• Home
  • »
  • News
  • »
  • trend
  • »
  • Viral News: ವರನನ್ನ ಮೆಚ್ಚಿಸಲು ಹೋಗಿ ಮದುವೆಯ ಮೊದಲ ರಾತ್ರಿಯೇ ಆಸ್ಪತ್ರೆ ಸೇರಿದ ವಧು

Viral News: ವರನನ್ನ ಮೆಚ್ಚಿಸಲು ಹೋಗಿ ಮದುವೆಯ ಮೊದಲ ರಾತ್ರಿಯೇ ಆಸ್ಪತ್ರೆ ಸೇರಿದ ವಧು

ವಧು ಮತ್ತು ವರ

ವಧು ಮತ್ತು ವರ

ಎವೆಲಿನ್ ವರನನ್ನು ಮೆಚ್ಚಿಸಲು ಪ್ರದರ್ಶನ ನೀಡುತ್ತಿದ್ದಳು. ಆದ್ರೆ ಈ ವೇಳೆ ನಡೆದ ಘಟನೆಯಿಂದ ವಧು ಮದುವೆ ದಿನವೇ ಆಸ್ಪತ್ರೆ ಸೇರುವಂತಾಗಿದೆ.

  • Share this:

ಮದುವೆ (Marriage) ಆಂದ್ರೆ ಅದು ಎಲ್ಲರ ಜೀವನದ ಪ್ರಮುಖ ಘಟ್ಟ. ಮದುವೆ ನಿಶ್ಚಯವಾಗುತ್ತಿದ್ದಂತೆ ಅದರ ತಯಾರಿಗಳು ಆರಂಭಗೊಳ್ಳುತ್ತವೆ. ಇನ್ನು ಮದುವೆ ದಿನ ವಧು ಮತ್ತು ವರ ಎಂಟ್ರಿ (Groom And Bride Entry) ಬಗ್ಗೆ ಇಂದು ಬಹುತೇಕರ ಚಿಂತತರಾಗುತ್ತಾರೆ. ಮದುವೆ ದಿನವನ್ನು ಸ್ಮರಣೀಯವನ್ನಾಗಿಸಲು ವಧು ಮತ್ತು ವರ ಹೊಸ ಹೊಸ ಪ್ರಯತ್ನಕ್ಕೆ ಮುಂದಾಗುತ್ತಾರೆ. ಇನ್ನೂ ಕೆಲವು ಮದುವೆಗಳಲ್ಲಿ ವಧು ಮತ್ತು ವರ ಜೊತೆಯಾಗಿ ಹೆಜ್ಜೆ ಹಾಕುವ ಮೂಲಕ ಅತಿಥಿಗಳ ಹೃದಯ ಗೆಲ್ಲುತ್ತಾರೆ. ಆದ್ರೆ ಮದುವೆ ದಿನವೇ ವಧು ಡ್ಯಾನ್ಸ್ (Bride Dance) ಮಾಡಲು ಹೋಗಿ ಆಸ್ಪತ್ರೆ ಸೇರಿರುವ ಘಟನೆ ನಡೆದಿದೆ.


ಮಿರರ್ ವರದಿಯ ಪ್ರಕಾರ, ವಧುವಿನ ಹೆಸರು ಎವೆಲಿನ್ ಮೆಕ್‌ಕೂಲ್, ಅವರು ಪೀಟರ್ ಮೆಕ್‌ಕಾಪಿನ್ ಎಂಬ ವ್ಯಕ್ತಿಯನ್ನು ಮದುವೆ ಆಗುತ್ತಿದ್ದರು. ಮದುವೆ ದಿನ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಎವೆಲಿನ್ ವರನನ್ನು ಮೆಚ್ಚಿಸಲು ಪ್ರದರ್ಶನ ನೀಡುತ್ತಿದ್ದಳು. ಆದ್ರೆ ಈ ವೇಳೆ ನಡೆದ ಘಟನೆಯಿಂದ ವಧು ಮದುವೆ ದಿನವೇ ಆಸ್ಪತ್ರೆ ಸೇರುವಂತಾಗಿದೆ.


ವಧು ಗಾಯಗೊಂಡಿದ್ದು ಹೇಗೆ?


ಡ್ಯಾನ್ಸ್ ಮಾಡಲು ವಧು ಮತ್ತು ವರನ ಹೆಸರು ಹೇಳುತ್ತಿದ್ದಂತೆ ಜೋಡಿ ವೇದಿಕೆ ಮೇಲೆ ಆಗಮಿಸಿತು. ಇಂಪಾದ ಸಂಗೀತಕ್ಕೆ ಜೋಡಿ ಸುಂದರವಾಗಿ ಹೆಜ್ಜೆ ಹಾಕಲು ಆರಂಭಿಸಿದರು. ಆದ್ರೆ ಡ್ಯಾನ್ಸ್ ಮಾಡುತ್ತಿರುವ ವೇಳೆ ವಧುವಿನ ಕಾಲು ಜಾರಿದೆ. ಈ ವೇಳೆ ಕೆಳಗೆ ಬೀಳುವಾಗ ಯುವತಿ ಎಡಗೈಯನ್ನು ಕೆಳಗೆ ಊರಿದ್ದಾಳೆ. ಅಷ್ಟರಲ್ಲಿ ಯುವತಿಯ ಕತ್ತಿನ ಭಾಗದ ಮೂಳೆ ಉಳುಕಿದ್ದರಿಂದ ಆಕೆ ಅಲ್ಲಿಯೇ ನೋವಿನಿಂದ ನರಳಲು ಆರಂಭಿಸಿದ್ದಾಳೆ.


ಇದನ್ನೂ ಓದಿ:  Love Letter: ಕುಸುಮಾ ನಿನ್ನನ್ನು ಕರೆಯಲು ಬರ್ತೀನಿ; ಬಂತು ವಿಶಾಲ್ ಸಂದೇಶ; ಇಬ್ಬರ ಮದ್ವೆ ನಡೆಯುತ್ತಾ?


ಕೂಡಲೇ ಪೋಷಕರು ಯುವತಿಯನ್ನು ವೇದಿಕೆಯಿಂದಲೇ ವಧುವನ್ನು ಸ್ಟ್ರೆಚರ್ ನಲ್ಲಿ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿ ಅಲ್ಲಿಯೇ ಚಿಕಿತ್ಸೆ ಪಡೆದು ಮರುದಿನ ಡಿಸ್ಚಾರ್ಜ್ ಆಗಿದ್ದಾರೆ.


ಮದುವೆ ರಾತ್ರಿಯನ್ನ ಆಸ್ಪತ್ರೆಯಲ್ಲಿ ಕಳೆದ ವಧು


ಈ ಘಟನೆಯ ಬಗ್ಗೆ ಸ್ವತಃ ವಧು ಎವೆಲಿನ್ ಮೆಕ್‌ ಕೂಲ್ ಮಿರರ್ ಪತ್ರಿಕೆ ಜೊತೆ ಮಾತನಾಡಿದ್ದು,. ಘಟನೆ ಬಗ್ಗೆ ವಿವರಿಸಿದ್ದಾರೆ. ನನ್ನ ಪತಿ ಉತ್ತಮ ಡ್ಯಾನ್ಸರ್. ಹಾಗಾಗಿ ಆತನನ್ನು ಮೆಚ್ಚಿಸಲು ನಾನು ಡ್ಯಾನ್ಸ್ ಪ್ರ್ಯಾಕ್ಟಿಸ್ ಮಾಡಿದ್ದೆ. ನಾನು ಸಹ ಉತ್ಸಾಹದಿಂದ ನೃತ್ಯ ಮಾಡಲು ಆರಂಭಿಸಿದೆ. ಆದ್ರೆ ನನ್ನ ಕಾಲು ಜಾರಿದ್ದರಿಂದ ಆಸ್ಪತ್ರೆ ಸೇರಬೇಕಾಯ್ತು.


ಈ ಅವಘಡದಿಂದ ಮದುವೆಯಾದ ಮೊದಲ ರಾತ್ರಿಯನ್ನು ಆಸ್ಪತ್ರೆಯಲ್ಲಿ ಕಳೆಯುವಂತಾಯ್ತು. ಒಂದು ದಿನ ಅಲ್ಲಿಯೇ ಉಳಿದು ಮರುದಿನ ಮನೆಗೆ ಬರಬೇಕಾಯ್ತು ಎಂದು ವಧು ಎವೆಲಿನ್ ಮೆಕ್‌ ಕೂಲ್ ಹೇಳಿದ್ದಾರೆ.


ಇದನ್ನೂ ಓದಿ:  Viral News: ಗೆಳತಿಯ ಸೋದರಿಯನ್ನ ಕಂಡು ದಿಗ್ಬ್ರಾಂತನಾದ ಹುಡುಗ: ನಾನೇನು ತಪ್ಪು ಮಾಡಿದೆ ಅಂತ ಕೇಳುತ್ತಿರುವ ಯುವಕ!


ವರ ಕಬೂಲ್ ಹೇಳ್ತಿದ್ದಂತೆ ಕುಣಿದಾಡಲು ಆರಂಭಿಸಿದ ವಧು


ಈ ವಿಡಿಯೋದಲ್ಲಿ ವರ ಮತ್ತು ವಧು ಪಕ್ಕದಲ್ಲಿ ಕುಳಿತಿರುತ್ತಾರೆ. ವರ ಮದುವೆಗೆ ಕಬೂಲ್ ಎಂದು ಹೇಳುತ್ತಿದ್ದಂತೆ ವಧು ಚಪ್ಪಾಳೆ ಹೊಡೆಯುತ್ತಾ ಕೂಗುತ್ತಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ವಧುವಿನ ಸಂಭ್ರಮ ಕಂಡು ಹಾರ್ಟ್, ಫನ್ನಿ ಎಮೋಜಿ ಹಾಕಿ ಕಮೆಂಟ್ ಮಾಡುತ್ತಿದ್ದಾರೆ.




ವೈರಲ್ ವಿಡಿಯೋದಲ್ಲಿ ಏನಿದೆ?


ಮೌಲ್ವಿ ಮುಂದೆ ವಧು ಮತ್ತು ವರ ಕುಳಿತಿರುತ್ತಾರೆ. ಮೊದಲೇ ವಧು ತನಗೆ ಮದುವೆ ಇಷ್ಟ ಎಂದು ಹೇಳಿರುತ್ತಾಳೆ. ಈಗ ವರನ ಸರದಿ. ಈ ವೇಳೆ ವರ ಸಹ ಮೌಲ್ವಿ ಹೇಳಿದ ಹಾಗೆ ಹೇಳುತ್ತಿರುತ್ತಾನೆ. ನಿಮಗೆ ಈ ಮದುವೆ ಒಪ್ಪಿಗೆಯಾ ಎಂದು ಕೇಳುತ್ತದ್ದಂತೆ ವರ, ಕಬೂಲ್ ಎಂದು ಹೇಳ್ತಾನೆ. ವರನ ಬಾಯಿಂದ ಕಬೂಲ್ ಎಂದು ಕೇಳುತ್ತಿದ್ದಂತೆ ವಧು ಸಂತೋಷದಿಂದ ಕುಣಿಯುತ್ತಾಳೆ. ಹಿಂದೆ ಕುಳಿತಿದ್ದ ಮಹಿಳೆ, ತಾಳ್ಮೆಯಿಂದ ಕುಳಿತುಕೊಳ್ಳುವಂತೆ ಸಲಹೆ ನೀಡುತ್ತಾಳೆ.

Published by:Mahmadrafik K
First published: