ಈಗಂತೂ ಮದುವೆ (Marriage) ಸಮಾರಂಭಗಳು ತುಂಬಾನೇ ವಿಭಿನ್ನವಾಗಿ ಮತ್ತು ವಿಚಿತ್ರವಾಗಿ ನಡೆಯುತ್ತಿವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಮದುವೆಗಳಲ್ಲಿ ಈ ವಧು-ವರರ (Bride-Groom) ಮದುವೆ ಪೂರ್ವದಲ್ಲಿ ಮಾಡಿಸಿಕೊಳ್ಳುವ ಫೋಟೋಶೂಟ್ ನಿಂದ ಹಿಡಿದು ವಧು-ವರರ ಉಡುಪುಗಳು, ಅವರ ವಿಭಿನ್ನವಾದ ಎಂಟ್ರಿ, ಮದುವೆ ಮನೆಯಲ್ಲಿ ವಿಚಿತ್ರವಾದ ಉಡುಗೊರೆಗಳನ್ನು (Gifts) ವಧು-ವರನ ಸ್ನೇಹಿತರು ನೀಡಿ ತಮಾಷೆ ಮಾಡುವುದು. ಹೀಗೆ ಅನೇಕ ಘಟನೆಗಳಿಗೆ ಸಾಕ್ಷಿಯಾಗುತ್ತಿವೆ ಇತ್ತೀಚಿನ ಮದುವೆ ಸಮಾರಂಭಗಳು ಅಂತ ಹೇಳಬಹುದು.
ಇದೆಲ್ಲದರ ಜೊತೆಗೆ ಕೆಲವು ವಿಚಿತ್ರವಾದ ಘಟನೆಗಳು ಸಹ ಮದುವೆ ಸಮಾರಂಭಗಳಲ್ಲಿ ನಡೆಯುತ್ತಿವೆ ಅಂತ ಹೇಳಬಹುದು. ವರನನ್ನು ಕೂರಿಸಿಕೊಂಡು ಮದುವೆ ಮನೆಗೆ ಬಂದ ಕುದುರೆ ಪಟಾಕಿ ಸದ್ದಿಗೆ ಭಯ ಬಿದ್ದು ಮದುವೆ ಮಂಟಪದಿಂದ ಓಡಿ ಹೋಗಿದ್ದು, ವರನ ಸ್ನೇಹಿತರು ನೀಡಿದ ತಮಾಷೆಯ ಉಡುಗೊರೆಯನ್ನು ನೋಡಿ ವಧು ಕೋಪಗೊಂಡಿದ್ದು, ಬೈಕ್ ಕೊಡಿಸಿಲ್ಲ ಅಂತ ಮದುವೆ ಅರ್ಧಕ್ಕೆ ಬಿಟ್ಟು ಹೋದದ್ದು ಇವೆಲ್ಲಾ ಘಟನೆಗಳನ್ನು ನೋಡಿದರೆ ಇತ್ತೀಚಿನ ಮದುವೆ ಸಮಾರಂಭಗಳು ಸುಖಕರವಾಗಿ ನಡೆದರೆ ಅಷ್ಟೇ ಸಾಕು ಅಂತ ಅನ್ನಿಸಿ ಬಿಟ್ಟಿದೆ ನೋಡಿ.
ಮದುವೆಗಳು ಅದ್ದೂರಿಯಾಗಿ ಸಂಭ್ರಮದಿಂದ ಮತ್ತು ಸಡಗರದಿಂದ ಕೂಡಿದ್ದರೆ ಬಂದ ಅತಿಥಿಗಳಿಗೂ ಸಹ ತುಂಬಾನೇ ಖುಷಿಯಾಗುತ್ತದೆ ಮತ್ತು ಹೊಟ್ಟೆ ತುಂಬಾ ಊಟ ಮಾಡಿಕೊಂಡು ವಧು-ವರರನ್ನು ಆಶೀರ್ವದಿಸಿ ಮದುವೆ ಮನೆಯಿಂದ ಹೊರಗೆ ಹೋಗುತ್ತಾರೆ. ಅದೇ ಮದುವೆ ಮನೆಯಲ್ಲಿ ಏನಾದರೂ ಕಿರಿಕಿರಿ, ತೊಂದರೆಗಳಾದರೆ ಬಂದ ಅತಿಥಿಗಳಿಗೂ ತುಂಬಾನೇ ಬೇಸರವಾಗುತ್ತದೆ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಹೊಸ ವೀಡಿಯೋದಲ್ಲಿ ಏನಿದೆ?
ಇಲ್ಲೊಂದು ಹೊಸ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿಯೇ ಹರಿದಾಡುತ್ತಿದೆ. ಇದರಲ್ಲಿ ಅಂತಹದ್ದೇನಿದೆ ಅಂತೀರಾ? ನೀವೇ ನೋಡಿ.
27 ಸೆಕೆಂಡಿನ ವೀಡಿಯೋ ಕ್ಲಿಪ್ ನ ಆರಂಭದಲ್ಲಿ ಇಬ್ಬರು ವಧು-ವರರು ಮದುವೆ ವೇದಿಕೆಯಲ್ಲಿ ನಿಂತಿರುವುದನ್ನು ನಾವು ನೋಡಬಹುದು. ಆನಂತರ ವರ ಸಿಹಿ ತಿನಿಸನ್ನು ವಧುವಿಗೆ ತಿನ್ನಿಸಲು ಹೋಗುತ್ತಾನೆ. ಆ ವಧುವಿಗೆ ವರ ಆ ಸ್ವೀಟ್ ಅನ್ನು ಒತ್ತಾಯದಿಂದ ತಿನ್ನಿಸುವುದು ಇಷ್ಟವಾಗುವುದಿಲ್ಲ. ಎಷ್ಟೇ ಸಲ ಆಕೆ ಬೇಡ ಬೇಡ ಅಂದರೂ ಸಹ ವರ ಮಾತ್ರ ಆ ಸ್ವೀಟ್ ಅನ್ನು ಹಾಗೆಯೇ ಬಲವಂತವಾಗಿ ಆಕೆಯ ಬಾಯಿಯೊಳಗೆ ತುರುಕುವುದನ್ನು ನಾವು ಈ ವೀಡಿಯೋದಲ್ಲಿ ನೋಡಬಹುದು.
Kalesh B/w Husband and Wife in marriage ceremony pic.twitter.com/bjypxtJzjt
— Ghar Ke Kalesh (@gharkekalesh) December 13, 2022
ವರನು ಕೋಪಗೊಂಡು ವಧುವಿನ ಬಾಯಿಯೊಳಗೆ ಸ್ವೀಟ್ ಹಾಕುವುದನ್ನು ಹಾಗೆಯೇ ಮುಂದುವರಿಸುತ್ತಾನೆ. ಇದನ್ನು ನೋಡಿದ ಅಲ್ಲಿದ್ದ ಅತಿಥಿಗಳಿಗೂ ಸಹ ಒಂದು ಕ್ಷಣ ಅಚ್ಚರಿಯಾಗುತ್ತದೆ. ತುಂಬಾ ಬಲವಂತ ಮಾಡಿದಕ್ಕೆ ಅಲ್ಲಿ ವಧು ಅವನ ಕಪಾಳಕ್ಕೆ ಬಲವಾಗಿ ಹೊಡೆಯುತ್ತಾಳೆ. ನಂತರ ಅವರ ಹೊಡೆದಾಟ ಅತಿರೇಕಕ್ಕೆ ಹೋಗುತ್ತದೆ ಮತ್ತು ದೊಡ್ಡ ಜಗಳವೇ ಆಗುತ್ತದೆ. ಅದನ್ನು ಬಿಡಿಸಲು ಅಲ್ಲಿದ್ದ ಅತಿಥಿಗಳು ಸಹ ಬರುವುದನ್ನು ನಾವು ಈ ವೀಡಿಯೋದಲ್ಲಿ ನೋಡಬಹುದಾಗಿದೆ.
ನಂತರ ವೀಡಿಯೋದಲ್ಲಿರುವಂತೆ ಆ ವರನು ತನ್ನ ಮದುವೆ ಟೋಪಿಯನ್ನು ಹೊರತೆಗೆದು ತನ್ನ ಹೆಂಡತಿಗೆ ಹೊಡೆಯುತ್ತಾನೆ ಮತ್ತು ಕೆಲವು ಸಂಬಂಧಿಕರು ಆ ವರನನ್ನು ಸಮಾಧಾನ ಪಡಿಸಲು ಪ್ರಯತ್ನಿಸುವುದನ್ನು ನಾವು ನೋಡಬಹುದು.
ಇದನ್ನೂ ಓದಿ:
ನಂತರ, ವಧು ತನ್ನ ಚಪ್ಪಲಿಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಾಳೆ. ಆದರೆ ವರ ಅವಳ ಕೂದಲನ್ನು ಹಿಡಿದು ಮತ್ತೆ ಹಿಗ್ಗಾಮುಗ್ಗಾ ಹೊಡೆಯಲು ಪ್ರಾರಂಭಿಸುತ್ತಾನೆ. ಅವನಿಗೆ ಸೂಕ್ತವಾದ ಉತ್ತರವನ್ನು ನೀಡಲು, ವಧು ವರನ ಕೂದಲನ್ನು ಹಿಡಿಯಲು ಪ್ರಯತ್ನಿಸುತ್ತಾಳೆ ಆದರೆ ಕೊನೆಗೆ ಇಬ್ಬರೂ ಅಲ್ಲಿರುವ ದೊಡ್ಡ ಕುರ್ಚಿಯ ಮೇಲೆ ಬೀಳುತ್ತಾರೆ.
ಈ ವೀಡಿಯೋವನ್ನು 'ಘರ್ ಕೆ ಕಲೇಶ್' ಎಂಬ ಹೆಸರಿನ ಬಳಕೆದಾರರರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋ ಈಗ 57 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 2 ಸಾವಿರಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ