Bride and Groom: ಮದುವೆಯಲ್ಲಿ ವಧು ವರರ ಬೆಂಕಿಯ ಸಾಹಸಮಯ ಎಂಟ್ರಿ! ವಿಡಿಯೋ ವೈರಲ್

ಡಿಜೆ ಮತ್ತು ಮದುವೆಯ ಫೋಟೋಗ್ರಾಫರ್ ರಸ್ ಪೊವೆಲ್ ಅವರು ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಿದ ಅವರ ವಿವಾಹದ ಆರತಕ್ಷತೆಯ ಸ್ಟಂಟ್‌ನ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ಹೇಗಿಗೆ ಗೊತ್ತಾ ಇಲ್ಲಿದೆ ನೋಡಿ

ನವ ವಧು-ವರ

ನವ ವಧು-ವರ

  • Share this:
ಈಗಂತೂ ನವ ವಧು-ವರರು (Bride and Groom) ತಮ್ಮ ಮದುವೆ (Marriage) ಸಮಾರಂಭದಲ್ಲಿ ಬಂದಿರುವ ಅತಿಥಿಗಳ (Guests) ಮುಂದೆ ವಿಭಿನ್ನವಾಗಿ ಕಾಣಲು ಹೇಗೆಲ್ಲಾ ಮದುವೆ ಮನೆಗೆ ಎಂಟ್ರಿ ನೀಡುತ್ತಾರೆ ಮತ್ತು ಹೇಗೆಲ್ಲಾ ಕಾಣಿಸಿಕೊಳ್ಳಲು ಗ್ರ್ಯಾಂಡ್ ಆಗಿ ತಯಾರಾಗುತ್ತಾರೆ ಎನ್ನುವುದನ್ನು ದಿನನಿತ್ಯ ನಾವು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಹರಿದಾಡುತ್ತಿರುವ ವೀಡಿಯೋಗಳ (Video) ಮೂಲಕ ನೋಡುತ್ತಲೇ ಇದ್ದೇವೆ. ಕೆಲವು ದಿನಗಳ ಹಿಂದೆ ವಧು ತನ್ನ ಮದುವೆ ಸಮಾರಂಭಕ್ಕೆ ಗಾಳಿಯಲ್ಲಿ ನೂರಾರು ಬಲೂನ್ ಗಳನ್ನು ಕಟ್ಟಿಕೊಂಡು ಅದರ ಉಯ್ಯಾಲೆಯಲ್ಲಿ ಕೂತು ಅತಿಥಿಗಳ ಕಡೆಗೆ ಕೈ ಬೀಸುತ್ತಾ ಕೆಳಗೆ ಸಮಾರಂಭಕ್ಕೆ ಬಂದಿರುವುದನ್ನು ನೋಡಿದ್ದೆವು.

ನವ ವಧು-ವರರ ಸ್ಟಂಟ್ ವೀಡಿಯೋ
ಹಿಂದೆಯೂ ಸಹ ವಧು ತನ್ನ ಮದುವೆ ಮಂಟಪಕ್ಕೆ ರಾಯಲ್ ಎನ್‌ಫೀಲ್ಡ್ ಬೈಕ್ ಅನ್ನು ಚಲಾಯಿಸಿಕೊಂಡು ಬಂದಿರುವುದನ್ನು ನೋಡಿದ್ದೆವು. ಹೀಗೆ ಅನೇಕ ರೀತಿಯಲ್ಲಿ ನವ ವಧು-ವರರು ಮದುವೆ ಸಮಾರಂಭಕ್ಕೆ ಗ್ರ್ಯಾಂಡ್ ಎಂಟ್ರಿ ನೀಡಿರುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಂದು ಜೋಡಿ ಮದುವೆ ಮುಗಿಸಿಕೊಂಡು ಮಂಟಪದಿಂದ ಮನೆಗೆ ಹೋಗುವಾಗ ಅತಿಥಿಗಳ ನಡುವೆ ಎಂತಹ ಒಂದು ಭಯಂಕರವಾದ ಸ್ಟಂಟ್ ಮಾಡಿದ್ದಾರೆ ಗೊತ್ತೇ? ನೋಡಿದರೆ ನೀವು ಒಂದು ಕ್ಷಣ ಬೆಚ್ಚಿ ಬಿಳ್ತೀರಾ.

ಇದನ್ನೂ ಓದಿ: Bride and Groom: ಮದುವೆ ಡ್ರೆಸ್​ನಲ್ಲಿ ಬಂದ ತನ್ನ ವಧುವನ್ನು ನೋಡಿ ವರ ಫುಲ್ ಪ್ಲ್ಯಾಟ್! ಆತನ ರಿಯಾಕ್ಷನ್ ಹೀಗಿತ್ತು

ಈಗ ವೈರಲ್ ಆಗಿರುವ ವೀಡಿಯೋದಲ್ಲಿ ಈ ನವ ವಧು-ವರರು ಮಾಡಿರುವ ಸ್ಟಂಟ್ ಮಾತ್ರ ನಾವು ನೀವು ಎಲ್ಲಿಯೂ ನೋಡಿರುವುದಿಲ್ಲ ಅಂತ ಹೇಳಬಹುದು. ಉದ್ದೇಶ ಪೂರ್ವಕವಾಗಿ ತಮ್ಮ ಮೈಗೆ ಬೆಂಕಿ ಹಚ್ಚಿಕೊಂಡು ಅತಿರೇಕದ ಸಾಹಸವನ್ನು ಪ್ರದರ್ಶಿಸಿ ಮದುವೆ ಆರತಕ್ಷತೆಯಲ್ಲಿ ಅತಿಥಿಗಳ ನಡುವೆಯಿಂದ ಹೊರ ನಡೆದಿದ್ದನ್ನು ಈ ವೀಡಿಯೋದಲ್ಲಿ ನೋಡಬಹುದು.

ಸಿಕ್ಕಾಪಟ್ಟೆ ವೈರಲ್ ಆದ ವಧು ವರರ ವಿಡಿಯೋ
ಅದರಲ್ಲೂ ಇವರು ವೃತ್ತಿಪರ ಸ್ಟಂಟ್ ಜೋಡಿ ಅಂತೆ, ಗೇಬ್ ಜೆಸ್ಸಾಪ್ ಮತ್ತು ಅಂಬಿರ್ ಬಾಂಬಿರ್ ಹಾಲಿವುಡ್ ಚಲನಚಿತ್ರಗಳ ಸೆಟ್‌ನಲ್ಲಿ ಸ್ಟಂಟ್ ಹೇಳಿ ಕೊಡುವಾಗ ಪರಸ್ಪರ ಭೇಟಿಯಾದರಂತೆ. ಡಿಜೆ ಮತ್ತು ಮದುವೆಯ ಫೋಟೋಗ್ರಾಫರ್ ರಸ್ ಪೊವೆಲ್ ಅವರು ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಿದ ಅವರ ವಿವಾಹದ ಆರತಕ್ಷತೆಯ ಸ್ಟಂಟ್‌ನ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.


View this post on Instagram


A post shared by Times Now (@timesnow)
ಈ ಸ್ಟಂಟ್ ನ ವೀಡಿಯೋಗೆ “ಸ್ಟಂಟ್ ಮಾಡುವ ವೃತ್ತಿಪರರಿಬ್ಬರು ಮದುವೆಯಾದಾಗ" ಎಂಬ ಶೀರ್ಷಿಕೆಯನ್ನು ಸಹ ನೀಡಿದ್ದಾರೆ. ವೀಡಿಯೋದಲ್ಲಿ, ವಧು ಮತ್ತು ವರನ ಹಿಂಭಾಗದಲ್ಲಿ ತ್ವರಿತವಾಗಿ ಹರಡುವ ಬೆಂಕಿ ಒಂದು ರೀತಿಯಲ್ಲಿ ಹೂವುಗಳ ಜ್ವಾಲೆಯ ಪುಷ್ಪಗುಚ್ಛವನ್ನು ಜಾಡಿಸುತ್ತಿರುವುದನ್ನು ನಾವು ನೋಡಬಹುದು, ನಂತರ ಅವರು ಹಾಗೆಯೇ ಮುಂದೆ ನಡೆದರು. ಆ ಘಟನೆಯ ಹಿನ್ನಲೆಯಲ್ಲಿ ಅತಿಥಿಗಳ ಹರ್ಷೋದ್ಗಾರವನ್ನು ನಾವು ಕೇಳಬಹುದು ಮತ್ತು ಇಷ್ಟೇ ಅಲ್ಲದೆ ಮದುವೆಗೆ ಬಂದಂತಹ ಅತಿಥಿಗಳತ್ತ ನವ ವಧು-ವರರು ಕೈ ಬೀಸಿದರು.

ನವವಿವಾಹಿತರ ಬೆಂಕಿಯನ್ನು ನಂದಿಸಿದ ಅಗ್ನಿಶಾಮಕಗಳು
ನವವಿವಾಹಿತರು ಈ ಸಾಹಸದ ಸ್ಟಂಟ್ ಮಾಡುವಾಗ ತುಂಬಾನೇ ಶಾಂತವಾಗಿದ್ದರು ಮತ್ತು ಅಂತಿಮವಾಗಿ ಅಲ್ಲೇ ಇರುವಂತಹ ಅಗ್ನಿಶಾಮಕಗಳು ಆ ಇಬ್ಬರು ನವವಿವಾಹಿತರ ಬೆಂಕಿಯನ್ನು ನಂದಿಸಿದರು.

ಡಿಜೆ ಮತ್ತು ಮದುವೆಯ ಫೋಟೋಗ್ರಾಫರ್ ರಸ್ ಪೊವೆಲ್ ಅವರು "ಇವರು ತರಬೇತಿ ಪಡೆದ ವೃತ್ತಿಪರರು, ಇದನ್ನು ಮನೆಯಲ್ಲಿ ನೀವು ಪ್ರಯತ್ನಿಸಬೇಡಿ" ಎಂದು ಶೀರ್ಷಿಕೆಯ ಕೊನೆಯಲ್ಲಿ ಬರೆದಿದ್ದಾರೆ. ಅಂಬಿರ್ ಅವರ ಕೂದಲಿಗೆ ಬೆಂಕಿ ತಗುಲಿರುವ ಬಗ್ಗೆ ಜನ ಸ್ವಲ್ಪ ಆತಂಕಗೊಂಡಿದ್ದರು. ಇದಕ್ಕೆ, "ಅವರಿಬ್ಬರೂ ತಮ್ಮ ಕೂದಲು ಮತ್ತು ಮುಖದಲ್ಲಿ ಆಂಟಿ-ಬರ್ನ್ ಜೆಲ್ ಅನ್ನು ಹಚ್ಚಿಕೊಂಡಿದ್ದರು, ನಂತರ ಅವರು ಅದರ ಮೇಲೆ ವಿಗ್ ಅನ್ನು ಸಹ ಧರಿಸಿದ್ದರು" ಎಂದು ಪೊವೆಲ್ ಹೇಳಿದರು.

ಇದನ್ನೂ ಓದಿ:  Marriage Function: ಮದುವೆಯ ಊಟಕ್ಕಾಗಿ ಓಡೋಡಿ ಬಂದ ಅತಿಥಿಗಳು! ನಗು ತರಿಸುತ್ತದೆ ಈ ವೈರಲ್ ವಿಡಿಯೋ

ಟಿಕ್‌ಟಾಕ್‌ನಲ್ಲಿ ಈ ವೀಡಿಯೋವನ್ನು 13 ದಶಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ ಸಾಹಸಕ್ಕೆ ನೆಟ್ಟಿಗರು ನಾನಾ ರೀತಿಯಲ್ಲಿ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ಇವರಿಗೆ ಮಕ್ಕಳು ಹುಟ್ಟಿ, ದೊಡ್ಡವರಾದ ಮೇಲೆ ಅವರಿಗೆ ಅವರ ಪೋಷಕರು ಅವರಿಗಿಂತಲೂ ಕೂಲ್ ಎಂದು ತಿಳಿದು ಕೊಳ್ಳುತ್ತಾರೆ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಸರಿ, ಇದೊಂದು ವಿಶಿಷ್ಟವಾದ ಮದುವೆಯಾಗಿದೆ, ಜೋಡಿಯ ಬಗ್ಗೆ ಮಾತನಾಡಿ" ಎಂದು ಕಾಮೆಂಟ್ ಮಾಡಿದ್ದಾರೆ.
Published by:Ashwini Prabhu
First published: