ಈಕೆ ಮಗುವಿಗೆ ಎದೆ ಹಾಲು ಕುಡಿಸುವ ಚಿತ್ರ ವೈರಲ್​ ಆಗಲು ಇಲ್ಲಿದೆ ಕಾರಣ!

news18
Updated:August 9, 2018, 1:18 PM IST
ಈಕೆ ಮಗುವಿಗೆ ಎದೆ ಹಾಲು ಕುಡಿಸುವ ಚಿತ್ರ ವೈರಲ್​ ಆಗಲು ಇಲ್ಲಿದೆ ಕಾರಣ!
(Image: Facebook/Carol Lockwood)
news18
Updated: August 9, 2018, 1:18 PM IST
ನ್ಯೂಸ್​ 18 ಕನ್ನಡ 

ತಾಯಿಯೊಬ್ಬಳು ಮಗುವಿಗೆ ಜನ್ಮ ನೀಡುವುದು ಮಾತ್ರಾವಲ್ಲದೇ ಅದಕ್ಕೆ ಕಾಲಕ್ಕನುಗುಣವಾಗಿ ಸ್ತನ್ಯಪಾನ ಮಾಡಲೇಬೇಕು. ಮಗುವಿನ ದೈಹಿಕ ಬೆಳವಣಿಗೆಗೆ ಎದೆಹಾಲೇ ಮದ್ದು, ಆದರೆ ಸಾರ್ವಜನಿಕ ಸ್ಥಳದಲ್ಲಿ ಎದೆ ಹಾಲು ನೀಡುವುದು ತಪ್ಪು ಎಂಬ ಕಲ್ಪನೆ ಸಾಕಷ್ಟು ಜನರ ಮನಸ್ಸಿನಲ್ಲಿದೆ.  ಇದಕ್ಕೆ ಪೂರಕ ಎಂಬಂತೆ ಮೆಕ್ಸಿಕೋದ ಕ್ಯಾಬೋ ಸನ್​ ಲ್ಯೂಕಾಸ್​ ಎಂಬಲ್ಲಿ ಮಹಿಳೆಯೊಬ್ಬಳು ಮಗುವಿಗೆ ಎದೆ ಹಾಲು ಉಣಿಸುವ ವೇಳೆ ಮುಖಕ್ಕೆ ಬಟ್ಟೆ ಮುಚ್ಚಿಕೊಂಡ ಚಿತ್ರ ವೈರಲ್​ ಆಗಿದೆ.


ವಾರದ ಹಿಂದೆ ಈ ಘಟನೆ ನಡೆದಿದ್ದು, ಮೆಲಾನಿ ಡೂಡ್ಲೇ ಎಂಬವರು ತನ್ನ ಮಗುವಿಗೆ ರೆಸ್ಟೋರೆಂಟ್​ವೊಂದರಲ್ಲಿ ಕುಳಿತು ಸ್ತನ್ಯಪಾನ ಮಾಡುತ್ತಿದ್ದರು. ಈ ವೇಳೆ ದಾರಿಹೋಕನೊಬ್ಬ ಬಟ್ಟೆ ಮುಚ್ಚಿಕೊಳ್ಳುವಂತೆ ಹೇಳಿದ್ದಾನೆ. ಕೂಡಲೇ ತನ್ನ ಎದೆ ಮುಚ್ಚಿಕೊಳ್ಳುವ ಬದಲು ಡೂಡ್ಲೆ ಮುಖವನ್ನೇ ಬಟ್ಟೆಯಲ್ಲಿ ಮುಚ್ಚಿಕೊಂಡಿದ್ದಾರೆ. ಈ ಚಿತ್ರವನ್ನು ಅವರ ಸ್ನೇಹಿತ ಕೆರೋಲ್​ ಲಾಕ್​ವುಡ್​ ಎಂಬವರು ಫೇಸ್​ಬುಕ್​ನಲ್ಲಿ ಶೇರ್ ಮಾಡಿದ್ದಾರೆ.

ಚಿತ್ರ ಶೇರ್​ ಮಾಡಿರುವ ಕೆಲವೇ ಕ್ಷಣದಲ್ಲಿ ವೈರಲ್​ ಆಗಿದ್ದು, ಈ ವರೆಗೆ ಸುಮಾರು 2,08,000 ಅಧಿಕ ಮಂದಿ ಶೇರ್​ ಮಾಡಿದ್ದಾರೆ. ಈ ಕುರಿತು ಟುಡೇ ಅಂತರ್ಜಾಲಕ್ಕೆ ಪ್ರತಿಕ್ರಿಯೆ ನೀಡಿರುವ ಡೂಡ್ಲೆ, ಮಗುವಿಗೆ ಎದೆ ಹಾಲು ನೀಡುವ ಸಂದರ್ಭದಲ್ಲಿ ಕಾಣದಂತೆ ಬಟ್ಟೆಯನ್ನು ಧರಿಸಿದ್ದೆ. ಆದರೆ ಬಿಸಿಲಿನ ಬೇಗೆಯಿಂದ ನಾನು ಬಟ್ಟೆಯನ್ನು ಸರಿಸಿ ಹಾಲುಣಿಸುತ್ತಿದ್ದೆ. ಈ ವೇಳೆ ದಾರಿಹೋಕನೊಬ್ಬ ಬಂದು ಮೊಲೆ ಕಾಣಿಸದಂತೆ ಬಟ್ಟೆಯಿಂದ ಮುಚ್ಚಿಕೊಳ್ಳುವಂತೆ ಹೇಳಿದ್ದಾನೆ ಎಂದು ಡೂಡ್ಲೆ ಹೇಳಿದ್ದಾರೆ.

ಕೆಲ ಕ್ಷಣಗಳ ಕಾಲ ನನಗೆ ಏನು ಮಾಡಬೇಕೆಂಬದೇ ತಿಳಿಯಲಿಲ್ಲ, ಕೂಡಲೇ ಆ ಬಟ್ಟೆಯೊಂದರಿಂದ ನನ್ನ ಮುಖವನ್ನೇ ಮುಚ್ಚಿಕೊಂಡೆ, ಹತ್ತಿರದಲ್ಲಿದ್ದ ನನ್ನ ಗಂಡ ಈ ವಿಚಿತ್ರ ಘಟನೆಯ ಚಿತ್ರವನ್ನು ಮೊಬೈಲ್​​ನಲ್ಲಿ ಸೆರೆ ಹಿಡಿದರು ಎಂದು ಡೂಡ್ಲೆ ನಡೆದ ಘಟನೆಯನ್ನು ವಿವರಿಸಿದ್ದಾರೆ.
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ