ಒಂದು ಮದುವೆ (Marriage) ಮಾಡೋದು ಅಂದ್ರೆ ಅದು ಸಾಮಾನ್ಯದ ಕೆಲಸವಲ್ಲ. ನೂರಾರು ಜನರನ್ನ ಆಮಂತ್ರಿಸಿ, ಛತ್ರ ಬುಕ್ ಮಾಡಿ, ಅಲಂಕಾರ ಮಾಡಿ, ಊಟ (Food) ತಿಂಡಿ ನೋಡಿಕೊಂಡು, ಎಲ್ಲರನ್ನೂ ಸಂತೃಪ್ತಿಗೊಳಿಸಿ ಕಳಿಸೋದ್ರ ಶ್ರಮ ಅನುಭವಿಸಿದವರಿಗೇ ಗೊತ್ತು. ಎಲ್ಲವೂ ಚೆನ್ನಾಗಿದ್ದು ಎಲ್ಲೋ ಸಣ್ಣ ಲೋಪವಾದ್ರೂ ಅದು ಕೊನೆಯವರೆಗೂ ಕಾಡುತ್ತೆ ಅನ್ನೋದು ನಿಜವಾದ ಮಾತು. ಆದ್ರೆ ಮನುಷ್ಯರೆಂದ ಮೇಲೆ ತಪ್ಪುಗಳು (Wrong) ಸಹಜ. ಆದ್ರೆ ಎಂಥ ಪರಿಸ್ಥಿತಿಯಲ್ಲೂ ತಾಳ್ಮೆಗೆಡದೇ ಹೋದ್ರೆ ಪರಿಹಾರ ಸಿಕ್ಕೇ ಸಿಗುತ್ತೆ ಅನ್ನೋದಕ್ಕೆ ಈ ಮದುಮಗಳೇ (Bride) ಉದಾಹರಣೆ.
ಇಂದಿನ ಕಾಲದಲ್ಲಿ ಎಂಗೇಜ್ ಮೆಂಟ್, ಮದುವೆ ಇವಕ್ಕೆಲ್ಲ ವಿಶೇಷವಾಗಿ ತಯಾರಿಸಲಾಗಿರೋ ಕಾಸ್ಟ್ಯೂಮ್ ಹಾಕಿಕೊಳ್ಳೋದು ನಿಮಗೆಲ್ಲಾ ಗೊತ್ತೇ ಇದೆ. ಅದನ್ನು ವಿಶೇಷವಾಗಿ ಡಿಸೈನ್ ಮಾಡಿ ಹೊಲಿಸಲಾಗುತ್ತೆ. ಮದುವೆ ದಿನ ತಾನು ಹೀಗೆಯೇ ಕಾಣಿಸಬೇಕು ಎಂಬುದಾಗಿ ಬಹುತೇಕ ಎಲ್ಲ ಹೆಣ್ಣುಮಕ್ಕಳೂ ಕನಸು ಕಂಡಿರುತ್ತಾರೆ. ಆದ್ರೆ ಅಂಥ ವೆಡ್ಡಿಂಗ್ ಡ್ರೆಸ್ ನಲ್ಲೇ ಏನಾದ್ರೂ ಎಡವಟ್ಟಾದ್ರೆ ಕೇಳ್ಬೇಕಾ? ಆ ಮದುಮಗಳ ಪರಿಸ್ಥಿತಿ ಏನಾಗಿರಬೇಡ ಹೇಳಿ. ಇಲ್ಲಾಗಿದ್ದೂ ಅದೇ!
ವೆಡ್ಡಿಂಗ್ ಡ್ರೆಸ್ ನ ಬ್ಲೌಸ್ ತರಲು ಮರೆತೇ ಬಿಟ್ಟಿದ್ದ ಮದುಮಗಳು!
ಅವತ್ತು ಆ ಹುಡುಗಿಯ ಮದುವೆ, ಮದುವೆ ಅಂದ್ಮೇಲೆ ಕೇಳ್ಬೇಕಾ, ಗೊತ್ತಿಲ್ಲದೇ ಒಂದಷ್ಟು ಟೆನ್ಶನ್ ಗಳು ತಲೆಗೇರಿರುತ್ತವೆ. ಮುಖ್ಯವಾದ ವಸ್ತುಗಳನ್ನೇ ಮರೆತು ಬಿಟ್ಟಿರ್ತಾರೆ. ಇಲ್ಲಾಗಿದ್ದೂ ಅದೇ. ಆ ಮದುಮಗಳು ಬೇರೆನನ್ನೋ ಮರೆತಿದ್ದರೆ ಹೋಗ್ಲಿ ಬಿಡು ಅಂತ ಸುಮ್ಮನಾಗಬಹುದಿತ್ತೇನೋ.. ಆದ್ರೆ ಆಕೆ ತನ್ನ ವೆಡ್ಡಿಂಗ್ ಲೆಹೆಂಗಾದ ಬ್ಲೌಸ್ ಅನ್ನೋ ಪ್ಯಾಕ್ ಮಾಡೋಕೆ ಮರೆತುಬಿಟ್ಟಿದ್ದಳು.
ಮೊದಲೇ ಗೊತ್ತಾಗಿದ್ದರೆ ಏನಾದರೂ ಮಾಡಬಹುದಿತ್ತೇನೋ. ಆದ್ರೆ ತನ್ನ ಡ್ರೆಸ್ ನ ಬ್ಲೌಸ್ ಮರೆತಿದ್ದೇನೆಂದು ಆಕೆಗೆ ಗೊತ್ತಾಗಿದ್ದು ಮದುವೆಗೆ ಬರೀ 4 ಗಂಟೆ ಮೊದಲು. ಪ್ಯಾಕ್ ಮಾಡೋವಾಗ ಬರೀ ಲೆಹೆಂಗಾ ಹಾಗೂ ದುಪ್ಪಟ್ಟಾ ಮಾತ್ರ ತೆಗೆದುಕೊಂಡಿದ್ದಳು. ಇಂಥ ಎಡವಟ್ಟಾದ್ರೆ ಯಾರಿಗಾದರೂ ಟೆನ್ಶನ್ ದುಃಖ ಆಗೋದು ಸಹಜ. ಆದ್ರೆ ಆಕೆ ಸಮಾಧಾನದಿಂದ ಯೋಚಿಸಿದಳು. ಏನಾದ್ರೂ ಪರಿಹಾರ ಸಿಗಬಹುದಾ ಅಂತ ನೋಡಿದಳು. ಕೊನೆಗೂ ಆಕೆಗೆ ಒಂದು ಪರ್ಯಾಯ ಸಿಕ್ಕೇ ಬಿಟ್ಟಿತು.
View this post on Instagram
ಸದ್ಯ ಈ ವಿಡಿಯೋವನ್ನು 4.9 ಮಿಲಿಯನ್ ಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ
ಇನ್ನು, ಈ ವಿಡಿಯೋಕ್ಕೆ ಹಲವಾರು ಜನರು ಕಾಮೆಂಟ್ ಮಾಡಿದ್ದು, ಮದುಮಗಳು ವೆಡ್ಡಿಂಗ್ ಬ್ಲೌಸ್ ಅನ್ನು ಹೇಗೆ ಮರೆಯೋದಕ್ಕೆ ಸಾಧ್ಯ ಎಂದು ಕೇಳಿದ್ದಾರೆ. ಇನ್ನೊಬ್ಬರು ಕಾಮೆಂಟ್ ನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ತನ್ನ ಕುಟುಂಬದವರು ತನ್ನ ರಿಸೆಪ್ಶನ್ ಡ್ರೆಸ್ ಅನ್ನೇ ಮರೆತು ಬಂದಿದ್ದರು. ಆದರೆ ತಮ್ಮ ಮನೆಯು ಹತ್ತಿರದಲ್ಲೇ ಇದ್ದದ್ದರಿಂದ ಹೋಗಿ ತೆಗೆದುಕೊಂಡು ಬಂದರು ಎಂಬುದಾಗಿ ಬರೆದುಕೊಂಡಿದ್ದಾರೆ. ಮತ್ತೊಬ್ಬರು ತನ್ನ ಎಂಗೇಜ್ ಮೆಂಟ್ ದಿನ ಹೀಗೆಯೇ ಆಗಿತ್ತು ಎಂಬುದಾಗಿ ಬರೆದಿದ್ದಾರೆ.
ಇದನ್ನೂ ಓದಿ: Turtle Story: ಈ ಆಮೆಯ ವಯಸ್ಸನ್ನು ಕೇಳಿದ್ರೇ ಪಕ್ಕಾ ಶಾಕ್ ಆಗ್ತೀರಾ!
ಒಟ್ನಲ್ಲಿ ಟೆನ್ಶನ್ ನಲ್ಲಿರೋವಾಗ ಒಂದಲ್ಲ ಒಂದು ತಪ್ಪು ನಡೆಯೋದು ಸಹಜ. ಆದ್ರೆ ನಾವು ಸಮಾಧಾನದಿಂದ ಯೋಚಿಸಿದರೆ ಒಂದಲ್ಲ ಒಂದು ದಾರಿ ಸಿಕ್ಕೇ ಸಿಗುತ್ತೆ. ಇದು ಈ ಮಧುಮಗಳ ವಿಚಾರದಲ್ಲೂ ನಿಜವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ