• Home
 • »
 • News
 • »
 • trend
 • »
 • Video Viral: ಮುದ್ದು ನಾಯಿಗೆ ಊಟ ಮಾಡಿಸಲು ಮ್ಯಾರೇಜ್‌ ಮಧ್ಯೆ ಬ್ರೇಕ್! ವಧುವಿನ ಶ್ವಾನ ಪ್ರೀತಿಗೆ ವರನೇ ಶಾಕ್!

Video Viral: ಮುದ್ದು ನಾಯಿಗೆ ಊಟ ಮಾಡಿಸಲು ಮ್ಯಾರೇಜ್‌ ಮಧ್ಯೆ ಬ್ರೇಕ್! ವಧುವಿನ ಶ್ವಾನ ಪ್ರೀತಿಗೆ ವರನೇ ಶಾಕ್!

ಮುದ್ದು ಶ್ವಾನಕ್ಕೆ ಊಟ ಮಾಡಿಸಿದ ವಧು

ಮುದ್ದು ಶ್ವಾನಕ್ಕೆ ಊಟ ಮಾಡಿಸಿದ ವಧು

ವಧು ತನ್ನ ಮದುವೆಗೆಂದು ಮೇಕಪ್ ಮಾಡಿಸಿಕೊಳ್ಳುತ್ತಿದ್ದಾಗ ತನ್ನ ಮುದ್ದುನಾಯಿಗೆ ಊಟ ಮಾಡಿಸಬೇಕಿರುವುದು ನೆನಪಾಗಿದೆ. ತಕ್ಷಣವೇ ಅವಳು ಮೇಕಪ್ ಅನ್ನು ​ಅರ್ಧಕ್ಕೇ ಬಿಟ್ಟು, ನಾಯಿಗೆ ಊಟ ಮಾಡಿಸಲು ಬಂದಿದ್ದಾಳೆ. ವಧು ಮತ್ತು ಶ್ವಾನದ ಮುದ್ದಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.

ಮುಂದೆ ಓದಿ ...
 • News18 Kannada
 • Last Updated :
 • New Delhi, India
 • Share this:

  ಮದುವೆ (Marriage) ಎನ್ನುವುದು ಜೀವನದ ಪ್ರಮುಖ ಘಟ್ಟ. ಮದುವೆಯ ಬಗ್ಗೆ ವಧು - ವರ ಅನೇಕ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಅದರಲ್ಲೂ ವಧುವಾದವಳು ತನ್ನ ಮದುವೆಯಲ್ಲಿ ಮುಳುಗಿದರೆ ಕತೆ ಮುಗಿಯಿತು. ಕೈಗೊಬ್ಬರು ಕಾಲಿಗೊಬ್ಬರು, ತಲೆಗೊಬ್ಬರು, ಬೆರಳಿಗೊಬ್ಬರು ಎಷ್ಟು ಜನರಿದ್ದರೂ ಸಾಲುವುದೇ ಇಲ್ಲ ಅವಳ ಸಹಾಯಕ್ಕೆ! ತನ್ನ ಮದುವೆಯಲ್ಲಿ ರಾಜಕುಮಾರಿಯಂತೆ ಮಿನುಗಬೇಕೆಂಬ ಆಸೆ ಅವಳಿಗಿರುತ್ತದೆ. ಸದ್ಯ ಇಲ್ಲೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social media) ಸಕತ್ ವೈರಲ್ ಆಗುತ್ತಿದ್ದು, ವಧು (Bridal)  ತನ್ನ ಮದುವೆಗೆಂದು ಮೇಕಪ್ (Makeup)  ಮಾಡಿಸಿಕೊಳ್ಳುತ್ತಿದ್ದಾಗ ತನ್ನ ಮುದ್ದುನಾಯಿಗೆ ಊಟ ಮಾಡಿಸಬೇಕಿರುವುದು ನೆನಪಾಗಿದೆ. ತಕ್ಷಣವೇ ಅವಳು ಮೇಕಪ್ ಅನ್ನು (Makeup) ​ ಅರ್ಧಕ್ಕೇ ಬಿಟ್ಟು, ನಾಯಿಗೆ (Dog)  ಊಟ ಮಾಡಿಸಲು ಬಂದಿದ್ದಾಳೆ. ವಧು ಮತ್ತು ಶ್ವಾನದ ಮುದ್ದಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.


  ವೈರಲ್ ವಿಡಿಯೋದಲ್ಲಿ ಇರುವುದೇನು ?
  ವೈರಲ್ ಆಗಿರುವ ವಿಡಿಯೋದಲ್ಲಿ ಇರುವಂತೆ ಮದುಮಗಳೊಬ್ಬಳು ಅಪೂರ್ಣ ಮೇಕ್ಅಪ್ ನಲ್ಲಿ ಇದ್ದಾಳೆ. ನೆಲದ ಮೇಲೆ ಆರಾಮದಲ್ಲಿ ಕುಳಿತ ವಧುವಿನ ಪಕ್ಕದಲ್ಲಿ ಒಂದು ತಟ್ಟೆಯಲ್ಲಿ ಬಿರಿಯಾನಿ ಇದ್ದು, ತನ್ನ ಎದುರಿಗೆ ಇದ್ದ ಮುದ್ದಿನ ನಾಯಿಗೆ ಕೈತುತ್ತು ಕೊಡುವುದನ್ನು ನೋಡಬಹುದು. ಈ ವಿಡಿಯೋಗೆ ನೆಟ್ಟಿಗರು ಫಿದಾ ಆಗಿದ್ದಾರೆ.


  ನೆಟ್ಟಿಗರಿಂದ ಮೆಚ್ಚುಗೆಯ ಕಾಮೆಂಟ್
  ಶ್ವಾನ ಮತ್ತು ವಧುವಿನ ಮುದ್ದ ವಿಡಿಯೋಗೆ ನೀತಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಮಗುವಿನಂತೆ ನೋಡಿಕೊಳ್ಳುತ್ತಿದ್ದರೆ ಮಾತ್ರ ಇಂಥ ನಾಯಿಗಳನ್ನು ಸಾಕಬೇಕು ಎನ್ನುವುದು ಅಕ್ಷರಶಃ ನಿಜ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಗಂಡನ ಮನೆಗೆ ಈ ಮುದ್ದುಶ್ವಾನವನ್ನು ಕರೆದುಕೊಂಡು ಹೋಗುತ್ತಾಳೆಯೇ? ಅನೇಕ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

  View this post on Instagram


  A post shared by Simar K (@simark_makeup)
  ಮೇಕಪ್ ಆರ್ಟಿಸ್ಟ್, ಸಿಮರ್ ಕೆ ಅವರು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ, ಈಗ ವೈರಲ್ ಆಗುತ್ತಿರುವ ವೀಡಿಯೊದಲ್ಲಿ "ದಿವ್ಯಾ ಎಂಬ ವಧು ತನ್ನ ಮದುವೆಗೆ ತಯಾರಾಗುತ್ತಿರುವಾಗ ತನ್ನ ಸಾಕು ನಾಯಿಗೆ ಆಹಾರಕ್ಕಾಗಿ ವಿರಾಮ ತೆಗೆದುಕೊಳ್ಳುತ್ತಾಳೆ" ಎಂಬ ಕ್ಯಾಪ್ಶನ್ ನೊಂದಿಗೆ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈಗಾಗಲೇ ಈ ವಿಡಿಯೋ ಇನ್‌ಸ್ಟಾಗ್ರಾಮ್‌ ನಲ್ಲಿ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. 5,000ಕ್ಕೂ ಹೆಚ್ಚು ಈ ವಿಡಿಯೋ ಲೈಕ್ಸ್ ಪಡೆದುಕೊಂಡಿದೆ.


  ಇದನ್ನೂ ಓದಿ:  Viral Wedding Video: ಮಂಟಪದಲ್ಲಿ ವಧುವನ್ನು ನೋಡಿ ಕಣ್ಣೀರಿಟ್ಟ ವರ! ವೈರಲ್ ವೀಡಿಯೋ ನೋಡಿ ನೆಟ್ಟಿಗರು ಹೀಗಂದ್ರು


  ಶ್ವಾನಕ್ಕೆ 4,500 ರೂ. ಸೂಟ್‌ ಹಾಕಿಸಿ 350 ಅತಿಥಿಯೊಂದಿಗೆ ಹುಟ್ಟುಹಬ್ಬ ಆಚರಣೆ


  ಒಂದು ವಾರದ ಹಿಂದೆಯಷ್ಟೇ ನಾಯಿಯ ಅದ್ದೂರಿ ಹುಟ್ಟು ಹಬ್ಬ ಅಕಾಹಾರಿದ ವಿಡಿಯೋ ವೈರಲ್ ಆಗಿತ್ತು. ಹೌದು ಜಾರ್ಖಂಡ್ ಕುಟುಂಬವೊಂದು 350 ಅತಿಥಿಗಳೊಂದಿಗೆ ಸಾಕು ನಾಯಿಯ ಜನ್ಮದಿನದ ಪಾರ್ಟಿಯನ್ನು ಆಚರಿಸಿದ್ದಾರೆ. ಧನ್‌ಬಾದ್‌ನ ಲೋಯಾಬಾದ್ ಪ್ರದೇಶದಲ್ಲಿ ವಾಸಿಸುವ ಸುಮಿತ್ರಾ ಕುಮಾರಿ ಮತ್ತು ಸಂದೀಪ್ ದಂಪತಿ ತಮ್ಮ ಸಾಕುನಾಯಿ ಅಕ್ಸರ್‌ನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಅಕ್ಸರ್‌ನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಮಾಡಲು ಕುಟುಂಬ 350 ಅತಿಥಿಗಳಿಗಾಗಿ ಆಮಂತ್ರಣ ಪತ್ರಗಳನ್ನು ಮುದ್ರಿಸಿತ್ತು. ಮಾತ್ರವಲ್ಲದೆ ನಾಯಿಗೆ 4,500 ರೂ ಮೌಲ್ಯದ ಸೂಟ್‌ನಿಂದ ಅಲಂಕರಿಸಲಾಗಿತ್ತು.  ಹತ್ತಿರದ ಹಳ್ಳಿಯಿಂದ ಮಾತ್ರವಲ್ಲ, ಬಂಗಾಳದ ಶ್ರೀಪುರದಿಂದಲೂ ಅತಿಥಿಗಳು ನಾಯಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಲು ಧನ್‌ಬಾದ್‌ಗೆ ಆಗಮಿಸಿದ್ದರು. ಮಗುವಿನ ಹುಟ್ಟುಹಬ್ಬದಂತೆಯೇ, ಅತಿಥಿಗಳು ನಾಯಿಗೆ ಉಡುಗೊರೆಗಳನ್ನು ತಂದಿದ್ದರು. ಅಕ್ಸರ್ ಎಂಬ ಶ್ವಾನ ಮೂರು ಚಿನ್ನದ ಲಾಕೆಟ್‌ಗಳನ್ನು ಉಡುಗೊರೆಯಾಗಿ ಪಡೆದಿದ್ದಾನೆ. ಕೇಕ್ ಕತ್ತರಿಸುವ ಮೊದಲು ನಾಯಿಗೆ ಆರತಿ ಮಾಡಲಾಗಿದೆ. ಇದಲ್ಲದೆ ಮೇಜಿನ ಮೇಲೆ ದೊಡ್ಡ ಕೇಕ್ ಅನ್ನು ಇರಿಸಿಮಹಿಳೆಯೊಬ್ಬರು ನಾಯಿಗೆ ಮುತ್ತು ಕೊಡುವುದನ್ನು ನೋಡಬಹುದು. ಅತಿಥಿಗಳು ಸಾಕು ನಾಯಿಯ ಪಕ್ಕದಲ್ಲಿ ನಿಂತು ಕೇಕ್ ತಿನ್ನುವ ಮೊದಲು ಶ್ವಾನದ ಫೋಟೋ ತೆಗೆಯುವುದನ್ನು ನೋಡಬಹುದು.


  ಇದನ್ನೂ ಓದಿ: Viral Video: ಸಂಬಂಧಿಕರು, ಸ್ನೇಹಿತರಿಗಾಗಿ ವಿಮಾನವನ್ನೇ ಬುಕ್ ಮಾಡಿದ ವಧು, ವರ: ವಿಡಿಯೋ ನೋಡಿದವರು ಫುಲ್ ಶಾಕ್!


  ಏನೇ ಆಗಲಿ ಸಾಕು ನಾಯಿಗಳನ್ನು ಬೈಕ್ ನಲ್ಲಿ ಇರಿಸಿ ಮದುವೆ ಮಂಟಪಕ್ಕೆ ಕರೆದುಕೊಂಡು ಬರುವುದು, ಅವುಗಳಿಗೆ ವಧು ತನ್ನ ಮದುವೆ ಸಮಯದಲ್ಲಿ ಊಟ ಮಾಡಿಸುವುದು. ಶ್ವಾನದ ಹುಟ್ಟುಹಬ್ಬವನ್ನು ವಿಷೇಶ ರೀತಿಯಲ್ಲಿ ಆಚರಿಸುವುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ.

  Published by:Usha P
  First published: