ಇತ್ತೀಚಿನ ದಿನಗಳಲ್ಲಿ ವರ್ಕ್ ಫ್ರಂ ಹೋಮ್ ಎಂಬುದು ಸರ್ವೇಸಾಮಾನ್ಯವಾಗಿಬಿಟ್ಟಿದೆ. ಮನೆಯಲ್ಲೇ ಕೆಲಸ ಮಾಡುವುದು ಕೆಲವರಿಗೆ ಇಷ್ಟವಾದರೆ ಇನ್ನು ಕೆಲವರಿಗೆ ಕಿರಿಕಿರಿ ಎಂದೆನಿಸುವುದೂ ಇದೆ. ಆದರೆ ಇಲ್ಲೊಬ್ಬ ಪ್ರಚಂಡ ತನ್ನ 8 ಗಂಟೆಗಳ ಕೆಲಸವನ್ನು ಬರೇ 2 ಗಂಟೆಗಳಲ್ಲಿ ಮುಗಿಸಿ ಬಾಸ್ ಅನ್ನೇ ಯಾಮಾರಿಸಿದ್ದಾನೆ. ಈತನ ಗೆಳತಿ ಇದೀಗ ಈ ವಿಷಯವನ್ನು ಬಹಿರಂಗಪಡಿಸಿದ್ದು ಯುವಕ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಬ್ರೇಕಪ್ ನಂತರ ಯುವಕನ ಈ ಕಳ್ಳಾಟವನ್ನು ಯುವತಿ ಆತನ ಬಾಸ್ಗೆ ತಿಳಿಸಿದ್ದಾಳೆ. ಆಕೆ ಈ ಕುರಿತು ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡಿದ್ದು ಆತ ಸರಿಯಾಗಿ ಎಷ್ಟು ಗಂಟೆ ಕೆಲಸ ಮಾಡಿದ್ದಾನೆ ಮತ್ತು ತನ್ನ ಬಾಸ್ಗೆ ಹೇಗೆ ಚಳ್ಳೆಹಣ್ಣು ತಿನ್ನಿಸಿದ ಎಂಬ ವಿವರಗಳನ್ನು ನೀಡಿದ್ದಾಳೆ.
ಅಟೊಮೇಶನ್ ಬಳಸಿಕೊಂಡು ಯುವಕ ಎಂಟು ಗಂಟೆಯ ಕೆಲಸದ ಅವಧಿಯಲ್ಲಿ ಬರೇ 2 ಗಂಟೆಗಳನ್ನು ವಿನಿಯೋಗಿಸಿಕೊಂಡು ಉಳಿದ ಸಮಯವನ್ನು ಮಜಾಮಾಡಿಕೊಂಡು ಕಳೆದಿದ್ದು ವರ್ಕ್ ಫ್ರಂ ಹೋಮ್ನ ನಿಜವಾದ ಸದ್ವಿವಿನಿಯೋಗವನ್ನು ಮಾಡಿದ್ದಾನೆ. ತನ್ನ ಸಹೋದ್ಯೋಗಿಗಳಿಗೆ ಹೋಲಿಸಿದರೆ ಈ ಯುವಕ ಬೇಗನೇ ಕೆಲಸಗಳನ್ನು ಮಾಡಿಮುಗಿಸುತ್ತಿದ್ದ ಹಾಗೂ ತನ್ನ ಕೆಲಸದಲ್ಲಿ ಪ್ರಾಮಾಣಿನಾಗಿದ್ದ. ಉಳಿದ ತಾಸು ತನ್ನ ಇತರ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದೆ ಎಂದು ಯುವಕ ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ಹಾಗಿದ್ದರೆ ಆತ ಜಾಣತನದಿಂದ ಇದನ್ನು ಮಾಡಿದ್ದಾದರೂ ಹೇಗೆ?
ನಾನು ದೊಡ್ಡ ಡೇಟಾಬೇಸ್ ಅನ್ನು ತಯಾರಿಸಿದೆ ಅದನ್ನು ಮೈಕ್ರೋಸಾಫ್ಟ್ಗೆ ಲಿಂಕ್ ಮಾಡಿದೆ. ಎಕ್ಸೆಲ್ ಲೆಕ್ಕಾಚಾರ ಮಾಡುತ್ತಿತ್ತು ನನಗಾಗಿ ಸ್ವಯಂಚಾಲಿತವಾಗಿ ವಾಕ್ಯಗಳನ್ನು ಬರೆಯುತ್ತಿತ್ತು ನಂತರ ಅದನ್ನು ಮೈಕ್ರೋಸಾಫ್ಟ್ ವರ್ಡ್ಗೆ ಎಕ್ಸ್ಪೋರ್ಟ್ ಮಾಡುತ್ತಿದ್ದೆ. ನನ್ನ ಸಹೋದ್ಯೋಗಿಗಳು ಎಂಟು ಗಂಟೆಗಳನ್ನು ವಿನಿಯೋಗಿಸುತ್ತಿದ್ದ ಕೆಲಸವನ್ನು ನಾನು ಬರೇ ಎರಡು ಗಂಟೆಗಳಲ್ಲಿ ಮುಗಿಸಿದೆ. ಇನ್ನು ತನ್ನದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಗೆಳತಿಗೆ ಈ ರಹಸ್ಯವನ್ನು ತಿಳಿಸಿದ್ದಾನೆ. ಆಕೆ ನನ್ನ ಬಗ್ಗೆ ಎಷ್ಟು ಫೀಲಿಂಗ್ಗಳನ್ನು ಹೊಂದಿದ್ದಳೋ ಹಾಗೆ ನನಗೆ ಆಕೆಯೊಂದಿಗೆ ಇರಲು ಸಾಧ್ಯವಾಗಲಿಲ್ಲ. ಬ್ರೇಕಪ್ ಮಾಡುವುದೇ ಸರಿ ಎಂದು ನನಗನ್ನಿಸಿತು. ಬ್ರೇಕಪ್ ನಂತರ ನೆಮ್ಮದಿ ದೊರಕಿತು ಎಂದಿದ್ದಾನೆ.
ಎಚ್ಆರ್ಗೆ ಈ ಯುವಕನ ಮಾಡುತ್ತಿದ್ದ ಕೆಲಸದ ಸಂಗತಿ ಗೊತ್ತಾಗಿದೆ. ಆಗ ಎಚ್ಆರ್ ಯುವಕನ ಎಲ್ಲಾ ಚಟುವಟಿಕೆಗಳ ಸ್ಕ್ರೀನ್ಶಾಟ್ಗಳನ್ನು ತೋರಿಸಿದ್ದಾರೆ. ಆತ ಎಷ್ಟು ಗಂಟೆ ಕೆಲಸ ಮಾಡಿದ್ದ ಹಾಗೂ ಎಷ್ಟು ಗಂಟೆ ಕಾಲಹರಣ ಮಾಡಿದ್ದ ಎಂಬ ವಿವರಗಳೆಲ್ಲವನ್ನೂ ಆ ಸ್ಕ್ರೀನ್ ಶಾಟ್ ಒಳಗೊಂಡಿತ್ತು.
ಈತ ಸ್ಮೋಕ್ ಮಾಡಲು ಹೋಗಿದ್ದ ಸಮಯದಲ್ಲಿ ಆತನ ಗೆಳತಿ ಸ್ಕೈಪ್ ಮೂಲಕ ಆತನ ಸ್ಕ್ರೀನ್ ಅನ್ನು ಶೇರ್ ಮಾಡಿದ್ದಾಳೆ. ದಿನದಲ್ಲಿ ನಾನು ಏನೆಲ್ಲಾ ಮಾಡುತ್ತೇನೆ ಎಂಬುದರ ಸ್ಕ್ರೀನ್ಶಾಟ್ ತೆಗೆದು ಎಚ್ಆರ್ನೊಂದಿಗೆ ಹಂಚಿಕೊಂಡಿದ್ದಾಳೆ. ಕೆಲಸದ ಸಮಯದಲ್ಲಿ ನಾನು ಸರಿಯಾಗಿ ಕೆಲಸ ಮಾಡಬೇಕಾಗಿತ್ತು, ನನ್ನ ಗೆಳತಿಯನ್ನು ಇಂಪ್ರೆಸ್ ಮಾಡಬಹುದಿತ್ತು ಇಲ್ಲದಿದ್ದರೆ ನನ್ನ ಸ್ಕ್ರೀನ್ ಶೇರ್ ಆಗಿರುವುದನ್ನಾದರೂ ನಾನು ಗಮನಿಸಬೇಕಿತ್ತು ಎಂದು ಯುವಕ ಉತ್ತರಿಸಿದ್ದಾನೆ.
ಅದೃಷ್ಟವಶಾತ್ ಆತನಿಗೆ ಕಂಪೆನಿಯು ಎಚ್ಚರಿಕೆಯ ಸಂದೇಶವೊಂದನ್ನು ಕಳುಹಿಸಿದೆ. ನಾನು ಮಾಡಿದ ಕೆಲಸಕ್ಕೆ ನನ್ನ ಉದ್ಯೋಗ ಹೋಯಿತು ಎಂದೇ ನಾನು ಭಾವಿಸಿದ್ದೆ ಎಂದು ಯುವಕ ಹೇಳಿದ್ದಾನೆ. ನೆಟ್ಟಿಗರು ಈ ವಿಷಯದ ಕುರಿತು ಕಾಮೆಂಟ್ ಮಾಡುತ್ತಿದ್ದು ತಾವು ಕೂಡ ಈ ಯುವಕನಂತೆ ಎಷ್ಟೋಸಾರಿ ಮಾಡಿದ್ದಿದೆ ಎಂದು ಹೇಳಿದ್ದಾರೆ. ಎಂದಿಗೂ ನಿಮ್ಮ ಕೆಲಸದ ವಿಷಯವನ್ನು ಯಾರಿಗೂ ತಿಳಿಸಬೇಡಿ ಎಂದು ನೆಟ್ಟಿಗರೊಬ್ಬರು ಕಿವಿಮಾತನ್ನು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ