• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Video: ಆನ್‌ಲೈನ್ ಕ್ಲಾಸ್‌ನಲ್ಲಿ ಹುಡುಗಿ ಜೊತೆ ಫುಲ್ ಚಾಟಿಂಗ್! ಏನಪ್ಪಾ ನಿನ್ ಕಥೆ ಅಂತ ಕೇಳಿದ್ದಕ್ಕೆ ವಿದ್ಯಾರ್ಥಿ ಹೇಳಿದ್ದೇನು?

Viral Video: ಆನ್‌ಲೈನ್ ಕ್ಲಾಸ್‌ನಲ್ಲಿ ಹುಡುಗಿ ಜೊತೆ ಫುಲ್ ಚಾಟಿಂಗ್! ಏನಪ್ಪಾ ನಿನ್ ಕಥೆ ಅಂತ ಕೇಳಿದ್ದಕ್ಕೆ ವಿದ್ಯಾರ್ಥಿ ಹೇಳಿದ್ದೇನು?

ಆನ್ಲೈನ್​  ಕ್ಲಾಸ್​

ಆನ್ಲೈನ್​ ಕ್ಲಾಸ್​

ಪ್ರತಿಯೊಂದು ಕ್ಷೇತ್ರದಲ್ಲಿ ಕೂಡ ಕೋವಿಡ್ ಕಾರ್ಮೋಡ ಕವಿದಿತ್ತು. ಅದರಲ್ಲೂ ಶಾಲಾ ಕಾಲೇಜುಗಳು ಮುಂದೇನು ಎಂಬ ಚಿಂತೆಗೆ ಒಳಗಾಗಿದ್ದವು ಈ ಸಮಯದಲ್ಲಿ ಆಶಾಕಿರಣವೆಂಬಂತೆ ಆನ್‌ಲೈನ್ ಶಿಕ್ಷಣ ರೂಪುಗೊಂಡಿತು.

  • Share this:

ವಿಶ್ವವನ್ನೇ ವ್ಯಾಪಿಸಿದ ಕೋವಿಡ್ (Covid) ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಪ್ರತಿಯೊಬ್ಬರನ್ನೂ ಸಂಕಷ್ಟಕ್ಕೆ ದೂಡಿತ್ತು. ನಿರುದ್ಯೋಗ, ಬಡತನ, ಹಸಿವು, ಔಷಧದ ಕೊರತೆ, ಸಾರಿಗೆ ಸಂಪರ್ಕದ ಕೊರತೆ, ಶಿಕ್ಷಣದ (Education) ಕೊರತೆ ಹೀಗೆ ಅಂದಿನ ದಿನಗಳು ಅಕ್ಷರಶಃ ಮನುಷ್ಯರನ್ನು ಕಂಗೆಡೆಸಿಬಿಟ್ಟಿದ್ದವು. ಎಷ್ಟೇ ಶ್ರೀಮಂತಿಕೆ ಇದ್ದರೂ ಆರೋಗ್ಯವೆಂಬುದು (Health) ಅದಕ್ಕಿಂತ ಮಿಗಿಲಾದ ಸಂಪತ್ತು ಎಂಬುದನ್ನು ಸರ್ವರಿಗೂ ಮನವರಿಕೆ ಮಾಡಿಕೊಟ್ಟಿತ್ತು. ಅಂತೆಯೇ ಎಷ್ಟೇ ಹಣವಿದ್ದರೂ ಅದರಿಂದ ಪ್ರತಿಯೊಂದನ್ನೂ ಖರೀದಿಸಲಾಗುವುದಿಲ್ಲ ಎಂಬುದನ್ನು ತಿಳಿಸಿಕೊಟ್ಟಿತ್ತು.


ಶಿಕ್ಷಣ ಕ್ಷೇತ್ರದ ಮೇಲೆ ಕೋವಿಡ್ ಕರಿನೆರಳು


ಪ್ರತಿಯೊಂದು ಕ್ಷೇತ್ರದಲ್ಲಿ ಕೂಡ ಕೋವಿಡ್ ಕಾರ್ಮೋಡ ಕವಿದಿತ್ತು. ಅದರಲ್ಲೂ ಶಾಲಾ ಕಾಲೇಜುಗಳು ಮುಂದೇನು ಎಂಬ ಚಿಂತೆಗೆ ಒಳಗಾಗಿದ್ದವು ಈ ಸಮಯದಲ್ಲಿ ಆಶಾಕಿರಣವೆಂಬಂತೆ ಆನ್‌ಲೈನ್ ಶಿಕ್ಷಣ ರೂಪುಗೊಂಡಿತು. ಆದರೂ ಆನ್‌ಲೈನ್ ವ್ಯವಸ್ಥೆ ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳಿಗೆ ಮರೀಚಿಕೆಯಾಗಿತ್ತು. ನಿತ್ಯ ಶಾಲೆಗೆ ಹೋಗಿ ಕಲಿಯುವುದೇ ಒಳ್ಳೆಯದು ಎಂಬ ಅಭಿಮತ ಕೂಡ ವಿದ್ಯಾರ್ಥಿಗಳಿಂದ ದೊರೆತಿತ್ತು ಕೆಲವರಿಗೆ ನೆಟ್‌ವರ್ಕ್ ಸಮಸ್ಯೆಯಾದರೆ ಇನ್ನು ಕೆಲವರಿಗೆ ವಿದ್ಯುತ್ ಸಮಸ್ಯೆ ಇನ್ನು ಹಲವರಿಗೆ ತರಗತಿ ಅಟೆಂಡ್ ಆಗಲು ಸೂಕ್ತ ಮೊಬೈಲ್ ಟ್ಯಾಬ್‌ಗಳಿಲ್ಲ ಎಂಬ ಕಷ್ಟ. ಅಂತೂ ಇಂತು ಆ ದಿನಗಳು ಜೀವನದ ಅತ್ಯಂತ ಕೆಟ್ಟ ದಿನಗಳು ಎಂಬುದಂತೂ ಸುಳ್ಳಲ್ಲ.


ಆನ್‌ಲೈನ್ ತರಗತಿ: ಒಳಿತು ಕೆಡುಕು ಎರಡೂ ಇದೆ


ಆನ್‌ಲೈನ್ ತರಗತಿಗಳಿಂದ ಒಳಿತೂ ಇದ್ದಂತೆ ಕೆಡುಕೂ ಇದ್ದೇ ಇತ್ತು ಎಂಬುದು ಶಿಕ್ಷಕರಿಂದ ಆರಂಭಿಸಿ ಮಕ್ಕಳ ಪೋಷಕರ ಮಾತಾಗಿದೆ. ಆನ್‌ಲೈನ್ ಕಲಿಕೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿದ್ದರೂ ನ್ಯೂನತೆಗಳನ್ನು ಒಳಗೊಂಡಿತ್ತು. ಹಲವಾರು ವಿದ್ಯಾರ್ಥಿಗಳು ತಂತ್ರಜ್ಞಾನದ ಲಾಭ ಪಡೆಯುತ್ತಿದ್ದರೆ, ಹಲವರು ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದುದು ಕಂಡುಬಂದಿದೆ.


ಇದನ್ನೂ ಓದಿ: ಟಾಮ್ ಆ್ಯಂಡ್ ಜೆರ್ರಿಯನ್ನೇ ಕಾಪಿ ಮಾಡಿದ್ರಾ ಆರ್‌ಆರ್‌ಆರ್‌! ವೈರಲ್ ಆಗ್ತಿದೆ ಸೇಮ್ ಟು ಸೇಮ್ ವಿಡಿಯೋ!


ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ವಿದ್ಯಾರ್ಥಿ


ಕೆಲವೊಂದೆಡೆಗಳಲ್ಲಿ ಇನ್ನೂ ಚಾಲ್ತಿಯಲ್ಲಿರುವ ಆನ್‌ಲೈನ್ ಕಲಿಕೆ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಿ ಮಾರ್ಪಟ್ಟದ್ದಕ್ಕಿಂತ ಅವರ ಭವಿಷ್ಯವನ್ನೇ ಅತಂತ್ರವಾಗಿಸಿದೆ ಎಂಬುದು ಸುಳ್ಳಲ್ಲ. ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗೆ ಘಟನೆಯೊಂದು ನಡೆದಿದ್ದು, ಆನ್‌ಲೈನ್ ತರಗತಿಯ ಸಮಯದಲ್ಲಿ ವಿದ್ಯಾರ್ಥಿಯೊಬ್ಬ ಚಾಟ್‌ರೂಮ್‌ ಪ್ರವೇಶಿಸಿ ವಿದ್ಯಾರ್ಥಿನಿಯೊಂದಿಗೆ ಮಾತನಾಡಲು ಪ್ರಯತ್ನಿಸಿದ್ದು ಆ ವಿದ್ಯಾರ್ಥಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು ಆತನಿಗೆ ಛೀಮಾರಿ ಹಾಕಲಾಯಿತು. ಆತನ ದುರ್ವರ್ತನೆಗೆ ತರಗತಿಯ ಶಿಕ್ಷಕಿ ವಿದ್ಯಾರ್ಥಿಯನ್ನು ಬ್ಲಾಕ್ ಮಾಡಿದ್ದಾರೆ.ಚಾಟ್‌ರೂಮ್ ಪ್ರವೇಶಿಸಿ ಚಾಟಿಂಗ್ ಶುರು ಹಚ್ಚಿಕೊಂಡ ವಿದ್ಯಾರ್ಥಿ


ಈ ವಿಡಿಯೋ ವೈರಲ್ ಆಗಿದ್ದು, ಶಿಕ್ಷಕಿ 50 ಕ್ಕೂ ಹೆಚ್ಚ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸುತ್ತಿದ್ದ ಸಮಯದಲ್ಲಿ ಈ ಓರ್ವ ವಿದ್ಯಾರ್ಥಿ ಚಾಟ್‌ರೂಮ್ ಪ್ರವೇಶಿಸಿ ತನ್ನ ಕೃತ್ಯ ನಡೆಸಲು ಮುಂದಾಗಿದ್ದಾನೆ. ತರಗತಿ ಪಾಠಗಳಲ್ಲಿ ಮಗ್ನರಾಗಿದ್ದ ಶಿಕ್ಷಕಿ ಇದನ್ನು ಗಮನಿಸುವುದಿಲ್ಲವೆಂದು ತಿಳಿದಿದ್ದ ವಿದ್ಯಾರ್ಥಿ ತನಗೆ ಅರಿವೇ ಇಲ್ಲದಂತೆ ಸಿಕ್ಕಿಬಿದ್ದು ಛೀಮಾರಿ ಹಾಕಿಸಿದ್ದೇನೆ. ಶಿಕ್ಷಕಿಯ ಗಮನಕ್ಕೆ ಈ ಘಟನೆ ಅರಿವಿಗೆ ಬಂದಾಗ ಚಾಲಾಕಿ ವಿದ್ಯಾರ್ಥಿ ಶಿಕ್ಷಕಿಯನ್ನು ಹೊಗಳಲು ಆರಂಭಿಸುತ್ತಾನೆ. ವಿದ್ಯಾರ್ಥಿಗೆ ತನ್ನ ಗುರುತು ಹೇಳಲು ತಿಳಿಸಿದಾಗ ವಿದ್ಯಾರ್ಥಿ ಕೂಡಲೇ ತಲೆಓಡಿಸಿ ಶಿಕ್ಷಕಿಯ ಮಾತು ತಪ್ಪಿಸಲು ಪ್ರಯತ್ನಿಸುತ್ತಾನೆ.


ಇದನ್ನೂ ಓದಿ: ಈತ ವಿಶ್ವದ ಅತೀ ಕುಳ್ಳ ಬಾಡಿಬಿಲ್ಡರ್! ಈತನನ್ನು ಕೈ ಹಿಡಿದ ಹೆಂಡತಿ ಹೇಗಿದ್ದಾಳೆ ಗೊತ್ತಾ?


ನನಗೆ ವಿದ್ಯಾರ್ಥಿನಿಯೊಂದಿಗೆ ಮಾತನಾಡಲು ಬೇರೆ ದಾರಿ ಇಲ್ಲ


ವಿದ್ಯಾರ್ಥಿ ತರಗತಿಯ ಈ ಸಮಯದಲ್ಲಿ ಈ ರೀತಿ ವರ್ತಿಸುವುದು ತಪ್ಪು ಎಂದು ಹೇಳಿದಾಗ, ನನಗೆ ಬೇರೆ ಯಾವುದೇ ದಾರಿಯಿಲ್ಲ ನಾನು ಹೇಗಾದರೂ ಸ್ತುತಿ ಎಂಬ ವಿದ್ಯಾರ್ಥಿನಿಯೊಂದಿಗೆ ಮಾತನಾಡಲೇಬೇಕು ಎಂದು ಶಿಕ್ಷಕಿಗೆ ಪೂಸಿ ಹೊಡೆದು ಮನವಿ ಮಾಡಿಕೊಂಡಿದ್ದಾನೆ. ಇವರಿಬ್ಬರ ಸಂಭಾಷಣೆಯ ಸಮಯದಲ್ಲಿ ಹಾಜರಿದ್ದ ವಿದ್ಯಾರ್ಥಿನಿ, ಈತ ಯಾರೆಂದೂ ನನಗೆ ತಿಳಿದಿಲ್ಲ ಹಾಗಾಗಿ ದಯವಿಟ್ಟು ಆತನನ್ನು ನಿರ್ಬಂಧಿಸಿ ಎಂದು ವಿನಂತಿಸಿಕೊಳ್ಳುತ್ತಾಳೆ.
ವೈರಲ್ ಆದ ಆನ್‌ಲೈನ್ ತರಗತಿ ವಿಡಿಯೋ


ಆನ್‌ಲೈನ್ ತರಗತಿಯ ಸಂಪೂರ್ಣ ಸಂಭಾಷಣೆಯು ಇದೀಗ ವೈರಲ್ ಆಗುತ್ತಿದ್ದು 44,000 ವೀಕ್ಷಣೆಗಳನ್ನು ಗಳಿಸಿದೆ. ಆನ್‌ಲೈನ್ ತರಗತಿಗಳು ಮಕ್ಕಳ ಭವಿಷ್ಯಕ್ಕೆ ಮಾರಕವಾಗುತ್ತಿದೆಯೇ ಎಂಬ ಚಿಂತನೆಗೆ ಪ್ರತಿಯೊಬ್ಬರನ್ನೂ ದೂಡಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು