HOME » NEWS » Trend » BRIDE CANCEL HER WEDDING AS GROOM FAILS TO READ NEWSPAPER WITHOUT GLASSES IN UP SESR

ಕನ್ನಡಕವಿಲ್ಲದೇ ದಿನಪತ್ರಿಕೆ ಓದುವಂತೆ ಸವಾಲ್​ ಹಾಕಿದ ವಧು; ಕಡೆಗೆ ಮುರಿದು ಬಿತ್ತು ಮದುವೆ

ಮದುವೆ ಮನೆಗೆ ಬಂದ ಗಂಡು ಬಂದಾಗಿನಿಂದಲೂ ಸದಾ ಕನ್ನಡಕ ಧರಿಸುತ್ತಿದ್ದ. ಈ ವೇಳೆ ಆತನ ಕಣ್ಣಿನ ದೋಷದ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ

news18-kannada
Updated:June 24, 2021, 4:45 PM IST
ಕನ್ನಡಕವಿಲ್ಲದೇ ದಿನಪತ್ರಿಕೆ ಓದುವಂತೆ ಸವಾಲ್​ ಹಾಕಿದ ವಧು; ಕಡೆಗೆ ಮುರಿದು ಬಿತ್ತು ಮದುವೆ
ಮದುವೆ ಮನೆಗೆ ಬಂದ ಗಂಡು ಬಂದಾಗಿನಿಂದಲೂ ಸದಾ ಕನ್ನಡಕ ಧರಿಸುತ್ತಿದ್ದ. ಈ ವೇಳೆ ಆತನ ಕಣ್ಣಿನ ದೋಷದ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ
  • Share this:
ವರನೊಬ್ಬ ಕನ್ನಡಕ ಇಲ್ಲದೇ ಹಿಂದಿ ದಿನಪತ್ರಿಕೆ ಓದಲು ಸಾಧ್ಯವಾಗಿಲ್ಲ ಎಂಬ ಕಾರಣಕ್ಕೆ ವಧ ಮದುವೆಯನ್ನೇ ರದ್ದು ಗೊಳಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತಮ ಶಿಕ್ಷಿತ ಎಂದು ವರನ ಮದುವೆಯಾಗಲು ನಿಶ್ಚಯಿಸಿದ ವಧುಗೆ ಆತನ ನಡುವಳಿಕೆ ಅನುಮಾನ ಮೂಡಿಸಿದೆ. ಈ ವೇಳೆ, ದಿನ ಪತ್ರಿಕೆ ಓದುವ ಸವಾಲ್​ ಹಾಕಲಾಗಿದೆ.  ಬಳಿಕ ಕಲ್ಯಾಣ ಮಂಟಪದಲ್ಲಿ ಆತನೊಂದಿಗೆ ತಾನು ಮದುವೆಯಾಗುವುದಿಲ್ಲ ಎಂದು  ಕಡ್ಡಿ ಮುರಿದಂತೆ ತಿಳಿಸಿದ್ದಾಳೆ. ಯುವತಿ ಮನೆಯವರು ಕೂಡ ಹುಡುಗನ ಸುಶಿಕ್ಷಿತನಲ್ಲದಿದ್ದರೂ ಆತನ ಓದಿನ ಕುರಿತು ಸತ್ಯ ಮುಚ್ಚಿಟ್ಟಿದ್ದ ಕಾರಣ ಈ ಮದುವೆಗೆ ನಕಾರ ವ್ಯಕ್ತಪಡಿಸಿದ್ದು, ಕನ್ನಡಕ ಧರಿಸಿದ ಒಂದೇ ಕಾರಣಕ್ಕೆ ಆಗಬೇಕಿದ್ದ ಮದುವೆಯೊಂದು ಮುರಿದು ಬಿದ್ದಿದೆ.

ಅಸಲಿಗೆ ನಡೆದಿದ್ದೇನು?

ಉತ್ತರ ಪ್ರದೇಶದ ಅರುಲಿಯಾದಲ್ಲಿ ಅರ್ಜುನ್​ ಸಿಂಗ್​ ಎಂಬುವವರ ಮಗಳು ಅರ್ಚನ ಮದುವೆಯನ್ನು ಶಿವ ಎಂಬ ವ್ಯಕ್ತಿಯೊಂದಿಗೆ ಮಾಡಲು ನಿರ್ಧರಿಸಿದ್ದರು, ಹಿರಿಯರು ನೋಡಿನ ನಿಶ್ವಯಿಸಿದ ಈ ಮದುವೆ ಇದೇ ಜೂನ್​. 20ರಂದು ಅದ್ಧೂರಿಯಾಗಿ ನಡೆಯಬೇಕಿತ್ತು. ಹುಡುಗ ಸುಕ್ಷಿತ ಎಂಬ ಕಾರಣಕ್ಕೆ ಅರ್ಚನ ಕೂಡ ಮದುವೆಗೆ ಒಪ್ಪಿದ್ದಳು. ಆದರೆ, ಮದುವೆ ದಿನ ನಡೆದ ಘಟನೆ ಎಲ್ಲವೂ ತಲೆಕೆಗಳಾಗುವಂತೆ ಮಾಡಿದೆ.

ಮದುವೆ ಮನೆಗೆ ಬಂದ ಗಂಡು ಬಂದಾಗಿನಿಂದಲೂ ಸದಾ ಕನ್ನಡಕ ಧರಿಸುತ್ತಿದ್ದ. ಈ ವೇಳೆ ಆತನ ಕಣ್ಣಿನ ದೋಷದ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮದುಮಗಳಿಗೂ ಇರಿಸು ಮುರಿಸಾಗಿದೆ. ಈ ವೇಳೆ ಆತನಿಗೆ ಕನ್ನಡಕವಿಲ್ಲದೇ ಹಿಂದಿ ದಿನಪತ್ರಿಕೆಯೊಂದನ್ನು ಓದುವಂತೆ ಮದುವಗಳು ಸವಾಲ್​ ಹಾಕಿದ್ದಾಳೆ.

ಈ ಸವಾಲನ್ನು ಪೂರೈಸುವಲ್ಲಿ ವರ ವಿಫಲನಾಗಿದ್ದಾನೆ. ಕಣ್ಣಿನ ದೋಷದ ಹೊರತಾಗಿಯೂ ಆತ ದಿನಪತ್ರಿಕೆ ಓದಲು ವಿಫಲನಾಗಿದ್ದಾನೆ. ಸುಶಿಕ್ಷಿತ ಎಂದು ಹೇಳಿ ಮೋಸ ಮಾಡಲು ವರ ನಿರ್ಧರಿಸಿದ್ದು, ಬಯಲಾಗಿದೆ. ಇದೇ ಕಾರಣಕ್ಕೆ ಯುವತಿ ಮದುವೆಯನ್ನು ರದ್ದುಗೊಳಿಸಿದ್ದಾಳೆ.

ಇದನ್ನು ಓದಿ: ರಿಲಯನ್ಸ್​ ಸಂಸ್ಥೆ ಶೇ 11ಕ್ಕಿಂತ ಹೆಚ್ಚಿನ ಮೆಡಿಕಲ್​ ಲಿಕ್ವಿಡ್​ ಆಕ್ಸಿಜನ್​ ಉತ್ಪಾದಿಸುತ್ತಿದೆ; ನೀತಾ ಅಂಬಾನಿ

ಘಟನೆ ಕುರಿತು ವಧುವಿನ ಮನೆಯವರು ಪೊಲೀಸರಿಗೆ ದೂರನ್ನು ದಾಖಲಿಸಿದ್ದಾರೆ, ಅಲ್ಲದೇ, ಮದುವೆಗೆ ಮುನ್ನ ನೀಡಿದ್ದ ವರದಕ್ಷಿಣೆ ಹಾಗೂ ಮೋಟರ್​ಸೈಕಲ್​ ಅನ್ನು ಕೂಡ ವಾಪಸ್​ ನೀಡುವಂತೆ ತಿಳಿಸಿದ್ದಾರೆ.ಇತ್ತಿಚೇಗೆ ಉತ್ತರ ಪ್ರದೇಶದಲ್ಲಿ ಎರಡರ ಮಗ್ಗಿ ಹೇಳಲು ವಿಫಲನಾದ ಹಿನ್ನಲೆ ಮದುವೆ ರದ್ದುಇ ಗೊಂಡ ಘಟನೆ ಕೂಡ ನಡೆದಿತ್ತು.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
Published by: Seema R
First published: June 24, 2021, 4:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories