Cobra Attack Video: ನಾಗರಹಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಹುಡುಗ..ವಿಡಿಯೋ ನೋಡಿದ್ರೆ ಬೆಚ್ಚಿಬೀಳ್ತಿರ!

deadly cobra attack WATCH viral video: ಉದ್ದನೆಯ ನಾಗರ ಹಾವೊಂದು ಅಂಗಡಿಯ ಒಂದು ಮೂಲೆಯಿಂದ ಇಲಿಯನ್ನು ತುಂಬಾ ವೇಗವಾಗಿ ಅಟ್ಟಿಸಿಕೊಂಡು ಬಂದು ಧೊಪ್ಪನೆ ಆ ಹುಡುಗ ಕುಳಿತುಕೊಂಡಿದ್ದ ಆಸನದ ಮೇಲೆ ಬಂದು ಬಿದ್ದಿದೆ.

ಕ್ಷಣಾರ್ಧದಲ್ಲಿ ಪಾರಾದ ಬಾಲಕ

ಕ್ಷಣಾರ್ಧದಲ್ಲಿ ಪಾರಾದ ಬಾಲಕ

 • Share this:

  ಕೆಲವೊಮ್ಮೆ ನಮಗೆ ಗೊತ್ತಿರದೆ ಎಲ್ಲೋ ಹೋಗಿ ಕುಳಿತುಕೊಂಡು ಮೊಬೈಲ್ ನೋಡುತ್ತಾ ನಮ್ಮನ್ನು ನಾವೇ ಮರೆತಿರುತ್ತೇವೆ, ಅಷ್ಟರ ಮಟ್ಟಿಗೆ ನಾವು ಮೊಬೈಲ್‌ನಲ್ಲಿ ಮಗ್ನರಾಗಿರುತ್ತೇವೆ.ಪಕ್ಕದಲ್ಲಿಯೇ ಯಾವ ಪ್ರಾಣಿ ಬಂದು ಕುಳಿತರೂ ನಮಗೆ ಗೊತ್ತಾಗುವುದಿಲ್ಲ. ಅಂತಹದೇ ಒಂದು ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ಅದೃಷ್ಟವಶಾತ್ ಇಲ್ಲಿ ಒಬ್ಬ ಹುಡುಗ ಕ್ಷಣಾರ್ಧದಲ್ಲಿ ಇಂತಹ ಒಂದು ಗಂಡಾಂತರದಿಂದ ಪಾರಾಗಿದ್ದಾನೆ ಅಂತಾನೇ ಹೇಳಬಹುದು.


  ಉದ್ದನೆಯ ನಾಗರ ಹಾವೊಂದು ಅಂಗಡಿಯ ಒಂದು ಮೂಲೆಯಿಂದ ಇಲಿಯನ್ನು ತುಂಬಾ ವೇಗವಾಗಿ ಅಟ್ಟಿಸಿಕೊಂಡು ಬಂದು ಧೊಪ್ಪನೆ ಆ ಹುಡುಗ ಕುಳಿತುಕೊಂಡಿದ್ದ ಆಸನದ ಮೇಲೆ ಬಂದು ಬಿದ್ದಿದೆ. ಆ ಹುಡುಗ ಕೇವಲ ಒಂದು ಕ್ಷಣ ಮುನ್ನ ಅಲ್ಲಿಂದ ಎದ್ದು ಹೋಗಿದ್ದನು. ಆ ಹುಡುಗ ಇನ್ನೂ ಒಂದು ಕ್ಷಣ ಅಲ್ಲೇ ಇದ್ದಿದ್ದರೆ, ಅವನ ಮೇಲೆಯೇ ಹಾವು ಬೀಳುತ್ತಿತ್ತು. ಇಲಿಯನ್ನು ಬೆನ್ನಟ್ಟಿ ನಾಗರ ಹಾವು ಅಂಗಡಿಗೆ ಬರುತ್ತದೆ ಎಂದು ಯಾರು ಊಹಿಸಿರಲು ಸಾಧ್ಯವೇ ಇಲ್ಲ.


  ಆ ಹುಡುಗ ಅಂಗಡಿಯ ಒಳಗೆ ಮೊಬೈಲ್ ನೋಡುತ್ತಾ ಬಂದು ಆಸನದಲ್ಲಿ ಹಾಗೆ ಮಲಗಲು ಇನ್ನೇನು ತನ್ನ ಎರಡು ಕಾಲುಗಳನ್ನು ಚಾಚಬೇಕು ಎನ್ನುವಷ್ಟರಲ್ಲಿ ಶಬ್ದ ಕೇಳಿ ಎಚ್ಚೆತ್ತುಕೊಂಡು ಅಲ್ಲಿಂದ ದೂರ ಓಡಿ ಹೋಗಿರುವ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಈಗ ವೈರಲ್ ಆಗುತ್ತಿದೆ. ತನ್ನ ಮೊಬೈಲ್‌ನಲ್ಲಿ ಸಂಪೂರ್ಣವಾಗಿ ಮಗ್ನನಾದ ಹುಡುಗನಿಗೆ ಏನೋ ಒಂದು ಶಬ್ದ ಕೇಳಿ ಕೂಡಲೇ ಎಚ್ಚೆತ್ತುಕೊಂಡು ಅಲ್ಲಿಂದ ಕೆಳಗಿಳಿದು ಹೊರಕ್ಕೆ ಓಡಿ ಹೋಗುತ್ತಾನೆ.

  ಆ ಹುಡುಗನ ಅದೃಷ್ಟ ಎಂಬಂತೆ ಅವನು ತನ್ನ ಮೊಬೈಲ್ ನೋಡುತ್ತಿರುವುದನ್ನು ಬಿಟ್ಟು ಒಂದು ಕ್ಷಣ ಶಬ್ದ ಬರುವ ಕಡೆ ನೋಡಿ ಕೊನೆಯ ಕ್ಷಣದಲ್ಲಿ ಅಲ್ಲಿಂದ ಪಾರಾಗಿದ್ದಾನೆ. ಹಾವು ಆ ಆಸನದ ಮೇಲೆ ಕೆಳಗೆ ಎಲ್ಲಾ ಕಡೆ ವೇಗವಾಗಿ ಆ ತಪ್ಪಿಸಿಕೊಂಡ ಇಲಿಯನ್ನು ಹುಡುಕುತ್ತದೆ. ಸ್ವಲ್ಪ ಸಮಯದಲ್ಲಿಯೇ ಹಾವು ಇಲಿ ಸಿಗದೇ ಇರುವುದರಿಂದ ಎಲ್ಲಿಂದ ಹೊರಗೆ ಹೋಗುವುದು ಎಂದು ಅಲ್ಲೇ ಸ್ವಲ್ಪ ಸಮಯ ಅಡ್ಡಾಡಿದ್ದು, ನಂತರ ಅದು ಯಾವ ಮೂಲೆಯಿಂದ ಬಂದಿತ್ತೋ, ಆ ಕಡೆಯಿಂದಲೇ ಹಿಂತಿರುಗಿತು.


  ಭಾರತೀಯ ಜನತಾ ಪಕ್ಷಕ್ಕೆ ಸೇರಿದ ರಾಜಕಾರಣಿ ಹಿತಾನಂದ್ ಶರ್ಮಾ ಎಂಬುವವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಶರ್ಮಾ ಪೋಸ್ಟ್ ನೊಂದಿಗೆ "ಯಾವ ವ್ಯಕ್ತಿಗೆ ದೇವರ ಅನುಗ್ರಹ ಇರುತ್ತದೆಯೋ, ಅಂತಹವರನ್ನು ಯಾರೂ ಹಾನಿ ಮಾಡಲು ಸಾಧ್ಯವಿಲ್ಲ" ಎಂದು ಬರೆದಿದ್ದಾರೆ.


  ಇದನ್ನೂ ಓದಿ: Viral Video: ಹೊತ್ತಿ ಉರಿಯುತ್ತಿದ್ದ ಕಾರಿನಿಂದ ವೃದ್ಧ ದಂಪತಿ ಹೊರಕ್ಕೆ.. ವಿಡಿಯೋ ಮಾಡದೆ ರಕ್ಷಿಸಿದವರ ಪ್ರಶಂಸೆ

  ಆ 47 ಸೆಕೆಂಡಿನ ವಿಡಿಯೋವನ್ನು ಈಗಾಗಲೇ ಸಾವಿರಾರು ಜನರು ವೀಕ್ಷಿಸಿದ್ದು, 500ಕ್ಕೂ ಹೆಚ್ಚು ಜನರು ಇದನ್ನು ನೋಡಿ ಇಷ್ಟ ಪಟ್ಟಿದ್ದಾರೆ. ಇದನ್ನು ನೋಡಿದ ಟ್ವಿಟರ್ ಬಳಕೆದಾರರು ವಿಡಿಯೋವನ್ನು ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿರುವ ಒಂದು ಚಿಕ್ಕ ಅಂಗಡಿಯದು ಎಂದು ಹೇಳಿದ್ದಾರೆ. ಈ ವೈರಲ್ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಲವಾರು ಜನರು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.


  Published by:Kavya V
  First published: