ವಿವಾಹ ದಿನದಂದು ವಧು ವರರ ನೃತ್ಯ ವೀಡಿಯೊ ನೋಡಿ ಫಿದಾ ಆದ ನೆಟ್ಟಿಗರು

Viral Video: ವಧು ಕಲ್ಯಾಣ ಮಂಟಪಕ್ಕೆ ತನ್ನ ಕುಟುಂಬ ಸದಸ್ಯರೊಂದಿಗೆ ಪ್ರವೇಶಿಸುವ ಸಮಯದಲ್ಲಿ ವರನ ಮುಂದೆ ಈ ಖ್ಯಾತ ಹಾಡಿಗೆ ನರ್ತಿಸಿದ್ದಾಳೆ. ವಧು ಎಷ್ಟು ಚೆನ್ನಾಗಿ ನರ್ತಿಸಿದ್ದಾಳೆಂದರೆ ಆಕೆಯ ನೃತ್ಯ ನೋಡಿ ವರ ಕೂಡ ಹೆಜ್ಜೆ ಹಾಕಿರುವುದು ವೀಡಿಯೊದಲ್ಲಿ ಕಂಡುಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂದಿನ ದಿನಗಳಲ್ಲಿ ವಿವಾಹ ದಿನದಂದು ವಧು ವರರು ಡ್ಯಾನ್ಸ್ ಮಾಡುವುದು, ಹಾಡು ಹಾಡುವುದು, ಕೆಲವೊಂದು ಮನರಂಜನಾ ಚಟುವಟಿಕೆಗಳನ್ನು ನಡೆಸುವುದು ವೈರಲ್ ಆಗಿವೆ. ಈ ಕುರಿತು ಹೆಚ್ಚಿನ ಸುದ್ದಿಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ವಿವಾಹ ದಿನದಂದು ಕೆಲವರು ಬದ್ಧತೆ ಹಾಗೂ ಪ್ರೀತಿಯ ದ್ಯೋತಕವಾಗಿ ಗಂಭೀರವಾಗಿ ಆಚರಿಸಿದರೆ ಇನ್ನು ಕೆಲವು ಜೋಡಿಗಳು ವಿವಾಹ ದಿನದಂದು ಮೋಜು ಸಂಭ್ರಮ ನಡೆಸಿ ಜೀವನ ಪರ್ಯಂತ ಸ್ಮರಣೀಯವಾಗಿಸುತ್ತಾರೆ. ಕೆಲವೊಂದು ಕಡೆ ಮದುವೆಯ ದಿನದಂದು ಹುಡುಗ ಇಲ್ಲವೇ ಹುಡುಗಿ ಜಗಳಗಳನ್ನು ಘರ್ಷಣೆಗಳನ್ನು ಮಾಡಿಕೊಂಡದ್ದು ಸುದ್ದಿಯಾಗಿದೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ವಿವಾಹ ದಿನವನ್ನು ಸಂಭ್ರಮಿಸಿಕೊಳ್ಳುತ್ತಾರೆ.

ಇಂದಿನ ಸುದ್ದಿಯಲ್ಲಿ ಕೂಡ ಮದುಮಗಳೊಬ್ಬಳು ಬಾಲಿವುಡ್ ಹಾಡಿಗೆ ಮನಬಿಚ್ಚಿ ನೃತ್ಯ ಮಾಡಿರುವುದು ಸುದ್ದಿಯಾಗಿದ್ದು, ಮದುವೆಯ ಸಂಭ್ರಮವನ್ನು ಆಕೆ ಎಷ್ಟು ಚೆನ್ನಾಗಿ ಆಚರಿಸುತ್ತಿದ್ದಾಳೆ? ಎಷ್ಟು ಸಂಭ್ರಮ ಆಕೆಯ ಮೊಗದಲ್ಲಿ ನೆಲೆಸಿದೆ ಎಂಬುದು ವೀಡಿಯೊದಿಂದಲೇ ಅರಿವಾಗುತ್ತದೆ. ಇಮ್ರಾನ್ ಹಶ್ಮಿಯ ಜನಪ್ರಿಯ ಆಲ್ಬಮ್ ಹಾಡು “ಉಥೀ ಮೊಹಬ್ಬತ್ ನೆ ಅಂಗ್‌ಡೈ ಲಿ” ಎಂಬ ಹಾಡು ವಧು ನರ್ತಿಸುವಾಗ ಹಿನ್ನಲೆಯಲ್ಲಿ ಕೇಳಿ ಬಂದಿದೆ

ವಧು ಕಲ್ಯಾಣ ಮಂಟಪಕ್ಕೆ ತನ್ನ ಕುಟುಂಬ ಸದಸ್ಯರೊಂದಿಗೆ ಪ್ರವೇಶಿಸುವ ಸಮಯದಲ್ಲಿ ವರನ ಮುಂದೆ ಈ ಖ್ಯಾತ ಹಾಡಿಗೆ ನರ್ತಿಸಿದ್ದಾಳೆ. ವಧು ಎಷ್ಟು ಚೆನ್ನಾಗಿ ನರ್ತಿಸಿದ್ದಾಳೆಂದರೆ ಆಕೆಯ ನೃತ್ಯ ನೋಡಿ ವರ ಕೂಡ ಹೆಜ್ಜೆ ಹಾಕಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಜುಬಿನ್ ನಟುಲ್ಯ ಹಾಡಿಗೆ ವಧು ಹಾಗೂ ವರ ಇಬ್ಬರೂ ನರ್ತಿಸಿದ್ದಾರೆ.ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿರುವ ಈ ವೀಡಿಯೊವನ್ನು ನೆಟ್ಟಿಗರು ಆನಂದಿಸಿದ್ದು ವಧು ವರರು ತಮ್ಮ ಜೀವನದ ಅತ್ಯಮೂಲ್ಯ ಕ್ಷಣವನ್ನು ಆನಂದಿಸಿದ್ದು ಜೋಡಿಗಳ ನೃತ್ಯವನ್ನು ಆನಂದಿಸಿದ್ದಾರೆ. ಇವರ ನೃತ್ಯವನ್ನು ನೋಡಿ ಹತ್ತಿರವಿದ್ದ ಜನರೂ ಆನಂದಿಸಿದ್ದು ಇನ್‌ಸ್ಟಾಗ್ರಾಮ್‌ನ ಫೋಟೋಶೂಟ್ ವೆಡ್ಡಿಂಗ್ ಮೂಲಕ ವೀಡಿಯೊ ಅಪ್‌ಲೋಡ್ ಮಾಡಲಾಗಿದೆ. ಅಪ್‌ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ 22,000 ಕ್ಕಿಂತ ಹೆಚ್ಚಿನ ಜನರು ವೀಡಿಯೊವನ್ನು ಮೆಚ್ಚಿದ್ದಾರೆ. ಅದೂ ಅಲ್ಲದೆ 3,00,000 ಕ್ಕಿಂತ ಹೆಚ್ಚಿನ ಜನರು ವೀಡಿಯೊವನ್ನು ವೀಕ್ಷಿಸಿದ್ದಾರೆ.
ಕೊರೋನಾ ಸಮಯದಲ್ಲೂ ಸೀಮಿತ ಸಂಖ್ಯೆಯಲ್ಲಿ ವಿವಾಹಗಳು ನಡೆಯುತ್ತಿದ್ದು ಇಂತಹ ಮನರಂಜನೆಯಿಂದ ನೆರೆದಿದ್ದವರ ಮುಖದಲ್ಲಿ ಮಂದಹಾಸ ಮೂಡುವುದಂತೂ ಖಚಿತವಾಗಿದೆ. ವಿವಾಹ ದಿನದಂದು ವಧು ನೃತ್ಯ ಮಾಡುವ ಹೆಚ್ಚಿನ ವೀಡಿಯೊಗಳು ವೈರಲ್ ಆಗಿದ್ದು ಮದುವೆಯನ್ನು ಗಂಭೀರವಾಗಿ ನಡೆಸುವ ಬದಲಿಗೆ ಮೋಜು ಹಾಗೂ ಮನರಂಜನೆಯಿಂದ ನಡೆಸುವ ರೀತಿ ಕೂಡ ಈಗ ಜಾರಿಯಲ್ಲಿರುವುದು ಸಂತಸಕರ ವಿಚಾರವಾಗಿದೆ. ಮೊದಲೆಲ್ಲಾ ವಧು ವಿವಾಹ ಮಂಟಪಕ್ಕೆ ಬರುವಾಗ ತಲೆ ಬಗ್ಗಿಸಿಕೊಂಡು ನಾಚಿಕೆಯಿಂದ ಬರುತ್ತಾರೆ. ಎಷ್ಟೋ ಸಮಯಗಳ ನಂತರವಷ್ಟೇ ತಲೆ ಎತ್ತುತ್ತಾರೆ. ಆದರೆ ಈಗಿನ ವಧುಗಳು ಉಲ್ಲಾಸವಾಗಿ ಖುಷಿಯಿಂದ ನೃತ್ಯ ಮಾಡುತ್ತಲೋ ಹಾಡು ಹಾಡುತ್ತಲೋ ಮಂಟಪವನ್ನು ಪ್ರವೇಶಿಸಿ ವಿವಾಹಕ್ಕೆ ಪ್ರತ್ಯೇಕ ಶೋಭೆ ತರುತ್ತಾರೆ. ಅಂತೂ ವಧುವಿನ ನೃತ್ಯದ ವೀಡಿಯೊ ನೆಟ್ಟಿಗರ ಜೊತೆಗೆ ವಿವಾಹಕ್ಕೆ ಬಂದ ಅತಿಥಿಗಳ ಮನಸ್ಸನ್ನು ರಂಜಿಸಿರುವುದು ನಿಜವಾಗಿದೆ.

 

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: