ಲಂಚ ಪಡೆದ ವಿಡಿಯೋ ಡಿಲೀಟ್​ ಮಾಡಲು ಲಂಚಕೊಟ್ಟ ಪೊಲೀಸ್​ [Video]

news18
Updated:April 23, 2018, 5:55 PM IST
ಲಂಚ ಪಡೆದ ವಿಡಿಯೋ ಡಿಲೀಟ್​ ಮಾಡಲು ಲಂಚಕೊಟ್ಟ ಪೊಲೀಸ್​ [Video]
news18
Updated: April 23, 2018, 5:55 PM IST
ಮುಂಬೈ: ಸಾಮಾಜಿಕ ಜಾಲತಾಣ ಪರಿಚಯವಾದ ಬಳಿಕ ಅದೆಷ್ಟೋ ಪೊಲೀಸರ ಲಂಚಾವತಾರಗಳು ಬಯಲಿಗೆ ಬಂದಿವೆ, ಇದಕ್ಕೆ ಪೂರಕವೆಂಬಂತೆ ಮುಂಬೈ-ಪುಣೆ ಎಕ್ಸ್​ಪ್ರೆಸ್​ ಹೈವೆ ಪೊಲೀಸರ ಲಂಚಾವತಾರದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮುಂಬೈ ಪುಣೆ ರಸ್ತೆಯಲ್ಲಿ ಪೊಲೀಸ್​ ಪೇದೆಯೊಬ್ಬ ಯುವಕನಿಂದ ಲಂಚ ಪಡೆದಿದ್ದಾನೆ. ಆದರೆ ತನ್ನ ಲಂಚಾವತಾರ ಯುವಕನ ವೀಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ತಿಳಿದ ಕೆಲವೇ ಕ್ಷಣಗಳಲ್ಲಿ ವಿಡಿಯೋವನ್ನು ಡಿಲೀಟ್​​ ಮಾಡುವಂತೆ ಕೇಳಿ ತಾನೇ ಲಂಚ ನೀಡಲು ಮುಂದಾಗಿದ್ದಾನೆ.

ಹೌದು ಮುಂಬೈ ಯುವಕ ಲಕ್ಷ್ಯ ಉದಯ್​ ಇತ್ತೀಚೆಗೆ ತನ್ನ ಸ್ನೇಹಿತರೊಡನೆ ಮುಂಬೈನಿಂದ ಗೋವಾಗೆ ಪ್ರಯಾಣಿಸುತ್ತಿದ್ದ. ಆದರೆ ಮುಂಬೈನಿಂದ ಪುಣೆಯ ಎಕ್ಸ್ ಪ್ರೆಸ್‍‍ವೇನಲ್ಲಿ ದ್ವಿಚಕ್ರ ಹಾಗೂ ಆಟೋಗಳು ಹೋಗುವುದು ನಿಷೇಧ ಮಾಡಲಾಗಿತ್ತು. ಈ ವಿಚಾರ ತಿಳಿಯದ ಉದಯ್​ ಹಾಗೂ ಸ್ನೇಹಿತ ಅದೇ ರಸ್ತೆಯಲ್ಲಿ ಮುಂದೆ ಸಾಗಿದ್ದಾರೆ. ಇವರನ್ನು ತಡೆದ ಪೊಲೀಸ್​ ಪೇದೆ ದಾಖಲೆಯನ್ನು ನೀಡುವಂತೆ ಹೇಳಿದ್ದಾನೆ.

ಇಬ್ಬರೂ ಸೂಕ್ತ ದಾಖಲೆಯನ್ನು ನೀಡಿದ್ದರೂ ರಸ್ತೆ ನಿಯಮ ಉಲ್ಲಂಘಿಸಿದಕ್ಕೆ ದಂಡ ಕಟ್ಟುವಂತೆ ಪೇದೆ ಹೇಳಿದ್ದಾರೆ. ಪೇದೆಯ ದುರಾದೃಷ್ಟಕ್ಕೆ ಇದೇ ಸಮಯದಲ್ಲಿ ಮತ್ತೊಬ್ಬ ದ್ವಿಚಕ್ರ ವಾಹನ ಸವಾರ ಕೂಡಾ ಇದೇ ಪೇದೆ ಬಳಿ ಸಿಕ್ಕಿಕೊಂಡಿದ್ದರು. ಅವರಿಗೂ ಕೂಡಾ ಲಾಂಗ್ ರೂಟ್ ನೆಪ ಹೇಳಿ ರೂ.100 ಲಂಚ ಪಡೆದುಕೊಳ್ಳುತ್ತಿದ್ದರು. ಆಗ ಪೊಲೀಸ್ ಪೇದೆ ಲಂಚ ಪಡೆಯುತ್ತಿರುವ ವಿಡಿಯೋವನ್ನು ಉದಯ್​ ರೆಕಾರ್ಡ್ ಮಾಡಿದ್ದಾರೆ.

ಇದಾದ ಬಳಿಕ ಉದಯ್​ ಪೊಲೀಸರಿಗೆ ತನ್ನ ಬಳಿ ನೀವು ಲಂಚ ಪಡೆಯುತ್ತಿರುವ ವಿಡಿಯೋ ಇದ್ದು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿ ನಿಮ್ಮ ಬುದ್ಧಿಯನ್ನು ಬಯಲಿಗೆಳೆಯುತ್ತೇನೆ ಎಂದು ಓಪನ್​ ಚಾಲೆಂಜ್​ ಹಾಕಿದ್ದಾನೆ. ಉದಯ್​ ಮಾತಿನಿಂದ ಬೆಚ್ಚಿಬಿದ್ದ ಪೊಲೀಸ್​ ಪೇದೆ ಈತನ ಬಳಿ ಬಂದು ನಾನು ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ದಯವಿಟ್ಟು ಈ ರೀತಿ ಮಾಡಬೇಡಿ. ಬೇಕಾದರೆ ನಾನೇ ನಿಮಗೆ 400ರೂ ಕೊಡುತ್ತೇನೆ , ವಿಡಿಯೋ ಡಿಲೀಟ್​ ಮಾಡು ಎಂದು ಗೋಗರೆದಿದ್ದಾರೆ. ಅದರೆ ಉದಯ್​ ಮಾತ್ರ ಇದ್ಯಾವುದಕ್ಕೂ ಜಗ್ಗದೇ ವಿಡಿಯೋ ಪೋಸ್ಟ್​ ಮಾಡಿದ್ದಾರೆ.
ಈ ಎಲ್ಲಾ ಸನ್ನಿವೇಶದ ವೀಡಿಯೋ ಇಲ್ಲಿದೆ ನೋಡಿ

First published:April 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ