ್ಕಾಪಟ್ಟೆ ವೈರಲ್

ಅದರಲ್ಲಂತೂ ಮದುವೆಯಲ್ಲಿ ನವ ವಧುಗಳು ಹಿಂದೆಂದೂ ಯಾರೂ ಮಾಡದ ವಿನೂತನ ಕೆಲಸಗಳನ್ನು ಮಾಡಲು ಬಯಸುತ್ತಾರೆ. ಆದ್ದರಿಂದ, ಹಿಂದೆಂದೂ ನೋಡಿರದ ವಧುವಿನ ಗ್ರ್ಯಾಂಡ್ ಎಂಟ್ರಿಯನ್ನು ತೋರಿಸುವ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವಿಭಿನ್ನವಾದ ಎಂಟ್ರಿ

ವಧು ಸಾಮಾನ್ಯವಾಗಿ ತನ್ನ ತಂದೆ, ತಾಯಿ ಮತ್ತು ಕುಟುಂಬ ಸದಸ್ಯರು ಅಥವಾ ಒಂದು ಭವ್ಯವಾಗಿ ಅಲಂಕೃತಗೊಂಡ ಕಾರಿನಲ್ಲಿ ತನ್ನ ಮದುವೆಯ ಸ್ಥಳಕ್ಕೆ ಬರುವುದನ್ನು ನಾವು ನೋಡಿರುತ್ತೇವೆ. ಇಲ್ಲಿ ತುಂಬಾನೇ ವಿಭಿನ್ನವಾದ ಎಂಟ್ರಿ ಈ ನವ ವಧು ನೀಡಿದ್ದಾರೆ ಎಂದು ಹೇಳಬಹುದು.






250 ಹೀಲಿಯಂ ಬಲೂನ್

ಈ ವಧು ಬರೋಬ್ಬರಿ 250 ಹೀಲಿಯಂ ಬಲೂನ್‌ಗಳನ್ನು ಗಾಳಿಯಲ್ಲಿ ತೇಲಾಡಲು ಬಿಟ್ಟು, ಅದಕ್ಕೆ ಒಂದು ಉಯ್ಯಾಲೆಯಂತೆ ಕಟ್ಟಿ ಅದರ ಮೇಲೆ ರಾಣಿಯಂತೆ ಕುಳಿತುಕೊಂಡು ಹಾಗೆಯೇ ಗಾಳಿಯಲ್ಲಿ ತೇಲುತ್ತಾ ಬಂದಳು. ಆದರೆ ಈ ಮದುವೆ ನಡೆದಿದ್ದು ಎಲ್ಲಿ ಅಂತ ನೀವು ಕೇಳಬಹುದು. ಇದು ನಡೆದಿದ್ದು ಇಟಲಿಯಲ್ಲಿ ಅಂತೆ, ವಧುವಿನ ಮದುವೆ ಯೋಜಕರು ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು 4 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ ಎಂದು ಹೇಳಬಹುದು.

ಇದನ್ನೂ ಓದಿ: Viral News: ಈ ಗ್ರಾಮದಲ್ಲಿ ಇಂದಿಗೂ ನಡೆಯುತ್ತೆ ಸ್ವಯಂವರ: ತಮ್ಮ ಸಂಗಾತಿಯನ್ನ ಯುವತಿಯರೇ ಆಯ್ಕೆ ಮಾಡಿಕೊಳ್ತಾರೆ

ಹೀಲಿಯಂ ಬಲೂನ್‌ಗಳ ಸಹಾಯದಿಂದ ಗಾಳಿಯಲ್ಲಿ ತೇಲಿದ ವಧು

ಆಫ್-ಶೋಲ್ಡರ್ ಡೋಲ್ಸ್ ಮತ್ತು ಗಬಾನಾ ವೆಡ್ಡಿಂಗ್ ಗೌನ್ ಧರಿಸಿದ ವಧು ಹೀಲಿಯಂ ಬಲೂನ್‌ಗಳ ಸಹಾಯದಿಂದ ಗಾಳಿಯಲ್ಲಿ ತೇಲುತ್ತಿರುವುದನ್ನು ಕಾಣಬಹುದು. ವಧುವಿನ ಉಡುಗೆಯೊಂದಿಗೆ ಸಮನ್ವಯವನ್ನು ಕಾಪಾಡಿಕೊಳ್ಳಲು ಬಲೂನುಗಳು ಸಹ ಬಿಳಿ ಬಣ್ಣದಲ್ಲಿವೆ. ಅವಳು ತನ್ನ ಮದುವೆಯ ಉಡುಗೆಯೊಂದಿಗೆ ವಜ್ರ-ಕೆತ್ತನೆಯ ಟಿಯಾರಾವನ್ನು ಸಹ ಧರಿಸಿದ್ದಾಳೆ. ವೈರಲ್ ವಿಡಿಯೋದಲ್ಲಿ ಅವಳು ಅತಿವಾಸ್ತವಿಕಕ್ಕಿಂತ ಕಡಿಮೆಯಿಲ್ಲದಂತೆ ಕಾಣುತ್ತಾಳೆ.

ಗ್ರ್ಯಾಂಡ್ ಎಂಟ್ರಿ

"ಇದು ವಧುವಿನ ಗ್ರ್ಯಾಂಡ್ ಎಂಟ್ರಿಯಾಗಿತ್ತು, 250 ಹೀಲಿಯಂ ಬಲೂನ್‌ಗಳ ಸಂಪೂರ್ಣ ರಾಶಿಯೊಂದಿಗೆ ತನ್ನ ಗ್ರ್ಯಾಂಡ್ ಎಂಟ್ರಿಯನ್ನು ಭವ್ಯವಾಗಿ ಸೃಷ್ಟಿಸಿಕೊಂಡಿದ್ದಾರೆ. ಆಫ್-ಶೋಲ್ಡರ್ ಡೋಲ್ಸ್ ಮತ್ತು ಗಬಾನಾ ಗೌನ್ ಧರಿಸಿದ್ದ ಈ ನಿಜ ಜೀವನದ ರಾಜಕುಮಾರಿ ತನ್ನ ವರನನ್ನು ಭೇಟಿಯಾಗಲು ಗಾಳಿಯಲ್ಲಿ ಹಾರಿ ಬಂದಳು. ಆಕೆಯ ಹಿಂದಿನ ಆ ಸುಂದರ ಹಿನ್ನಲೆಯನ್ನು ಸಹ ವಿಡಿಯೋದಲ್ಲಿ ನೋಡಬಹುದು" ಎಂದು ವಿಡಿಯೋ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Weed On Food: ಊಟದಲ್ಲಿ ಗಾಂಜಾ ಬೆರೆಸಿದ ವಧು, ಮದುವೆಗೆ ಬಂದೋರು, ಮತ್ತಲ್ಲಿ ತೇಲಿದರು

ಈ ನವ ವಧುವಿನ ಗ್ರ್ಯಾಂಡ್ ಎಂಟ್ರಿಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ನೋಡಿದ ನೆಟ್ಟಿಗರು "ಇದು ಅದ್ಭುತವಾಗಿದೆ. ಒಬ್ಬ ಯೋಜಕನಾಗಿ ನಾನು ಇದಕ್ಕೆ ಅಗತ್ಯವಿರುವ ಸಮನ್ವಯದ ಬಗ್ಗೆ ಯೋಚಿಸುವುದನ್ನು ನಿಲ್ಲಿಸಲು ಸಾಧ್ಯವೇ ಇಲ್ಲ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನು ಅನೇಕ ನೆಟ್ಟಿಗರು ಈ ವಿಡಿಯೋ ನೋಡಿ ಹೃದಯದ, ಬೆಂಕಿಯ ಎಮೋಜಿಗಳನ್ನು ಕಾಮೆಂಟ್‌ನಲ್ಲಿ ಹಾಕಿ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.
Published by:Divya D
First published: