(VIDEO)ಕಳ್ಳತನ ಮಾಡಲು ಬಂದು ಯುವತಿಯಿಂದ ಒದೆ ತಿಂದ ಕಳ್ಳರು!


Updated:June 6, 2018, 6:03 PM IST
(VIDEO)ಕಳ್ಳತನ ಮಾಡಲು ಬಂದು ಯುವತಿಯಿಂದ ಒದೆ ತಿಂದ ಕಳ್ಳರು!

Updated: June 6, 2018, 6:03 PM IST
ಮಧ್ಯ ಪ್ರದೇಶ: ಹರದಾ ಪ್ರದೇಶದ ಜೋಶಿ ಕಾಲೋನಿಯಲ್ಲಿ ಕಳೆದ ಶುಕ್ರವಾರದಂದು ಮನೆಗೆ ನುಗ್ಗಿದ ಕಳ್ಳರನ್ನು ಮನೆ ಮಾಲೀಕನ ಪುತ್ರಿ ಬಡಿದು ಓಡಿಸಿದ ಘಟನೆ ನಡೆದಿದೆ.

ರಾತ್ರಿ ಸುಮಾರು 2.30ರ ವೇಳೆ ನಾಯಕ ದಂಪತಿಗಳ ಮನೆಗೆ ಕಳ್ಳರು ಕಿಟಕಿ ಮೂಲಕ ನುಗ್ಗಿದ್ದಾರೆ, ಇವರು ನುಗ್ಗಿದ ಸದ್ದಿಗೆ ಮನೆಯಲ್ಲಿ ನಾಯಕ್​ ದಂಪತಿಯ ಪುತ್ರಿಗೆ ಎಚ್ಚರವಾಗಿದೆ, ಕೂಡಲೇ ಕಳ್ಳ ಕಳ್ಳ ಎಂದು ಜೋರಾಗಿ ಕಿರುಚಿದ್ದಾರೆ.ಈ ವೇಳೆ ನಾಯಕ್​ ದಂಪತಿಗೂ ಎಚ್ಚರವಾಗಿದ್ದು ಕಳ್ಳರನ್ನು ಹಿಡಿಯಲು ಯತ್ನಿಸಿದ್ದಾರೆ, ಆದರೆ ಮಾರಾಕಾಸ್ತ್ರ ಹೊಂದಿದ್ದ ಕಳ್ಳರು ಮೂವರ ಮೇಲೂ ದಾಳಿ ನಡೆಸಿದ್ದಾರೆ. ಇದಕ್ಕೆ ಅಂಜದ ನಾಯಕ ದಂಪತಿಗಳ ಪುತ್ರಿ ಅಂತರ ಮತ್ತೊಮ್ಮೆ ಕಳ್ಳರ ಮೇಲೆ ದಾಳಿ ನಡೆಸಿ ಅಪ್ಪ ಅಮ್ಮನನ್ನು ರಕ್ಷಿಸಿದ್ದಾಳೆ. ಯುವತಿಯ ದಾಳಿಯಿಂದ ಗಾಬರಿಗೊಳಗಾದ ಕಳ್ಳರು ಮತ್ತೊಂದು ಕಿಟಿಕಿಯಿಂದ ಓಡಿ ಹೋಗಿದ್ದಾರೆ. ಯುವತಿ ಕೈಯಿಂದ ಪೆಟ್ಟು ತಿನ್ನುವ ವಿಡಿಯೋ ಸಿಸಿಟಿವಿಯಲ್ಲಿ ರೆಕಾರ್ಡ್​ ಆಗಿದ್ದು ವೈರಲ್​ ಆಗಿದೆ.
First published:June 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...