ಮದುವೆ (Marriage) ಅಂದ್ರೆನೇ ಒಂದು ಖುಷಿಯ ವಿಚಾರ. ಎಲ್ಲರಿಗೂ ತಮ್ಮ ಮದುವೆ ಬಗ್ಗೆ ಸಾವಿರಾರು ಕನಸು ಇರುತ್ತೆ. ಇದೇ ರೀತಿ ಮದುವೆ ಆಗಬೇಕು. ಅದೇ ಹುಡುಗ ಅಥವಾ ಹುಡುಗಿಯನ್ನು ಮದುವೆ ಆಗಬೇಕು ಎಂದು ಕೊಂಡಿರುತ್ತಾರೆ. ಅದಲ್ಲದೇ ಮೆಹಂದಿ ದಿನ, ಮದುವೆಯ ಹಿಂದಿನ ದಿನ, ಮದುವೆ ದಿನ ಹೀಗೆ ಇರಬೇಕು. ಅದೇ ರೀತಿ ನಡೆಯಲೇ ಬೇಕು ಎಂದು ಕೆಲವರು ನಿರ್ಧಾರ ಮಾಡಿರುತ್ತಾರೆ. ಅಲ್ಲದೇ ಮದುವೆಯಲ್ಲಿ ಡ್ಯಾನ್ಸ್ ಮಾಡೋದು ಒಂದು ಭಾಗವಾಗಿರುತ್ತೆ. ಕೆಲವರು ಖುಷಿಗೆ ಕುಣಿದ್ರೆ, ಕೆಲವರು ಪಂದ್ಯ ಕಟ್ಟಿ ಗೆಲ್ಲುತ್ತಾರೆ. ಯಾರು ಹೆಚ್ಚು ವೇಳೆ, ಅಥವಾ ಯಾರು ಚೆಂದನೆಯಾಗಿ ಡ್ಯಾನ್ಸ್ ಮಾಡ್ತಾರೋ, ಅವರು ಗೆಲ್ಲುತ್ತಾರೆ. ವಧು (Bride)-ವರ (Groom) ಮುಂಡಿಯನ್ ತೋ ಬಾಚ್ ಕೆ ( Mundian To Bach Ke) ಪಂಜಾಬಿ ಎಂಸಿ ಹಾಡಿರುವ ಜನಪ್ರಿಯ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಆ ವಿಡಿಯೋ (Video) ಎಲ್ಲೆಡೆ ವೈರಲ್ (Viral) ಆಗಿದೆ.
ಮೊದಲು ಡ್ಯಾನ್ಸ್ ಮಾಡಿದ ವಧು
ವಧು-ವರ ಮುಖಾಮುಖಿಯಾಗಿ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 2002 ರಲ್ಲಿ, ಮುಂಡಿಯನ್ ತೋ ಬಾಚ್ ಕೆ ಪಂಜಾಬಿ ಎಂಸಿ ಹಾಡಿರುವ ಜನಪ್ರಿಯ ಹಾಡಿಗೆ ಸಖತ್ ಸೆಪ್ಸ್ ಹಾಕಿದ್ದಾರೆ. ಮೊದಲು ವಧು ಡ್ಯಾನ್ಸ್ ಮಾಡಲು ಹೋಗುತ್ತಾಳೆ. ಅವಳು ವರನನ್ನು ಸಹ ಕರೆಯುತ್ತಾಳೆ. ಆಗ ವರನು ಹೋಗುತ್ತಾನೆ. ಆದ್ರೆ ಮೊದಲು ವಧು ಹೆಜ್ಜೆ ಹಾಕಿದ್ದಾಳೆ. ನಂತರ ವರನು ಡ್ಯಾನ್ಸ್ ಮಾಡಿದ್ದಾನೆ.
View this post on Instagram
ಬಾಲಿವುಡ್ ಕೊರಿಯೋಗ್ರಫಿ ಎಂಬ ಪೇಜ್ ನಲ್ಲಿ ವಿಡಿಯೋ
ವಧು-ವರ ಡ್ಯಾನ್ಸ್ ಮಾಡಿದ ಎಲ್ಲೆಡೆ ವೈರಲ್ ಆಗಿದ್ದು, ಅದನ್ನು ಬಾಲಿವುಡ್ ಕೊರಿಯೋಗ್ರಫಿ ಎಂಬ ಪೇಜ್ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಲಾಗಿದೆ. ಅದನ್ನು ಎಷ್ಟೊಂದು ಜನ ನೋಡಿ ಮೆಚ್ಚಿಕೊಂಡಿದ್ದಾರೆ. ಇಶಾನ್ ಸರಳವಾಗಿ ಹೆಜ್ಜೆಗಳನ್ನು ಹಾಕಿದರು ಮತ್ತು ಆಕರ್ಷಕವಾದ ಹಾಡಿಗೆ ಮಹಾಕಾವ್ಯ ಭಾಂಗ್ರಾ ಮಾಡಿದರು. ಆದಾಗ್ಯೂ, ಶೋನಿ ಅವರ ಎಲ್ಲಾ ಹೆಜ್ಜೆಗಳನ್ನು ಅನುಸರಿಸಿದ್ರು.
ಇದನ್ನೂ ಓದಿ: Ram Setu: ನೀರಿನಲ್ಲಿ ಪತ್ತೆಯಾಯ್ತಂತೆ ತೇಲುವ ರಾಮಸೇತು ಕಲ್ಲು! ರಾಮ್ ಎಂಬ ಬರಹ ನೋಡಿ ಕೈಮುಗಿದ ಭಕ್ತರು
ವಿಡಿಯೋ ನೋಡಿದ 1.4 ಮಿಲಿಯನ್ ಜನ
ಈ ವಿಡಿಯೋವನ್ನು ಬಾಲಿವುಡ್ ಕೊರಿಯೋಗ್ರಫಿ ಎಂಬ ಪೇಜ್ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ ನಂತರ, 1.4 ಮಿಲಿಯನ್ ಜನ ಅದನ್ನು ವೀಕ್ಷಿಸಿದ್ದಾರೆ. ವಧುವಿನ ಡ್ಯಾನ್ಸ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಹೈ ಹೀಲ್ಡ್ ನಲ್ಲಿ ಎಷ್ಟು ಚೆಂದ, ಸರಗಾವಾಗಿ ಡ್ಯಾನ್ಸ್ ಮಾಡಿದ್ದಾರೆ ಎಂದಿದ್ದಾರೆ. ಇನ್ನು ಕೆಲವರು, ಅವಳು ರಾಣಿ, ಹೀಲ್ಸ್ನಲ್ಲಿ ಭಾಂಗ್ರಾ ಮಾಡುತ್ತಿದ್ದಾಳೆ ಎಂದು ಕಾಮೆಂಟ್ ಮಾಡಿದ್ದಾರೆ.
ಗೆದ್ದಿದ್ದು ವಧು ಶೋನಿ
ವಧು-ವರರಿಬ್ಬರೂ ಚೆಂದವಾಗಿ ಡ್ಯಾನ್ಸ್ ಮಾಡಿದರು. ಅಲ್ಲಿದ್ದವರು ಮಾತ್ರ ಇದನ್ನು ಒಂದು ಸ್ಪರ್ಧೆಯಂತೆ ನೋಡಿ ವಧು ಶೋನಿಗೆ ಫುಲ್ ಮಾರ್ಕ್ ಕೊಟ್ಟರು. ಆದ ಕಾರಣ ವಧು ಶೋನಿ ಡ್ಯಾನ್ಸ್ ಆಪ್ನಲ್ಲಿ ಗೆದ್ದಿದ್ದಾಳೆ.
ಇದನ್ನೂ ಓದಿ: Elephant Video: ಕಬ್ಬು ತುಂಬಿ ಬರುತ್ತಿದ್ದ ಲಾರಿ ಅಡ್ಡ ಹಾಕಿದ ಆನೆಗಳು! ಮುಂದೇನಾಯ್ತ? ವಿಡಿಯೋ ವೈರಲ್
"ಮುಂಡಿಯನ್ ತೋ ಬಾಚ್ ಕೆ"
"ಮುಂಡಿಯನ್ ತೋ ಬಾಚ್ ಕೆ" ಹಾಡನ್ನು ಇಂಗ್ಲೆಂಡ್ನ ಬಮಿರ್ಂಗ್ಹ್ಯಾಮ್ನಲ್ಲಿ ಪಂಜಾಬಿ ಎಂಸಿ ಅವರು ತಮ್ಮ 1998 ರ ಆಲ್ಬಂ ಲೀಗಲೈಸ್ಡ್ಗಾಗಿ ನಿರ್ಮಿಸಿದ್ದಾರೆ. ನವೆಂಬರ್ 2002 ರಲ್ಲಿ ಏಕಗೀತೆಯಾಗಿ ಬಿಡುಗಡೆಯಾದ ನಂತರ, ಇದು ಪ್ರಪಂಚದಾದ್ಯಂತ ಗಣನೀಯ ಯಶಸ್ಸನ್ನು ಸಾಧಿಸಿತು. ಇಟಲಿ ಮತ್ತು ವಾಲೋನಿಯಾದಲ್ಲಿ ಸಿಂಗಲ್ಸ್ ಚಾರ್ಟ್ಗಳಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ಇತರ ಹಲವು ದೇಶಗಳಲ್ಲಿ ಹೆಚ್ಚು ಯಶಸ್ಸು ಕಂಡಿತ್ತು. ಅಮೇರಿಕನ್ ರಾಪರ್ ಜೇ-ಝಡ್ ಅನ್ನು ಒಳಗೊಂಡಿರುವ ಒಂದು ರೀಮಿಕ್ಸ್ ಉತ್ತರ ಅಮೆರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ ಹೆಚ್ಚು ಆಕರ್ಷಿಸಲ್ಪಟ್ಟಿತ್ತು. ಈ ಹಾಡು ಪ್ರಪಂಚದಾದ್ಯಂತ ಅಂದಾಜು 10 ಮಿಲಿಯನ್ ಪ್ರತಿಗಳಷ್ಟು ಮಾರಾಟವಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ