Bride Entry: ಮಂಟಪಕ್ಕೆ ಕಾಲಿಡುತ್ತಲೇ ವರನ ನೋಡಿ ಜೋರಾಗಿ ಅತ್ತ ವಧು! ವಿಡಿಯೋ ವೈರಲ್

ಚಿನ್ನದ ಬಣ್ಣದ ಸೀರೆಯುಟ್ಟ ವಧು ತನ್ನವರೊಂದಿಗೆ ಮಂಟಪಕ್ಕೆ ಬರುತ್ತಾಳೆ. ಮಂಟಪದತ್ತ ಬರುತ್ತಾ ತನ್ನ ವರನನ್ನು ನೋಡಿದ ವಧು ಖುಷಿಯಾಗುವುದಿಲ್ಲ, ಬದಲಾಗಿ ಜೋರಾಗಿ ಅಳುತ್ತಾಳೆ. ಆಕೆಯ ಜೊತೆಗಿದ್ದವರು ಆಕೆಯನ್ನು ಸಮಾಧಾನಿಸುತ್ತಾರೆ.

ಭಾವುಕಳಾದ ವಧು

ಭಾವುಕಳಾದ ವಧು

 • Share this:
  ಮದುವೆ (Marriage) ಎನ್ನುವುದು ಪ್ರತಿ ಹೆಣ್ಣಿಗೂ ಭಾವುಕ ಕ್ಷಣ. ಆ ಖುಷಿ, ಸಂಭ್ರಮ ವಿವರಿಸಲಾಗದ್ದು. ಪ್ರೀತಿಸಿ ಮದುವೆಯಾದರೂ (Wedding), ಅಥವಾ ಮನೆಯವರೇ ನೋಡಿ ಮದುವೆ ಮಾಡುತ್ತಿದ್ದರೂ ಆ ಕ್ಷಣ ಮಾತ್ರ ವಿಶೇಷ ಅನುಭೂತಿಯನ್ನು ಒಳಗೊಂಡಿರುತ್ತದೆ. ಸಂಭ್ರಮದಿಂದ ಡ್ಯಾನ್ಸ್ (Dance) ಮಾಡಿಕೊಂಡು, ವಿಶೇಷವಾಗಿ ಎಂಟ್ರಿ (Special Entry) ಕೊಡುವ ವಧುವನ್ನು ನೀವು ನೋಡಿರಬಹುದು. ಆದರೆ ವರನ ನೋಡುತ್ತಲೇ ಹೃದಯ ತುಂಬಿಬಂದು ಅಳುತ್ತಾ ಬರುವ ವಧುವನ್ನು ನೀವು ನೋಡಿದ್ದೀರಾ? ಹೌದು ಇಲ್ಲೊಬ್ಬ ವಧು ಭಾವುಕಳಾಗಿ ತನ್ನ ಕಣ್ಣೀರನ್ನು ತಡೆಯುವ ವ್ಯರ್ಥ ಪ್ರಯತ್ನವನ್ನು ಮಾಡುತ್ತಿರುವ ವಿಡಿಯೋ  (Video) ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral) ಆಗಿದೆ.

  ಎಟರ್ನಲ್ ವೆಡ್ಡಿಂಗ್ಸ್ ಎಂಬ ಇನ್ಸ್​ಸ್ಟಾಗ್ರಾಮ್ ಪೇಜ್ ಮದುವೆಯ ವಿಡಿಯೋ ಒಂದನ್ನು ಶೇರ್ ಮಾಡಿದೆ. ಚಿನ್ನದ ಬಣ್ಣದ ಸೀರೆಯುಟ್ಟ ವಧು ತನ್ನವರೊಂದಿಗೆ ಮಂಟಪಕ್ಕೆ ಬರುತ್ತಾಳೆ. ಮಂಟಪದತ್ತ ಬರುತ್ತಾ ತನ್ನ ವರನನ್ನು ನೋಡಿದ ವಧು ಖುಷಿಯಾಗುವುದಿಲ್ಲ, ಬದಲಾಗಿ ಜೋರಾಗಿ ಅಳುತ್ತಾಳೆ. ಆಕೆಯ ಜೊತೆಗಿದ್ದವರು ಆಕೆಯನ್ನು ಸಮಾಧಾನಿಸುತ್ತಾರೆ.

  ಇತ್ತ ವಧುವನ್ನು ನೋಡಿದ ವರನೂ ಭಾವುಕನಾಗುವುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು. ವಧುವನ್ನು ನೋಡಿ ವರ ಕಣ್ಣೀರಾಗುವ ದೃಶ್ಯ ನೆಟ್ಟಿಗರ ಮನಸು ಗೆದ್ದಿದೆ.

  ಕೈಮುಗಿದು ಕುಳಿತ  ವಧು

  ಮಂಟಪಕ್ಕೆ ಬರುವಾಗ ಕಣ್ಣೀರಿಟ್ಟ ವಧು ಧಾರೆಯ ಶಾಸ್ತ್ರ ಆಗುವ  ಸಂದರ್ಭ ನಸುನಗುತ್ತಾ ಕೈ ಮುಗಿದು ತಾಳಿಗೆ ಕೊರಳೊಡ್ಡುತ್ತಾಳೆ. ಪ್ರೀತಿ ಮತ್ತು ದಾಂಪತ್ಯದ ಮಧುರ ಆರಂಭವನ್ನು ಈ ವಿಡಿಯೋದಲ್ಲಿ ನೀವು ಸ್ಪಷ್ಟವಾಗಿ ಕಾಣಬಹುದು.


  ಎಲ್ಲರೂ ಸಂಭ್ರಮದಲ್ಲಿ ಕಿರುಚುತ್ತಿರುವಾಗ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಸದ್ಯ ಈ ವಿಡಿಯೋವನ್ನು ಜನರು ಮತ್ತೆ ಮತ್ತೆ ವೀಕ್ಷಿಸುತ್ತಿರುವುದರ ಜೊತೆಗೆ ಶೇರ್ ಕೂಡಾ ಮಾಡುತ್ತಿದ್ದಾರೆ. ಈ ಸುಂದರವಾದ ವಿಡಿಯೋ ಈಗ ಸೋಷಿಯಲ್ ಮೀಡಿಯಾ ಬಳಕೆದಾರರ ಮೆಚ್ಚುಗೆ ಗಳಿಸಿದೆ.

  ವಿಡಿಯೋಗೆ ಸಿಕ್ಕಾಪಟ್ಟೆ ವ್ಯೂಸ್

  ಈ ವಿಡಿಯೋಗೆ ನಾಲ್ಕು ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದ್ದು ನೆಟ್ಟಿಗರು ಮನದುಂಬಿ ಹೊಸ ಜೋಡಿ ಶುಭ ಹಾರೈಸಿದ್ದಾರೆ.

  ಬೆಂಕಿಯ ಸ್ಟಂಟ್

  ವೀಡಿಯೋದಲ್ಲಿ ಈ ನವ ವಧು-ವರರು ಮಾಡಿರುವ ಸ್ಟಂಟ್ ಮಾತ್ರ ನಾವು ನೀವು ಎಲ್ಲಿಯೂ ನೋಡಿರುವುದಿಲ್ಲ ಅಂತ ಹೇಳಬಹುದು. ಉದ್ದೇಶ ಪೂರ್ವಕವಾಗಿ ತಮ್ಮ ಮೈಗೆ ಬೆಂಕಿ ಹಚ್ಚಿಕೊಂಡು ಅತಿರೇಕದ ಸಾಹಸವನ್ನು ಪ್ರದರ್ಶಿಸಿ ಮದುವೆ ಆರತಕ್ಷತೆಯಲ್ಲಿ ಅತಿಥಿಗಳ ನಡುವೆಯಿಂದ ಹೊರ ನಡೆದಿದ್ದನ್ನು ಈ ವೀಡಿಯೋದಲ್ಲಿ ನೋಡಬಹುದು.

  ಇದನ್ನೂ ಓದಿ: Chef badger: ಈ ನಾಯಿಗೆ ತಿನ್ನೋದು ಮಾತ್ರ ಅಲ್ಲ ಅಡುಗೆ ಮಾಡೋಕು ಬರುತ್ತೆ; ವಿಡಿಯೋ ನೋಡಿ

  ಸಿಕ್ಕಾಪಟ್ಟೆ ವೈರಲ್ ಆದ ವಧು ವರರ ವಿಡಿಯೋ

  ಅದರಲ್ಲೂ ಇವರು ವೃತ್ತಿಪರ ಸ್ಟಂಟ್ ಜೋಡಿ ಅಂತೆ, ಗೇಬ್ ಜೆಸ್ಸಾಪ್ ಮತ್ತು ಅಂಬಿರ್ ಬಾಂಬಿರ್ ಹಾಲಿವುಡ್ ಚಲನಚಿತ್ರಗಳ ಸೆಟ್‌ನಲ್ಲಿ ಸ್ಟಂಟ್ ಹೇಳಿ ಕೊಡುವಾಗ ಪರಸ್ಪರ ಭೇಟಿಯಾದರಂತೆ. ಡಿಜೆ ಮತ್ತು ಮದುವೆಯ ಫೋಟೋಗ್ರಾಫರ್ ರಸ್ ಪೊವೆಲ್ ಅವರು ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಿದ ಅವರ ವಿವಾಹದ ಆರತಕ್ಷತೆಯ ಸ್ಟಂಟ್‌ನ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ಈ ಸ್ಟಂಟ್ ನ ವೀಡಿಯೋಗೆ “ಸ್ಟಂಟ್ ಮಾಡುವ ವೃತ್ತಿಪರರಿಬ್ಬರು ಮದುವೆಯಾದಾಗ" ಎಂಬ ಶೀರ್ಷಿಕೆಯನ್ನು ಸಹ ನೀಡಿದ್ದಾರೆ. ವೀಡಿಯೋದಲ್ಲಿ, ವಧು ಮತ್ತು ವರನ ಹಿಂಭಾಗದಲ್ಲಿ ತ್ವರಿತವಾಗಿ ಹರಡುವ ಬೆಂಕಿ ಒಂದು ರೀತಿಯಲ್ಲಿ ಹೂವುಗಳ ಜ್ವಾಲೆಯ ಪುಷ್ಪಗುಚ್ಛವನ್ನು ಜಾಡಿಸುತ್ತಿರುವುದನ್ನು ನಾವು ನೋಡಬಹುದು, ನಂತರ ಅವರು ಹಾಗೆಯೇ ಮುಂದೆ ನಡೆದರು. ಆ ಘಟನೆಯ ಹಿನ್ನಲೆಯಲ್ಲಿ ಅತಿಥಿಗಳ ಹರ್ಷೋದ್ಗಾರವನ್ನು ನಾವು ಕೇಳಬಹುದು ಮತ್ತು ಇಷ್ಟೇ ಅಲ್ಲದೆ ಮದುವೆಗೆ ಬಂದಂತಹ ಅತಿಥಿಗಳತ್ತ ನವ ವಧು-ವರರು ಕೈ ಬೀಸಿದರು.

  ಇದನ್ನೂ ಓದಿ: Gym Fail Photos: ದಯವಿಟ್ಟು ಜಿಮ್​​ನಲ್ಲಿ ಹಿಂಗೆಲ್ಲಾ ಮಾಡ್ಬೇಡಿ! ಸದ್ಯಕ್ಕೆ ಫೋಟೋಸ್​ ನೋಡಿ, ಎಂಜಾಯ್​ ಮಾಡಿ

  ನವವಿವಾಹಿತರ ಬೆಂಕಿಯನ್ನು ನಂದಿಸಿದ ಅಗ್ನಿಶಾಮಕಗಳು

  ನವವಿವಾಹಿತರು ಈ ಸಾಹಸದ ಸ್ಟಂಟ್ ಮಾಡುವಾಗ ತುಂಬಾನೇ ಶಾಂತವಾಗಿದ್ದರು ಮತ್ತು ಅಂತಿಮವಾಗಿ ಅಲ್ಲೇ ಇರುವಂತಹ ಅಗ್ನಿಶಾಮಕಗಳು ಆ ಇಬ್ಬರು ನವವಿವಾಹಿತರ ಬೆಂಕಿಯನ್ನು ನಂದಿಸಿದರು.ಇದನ
  Published by:Divya D
  First published: