Viral Video: ಮದುವೆ ಮಂಟಪಕ್ಕೆ ಬೈಕ್ ಓಡಿಸಿಕೊಂಡು ಬಂದ ರಾಕಿಂಗ್​ ವಧು; ಸಂಬಂಧಿಗಳು ಶಾಕ್​​!

ಕೆಂಪು ಲೆಹಂಗಾವನ್ನು ನೆಲಕ್ಕೆ ತಾಕದಂತೆ ಸ್ವಲ್ಪ ಮೇಲೆತ್ತಿ ಹಿಡಿದುಕೊಂಡು ಬೈಕ್ ಹತ್ತಿರ ಬಂದು ರಾಕ್ ಸ್ಟಾರ್‌ ನಂತೆ ಬೈಕ್ ಮೇಲೆ ಕುಳಿತು ಓಡಿಸುತ್ತಿರುವುದು ಕಂಡುಬಂದಿದೆ.

ವೈರಲ್ ವಿಡಿಯೋ

ವೈರಲ್ ವಿಡಿಯೋ

  • Share this:
ಈಗ ಜನರು ತಮ್ಮ ಬಿಡುವಿನ ಸಮಯವನ್ನು ಹೇಗೆ ಕಳೆಯುವುದು ಅಂತಾ ಯೋಚನೆ ಮಾಡಬೇಕಿಲ್ಲ, ಏಕೆಂದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿ ಕೊಳ್ಳುತ್ತಿರುವಂತಹ ಈ ಮದುವೆಯ ವಿಡಿಯೋ ತುಣುಕುಗಳು, ಸಾಹಸಮಯ ವಿಡಿಯೋಗಳು ಮತ್ತು ವಿಭಿನ್ನವಾದಂತಹ ವಿಡಿಯೋ ತುಣುಕುಗಳನ್ನು ನೋಡುತ್ತಾ ಹಾಯಾಗಿ ತಮ್ಮ ಸಮಯ ಕಳೆಯಬಹುದಾಗಿದೆ.ಅದರಲ್ಲೂ ಈ ಮದುವೆಗಳಿಗೆ ಸಂಬಂಧಪಟ್ಟಂತೆ ವಧು ವರರು ಮತ್ತು ಅವರ ಸ್ನೇಹಿತರು ಮಾಡುವಂತಹ ವಿಶಿಷ್ಟವಾದ ಚೇಷ್ಟೆಗಳ ಮತ್ತು ವಿನೂತನ ಕೆಲಸಗಳಿಂದ ವಿಡಿಯೋಗಳು ಜನಪ್ರಿಯತೆಯನ್ನು ಪಡೆಯುತ್ತಿವೆ. ಹಿಂದೆಲ್ಲಾ ನವ ವಧು ತುಂಬಾ ಸಂಪ್ರದಾಯಬದ್ದವಾಗಿ ತನ್ನ ಸಹೋದರ ಸಹೋದರಿಯರೊಂದಿಗೆ ಜೊತೆಗೂಡಿ ವರನ ಮನೆಗೆ ಅಥವಾ ಕಲ್ಯಾಣ ಮಂಟಪಕ್ಕೆ ತಮ್ಮ ಮದುವೆ ಸಮಾರಂಭಕ್ಕೆ ಹೋಗುತ್ತಿದ್ದರು. ಆದರೆ ಇಂದಿನ ವಧು ತನ್ನ ಮದುವೆಯ ದಿನವನ್ನು ವಿಶೇಷವಾಗಿಸಲು ಏನಾದರೂ ಒಂದು ಹೊಸದನ್ನು ಪ್ರಯೋಗಿಸುತ್ತಲೇ ಇರುತ್ತಾರೆ. ವಿಡಿಯೋವೊಂದರಲ್ಲಿ ವಧು ಯಾವ ರೀತಿಯಲ್ಲಿ ಮದುವೆ ಮಂಟಪಕ್ಕೆ ತೆರಳಬೇಕು ಎಂದು ಹೊಸ ಪ್ರಯೋಗ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ಇತ್ತೀಚಿನ ದಿನಗಳಲ್ಲಿ ಭಾರತೀಯ ವಧು ಮತ್ತು ವರರು ಸಾಮಾಜಿಕ ಮಾಧ್ಯಮದಲ್ಲಿ ಅತಿದೊಡ್ಡ ಟ್ರೆಂಡ್‌ ಸೆಟರ್‌ಗಳಾಗಿದ್ದು, ವೈರಲ್ ಆಗಿರುವ ವಿಡಿಯೋದಲ್ಲಿ ವಧು ಹಾಗೆ ಸ್ಟೈಲ್ ಆಗಿ ನಡೆದುಕೊಂಡು ಬಂದು ತಮ್ಮ ಎರಡು ಕೈಗಳಿಂದ ತಮ್ಮ ಕೆಂಪು ಲೆಹಂಗಾವನ್ನು ನೆಲಕ್ಕೆ ತಾಕದಂತೆ ಸ್ವಲ್ಪ ಮೇಲೆತ್ತಿ ಹಿಡಿದುಕೊಂಡು ಬೈಕ್ ಹತ್ತಿರ ಬಂದು ರಾಕ್ ಸ್ಟಾರ್‌ ನಂತೆ ಬೈಕ್ ಮೇಲೆ ಕುಳಿತು ಓಡಿಸುತ್ತಿರುವುದು ಕಂಡುಬಂದಿದೆ.

ವಿಡಿಯೋದಲ್ಲಿರುವ ವಧು ಕೆಂಪು ಬಣ್ಣದ ಮದುವೆ ಲೆಹಂಗಾ ಧರಿಸಿ ಮದುವೆಯ ಆಭರಣಗಳು ಮತ್ತು ಕಪ್ಪು ಕನ್ನಡಕ ಧರಿಸಿ ತುಂಬಾ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದಾರೆ.


ಅತ್ಯಂತ ಮುಖ್ಯವಾದ ವಿಷಯವೆಂದರೆ ವಧುವಿಗೆ ಬೈಕ್ ಓಡಿಸಲು, ಲೆಹೆಂಗಾದಲ್ಲಿ ಯಾವುದೇ ತೊಂದರೆ ಎದುರಾಗಲಿಲ್ಲ. ಅವಳು ಈ ಬೈಕ್ ಸವಾರಿಯನ್ನು ಆನಂದಿಸುತ್ತಾ ಮದುವೆಯ ಮಂಟಪವನ್ನು ತಲುಪಿದ್ದಾಳೆ. ಈ ವಿಡಿಯೋದಲ್ಲಿ ವಧು ಸುಂದರವಾಗಿ ಮತ್ತು ತನ್ನನ್ನು ಮದುವೆಯಾಗುವ ವರನನ್ನು ಮೋಡಿ ಮಾಡುವಂತೆ ಕಾಣುತ್ತಿದ್ದಾಳೆ. ವಿಡಿಯೋವನ್ನು ಇನ್ಸ್ಟಾಗ್ರಾಮ್ ಖಾತೆಯ ವಿಟ್ಟಿ_ವೆಡ್ಡಿಂಗ್ ಎಂಬ ಪುಟ ಒಂದರಲ್ಲಿ ಹಂಚಿಕೊಳ್ಳಲಾಗಿದೆ.


ವಿಡಿಯೋ ಶೀರ್ಷಿಕೆಯಲ್ಲಿ ವಧುವಿನ ಹೆಸರು - ದೃಷ್ಟಿ ಸೈನಿ, ಬೈಕ್ - ಜಾವಾ ಮೋಟರ್ ಸೈಕಲ್, ಲೆಹಂಗಾ - ಬನಾರಸಿ ಲೆಹಂಗಾ ಎಂದು ಬರೆಯಲಾಗಿದ್ದು, ವಿಡಿಯೋವನ್ನು ಹಂಚಿಕೊಳ್ಳುವಾಗ ಅದರೊಟ್ಟಿಗೆ "ತನ್ನ ವರನನ್ನು ಕರೆದುಕೊಂಡು ಬರಲು ಹೋಗುತ್ತಿದ್ದಾರೆ" ಎಂದೂ ಬರೆದಿದ್ದಾರೆ.ಈ ವಿಡಿಯೋವನ್ನು ಇದುವರೆಗೂ 8,44,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, 40,000ಕ್ಕೂ ಹೆಚ್ಚು ಜನರು ಇದನ್ನು ಇಷ್ಟ ಪಟ್ಟಿದ್ದಾರೆ. ಕೆಲ ನೆಟ್ಟಿಗರು ವಧುವಿನ ವಿನೂತನ ಶೈಲಿಯನ್ನು ಹೊಗಳಿದ್ದಾರೆ, ಕೆಲವರು ಆಕೆಯ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದಾರೆ. "ಇದು ಒಳ್ಳೆಯದಲ್ಲ! ಲೆಹೆಂಗಾ ಧರಿಸಿ ಬೈಕ್ ಓಡಿಸುವುದು ಅಪಾಯಕಾರಿಯಾಗಬಹುದು" ಎಂದು ಪ್ರತಿಕ್ರಿಯಿಸಿದ್ದಾರೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
First published: