ನಮ್ಮ ಮದುವೆ (Marriage) ಹಾಗೆ ಆಗಬೇಕು, ಹೀಗೆ ನಡೆಯಬೇಕು ಅಂತ ಬಹುತೇಕರು ಕನಸು (Dream) ಕಾಣುತ್ತಾರೆ. ಕನಸು ನನಸಾಗುವ ಸಂದರ್ಭ ಬಂದಾಗ ಕೆಲವೊಂದು ಎಡವಟ್ಟುಗಳು ಉಂಟಾಗುತ್ತವೆ. ಅಂತಹ ಎಡವಟ್ಟಿನ ವಿಡಿಯೋಗಳು (Video)ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿವೆ. ಇನ್ನು ಕೆಲವರು ಮದುವೆ ಮಂಟಪಕ್ಕೆ ಎಂಟ್ರಿ ನೀಡುವ ವಿಡಿಯೋಗಳು (Viral Video) ತುಂಬಾ ಡಿಫೆರೆಂಟ್ ಆಗಿರುತ್ತವೆ. ರೆಡ್ ಕಾರ್ಪೆಟ್, ಬೈಕ್, ತಾವರೆ ಹೂವಿನ ಮಧ್ಯೆ, ರಾಜ-ರಾಣಿಯಂತೆ (Bride, Groom Entry) ಕಲ್ಯಾಣ ಮಂಟಪಕ್ಕೆ ಬರುತ್ತಾರೆ.. ಕೆಲ ದಿನಗಳ ಹಿಂದೆ ಕ್ರೇನ್ (Crane) ಮೂಲಕ ಬಂದ ಜೋಡಿ (Couple) ಮೇಲಿಂದ ಬಿದ್ದಿರುವ ವಿಡಿಯೋ ವೈರಲ್ (Viral Video) ಆಗಿರುತ್ತದೆ.
ಈ ವಿಡಿಯೋವನ್ನು Brides Special ಎಂಬ Instagramನಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಜನರು ಫನ್ನಿ ಫನ್ನಿ ಕಮೆಂಟ್ ಮಾಡುತ್ತಿದ್ದಾರೆ. ವೇದಿಕೆ ಮುಂಭಾಗ ಬರುತ್ತಿದ್ದಂತೆ ಜೋಡಿ ಸುಮಾರು 10 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದಾರೆ.
ಹೂಗಳಿಂದ ಅಲಂಕೃತಗೊಂಡಿತ್ತು ಕ್ರೇನ್
ವರ ಮತ್ತು ವಧು ವೇದಿಕೆಗೆ ಬರಲು ಸಖತ್ ಪ್ಲಾನ್ ಮಾಡಿಕೊಂಡಿದ್ದರು. ಆ ಪ್ಲಾನ್ ನಂತೆ ಜೋಡಿ ಕ್ರೇನ್ ಮೂಲಕ ಮೇಲ್ಭಾಗದಿಂದ ಬರಲು ಕ್ರೇನ್ ಸಹ ಬುಕ್ ಮಾಡಿಕೊಂಡಿದ್ದರು. ಈ ಹಿನ್ನೆಲೆ ಕ್ರೇನ್ ಮುಂಭಾಗವನ್ನು ಕೆಂಪು ಬಣ್ಣದ ವಸ್ತ್ರದ ಜೊತೆ ಹೂಗಳಿಂದ ಅಲಂಕರಿಸಲಾಗಿತ್ತು.
ಇದನ್ನೂ ಓದಿ: Viral Video: ಮೊಬೈಲ್ ಗಾಗಿ ಮಗು, ಮಂಗನ ನಡುವಿನ ಕ್ಯೂಟ್ ಫೈಟ್ ವಿಡಿಯೋಗೆ ಲಕ್ಷಕ್ಕೂ ಅಧಿಕ ಲೈಕ್ಸ್
ವೇದಿಕೆ ಮುಂಭಾಗಕ್ಕೆ ಬರುತ್ತಿದ್ದಂತೆ ಕೆಳಗೆ ಬಿದ್ದ ಜೋಡಿ
ಒಂದಿಷ್ಟು ದೂರದಿಂದ ಜೋಡಿ ಕ್ರೇನ್ ಮುಂಭಾಗದಲ್ಲಿಯೇ ಕುಳಿತು ಬಂದಿದ್ದಾರೆ. ವೇದಿಕೆ ಮುಂಭಾಗದಲ್ಲಿದ್ದ ಆತಿಥಿಗಳೆಲ್ಲರೂ ಚಪ್ಪಾಳೆಯಿಂದ ಜೋಡಿಯನ್ನು ಸ್ವಾಗತಿಸಿಕೊಂಡಿದ್ದಾರೆ. ವೇದಿಕೆಯ ಸಮೀಪಕ್ಕೆ ಬರುತ್ತಿದ್ದಂತೆ ಕ್ರೇನ್ ಇಳಿಸುವಾಗ, ಮೇಲೆ ಕುಳಿತಿದ್ದ ಜೋಡಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ಎಲ್ಲ ದೃಶ್ಯಗಳು ಅತಿಥಿಗಳ ಮೊಬೈಲ್ ನಲ್ಲಿ ಸೆರೆಯಾಗಿದೆ. ಸದ್ಯ ವೈರಲ್ ಆಗುತ್ತಿದೆ.
ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಂತೋಷದ ಸಂಭ್ರಮದಲ್ಲಿ ಈ ಘಟನೆ ನಡೆಯಬಾರದಿತ್ತು ಎಂದು ಬೇಸರ ಹೊರ ಹಾಕಿದ್ದಾರೆ. ಇನ್ನು ಕೆಲವರು ಮೇಲಿಂದ ಬಿದ್ದ ಜೋಡಿಗೆ ಯಾವುದೇ ಅಪಾಯವಾಗಿಲ್ಲ ಇಲ್ಲವಲ್ಲ ಎಂದು ಪ್ರಶ್ನೆ ಕೇಳಿದ್ದಾರೆ.
ಫೋಟೋಶೂಟ್ ಎಡವಟ್ಟು
ಈ ಹಿಂದೆ ಕೇರಳದ ಜೋಡಿಯೊಂದು ತೆಪ್ಪದಲ್ಲಿ ಫೋಟೋಶೂಟ್ ಮಾಡಿಸುತ್ತಿತ್ತು. ನೋಡ ನೋಡುತ್ತಿದ್ದಂತೆ ತೆಪ್ಪ ಮುಗುಚಿ ಬಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಫೋಟೋಶೂಟ್ ವೇಳೆಯಲ್ಲಾದ ಎಡವಟ್ಟಿನ ವಿಡಿಯೋ ಹರಿದಾಡುತ್ತಿದೆ.
ಇದನ್ನೂ ಓದಿ: Viral Video: ವೇದಿಕೆಯಲ್ಲೇ ವರನ ಗೆಳೆಯರಿಗೆ ಚಮಕ್ ಕೊಟ್ಟ ವಧುವಿನ ವಿಡಿಯೋ ವೈರಲ್
ವೈರಲ್ ವಿಡಿಯೋದಲ್ಲಿ ಏನಿದೆ?
ವಧು ಫೋಟೋಶೂಟ್ ಮಾಡಿಸಲು ನದಿ ಬಳಿ ತೆರಳಿದ್ದಾರೆ. ದೊಡ್ಡದಾದ ಪಿಂಕ್ ಗೌನ್ ಧರಿಸಿದ ವಧು ಉಯ್ಯಾಲೆಯಲ್ಲಿ ಕುಳಿತುಕೊಳ್ಳುತ್ತಾಳೆ. ಹಿಂದಿನಿಂದ ಓರ್ವ ಉಯ್ಯಾಲೆ ತೂಗುತ್ತಾನೆ. ನೋಡ ನೋಡುತ್ತಿದ್ದಂತೆ ಉಯ್ಯಾಲೆಯ ಹಗ್ಗ ತುಂಡಾದ ಪರಿಣಾಮ ವಧು ನೀರಿನಲ್ಲಿ ಬಿದ್ದಿದ್ದಾಳೆ. ನಂತರ ವಧು ನಗುತ್ತಾ ಈಜಿಕೊಂಡು ದಡ ಸೇರಿದ್ದಾಳೆ.
ಮೂರು ದಿನಗಳ ಹಿಂದೆ ಈ ವಿಡಿಯೋ ಪಂಜಾಬ್ ಇಂಡಸ್ಟ್ರಿ ಹೆಸರಿನ ಇನ್ ಸ್ಟಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದ್ದು, ವೈರಲ್ ಆಗಿದೆ. ಈ ವಿಡಿಯೋಗೆ 8 ಸಾವಿರಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ಫನ್ನಿ ಕಮೆಂಟ್ ಮಾಡುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಡ್ಯಾನ್ಸ್ (Dance) ಮಾಡುತ್ತಾ ಬಂದು ಆಯತಪ್ಪಿ ಬಿದ್ದು, ಮುಜುಗರಕ್ಕೆ ಒಳಗಾಗಿದ್ದರು. ಇತ್ತೀಚೆಗೆ ಮದುವೆಗೆ ಸಂಬಂಧಿಸಿದ ವೆಬ್ ಸಿರೀಸ್ (Web Series) ಗಳು ಸಹ ಬಂದಿವೆ. ಮದುವೆ ಮನೆಯಲ್ಲಿ ನಡೆಸುವ ಶಾಸ್ತ್ರದ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ