Boycott KFC: ಚೀನಾದಲ್ಲಿ ಕೆಎಫ್‌ಸಿ ಮೇಲೆ ಬಹಿಷ್ಕಾರ! ಎಲ್ಲದಕ್ಕೂ ಕಾರಣ ಇದೇ!

ಚೀನಾ 2020 ರಲ್ಲಿ ಆಹಾರ ವ್ಯರ್ಥದ ವಿರುದ್ಧ ಪ್ರಮುಖ ಅಭಿಯಾನವೊಂದನ್ನು ಪ್ರಾರಂಭಿಸಿತು. ಇದನ್ನು "ಕ್ಲೀನ್ ಪ್ಲೇಟ್ ಅಭಿಯಾನ" ವೆಂದು ಕರೆಯಲಾಗುತ್ತದೆ .

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೆಎಫ್‌ಸಿ ಆಹಾರ ತ್ಯಾಜ್ಯವನ್ನು ಮತ್ತು (KFC of Promoting Food) ಖರೀದಿ ಭರಾಟೆಯನ್ನು ಉತ್ತೇಜಿಸುತ್ತಿದೆ ಎಂದು ಚೀನಾದ (Chinese) ಅಧಿಕಾರಿಗಳು ಆರೋಪಿಸಿದ್ದಾರೆ. ಯಮ್ ಚೀನಾ ಒಡೆತನದ ಕೆಎಫ್‌ಸಿ ರೆಸ್ಟೋರೆಂಟ್‌ಗಳ ಊಟದ ಪ್ರಚಾರವನ್ನು ಬಹಿಷ್ಕರಿಸಲು ಚೈನೀಸ್ ಗ್ರಾಹಕ ಸಂರಕ್ಷಣಾ ಸಂಘವು ಬುಧವಾರ ಸಾರ್ವಜನಿಕರಿಗೆ ಕರೆ ನೀಡಿದೆ. ಮಿಸ್ಟರಿ ಬಾಕ್ಸ್‌ಗಳ ಉತ್ಪಾದನೆಯಲ್ಲಿ ಹೆಸರುವಾಸಿಯಾದ ಚೀನೀ ಆಟಿಕೆ ತಯಾರಕರು, ಕಳೆದ ವಾರ ಕೆಎಫ್‌ಸಿ (KFC) ಯೊಂದಿಗೆ ಕೂಡಿ ಪ್ರಚಾರವೊಂದನ್ನು ಪ್ರಾರಂಭಿಸಿದರು. ಪ್ರಚಾರದ (Promotion) ಭಾಗವಾಗಿ, ಗ್ರಾಹಕರು, ಕೆಲವು ನಿರ್ದಿಷ್ಟ ಕೆಎಫ್‌ಸಿ ತಿನಿಸುಗಳನ್ನು ಖರೀದಿಸಿದಾಗ (Purchase) ದುಂಡಗಿನ ಮುಖಗಳ, ದೊಡ್ಡ ಕಣ್ಣುಗಳನ್ನು ಹೊಂದಿರುವ ಸೀಮಿತ ಆವೃತ್ತಿಯ ಡಿಮೋ ಗೊಂಬೆಗಳನ್ನು ಸಂಗ್ರಹಿಸಬಹುದಾಗಿದೆ.

ಹಠಾತ್ ಸೇವನೆ
ಚೀನಾ ಗ್ರಾಹಕ ಸಂಘದ ಪ್ರಕಾರ, ಒಬ್ಬ ಗ್ರಾಹಕರು ಅಂತಹ 106 ತಿನಿಸುಗಳನ್ನು ಒಂದೇ ಬಾರಿಗೆ ಖರೀದಿಸಲು USD 1,000 ಕ್ಕಿಂತ ಹೆಚ್ಚು ಖರ್ಚು ಮಾಡಿದ್ದಾರೆ. ಸಂಘದ ಮಾತಿನಲ್ಲಿ ಹೇಳುವುದಾದರೆ ಈ ಪ್ರವೃತ್ತಿಯನ್ನು ‘ಹಠಾತ್ ಸೇವನೆ’ ಎಂದು ಕರೆಯಲಾಗುತ್ತದೆ. ಜನರು ಈ ಊಟದ ಸೆಟ್‌ಗಳನ್ನು ಖರೀದಿಸಲು ಇತರರಿಗೆ ಹಣ ನೀಡಿ, ಖರೀದಿಸಿ , ನಂತರ ಆಹಾರವನ್ನು ಎಸೆದ ಪ್ರಕರಣಗಳೂ ಇವೆ.

ಸಂಘದ ಪ್ರಕಾರ, KFC ಸೀಮಿತ ಆವೃತ್ತಿಯ ಬ್ಲೈಂಡ್ ಬಾಕ್ಸ್‌ಗಳ ಮಾರಾಟವನ್ನು ಬಳಸಿಕೊಂಡು, ಅತಿಯಾದ ಮತ್ತು ತರ್ಕಕ್ಕೆ ನಿಲುಕದ ಮಟ್ಟಿನಲ್ಲಿ ಊಟದ ಸೆಟ್‌ಗಳನ್ನು ಖರೀದಿಸಲು ಗ್ರಾಹಕರನ್ನು ಪ್ರೇರೇಪಿಸಿತು, ಮತ್ತಿದು ಸಾರ್ವಜನಿಕ ಸುವ್ಯವಸ್ಥೆ, ಉತ್ತಮ ಪದ್ಧತಿಗಳು ಮತ್ತು ಕಾನೂನಿನ ಮನೋಭಾವವನ್ನು ಉಲ್ಲಂಘಿಸುತ್ತದೆ.ಯಮ್ ಚೀನಾ ಮತ್ತು ಪಾಪ್ ಮಾರ್ಟ್ ಕಾಮೆಂಟ್‌ಗಾಗಿ ಸಲ್ಲಿಸಿದ ವಿನಂತಿಗಳಿಗೆ ತಕ್ಷಣವೇ ಪ್ರತಿಕ್ರಿಯಿಸಲಿಲ್ಲ.

ಇದನ್ನೂ ಓದಿ: Lockdown: ಲಾಕ್‌ಡೌನ್​ನಿಂದಾಗಿ ಡೇಟ್ ಮಾಡಿದ ವ್ಯಕ್ತಿಯ ಮನೆಯಲ್ಲಿ ಸಿಲುಕಿಕೊಂಡ ಚೀನಾದ ಮಹಿಳೆ..! ಮುಂದೇನು ಆಯ್ತು..?

ಮಿಸ್ಟರಿ ಬಾಕ್ಸ್‌
ಕೆಎಫ್‌ಸಿ ತನ್ನ ಮೊದಲ ಔಟ್‌ಲೆಟ್‌ನ 35 ನೇ ವಾರ್ಷಿಕೋತ್ಸವವನ್ನು ಚೈನೀಸ್ ಮೈನ್ಲ್ಯಾಂಡ್‌ನಲ್ಲಿ ಆಚರಿಸಲು ಈ ಪ್ರಚಾರವನ್ನು ಪ್ರಾರಂಭಿಸಿದೆ. ವಿಶೇಷವಾಗಿ ಯುವ ಜನರಲ್ಲಿ, ಮಿಸ್ಟರಿ ಬಾಕ್ಸ್‌ಗಳದ್ದೇ ದೊಡ್ಡ ಪ್ರವೃತ್ತಿಯಾಗಿದೆ. ಸಂಪೂರ್ಣ ಆರು-ಅಂಕಿಗಳ ಸೆಟ್‌ಗಾಗಿ, ಗ್ರಾಹಕರು ಕನಿಷ್ಠ ಆರು ಊಟಗಳನ್ನು ಖರೀದಿಸಬೇಕಾಗಿತ್ತು, ಆದರೆ ಅವುಗಳನ್ನು ಒಂದೇ ಬಾರಿಗೆ ಪಡೆಯುವ ಸಾಧ್ಯತೆ ಕಡಿಮೆ ಇತ್ತು, -ಆ ಸೆಟ್‌ಗಳಲ್ಲಿ ಅಪರೂಪವಾದುದನ್ನು ಪಡೆಯುವ ಅವಕಾಶ 72 ರಲ್ಲಿ 1 ಮಾತ್ರ.ಸಂಘದ ಪ್ರಕಾರ, ಅಂತಹ ಮಾರ್ಕೆಟಿಂಗ್ ತಂತ್ರವು ಅಪಾಯಕಾರಿ ಏಕೆಂದರೆ ಅದು ತ್ಯಾಜ್ಯವನ್ನು ಉತ್ತೇಜಿಸುತ್ತದೆ.

ಆಹಾರ ವ್ಯರ್ಥದ ವಿರುದ್ಧ ಅಭಿಯಾನ
ವರದಿಯ ಪ್ರಕಾರ, ಇದು ಗ್ರಾಹಕರು ಮಿತಿಮೀರಿದ ಆಹಾರವನ್ನು ಖರೀದಿಸಲು ಕಾರಣವಾಗುವುದರೊಂದಿಗೆ ಸೀಮಿತ ಆವೃತ್ತಿಯ, ಬ್ಲೈಂಡ್-ಬಾಕ್ಸ್ ಆಟಿಕೆಗಳನ್ನು ಪಡೆಯುವ ದುರಾಸೆಯು, ಆಹಾರ ತ್ಯಾಜ್ಯವನ್ನು ಉಂಟುಮಾಡಬಹುದು, ಎಂದು ಸಂಘ ಹೇಳಿದೆ.COVID-19 ಸಾಂಕ್ರಾಮಿಕ ಸಮಯದಲ್ಲಿ ಆಹಾರ ಸುರಕ್ಷತೆಯ ಬಗ್ಗೆ ಹೆಚ್ಚುತ್ತಿರುವ ಕಾಳಜಿಯ ಪರಿಣಾಮವಾಗಿ, ಚೀನಾ 2020 ರಲ್ಲಿ ಆಹಾರ ವ್ಯರ್ಥದ ವಿರುದ್ಧ ಪ್ರಮುಖ ಅಭಿಯಾನವೊಂದನ್ನು ಪ್ರಾರಂಭಿಸಿತು. ಇದನ್ನು "ಕ್ಲೀನ್ ಪ್ಲೇಟ್ ಅಭಿಯಾನ" ವೆಂದು ಕರೆಯಲಾಗುತ್ತದೆ .

ಹೊಸ ಬಗೆಯ ವ್ಯವಸ್ಥೆ
ಈ ಅಭಿಯಾನದ ಮೂಲಕ, ಸಾಮಾಜಿಕ ಮಾಧ್ಯಮದಲ್ಲಿ ಆನ್‌ಲೈನ್ ಪ್ರಭಾವಿಗಳು ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಅತಿಯಾಗಿ ತಿನ್ನುವುದನ್ನು ನಿಷೇಧಿಸುವುದರ ಜೊತೆಗೆ, ರೆಸ್ಟೋರೆಂಟ್‌ಗೆ ಹೋಗಿ ತಿನ್ನುವವರು ಅವರು ತಿನ್ನುವುದಕ್ಕಿಂತ ಹೆಚ್ಚಿನದನ್ನು ಆರ್ಡರ್ ಮಾಡದಂತೆ ಒತ್ತಾಯಿಸಿದೆ.ಅಂತೆಯೇ, ವುಹಾನ್ ಕ್ಯಾಟರಿಂಗ್ ಇಂಡಸ್ಟ್ರಿ ಅಸೋಸಿಯೇಷನ್ ನಗರದ ರೆಸ್ಟೋರೆಂಟ್‌ಗಳಿಗೆ ಡಿನ್ನರ್‌ಗಳ ಸಂಖ್ಯೆಗಿಂತ ಕಡಿಮೆ ಖಾದ್ಯವನ್ನು ಆರ್ಡರ್ ಮಾಡುವ ನಿಯಮವನ್ನು ಜಾರಿಗೊಳಿಸುವ ಮೂಲಕ ಡೈನರ್‌ಗಳಿಗೆ ನೀಡಲಾಗುವ ಭಕ್ಷ್ಯಗಳ ಸಂಖ್ಯೆಯನ್ನು ಮಿತಿಗೊಳಿಸಲು ಕರೆ ನೀಡಿದೆ.

ಇದನ್ನೂ ಓದಿ: Chinaದಲ್ಲಿ Covid ಅಬ್ಬರ: ಲೋಹದ ಪೆಟ್ಟಿಗೆಯಲ್ಲಿ ಸೋಂಕಿತರ ಕ್ವಾರಂಟೈನ್..!

ಈ "N-1" ವ್ಯವಸ್ಥೆಯ ಅಡಿಯಲ್ಲಿ 10 ಜನರ ಗುಂಪು 9 ಭಕ್ಷ್ಯಗಳನ್ನು ಮಾತ್ರ ಆರ್ಡರ್ ಮಾಡಬಹುದು. ಆದರೆ ಅಗತ್ಯಕ್ಕಿಂತ ಹೆಚ್ಚಿನದನ್ನು ಆರ್ಡರ್ ಮಾಡುವುದನ್ನು ಸಭ್ಯವೆಂದು ಪರಿಗಣಿಸುವ ದೇಶದಲ್ಲಿ ಈ ಹೊಸ ಬಗೆಯ ವ್ಯವಸ್ಥೆಗೆ ಒಗ್ಗಿಕೊಳ್ಳಲು ಸಮಯ ಹಿಡಿಯಬಹುದು.
Published by:vanithasanjevani vanithasanjevani
First published: