ಹರಕೆಯಾಗಿ ನೀಡಿದ್ದ SUV ಹರಾಜಿಗೆ ಮುಂದಾದ ಕೇರಳದ ದೇಗುಲ

ಡಿಸೆಂಬರ್ 18 ರಂದು ದೇವಸ್ಥಾನದ ಆವರಣದಲ್ಲಿ ನಡೆಯಲಿರುವ ಹರಾಜಿನಲ್ಲಿ ಈ ಜನಪ್ರಿಯ ಮಹೀಂದ್ರಾ ಎಸ್‌ಯುವಿಯನ್ನು ಮಾರಾಟ ಮಾಡಲು ದೇವಸ್ಥಾನದ ಅಧಿಕಾರಿಗಳು ನಿರ್ಧರಿಸುವುದರೊಂದಿಗೆ ಊಹಾಪೋಹಗಳಿಗೆ ತೆರೆ ಎಳೆದಿದೆ

ಕೆಂಪು ಕಾರು ಪ್ರದರ್ಶನ

ಕೆಂಪು ಕಾರು ಪ್ರದರ್ಶನ

  • Share this:
ಮೋಟಾರ್ ದೈತ್ಯ ಕಂಪನಿ ಮಹೀಂದ್ರಾ, ಹೊಸದಾಗಿ ತಯಾರಿಸಿದ SUV ಅನ್ನು ಭಕ್ತರೊಬ್ಬರು ದೇವಸ್ಥಾನಕ್ಕೆ ಅರ್ಪಿಸಿದ ನಂತರ, ಹೊಚ್ಚ ಹೊಸ ಕೆಂಪು ಮಹೀಂದ್ರಾ ಥಾರ್ (Mahindra Thar ) ಇತ್ತೀಚೆಗೆ ಸಾಕಷ್ಟು ಸುದ್ದಿ ಮಾಡುತ್ತಿದೆ. ಕೇರಳದ( Kerala) ತ್ರಿಶೂರ್ ಜಿಲ್ಲೆಯ ಗುರುವಾಯೂರ್ ಶ್ರೀಕೃಷ್ಣ(Guruvayur Sreekrishna temple) ದೇವಸ್ಥಾನದ ದೇವರಿಗೆ ಮಹೀಂದ್ರಾ ಥಾರ್ ಎಸ್ ಯುವಿ, ಇತ್ತೀಚಿನ ದಿನಗಳಲ್ಲಿ ದೇವರಿಗೆ ಅರ್ಪಿಸಲಾದ ದೊಡ್ಡ ರೀತಿಯ ಕೊಡುಗೆಯಾಗಿದೆ. ದಕ್ಷಿಣ ಭಾರತದ ಈ ದೇವಾಲಯವು ಹಸಿ ಬಾಳೆ ಗೊಂಚಲುಗಳಿಂದ ಹಿಡಿದು ಸಕ್ಕರೆ ತುಂಬಿದ ಗೋಣಿಚೀಲಗಳವರೆಗೆ ಮತ್ತು ಅಮೂಲ್ಯವಾದ ಆಭರಣಗಳನ್ನು ಪ್ರಧಾನ ದೇವತೆಯಾದ ಭಗವಾನ್ ಗುರುವಾಯೂರಪ್ಪನ್ ಅಥವಾ ಭಗವಾನ್ ಕೃಷ್ಣನಿಗೆ ಕಾಣಿಕೆಯಾಗಿ ನೀಡುವ ಭಕ್ತರಿಗೆ (devotees) ಹೆಸರುವಾಸಿಯಾಗಿದೆ.

ಊಹಾಪೋಹಗಳಿಗೆ ತೆರೆ
ಈಗ ದೇವರಿಗೆ ಕೊಡಲಾಗಿರುವ ಈ ಉಡುಗೊರೆಯು-ಆನ್-ವೀಲ್ಸ್ ಸಾಮಾಜಿಕ ಮಾಧ್ಯಮ ಟ್ರೋಲ್‌ಗಳೊಂದಿಗೆ ಸಾಕಷ್ಟು ಸದ್ದು ಮಾಡಿತ್ತು. ಆದಾಗ್ಯೂ, ದೇವಾಲಯವು ಈ ಉಡುಗೊರೆಯನ್ನು ಹೇಗೆ ಬಳಸಿಕೊಳ್ಳಲು ಯೋಜಿಸಿದೆ ಎಂದು ತಿಳಿಯಲು ಸಾಮಾಜಿಕ ಮಾಧ್ಯಮ ಮತ್ತು ಸಾರ್ವಜನಿಕರು ಕುತೂಹಲಗೊಂಡಿದ್ದರು.

ಇದನ್ನೂ ಓದಿ: ದಾನ ನೀಡಿದ 70 ವರ್ಷದ ಬಳಿಕ ಶಾಲೆ ಜಾಗ ಬಿಡುವಂತೆ ಕೋರ್ಟ್ ಮೊರೆ ಹೋದ ದಾನಿಯ ಸೊಸೆಯಂದಿರು

ಈ ಎಲ್ಲರ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಎಲ್ಲರ ನಿರೀಕ್ಷೆಯಂತೆ, ಡಿಸೆಂಬರ್ 18 ರಂದು ದೇವಸ್ಥಾನದ ಆವರಣದಲ್ಲಿ ನಡೆಯಲಿರುವ ಹರಾಜಿನಲ್ಲಿ ಈ ಜನಪ್ರಿಯ ಮಹೀಂದ್ರಾ ಎಸ್‌ಯುವಿಯನ್ನು ಮಾರಾಟ ಮಾಡಲು ದೇವಸ್ಥಾನದ ಅಧಿಕಾರಿಗಳು ನಿರ್ಧರಿಸುವುದರೊಂದಿಗೆ ಊಹಾಪೋಹಗಳಿಗೆ ತೆರೆ ಎಳೆದಿದೆ. ಈ ಎಸ್ ಯುವಿಯ ಮೂಲ ಬೆಲೆಯನ್ನು 15 ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ.

ಕೆಂಪು ಥಾರ್‌ ಪ್ರದರ್ಶನ
ಇತ್ತೀಚೆಗೆ, ದೇವಾಲಯದ ಪೂರ್ವ ಪ್ರವೇಶದ್ವಾರದಲ್ಲಿ ನಡೆದ ಸಮಾರಂಭದಲ್ಲಿ ನಾಲ್ಕು-ಚಕ್ರ ಡ್ರೈವ್ ಆಯ್ಕೆ ಇರುವ ಕೆಂಪು ಥಾರ್‌ ಅನ್ನು ಪ್ರದರ್ಶಿಸಲಾಯಿತು. ಭಗವಾನ್ ಗುರುವಾಯೂರಪ್ಪನಿಗೆ (ವಿಷ್ಣುವಿನ ನಾಲ್ಕು ತೋಳುಗಳ ರೂಪ) ಸಮರ್ಪಿತವಾಗಿರುವ ಗುರುವಾಯೂರ್ ದೇವಸ್ಥಾನವು ಕೇರಳ ಮತ್ತು ತಮಿಳುನಾಡಿನಲ್ಲಿ ಹಿಂದೂಗಳ ಪ್ರಮುಖ ಪೂಜಾ ಸ್ಥಳಗಳಲ್ಲಿ ಒಂದಾಗಿದೆ. ಈ ದೇವಾಲಯವನ್ನು ಕೇರಳ ಸರ್ಕಾರದ ನಿಯಂತ್ರಣದಲ್ಲಿರುವ ಗುರುವಾಯೂರು ದೇವಸ್ವಂ ನಿರ್ವಹಿಸುತ್ತದೆ.

ದೇವರಿಗೆ ದಾನ
ಮಹೀಂದ್ರಾ ಲೈಫ್‌ಸ್ಟೈಲ್ SUV ಮಾರುಕಟ್ಟೆಗೆ ಕಾಲಿಟ್ಟಾಗಿನಿಂದ ಎಲ್ಲರೂ ಅದರತ್ತಲೇ ತಿರುಗಿ ನೋಡುವಂತೆ ಮಾಡಿತ್ತು. ಗುರುವಾಯೂರ್ ದೇವಸ್ಥಾನಕ್ಕೆ ನೀಡಲಾಗಿರುವ ಈ ವಾಹನ ಸೀಮಿತ ಆವೃತ್ತಿಯದ್ದಾಗಿದೆ ಅನ್ನೋದು ವಿಶೇಷ. ಈ ಲಿಮಿಟೆಡ್ ಎಡಿಷನ್ ವಾಹನದ ಅಧಿಕೃತ ಬಿಡುಗಡೆಗಾಗಿ ಮೋಟಾರು ಪ್ರಿಯರು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಇನ್ನು ದೇವತೆಗಳಿಗೆ ನೀಡುವ ವಿಶಿಷ್ಟ ಕೊಡುಗೆಗಳಲ್ಲಿ, ಇತ್ತೀಚೆಗೆ, ತನ್ನ ಜೀವನಕ್ಕಾಗಿ ದೇವಾಲಯದ ಹೊರಗೆ ಭಿಕ್ಷೆ ಬೇಡುವ ನಿರ್ಗತಿಕ ಮಹಿಳೆಯೊಬ್ಬಳು ತಾನು ಕಷ್ಟಪಟ್ಟು ಉಳಿಸಿದ ಹಣವನ್ನು ತಾನು ನಂಬುವ ದೇವರಿಗೆ ದಾನ ಮಾಡಿ ಸಾಕಷ್ಟು ಸುದ್ದಿಯಾಗಿದ್ದರು.

ಭಿಕ್ಷೆ ಬೇಡುತ್ತಿದ್ದ ಕೆಂಪಜ್ಜಿ
ಒಂದು ಮಂಗಳವಾರ, 65 ವರ್ಷದ ಕೆಂಪಜ್ಜಿ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಕೋಟೆ ಪಾತಾಳ ಆಂಜನೇಯ ದೇವಸ್ಥಾನಕ್ಕೆ ಕಾಲಿಟ್ಟಾಗ ಅನೇಕರು ಹುಬ್ಬೇರಿಸಿದ್ದರು. ಸಾಮಾನ್ಯವಾಗಿ ಸಾಯಿಬಾಬಾ ದೇವಸ್ಥಾನದ ಹೊರಗೆ ಭಿಕ್ಷೆ ಬೇಡುತ್ತಾ ಕುಳಿತಿರುವ ಈಕೆ ಊರಿನ ಸಾಯಿಬಾಬಾರ ಭಕ್ತರಿಗೆ ಚಿರಪರಿಚಿತ ಮುಖ.

ಇದನ್ನೂ ಓದಿ: Gold Pot; ಮಂತ್ರಾಲಯದ ರಾಯರ ಮಠಕ್ಕೆ 2 ಚಿನ್ನದ ಪಾತ್ರೆ ಸಮರ್ಪಣೆ; ಇವುಗಳ ಮೌಲ್ಯವೆಷ್ಟು ಗೊತ್ತಾ?

ಆದರೆ, ಆಕೆ ಆಂಜನೇಯ ದೇವಸ್ಥಾನವನ್ನು ಪ್ರವೇಶಿಸಿದಾಗ, ಆಕೆ ದೇವಸ್ಥಾನದ ಒಳಗಿರುವ ಜನರ ಬಳಿ ಭಿಕ್ಷೆ ಬೇಡಲು ಹೋಗಿದ್ದಾಳೆ ಎಂದು ಭಾವಿಸಿ ಹಲವಾರು ಜನರು ಅವಳನ್ನು ಹೊರಗೆ ಕಳುಹಿಸಲು ಪ್ರಯತ್ನಿಸಿದರು. ಆದರೆ, ಕೆಲವು ನಿಮಿಷಗಳ ನಂತರ, ಆಕೆ ದೇವರುಗೆ ತನ್ನ ಹಣವನ್ನು ದಾನ ಮಾಡಿದ ಮೇಲೆ, ಅವಳನ್ನು ಓಡಿಸುತ್ತಿದ್ದ ಅದೇ ಜನರು ಅವಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಕ್ಕೆ ಮುಂದಾಗಿದ್ದು ದೇವಸ್ಥಾನ ಸಾಕ್ಷಿಯಾಗಿತ್ತು.
Published by:vanithasanjevani vanithasanjevani
First published: