Bridal Yoga: ಮದುವೆ ದಿನ ನೀವು ಸುಂದರವಾಗಿ ಕಾಣಬೇಕಾದ್ರೆ ಈ ಟಿಪ್ಸ್ ಟ್ರೈ ಮಾಡಿ

ನವ ವಧುವಿಗಾಗಿ ಇಲ್ಲಿ ಕೆಲವು ಯೋಗಾಸನಗಳ ಬಗ್ಗೆ ಹೇಳಲಾಗಿದೆ. ನಿಮ್ಮ ಮದುವೆಯ ದಿನಾಂಕ ಹತ್ತಿರದಲ್ಲೇ ಇದ್ದರೆ, ನೀವು ಈ ಯೋಗಾಸನಗಳನ್ನು ಅಭ್ಯಾಸ ಮಾಡಿ ಮತ್ತು ಅದರಿಂದಾಗುವ ಲಾಭ ಪಡೆಯಿರಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮದುವೆ ದಿನದಂದು(Wedding Day) ಯಾವ ವಧುವು ತಾನು ಚೆನ್ನಾಗಿ ಕಾಣಲು ಬಯಸುವುದಿಲ್ಲ ನೀವೇ ಹೇಳಿ..? ಬಹುತೇಕ ಮದುವೆಯಾಗುವ ಹುಡುಗಿಯರು ತಮ್ಮ ಮುಖದ ಚರ್ಮವು(Skin) ಕಾಂತಿಯುತವಾಗಿ ಮತ್ತು ತುಂಬಾ ಸುಂದರವಾಗಿ ಕಾಣಲು ಬಯಸುತ್ತಾರೆ.ಪ್ರತಿದಿನ ಯೋಗ(Yoga)ವನ್ನು ತಪ್ಪದೆ ಅಭ್ಯಾಸ ಮಾಡುವುದರಿಂದ ವ್ಯಕ್ತಿಯ ದೈಹಿಕ(Physical) ಮತ್ತು ಮಾನಸಿಕ ಆರೋಗ್ಯ(Mental Health) ಚೆನ್ನಾಗಿರುತ್ತದೆ. ನಿಮ್ಮ ಮುಖದಲ್ಲಿ ಕಾಂತಿ ಕಾಪಾಡಿಕೊಳ್ಳಬೇಕಾದರೆ ಮತ್ತು ನೀವು ನಿಮ್ಮ ಮನಸ್ಸನ್ನು ಪ್ರಶಾಂತವಾಗಿರಿಸಿಕೊಳ್ಳಲು ಅನೇಕ ಯೋಗಾಸನಗಳಿವೆ.

ಸಾಮಾನ್ಯವಾಗಿ ವಧುಗಳು ತಮ್ಮ ಮದುವೆಯ ದಿನದಂದು ಮನಸ್ಸನ್ನು ತುಂಬಾ ಶಾಂತವಾಗಿ ಇರಿಸಿಕೊಳ್ಳಲು ಬಯಸುತ್ತಾರೆ. ಮದುವೆಯ ಸಮಾರಂಭದಲ್ಲಿ ಆಗುವಂತಹ ಸಣ್ಣ ಪುಟ್ಟ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಂಡು ಕೋಪಗೊಂಡು ತಮ್ಮ ಜೀವನದ ಆನಂದದ ಕ್ಷಣವನ್ನು ಆನಂದಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ನವ ವಧುವಿಗಾಗಿ ಇಲ್ಲಿ ಕೆಲವು ಯೋಗಾಸನಗಳ ಬಗ್ಗೆ ಹೇಳಲಾಗಿದೆ. ನಿಮ್ಮ ಮದುವೆಯ ದಿನಾಂಕ ಹತ್ತಿರದಲ್ಲೇ ಇದ್ದರೆ, ನೀವು ಈ ಯೋಗಾಸನಗಳನ್ನು ಅಭ್ಯಾಸ ಮಾಡಿ ಮತ್ತು ಅದರಿಂದಾಗುವ ಲಾಭ ಪಡೆಯಿರಿ.

ರಾ ಫೌಂಡೇಶನ್ ಸ್ಥಾಪಕರಾದ ರಾಧಿಕ ಅಯ್ಯರ್ ತಲಾಟಿ ಅವರು ಮದುವೆಯಾಗಲು ಹೊರಟಿರುವ ವಧುವು "ಮದುವೆಗೆ ಮೊದಲು ತಮ್ಮ ದೇಹವನ್ನು ಚೆನ್ನಾಗಿ ಇರಿಸಿಕೊಳ್ಳಲು ಮತ್ತು ಮನಸ್ಸನ್ನು ಪ್ರಶಾಂತವಾಗಿರಿಸಿಕೊಳ್ಳಲು ಕೆಲವು ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳುವುದು ಉತ್ತಮ" ಎಂದು ಹೇಳುತ್ತಾರೆ.

“ನೀವು ವಾರದಲ್ಲಿ ಕೇವಲ ನಾಲ್ಕು ದಿನ ಒಂದು ಗಂಟೆಯನ್ನು ಈ ಯೋಗಾಸನಗಳನ್ನು ಮಾಡಲು ಮೀಸಲಿಡಿ ಮತ್ತು ಧನಾತ್ಮಕ ಫಲಿತಾಂಶಗಳನ್ನು ನೀವೇ ಗಮನಿಸುತ್ತೀರಿ" ಎಂದು ಅವರು ಹೇಳುತ್ತಾರೆ.

ಅಧೋಮುಖ ಶ್ವಾನಾಸನ

ಅಧೋಮುಖ ಶ್ವಾನಾಸನ ಇದು ಹೆಸರೇ ಸೂಚಿಸುವಂತೆ ನಾಯಿ ಭಂಗಿಯ ಆಸನವಾಗಿದೆ. ಈ ಆಸನ ಮಾಡುವುದರಿಂದ ಆಯಾಸವನ್ನು ಅನುಭವಿಸುವ ವಧುಗಳಿಗೆ ಶಕ್ತಿ ಒದಗಿಸುತ್ತದೆ. ಈ ಸರಳ ಭಂಗಿ ಅಭ್ಯಾಸ ಮಾಡುವುದರಿಂದ ಶಕ್ತಿ ಪಡೆದುಕೊಳ್ಳಬಹುದು ಮತ್ತು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.

ಇದು ದೇಹವನ್ನು ಬಲಪಡಿಸಲು ಮತ್ತು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ, ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ, ಶ್ರವಣ ಸಾಮರ್ಥ್ಯ ಹೆಚ್ಚಿಸುತ್ತದೆ ಮತ್ತು ಮುಖದ ಚರ್ಮದ ಕಾಂತಿ ಹೆಚ್ಚಿಸುವುದಲ್ಲದೆ, ತೋಳುಗಳು, ಕಿಬ್ಬೊಟ್ಟೆ, ಸೊಂಟ ಮತ್ತು ತೊಡೆಗಳನ್ನು ಬಲಪಡಿಸಿಕೊಳ್ಳಲು ಪ್ರತಿದಿನ ಐದು ನಿಮಿಷಗಳ ಕಾಲ ಅಭ್ಯಾಸ ಮಾಡಿ.

ನೀವು ನೆಲದ ಮೇಲೆ ನಿಮ್ಮ ಮೊಣಕಾಲುಗಳನ್ನು ನೇರವಾಗಿ ಸೊಂಟದ ಕೆಳಗೆ ಇರಿಸಿ ಮತ್ತು ಕೈಗಳನ್ನು ಸ್ವಲ್ಪ ಮುಂದಕ್ಕೆ ಇರಿಸಿ. ಅಂಗೈಗಳನ್ನು ಹರಡಿ ಮತ್ತು ದೇಹವನ್ನು ಮತ್ತು ಮೊಣಕಾಲುಗಳನ್ನು ನೆಲದಿಂದ ದೂರಕ್ಕೆ ಎತ್ತಿ. ಉಸಿರನ್ನು ನಿಧಾನವಾಗಿ ಬಿಡುತ್ತಾ ತೊಡೆಗಳ ಮೇಲ್ಭಾಗವನ್ನು ಹಿಂದಕ್ಕೆ ತಳ್ಳಿ ಮತ್ತು ಹಿಮ್ಮಡಿಗಳನ್ನು ನೆಲದ ಮೇಲೆ ಅಥವಾ ಕೆಳಕ್ಕೆ ಚಾಚಿ. ಮೊಣಕಾಲುಗಳನ್ನು ನೇರಗೊಳಿಸಿ. ತಲೆಯನ್ನು ಮೇಲಿನ ತೋಳುಗಳ ನಡುವೆ ಇರಿಸಿ.

ಇದನ್ನೂ ಓದಿ:Gold Price Today: ಆಭರಣ ಪ್ರಿಯರಿಗೆ ಗುಡ್ ​ನ್ಯೂಸ್; ಬೆಂಗಳೂರಿನಲ್ಲಿ ಇಳಿಕೆಯಾದ ಚಿನ್ನದ ಬೆಲೆ

ನೌಕಾಸನ

ಹೆಸರು ಸೂಚಿಸುವಂತೆ ಇದು ದೋಣಿಯ ಆಕಾರದಲ್ಲಿ ಮಾಡುತ್ತೇವೆ. ಈ ಆಸನ ನಿಮ್ಮ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ. ನೌಕಾಸನ ನಿಮ್ಮ ದೇಹ ಮತ್ತು ಮನಸ್ಸನ್ನು ಬಲಪಡಿಸುತ್ತದೆ. ನಿಮ್ಮ ಬೆನ್ನುಮೂಳೆ ಬಲಪಡಿಸಲು ಸಹಾಯ ಮಾಡುತ್ತದೆ.

ನಿಮ್ಮ ಚಾಪೆಯ ಮೇಲೆ ಪಾದಗಳನ್ನು ಒಟ್ಟಿಗೆ ಮತ್ತು ತೋಳುಗಳನ್ನು ಬದಿಗಳಲ್ಲಿ ಜೋಡಿಸಿ ಮಲಗಿ. ಈಗ, ನಿಮ್ಮ ತೋಳುಗಳನ್ನು ನೇರವಾಗಿರಿಸಿ ಮತ್ತು ನಿಮ್ಮ ಕೈ ಬೆರಳುಗಳನ್ನು ಕಾಲ್ಬೆರಳುಗಳ ಕಡೆಗೆ ಚಾಚಿ, ನಿಮ್ಮ ಎದೆ ಮತ್ತು ಪಾದಗಳನ್ನು ನೆಲದಿಂದ ಮೇಲೆತ್ತಿ, ನಿಮ್ಮ ತೋಳುಗಳನ್ನು ಪಾದಗಳ ಕಡೆಗೆ ಚಾಚಿ. ನಿಮ್ಮ ಕಣ್ಣುಗಳು, ಕೈ ಬೆರಳು ಮತ್ತು ಕಾಲ್ಬೆರಳುಗಳು ಒಂದೇ ಸಾಲಿನಲ್ಲಿಡಿ.

ವೀರಭದ್ರಾಸನ

ಈ ಆಸನ ನಿಮ್ಮ ದೇಹದ ನಮ್ಯತೆ ಹೆಚ್ಚಿಸಲು, ತೋಳುಗಳನ್ನು ಮತ್ತು ಬೆನ್ನಿನ ಕೆಳಭಾಗ ಬಲಪಡಿಸಲು ಸೂಕ್ತವಾಗಿದೆ. ರಕ್ತ ಪರಿಚಲನೆ ಸುಧಾರಿಸಲು ಈ ವೀರಭದ್ರಾಸನ ಭಂಗಿಯನ್ನು ಅಭ್ಯಾಸ ಮಾಡಬಹುದು.

ಕನಿಷ್ಠ 3-4 ಅಡಿ ದೂರದಲ್ಲಿ ನಿಮ್ಮ ಕಾಲುಗಳನ್ನು ಅಗಲವಾಗಿ ನೇರವಾಗಿ ನಿಂತುಕೊಳ್ಳಿ. ನಿಮ್ಮ ಬಲಪಾದವನ್ನು 90 ಡಿಗ್ರಿಗಳಷ್ಟು ಮತ್ತು ಎಡಪಾದವನ್ನು ಸುಮಾರು 15 ಡಿಗ್ರಿಗಳಷ್ಟು ತಿರುಗಿಸಿ. ಎರಡೂ ತೋಳುಗಳನ್ನು ಭುಜದ ಎತ್ತರಕ್ಕೆ ಪಕ್ಕಕ್ಕೆ ಎತ್ತಿ ನೆಲಕ್ಕೆ ಸಮಾನಾಂತರವಾಗಿ ಇರಿಸಿ. ಉಸಿರಾಡುತ್ತಾ, ನಿಮ್ಮ ಬಲ ಮೊಣಕಾಲನ್ನು ಬಾಗಿಸಿ ಮತ್ತು ನಿಮ್ಮ ಮೊಣಕಾಲು ಪಾದ ಮೀರದಂತೆ ನೋಡಿಕೊಳ್ಳಿ.
Published by:Latha CG
First published: